ಭಾರತದಲ್ಲಿ ವಾಟ್ಸಾಪ್‌ ಪೇ ಸೇವೆ ಶುರು! ವಾಟ್ಸಾಪ್‌ ಮೂಲಕ ಹಣ ಕಳುಹಿಸುವುದು ಹೇಗೆ?

|

ಸಾಕಷ್ಟು ದಿನದಿಂದ ಕಾಯುತ್ತಿದ್ದ ಬಹು ನಿರೀಕ್ಷಿತ ವಾಟ್ಸಾಪ್ ಪೇ ಈಗ ಭಾರತದಲ್ಲಿ ಲೈವ್ ಆಗಿದೆ. ಇಂದಿನಿಂದ, ಭಾರತದಾದ್ಯಂತ ಜನರು ವಾಟ್ಸಾಪ್ ಪೇ ಮೂಲಕ ಹಣವನ್ನು ಕಳುಹಿಸಲು ಸಾಧ್ಯವಾಗಲಿದೆ. ಈ ಸುರಕ್ಷಿತ ಪೇಮೆಂಟ್‌ ಸರ್ವಿಸ್‌ ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದ್ದು, ವಾಟ್ಸಾಪ್‌ ಮೆಸೇಜ್‌ ಮಾಡಿದಷ್ಟೇ ಸುಲಭವಾಗಿ ಹಣವನ್ನು ಸಹ ವರ್ಗಾವಣೆ ಮಾಡಲಿದೆ. ಇನ್ನು ಭಾರತದಲ್ಲಿ ವಾಟ್ಸಾಪ್‌ ಪೇ ಸೇವೆಯನ್ನು ಭಾರತದಲ್ಲಿ ಲೈವ್‌ ಮಾಡುವುದಕ್ಕೆ ಫೇಸ್‌ಬುಕ್ ಮತ್ತು ವಾಟ್ಸಾಪ್ ಅಗತ್ಯ ಅನುಮೋದನೆಗಳಿಗಾಗಿ ಕಾಯುತ್ತಿದ್ದವು, ಇದೀಗ ಅನುಮೋದನೆ ದೊರೆತಿದ್ದು ಅಂತಿಮವಾಗಿ ತನ್ನ ಸೇವೆಯನ್ನು ಪ್ರಾರಂಭಿಸಿದೆ.

ಹೌದು, ಜನಪ್ರಿಯ ಇನ್ಸ್‌ಟಂಟ್‌ ಮೆಸೇಜಿಂಗ್‌ ಆಪ್‌ ವಾಟ್ಸಾಪ್‌ ತನ್ನ ಬಹು ನಿರೀಕ್ಷಿತ ವಾಟ್ಸಾಪ್‌ ಪೇ ಸೇವೆಯನ್ನು ಭಾರತದಲ್ಲಿ ಪ್ರಾರಂಭಿಸಿದೆ. ಬಳಕೆದಾರರು ಈ ಸೇವೆಯನ್ನು ಬಳಸಿಕೊಂಡು ನಗದು ಪಾವತಿಯನ್ನು ಮಾಡಬಹುದಾಗಿದೆ. ಇನ್ನು ವಾಟ್ಸಾಪ್‌ ಪೇ ಯುಪಿಐ ಆಧಾರಿತ ಪಾವತಿ ಸೇವೆಯಾಗಿದ್ದು, ಯುಪಿಐ ಶಕ್ತಗೊಂಡ ಬ್ಯಾಂಕ್‌ ಖಾತೆಗಳನ್ನು ಲಿಂಕ್‌ ಮಾಡಬಹುದಾಗಿದೆ. ಹಾಗಾದ್ರೆ ವಾಟ್ಸಾಪ್‌ ಪೇ ಸೇವೆಯನ್ನು ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ ಪೇ ಎಂದರೇನು?

ವಾಟ್ಸಾಪ್ ಪೇ ಎಂದರೇನು?

