ನಿಮ್ಮ ಮಕ್ಕಳು ಅನಗತ್ಯ ವೀಡಿಯೋಗಳನ್ನು ವೀಕ್ಷಿಸದಂತೆ ಮಾಡಲು ಹೀಗೆ ಮಾಡಿ!
ಪ್ರಸ್ತುತ ದಿನಗಳಲ್ಲಿ ವೀಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದರಲ್ಲಿ ಗೂಗಲ್ ಒಡಡೆತನದ ಯೂಟ್ಯೂಬ್ ಕೂಡ ಒಂದಾಗಿದೆ. ಯೂಟ್ಯೂಬ್ ನಲ್ಲಿ ವೀಡಿಯೋ ಮಾತ್ರವಲ್ಲ ಮ್ಯೂಸಿಕ್ ಅನ್ನು ಕೂಡ ಆಲಿಸಬಹುದಾಗಿದೆ. ಸದ್ಯ ಯೂಟ್ಯೂಬ್‌ನಲ್ಲಿ ಎಲ್ಲಾ ವಿಧದ ಮಾಹಿತಿ ಕೂಡ ದೊರೆಯಲಿದೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ಯೂಟ್ಯೂಬ್ ಅನ್ನು ಬಳಸುತ್ತಾರೆ. ಯೂಟ್ಯೂಬ್‌ನಲ್ಲಿ ತಮಗೆ ಬೇಕಾದ ವೀಡಿಯೋಗಳನ್ನು ಸ್ಟ್ರೀಮ್ ಮಾಡುತ್ತಾರೆ.

ಹೌದು, ಯೂಟ್ಯೂಬ್‌ನಲ್ಲಿ ಎಲ್ಲಾ ವಿಧದ ಮಾಹಿತಿಯನ್ನು ಪಡೆಯಬಹುದಾಗಿದೆ. ಇದರಲ್ಲಿ ಒಳ್ಳೆಯ ವಿಚಾರವಿದ್ದಂತೆ ಸೂಕ್ಷ್ಮ ವಿಷಯಗಳು ಕೂಡ ಯೂಟ್ಯೂಬ್‌ನಲ್ಲಿ ಲಭ್ಯವಾಗಲಿದೆ. ಆದರಿಂದ ಕೆಲವು ವಿಷಯಗಳನ್ನು ಮಕ್ಕಳು ನೋಡದಂತೆ ಎಚ್ಚರ ವಹಿಸುವುದು ಕೂಡ ಅತ್ಯಗತ್ಯ. ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಮಕ್ಕಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಮೊಬೈಲ್ ಬಳಸುವುದರಿಂದ ಅವರ ವಯಸ್ಸಿಗೆ ಮೀರಿದ ಸೂಕ್ಷ್ಮ ವಿಷಯವನ್ನು ನೋಡದಂತೆ ಮಾಡಲು ಪೇರೆಂಟಲ್ ಕಂಟ್ರೋಲ್ ಸೆಟ್ ಮಾಡಬೇಕಾಗುತ್ತದೆ. ಹಾಗಾದ್ರೆ ಯೂಟ್ಯೂಬ್‌ನಲ್ಲಿ ಮಕ್ಕಳಿಗೆ ಸೂಕ್ತವಲ್ಲದ ವಿಷಯವನ್ನು ಬ್ಲಾಕ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಧುನಿಕತೆ ಬೆಳೆದಂತೆ ಎಲ್ಲಾ ಮಾದರಿಯ ವಿಚಾರಗಳು ಇಂದು ಮುಕ್ತವಾಗಿ ಯೂಟ್ಯೂಬ್‌ನಲ್ಲಿ ಲಭ್ಯವಿದೆ. ಯೂಟ್ಯೂಬ್‌ನಲ್ಲಿ ಮಕ್ಕಳಿಗೆ ಸೂಕ್ತ ಎನಿಸುವ ವಿಷಯಗಳು ಇರುತ್ತವೆ. ಜೊತೆಗೆ ಸೂಕ್ತವಲ್ಲದ ಎಷ್ಟೋ ವಿಷಯಗಳು ಕೂಡ ಯೂಟ್ಯೂಬ್‌ನಲ್ಲಿ ದೊರೆಯಲಿವೆ. ಆದರಿಂದ ಯೂಟ್ಯೂಬ್ ಮಕ್ಕಳಿಗೆ ಸೂಕ್ತವಲ್ಲಿದ ವಿಷಯವನ್ನು ಪ್ರವೇಶಿಸದಂತೆ ಮಾಡುವುದಕ್ಕೆ ಪೆರೆಂಟಲ್ ಕಂಟ್ರೋಲ್ ಹೊಂದಿದೆ. ಅದೇ ಮಾದರಿಯಲ್ಲಿ ವೀಡಿಯೋ ಸ್ಟ್ರೀಮಿಂಗ್ ಅಪ್ಲಿಕೇಶನ್ ನೆಟ್‌ಫ್ಲಿಕ್ಸ್ ಕೂಡ ಕಾರ್ಯನಿರ್ವಹಿಸಲಿದೆ. ಯೂಟ್ಯೂಬ್, ನೆಟ್‌ಫ್ಲಿಕ್ಸ್‌ನಲ್ಲಿ ಮಕ್ಕಳಿಗೆ ಸೂಕ್ತವಲ್ಲದ ವಿಷಯ ಪ್ರವೇಶಿಸದಂತೆ ಮಾಡುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಯೂಟ್ಯೂಬ್ ನಲ್ಲಿ ಪೇರೆಂಟಲ್ ಕಂಟ್ರೋಲ್ ಸೆಟ್ ಮಾಡುವುದು ಹೇಗೆ?
ಹಂತ:1 ಮೊದಲಿಗೆ ನಿಮ್ಮ ಡಿವೈಸ್‌ನಲ್ಲಿ YouTube ಅಪ್ಲಿಕೇಶನ್ ತೆರೆಯಿರಿ
ಹಂತ:2 ಅಪ್ಲಿಕೇಶನ್‌ನ ಮೇಲಿನ ಬಲ ಮೂಲೆಯಲ್ಲಿರುವ ಪ್ರೊಫೈಲ್ ಚಿತ್ರದ ಮೇಲೆ ಟ್ಯಾಪ್ ಮಾಡಿ
ಹಂತ:3 ಸೆಟ್ಟಿಂಗ್ಸ್> ಜನರಲ್, ಕೆಳಗೆ ಸ್ಕ್ರಾಲ್ ಮಾಡಿ ಮತ್ತು "ರಿಸ್ಟ್ರಿಕ್ಟೆಡ್ ಮೋಡ್" ಆಯ್ಕೆಯ ಮುಂದೆ ಟಾಗಲ್ ಅನ್ನು ಆನ್ ಮಾಡಿ
ರಿಸ್ಟ್ರಿಕ್ಟೆಡ್ ಮೋಡ್ ಅನ್ನು ಆಯ್ಕೆ ಮಾಡುವುದರಿಂದ ಮಕ್ಕಳಿಗೆ ಸೂಕ್ತವಲ್ಲದ ವಿಷಯ ಬ್ಲಾಕ್ ಆಗಲಿದೆ. ಆದರೆ ಈ ಮೋಡ್ ಅನ್ನು ಸೆಟ್ ಮಾಡುವುದು ನಿರ್ದಿಷ್ಟ ಡಿವೈಸ್‌ಗೆ ಮಾತ್ರ ಲಭ್ಯವಿರುತ್ತದೆ.

ನೆಟ್‌ಫ್ಲಿಕ್ಸ್‌ನಲ್ಲಿ ಪೇರೆಂಟಲ್ ಕಂಟ್ರೋಲ್ ಸೆಟ್ ಮಾಡುವುದು ಹೇಗೆ?
