ಐಫೋನ್‌ನಲ್ಲಿ ಫೇಸ್ ಐಡಿ ಅನ್ನು ಹೊಂದಿಸುವುದು ಹೇಗೆ ಗೊತ್ತಾ?

|

ಸ್ಮಾರ್ಟ್‌ಫೋನ್‌ ಮತ್ತು ಐಫೋನ್‌ ಬಳಕೆದಾರರು ತಮ್ಮ ಫೋನ್‌ಗಳ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ನಿಡುತ್ತಾರೆ. ಅಲ್ಲದೆ ತಮ್ಮ ಫೋನ್‌ಗಳಲ್ಲಿ ಗೌಪ್ಯತೆಯ ದೃಷ್ಟಿಯಿಂದ ಸುರಕ್ಷತೆಗಾಗಿ ಸ್ಕ್ರೀನ್‌ಲಾಕ್‌, ಪಾಸ್‌ವರ್ಡ್‌ಗಳನ್ನು ಬಳಸುತ್ತಾರೆ. ಸದ್ಯ ಲಾಕ್‌ಡೌನ್ ಸಮಯದಲ್ಲಿ ಕುಟುಂಬದವರೆಲ್ಲಾ ಒಂದೇ ಕಡೆ ಇರುವುದರಿಂದ ತಮ್ಮ ಗೌಪ್ಯತೆಯನ್ನ ಕಾಪಾಡಿಕೊಳ್ಳುವುದಕ್ಕೆ ಫೋನ್‌ ಬಳಕೆದಾರರು ಪರದಾಡುತ್ತಾರೆ. ಜೊತೆಗೆ ನೀವು ಸ್ಕ್ರೀನ್ ಲಾಕ್ ಅನ್ನು ಬಳಸದೆ ಇದ್ದರೆ ಇತರರು ನಿಮ್ಮ ಫೋನ್‌ ಬಳಸುವಾಗ ನೀವು ಬಹಳ ಎಚ್ಚರಿಕೆ ಇಂದ ಇರಬೇಕಾದ ಅನಿವಾರ್ಯತೆ ಇರುತ್ತದೆ. ಇದೇ ಕಾರಣಕ್ಕೆ ನಾವು ಈ ಲೇಖನದಲ್ಲಿ ನಿಮ್ಮ ಐಫೋನ್ ನಲ್ಲಿ ನಿಮ್ಮ ಗೌಪ್ಯತೆ ಸುರಕ್ಷತೆಯನ್ನು ನೀವು ಹೇಗೆ ಬಿಗಿಗೊಳಿಸಬಹುದು ಅನ್ನೊದನ್ನ ತಿಳಿಸಿಕೊಡಲಿದ್ದೇವೆ.

ಐಫೋನ್

ಹೌದು, ಆಪಲ್ ಐಫೋನ್ ಎಕ್ಸ್ ಅಥವಾ ನಂತರದ ಆವೃತ್ತಿಯ ಐಫೋನ್‌ನಲ್ಲಿ ಪಾಸ್‌ಕೋಡ್‌ ಸುರಕ್ಷತೆಯ ಫೇಸ್ ಐಡಿಗಾಗಿ ಟಚ್ ಐಡಿಯನ್ನು ಡಿಚ್ ಮಾಡಿದೆ, ಇದು ಫೋನ್ ಅನ್ನು ಅನ್ಲಾಕ್ ಮಾಡಲು ಮುಖವನ್ನು ಸ್ಕ್ಯಾನ್ ಮಾಡಲು ಸೆಲ್ಫಿ ಕ್ಯಾಮೆರಾವನ್ನು ಬಳಸುತ್ತದೆ. ಇದು ನಿಮ್ಮ ಮುಖದ ನಕ್ಷೆಯನ್ನು ರಚಿಸುವ ಮತ್ತು ಕಾಲಾನಂತರದಲ್ಲಿ ಆಗಬಹುದಾದ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲಿದೆ. ಅಲ್ಲದೆ ಐಫೋನ್‌ನಲ್ಲಿನ ಟ್ರೂಲಿ ಡೆಪ್ತ್‌ ಸೆನ್ಸಾರ್‌ ಕ್ಯಾಮೆರಾದಿಂದ ಫೇಸ್ ಐಡಿಯನ್ನು ಸುಗಮಗೊಳಿಸಲಾಗುತ್ತದೆ. ವಿಭಿನ್ನ ಗಡ್ಡದ ಮಾದರಿಗಳು, ಕ್ಲಿನ್‌ ಶೇವ್‌ ಲುಕ್‌ ಮತ್ತು ಇನ್ನು ಹೆಚ್ಚಿನದನ್ನು ಗುರುತಿಸಲು ಇದು ಸಮರ್ಥವಾಗಿದೆ. ಹಾಗಂತ ಫೇಸ್ ಐಡಿ ವಿಶ್ವಾಸಾರ್ಹವಲ್ಲ ಆದರೆ ಇದು ಸಾಕಷ್ಟು ವೇಗವಾಗಿರುತ್ತದೆ. ಅದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ ರಿಜಿಸ್ಟ್ರೇಶನ್‌

