ಅಮೆಜಾನ್ ಪೇ ಲೇಟರ್‌ ಅನ್ನು ಬಳಸುವುದು ಹೇಗೆ?

|

ಅಮೆಜಾನ್ ಪೇ ಲೇಟರ್‌ ಹೆಸರೇ ಸೂಚಿಸುವಂತೆ ಹಣವಿಲ್ಲದೆ ಹೋದರು ಸರಕು ಖರೀದಿಸಲು ಅವಕಾಶ ನೀಡುವುದಾಗಿದೆ. ತನ್ನ ಬಳಕೆದಾರರಿಗೆ ಅವರು ಇಷ್ಟಪಡುವದನ್ನು ಖರೀದಿಸಲು ಮತ್ತು ನಂತರ ಅದಕ್ಕೆ ತಗುಲಿದ ವೆಚ್ಚವನ್ನು ನಿಧನವಾಗಿ ಪಾವತಿಸಲು ಸಹಾಯ ಮಾಡುತ್ತದೆ. ಅಮೆಜಾನ್ ಪೇ ಲೇಟರ್‌ 20,000ರೂ ವರೆಗಿನ ತ್ವರಿತ ಕ್ರೆಡಿಟ್ ನಂತಹ ಫೀಚರ್ಸ್‌ಗಳನ್ನು ಹೊಂದಿದೆ. ಇದನ್ನು ನೀವು ಉತ್ಪನ್ನಗಳನ್ನು ಖರೀದಿಸಲು ಮತ್ತು ಮುಂದಿನ ತಿಂಗಳಲ್ಲಿ ಅಥವಾ ಇಎಂಐಗಳಲ್ಲಿ ಪಾವತಿಸಲು ಬಳಸಬಹುದು.

ಅಮೆಜಾನ್‌

ಹೌದು, ಅಮೆಜಾನ್‌ ಪೇ ಲೇಟರ್‌ ಅಮೆಜಾನ್.ಇನ್‌ನಲ್ಲಿ ಇಎಂಐ ಬಳಸಿ ಖರೀದಿಸುವುದಕ್ಕೆ ಸಂಪೂರ್ಣ ಡಿಜಿಟಲ್ ಪ್ರಕ್ರಿಯೆಯ ಮೂಲಕ ತ್ವರಿತ ಕ್ರೆಡಿಟ್ ನೀಡುವ ಮಾರ್ಗವಾಗಿದೆ. ಅಂದ್ರೆ ಅಮೆಜಾನ್ ಪೇ ಲೇಟರ್ ಗ್ರಾಹಕರಿಗೆ ಅಮೆಜಾನ್ ಇಂಡಿಯಾದಲ್ಲಿ ಪಟ್ಟಿ ಮಾಡಲಾದ ಯಾವುದೇ ಉತ್ಪನ್ನಗಳ ಮೇಲೆ ತ್ವರಿತ ಶೂನ್ಯ-ಬಡ್ಡಿ ಸಾಲವನ್ನು ಪಡೆಯುವ ಆಯ್ಕೆಯನ್ನು ನೀಡುತ್ತದೆ. ಗ್ರಾಹಕರು ಮುಂದಿನ ತಿಂಗಳು ಅಥವಾ ಇಎಂಐಗಳಲ್ಲಿ 3 ರಿಂದ 12 ತಿಂಗಳುಗಳಲ್ಲಿ ಪಾವತಿ ಮಾಡಬಹುದು. ಹಾಗಾದ್ರೆ ಅಮೆಜಾನ್‌ ಪೇ ಲೇಟರ್‌ ಅನ್ನು ರಿಜಿಸ್ಟಾರ್‌ ಮಾಡುವುದು ಹೇಗೆ ಹಾಗೂ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮೆಜಾನ್‌

ಅಮೆಜಾನ್‌ ಬಳಕೆದಾರರಿಗೆ ಅಮೆಜಾನ್ ಪೇ ಲೇಟರ್‌ ಸಾಕಷ್ಟು ಅನುಕೂಲಕರವಾಗಿದೆ. ಅಮೆಜಾನ್‌ ಪೇ ಲೇಟರ್‌ ಬಳಸುವುದಕ್ಕೆ ಬಳಕೆದಾರರಿಗೆ ಕ್ರೆಡಿಟ್ ಕಾರ್ಡ್ ಅಗತ್ಯವಿಲ್ಲ. ಆದಾಗ್ಯೂ, ಅವರು ಮೂಲ ಕೆವೈಸಿ ಪೂರ್ಣಗೊಳಿಸಬೇಕಾಗಿದೆ. ಅಮೆಜಾನ್ ಪೇ ಲೇಟರ್ ಅನ್ನು ಅಮೆಜಾನ್ ಪೇ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ("ಅಮೆಜಾನ್") ತನ್ನ ಮೂರನೇ ವ್ಯಕ್ತಿಯ ಸಾಲ ಪಾಲುದಾರರಲ್ಲಿ ಒಬ್ಬರಾದ ಕ್ಯಾಪಿಟಲ್ ಫ್ಲೋಟ್ ಅಥವಾ ಐಡಿಎಫ್‌ಸಿ ಫರ್ಸ್ಟ್ ಬ್ಯಾಂಕ್ ಸಹಭಾಗಿತ್ವದಲ್ಲಿ ನಿಮಗೆ ನೀಡುತ್ತದೆ.

ಅಮೆಜಾನ್ ಪೇ ಲೇಟರ್‌ನಲ್ಲಿ ನೋಂದಾಯಿಸುವುದು ಮತ್ತು ಬಳಸುವುದು ಹೇಗೆ?

ಅಮೆಜಾನ್ ಪೇ ಲೇಟರ್‌ನಲ್ಲಿ ನೋಂದಾಯಿಸುವುದು ಮತ್ತು ಬಳಸುವುದು ಹೇಗೆ?