ಹಂತ:1 ನಿಮ್ಮ ನೆಟ್‌ಫ್ಲಿಕ್ಸ್ ಅಕೌಂಟ್ ತೆರೆಯಿರಿ, ಇದರಲ್ಲಿ ಅಕೌಂಟ್ ಸೆಟ್ಟಿಂಗ್ಸ್ ತೆರೆಯಿರಿ
ಹಂತ:2 ನಂತರ ನೀವು ರಿಸ್ಟ್ರಿಕ್ಟ್ ಮಾಡಲು ಬಯಸುವ ನಿರ್ದಿಷ್ಟ ಪ್ರೊಫೈಲ್ ಅನ್ನು ಟ್ಯಾಪ್ ಮಾಡಿ
ಹಂತ:3 'ವೀಕ್ಷಣೆ ನಿರ್ಬಂಧಗಳು' ವಿಭಾಗವನ್ನು ತೆರೆಯಿರಿ
ಹಂತ:4 ವಯಸ್ಸಿನ ಬ್ರಾಕೆಟ್ ಪ್ರಕಾರ ಸ್ಲೈಡರ್ ಅನ್ನು ಸೆಟ್ ಮಾಡು
ಹಂತ:5 "ಸೇವ್" ಬಟನ್ ಮೇಲೆ ಟ್ಯಾಪ್ ಮಾಡಿ
ಹೀಗೆ ಮಾಡುವ ಮೂಲಕ ಮಕ್ಕಳಿಗೆ ಸೂಕ್ತವಲ್ಲದ ವಿಷಯಗಳನ್ನು ಬ್ಲಾಕ್ ಮಾಡಬಹುದಾಗಿದೆ. ಇದಲ್ಲದೆ ನಿಮ್ಮ ಮಕ್ಕಳು ವಯಸ್ಕ ಪ್ರೊಫೈಲ್‌ಗಳನ್ನು ಬಳಸದಂತೆ ತಡೆಯಲು ಅವರ ಖಾತೆಗಳಲ್ಲಿ ಪಿನ್.ಸೆಟ್ ಮಾಡುವ ಅವಕಾಶ ಕೂಡ ಇದೆ. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ನೆಟ್‌ಫ್ಲಿಕ್ಸ್ ಪ್ರೊಫೈಲ್‌ನಲ್ಲಿ ಪಾಸ್‌ವರ್ಡ್ ಸೆಟ್ ಮಾಡುವುದು ಹೇಗೆ?
ಹಂತ:1 ನಿಮ್ಮ ಡಿವೈಸ್‌ನಲ್ಲಿ ನೆಟ್‌ಫ್ಲಿಕ್ಸ್ ಖಾತೆಯನ್ನು ತೆರೆಯಿರಿ ಮತ್ತು "ಅಕೌಂಟ್" ಮೇಲೆ ಟ್ಯಾಪ್ ಮಾಡಿ
ಹಂತ:2 ಸೆಟ್ಟಿಂಗ್‌ಗಳು>ಪೇರೆಂಟಲ್ ಕಂಟ್ರೋಲ್
ಹಂತ:3 "ನೆಟ್‌ಫ್ಲಿಕ್ಸ್ ಖಾತೆಯ ಪಾಸ್‌ವರ್ಡ್" ಅನ್ನು ನಮೂದಿಸಿ ಮತ್ತು "ಕಂಟಿನ್ಯೂ" ಟ್ಯಾಪ್ ಮಾಡಿ
ಹಂತ:4 ಇದಾದ ನಂತರ ಹೊಸ ಪಿನ್ ನಮೂದಿಸಿ
ಹಂತ:5 ನಂತರ ಪಿನ್ ಪ್ರೊಟೆಕ್ಷನ್ ಗಾಗಿ ನಿಮ್ಮ ಆಯ್ಕೆಯ ಪ್ರೊಟೆಕ್ಷನ್ ಲೆವೆಲ್ ಅನ್ನು ಆಯ್ಕೆಮಾಡಿ
ಹಂತ:6 ಎಲ್ಲಾ ಮುಗಿದ ನಂತರ, "ಸೇವ್" ಆಯ್ಕೆಮಾಡಿ
ಈ ವಿಧಾನವು ನಿಮ್ಮ ಮಕ್ಕಳನ್ನು ನೆಟ್‌ಫ್ಲಿಕ್ಸ್‌ನಲ್ಲಿ ಗೇಮ್‌ಗಳನ್ನು ಆಡುವುದನ್ನು ನಿರ್ಬಂಧಿಸಲು ಬಯಸುವವರಿಗೆ ಉಪಯುಕ್ತವಾಗಬಹುದು. ಏಕೆಂದರೆ ಅವರು ಇದೀಗ ವಯಸ್ಕ ಪ್ರೊಫೈಲ್‌ಗಳಲ್ಲಿ ಮಾತ್ರ ಲಭ್ಯವಿರುತ್ತಾರೆ.


Click it and Unblock the Notifications