ನಿಮ್ಮ ಐಫೋನ್‌ನಲ್ಲಿ ಫೇಸ್‌ ರಿಜಿಸ್ಟ್ರೇಶನ್‌ ನಿಮ್ಮ ಐಫೋನ್ ಅನ್ನು ಅನ್ಲಾಕ್ ಮಾಡಿ ಮತ್ತು ಇನ್ಸಟಂಟ್‌ ಆಗಿ 'ಸೆಟ್ಟಿಂಗ್ಸ್‌' ಗೆ ಹೋಗಿ. ಈಗ, ಸರ್ಚ್‌ ಬಾಕ್ಸ್‌ನಲ್ಲಿ 'ಫೇಸ್ ಐಡಿ' ಗಾಗಿ ಸರ್ಚ್‌ ಮಾಡಿದರೆ ಅಲ್ಲಿ ನಿಮಗೆ ರಿಸಲ್ಟ್‌ಗಳನ್ನು ತೋರಿಸಲಾಗುತ್ತದೆ. ಸರ್ಚ್‌ ರಿಸಲ್ಟ್‌ಗಳಿಂದ 'ಫೇಸ್ ಐಡಿ ಮತ್ತು ಪಾಸ್‌ಕೋಡ್' ಟ್ಯಾಪ್ ಮಾಡಿ. ನಂತರ, ನೀವು ಸೆಟಪ್ ಫೇಸ್ ಐಡಿಯನ್ನು ಟ್ಯಾಪ್ ಮಾಡಬೇಕಾಗುತ್ತದೆ, ನಂತರ 'ಸ್ಟಾರ್ಟ್‌' ಅನ್ನು ಟ್ಯಾಪ್ ಮಾಡಿ. ಈ ಹಂತಕ್ಕೆ ಈಗಾಗಲೇ ಹಾಕಿರುವ ಪಾಸ್‌ಕೋಡ್ ಮೂಲಕ ಅಧಿಕೃತತೆಯ ಅಗತ್ಯವಿದೆ. ನಿಮ್ಮಲ್ಲಿ ಯಾವುದೇ ಪಾಸ್‌ಕೋಡ್ ಇಲ್ಲದಿದ್ದರೆ, ನೀವು ಕಡ್ಡಾಯವಾಗಿ ಒಂದನ್ನು ರಚಿಸಬೇಕಾಗುತ್ತದೆ, ಇದು ಫೇಸ್ ಐಡಿ ವಿಫಲವಾದರೆ, ಫೋನ್ ಪುನರಾರಂಭಗೊಂಡಿದ್ದರೆ ಅಥವಾ ಕಳೆದ 48 ಗಂಟೆಗಳಲ್ಲಿ ಫೋನ್ ಲಾಕ್ ಆಗದಿದ್ದಲ್ಲಿ ಅದು ಫಾಲ್‌ಬ್ಯಾಕ್ ದೃಡೀಕರಣ ವಿಧಾನವಾಗಿ ಕಾರ್ಯನಿರ್ವಹಿಸುತ್ತದೆ.