ಹಂತ: 1 ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಮೆಜಾನ್ ಅಪ್ಲಿಕೇಶನ್ ತೆರೆಯಿರಿ.ನಿಮ್ಮ ಅಮೆಜಾನ್ ಖಾತೆಗೆ ನೀವು ಲಾಗ್ ಇನ್ ಆಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ಹಂತ: 2 ಮೇಲಿನ ಎಡ ಮೂಲೆಯಲ್ಲಿರುವ ಮೂರು ಅಡ್ಡ ಬಾರ್‌ಗಳ ಮೇಲೆ ಟ್ಯಾಪ್ ಮಾಡಿ ಮತ್ತು ಅಮೆಜಾನ್ ಪೇ ಕ್ಲಿಕ್ ಮಾಡಿ.

ಹಂತ: 3 ಅಮೆಜಾನ್ ಪೇ ಪುಟದಲ್ಲಿ ನೀವು ‘ಅಮೆಜಾನ್ ಪೇ ಲೇಟರ್‌ ಪ್ರಾರಂಭಿಸಿ' ಎಂದು ಹೇಳುವ ಆಯ್ಕೆಯನ್ನು ನೋಡುತ್ತೀರಿ, ಅದರ ಮೇಲೆ ಟ್ಯಾಪ್ ಮಾಡಿ.

ಹಂತ: 4 ಅಮೆಜಾನ್ ಪೇ ಲೇಟರ್‌ ಪೇಜ್‌ನಲ್ಲಿ ‘60 ಸೆಕೆಂಡುಗಳಲ್ಲಿ ಸೈನ್ ಅಪ್' ಟ್ಯಾಪ್ ಮಾಡಿ.

ಹಂತ: 5 ನಿಮ್ಮ ಪ್ಯಾನ್ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಿ ಮತ್ತು ‘Agree & Continue' ಕ್ಲಿಕ್ ಮಾಡಿ

ಆಧಾರ್

ಹಂತ: 6 ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮತ್ತು ‘Agree & Continue' ಟ್ಯಾಪ್ ಮಾಡಿ ಮತ್ತು ನಿಮ್ಮ ನೋಂದಾಯಿತ ಫೋನ್ ಸಂಖ್ಯೆ ಅಥವಾ ಇಮೇಲ್ ಐಡಿಯಲ್ಲಿ ನೀವು ಸ್ವೀಕರಿಸಿದ ಒಟಿಪಿಯನ್ನು ನಮೂದಿಸಿ.

ಹಂತ: 7 ನಂತರ ನಿಮ್ಮ ಅಮೆಜಾನ್ ಪೇ ಅನ್ನು ನೀವು ಸೆಟ್‌ಮಾಡಿ, ‘Agree & Continue' ಟ್ಯಾಪ್ ಮಾಡಿ.

ಹಂತ: 8 ನೀವು ಈಗಿನಿಂದಲೇ ಸ್ವಯಂ ಮರುಪಾವತಿಯನ್ನು ಹೊಂದಿಸಬಹುದು ಅಥವಾ ಅದನ್ನು ಬಿಟ್ಟುಬಿಡಬಹುದು.

ಹಂತ: 9 ನಂತರ ಅಮೆಜಾನ್ ಪೇ ಬಳಸಿ ಐಟಂ ಖರೀದಿಸಲು, ನಿಮ್ಮ ಕಾರ್ಟ್‌ಗೆ ಐಟಂ ಸೇರಿಸಿ.

ಹಂತ: 10 ಚೆಕ್‌ ಔಟ್‌ನಲ್ಲಿ ಪಾವತಿ ವಿಧಾನದಲ್ಲಿ ಅಮೆಜಾನ್ ಪೇ ಲೇಟರ್ ಆಯ್ಕೆಯನ್ನು ಬಳಸಿ ಮತ್ತು ಮುಂದುವರಿಸಿ ಟ್ಯಾಪ್ ಮಾಡಿ.

ಮೊಬೈಲ್

ಮೊಬೈಲ್ ಮತ್ತು ಡೆಸ್ಕ್‌ಟಾಪ್ ಪ್ಲಾಟ್‌ಫಾರ್ಮ್‌ನಲ್ಲಿ ಖರೀದಿಗೆ ಲಭ್ಯವಿದೆ. (ನೋಂದಣಿ ಮೊಬೈಲ್ ಮೂಲಕ ಮಾತ್ರ ಮಾಡಬಹುದು). ಅಮೆಜಾನ್ ಪೇ ಲೇಟರ್‌ನಲ್ಲಿ ಖರೀದಿಸಲು, ಖಾತೆ "ಸಕ್ರಿಯ" ವಾಗಿರಬೇಕು. ಎಕ್ಸ್ಚೇಂಜ್ ಆಫರ್‌ನೊಂದಿಗೆ ಖರೀದಿಗೆ ಲಭ್ಯವಿಲ್ಲ. ಮಲ್ಟಿ-ಕಾರ್ಟ್‌ನ ಸಂದರ್ಭದಲ್ಲಿ, ಕಾರ್ಟ್‌ನಲ್ಲಿರುವ ಎಲ್ಲಾ ವಸ್ತುಗಳು ನೋ ಕಾಸ್ಟ್‌ ಇಎಂಐಗೆ ಅರ್ಹವಾದಾಗ ಮಾತ್ರ ಖರೀದಿಯಲ್ಲಿ ನೋ ಕಾಸ್ಟ್‌ ಇಎಂಐ ಅನ್ವಯಿಸುವುದಿಲ್ಲ.

Most Read Articles
Best Mobiles in India

Read more about:
English summary
Amazon Pay later helps its users to buy something they like and pay for it later, just like the name suggests.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X