ಐಫೋನ್

ಇದಲ್ಲದೆ ಐಫೋನ್ ಸೆಲ್ಫಿ ಕ್ಯಾಮೆರಾವನ್ನು ಆನ್ ಮಾಡುತ್ತದೆ ಮತ್ತು ಪರದೆಯ ಮೇಲೆ ಸರ್ಕಲ್ ಅನ್ನು ತೋರಿಸುತ್ತದೆ. ಅಲ್ಲಿ ನಿಮ್ಮ ಮುಖವನ್ನು ನಿಮ್ಮ ಫೇಸ್‌ ಅನ್ನು ರಿಜಿಸ್ಟ್ರೇಶನ್‌ ಅನ್ನು ಮಾಡಬಹುದಾಗಿದೆ. ಅಲ್ಲದೆ ಸರಿಯಾದ ಮ್ಯಾಪಿಂಗ್‌ಗಾಗಿ ನಿಮ್ಮ ಮುಖವನ್ನು ಪರದೆಯಿಂದ ಕನಿಷ್ಠ 10 ಇಂಚುಗಳಷ್ಟು ದೂರವಿಡಿ. ನಿಮ್ಮ ಮುಖವನ್ನು ಮಧ್ಯದಲ್ಲಿ ಇರಿಸಿ ಮತ್ತು ವೃತ್ತದ ಹೊರಗಿನ ಬಿಳಿ ರೇಖೆಯು ಹಸಿರು ಬಣ್ಣಕ್ಕೆ ತಿರುಗದ ಹೊರತು ಅದನ್ನು ವೃತ್ತಾಕಾರದ ಚಲನೆಯಲ್ಲಿ ತಿರುಗಿಸಿ. ಈ ಪ್ರಕ್ರಿಯೆಯನ್ನು ಅದೇ ರೀತಿಯಲ್ಲಿ ಪುನರಾವರ್ತಿಸಲಾಗುತ್ತದೆ. ಅಲ್ಲದೆ, ನೀವು ಸಾಮಾನ್ಯವಾಗಿ ಕನ್ನಡಕವನ್ನು ಧರಿಸಿದರೆ, ನಿಮ್ಮ ಮುಖವನ್ನು ಸ್ಕ್ಯಾನ್ ಮಾಡುವಾಗ ಅವುಗಳನ್ನು ಧರಿಸಿ. ಫೇಸ್ ಐಡಿ ನಿಮ್ಮ ಮುಖವನ್ನು ಕನ್ನಡಕದೊಂದಿಗೆ ಅಥವಾ ಇಲ್ಲದೆ ಗುರುತಿಸುವಷ್ಟು ಬುದ್ಧಿವಂತವಾಗಿದ್ದರೂ, ಅದನ್ನು ಚೆನ್ನಾಗಿ ಸಲಹೆ ನಿಡುತ್ತದೆ.

ಫೇಸ್ ಐಡಿ ಬಳಸುವುದು

ಫೇಸ್ ಐಡಿ ಬಳಸುವುದು

ನೀವು ಫೇಸ್‌ ಐಡಿ ಅನ್ನು ಹೊಂದಿಸಿದ ನಂತರ ನಿಮ್ಮ ಐಫೋನ್ ಅನ್ನು ನೀವು ಲಾಕ್ ಮಾಡಬಹುದು ಮತ್ತು ಅದನ್ನು ನಿಮ್ಮ ಮುಖದ ಮುಂದೆ ಹಿಡಿದುಕೊಳ್ಳಬಹುದು. ಸ್ಕ್ರೀನ್‌ ಅನ್ನು ಆನ್‌ ಮಾಡಿದ ಕೂಡಲೇ ಐಫೋನ್ ಅನ್‌ಲಾಕ್ ಆಗುತ್ತದೆ. ಹೋಮ್‌ ಸ್ಕ್ರೀನ್‌ ಅನ್ನು ಪ್ರವೇಶಿಸಲು, ನೀವು ಕೆಳಗಿನಿಂದ ಮೇಲಕ್ಕೆ ಸ್ವೈಪ್ ಮಾಡಬೇಕಾಗುತ್ತದೆ. ಫೇಸ್ ಐಡಿ ಸಹ ಸುರಕ್ಷತೆಗಾಗಿ ಸಾಕಷ್ಟು ಅಪ್ಲಿಕೇಶನ್‌ಗಳಿಂದ ಬೆಂಬಲಿತವಾಗಿದೆ. ಈ ಅಪ್ಲಿಕೇಶನ್‌ಗಳಲ್ಲಿ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳು, ಗೂಗಲ್ ಪೇ, ಫೋನ್‌ಪೇ ಮತ್ತು ಸಿಆರ್‌ಇಡಿ ಸೇರಿವೆ.

Best Mobiles in India

English summary
Apple has ditched the Touch ID on iPhone X or later for the Face ID, which uses the front camera to scan the face to unlock the phone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X