ವಾಟ್ಸಾಪ್ ಪೇ ಯುಪಿಐ ಆಧಾರಿತ ಪಾವತಿ ಸೇವೆಯಾಗಿದ್ದು, ಕಳೆದ ಫೆಬ್ರವರಿಯಲ್ಲಿ ಭಾರತದಲ್ಲಿ ಬೀಟಾ ಮೋಡ್‌ನಲ್ಲಿ ಪ್ರಾರಂಭಿಸಲಾಗಿತ್ತು. ಸದ್ಯ ಇದೀಗ ಭಾರತದಲ್ಲಿ ಲೈವ್ ಆಗಿದೆ. ಅಲ್ಲದೆ ಈ ಸೇವೆಯನ್ನು ಪ್ರತಿಯೊಬ್ಬರು ಸಹ ಬಳಸಬಹುದಾಗಿದೆ. ಇನ್ನು ವಾಟ್ಸಾಪ್ ಪೇ ಬಳಕೆದಾರರು ತಮ್ಮ ಯುಪಿಐ-ಶಕ್ತಗೊಂಡ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಬಹುದು ಮತ್ತು ಮೆಸೇಜಿಂಗ್ ಅಪ್ಲಿಕೇಶನ್ ಮೂಲಕ ಹಣವನ್ನು ವರ್ಗಾಯಿಸಬಹುದಾಗಿದೆ. ಅಲ್ಲದೆ ಎಚ್‌ಡಿಎಫ್‌ಸಿ, ಐಸಿಐಸಿಐ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್ ಮತ್ತು ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ನಂತಹ ಎಲ್ಲಾ ಜನಪ್ರಿಯ ಬ್ಯಾಂಕುಗಳನ್ನು ವಾಟ್ಸಾಪ್ ಪೇ ಬೆಂಬಲಿಸಲಿದೆ.

ವಾಟ್ಸಾಪ್ ಪೇ ಅನ್ನು ಸೆಟ್‌ ಮಾಡುವುದು ಹೇಗೆ ?

ವಾಟ್ಸಾಪ್ ಪೇ ಅನ್ನು ಸೆಟ್‌ ಮಾಡುವುದು ಹೇಗೆ ?

ವಾಟ್ಸಾಪ್ ಪೇ ಅನ್ನು ಬಳಸಲು ಹಾಗೂ ಪ್ರಾರಂಭಿಸಲು, ಮೊದಲು ವಾಟ್ಸಾಪ್ ಬಳಕೆದಾರರು ತಮ್ಮ ಕಂಟ್ಯಾಕ್ಟ್‌ ಮೂಲಕ ಪಾವತಿಯನ್ನು ಪ್ರಾರಂಭಿಸಬೇಕಾಗುತ್ತದೆ. ಬಳಕೆದಾರರು ತಮ್ಮ ಯುಪಿಐ ಖಾತೆಯನ್ನು ವಾಟ್ಸಾಪ್‌ನಲ್ಲಿ ಸೆಟ್‌ಮಾಡಬಹುದಾಗಿದೆ. ನಂತರ ಬಳಕೆದಾರರು ವಾಟ್ಸಾಪ್‌ನಲ್ಲಿಯೇ ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು.

ವಾಟ್ಸಾಪ್ ಪೇ ಅನ್ನು ಹೇಗೆ ಬಳಸುವುದು?

ವಾಟ್ಸಾಪ್ ಪೇ ಅನ್ನು ಹೇಗೆ ಬಳಸುವುದು?

ಹಣವನ್ನು ಕಳುಹಿಸಲು ವಾಟ್ಸಾಪ್ ಪೇ ಅನ್ನು ಬಳಸುವುದು ಅಪ್ಲಿಕೇಶನ್‌ನಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸುವಷ್ಟು ಸರಳವಾಗಿದೆ. ಚಾಟ್ ಬಾರ್‌ನಲ್ಲಿನ ಶೇರ್ ಫೈಲ್ ಐಕಾನ್ ಅನ್ನು ಟ್ಯಾಪ್ ಮಾಡಿ ಮತ್ತು 'ಪಾವತಿ' ಆಯ್ಕೆ ಮಾಡುವ ಮೂಲಕ ನೀವು ನೇರವಾಗಿ ಚಾಟ್‌ನಲ್ಲಿ ಹಣವನ್ನು ಕಳುಹಿಸಬಹುದು. ಅಲ್ಲದೆ ಶಾರ್ಟ್‌ಕಟ್‌ ಅಡಿಯಲ್ಲಿ ಮೀಸಲಾದ 'ಪಾವತಿಗಳು' ವಿಭಾಗವಿದೆ. ಬಳಕೆದಾರರು ತಮ್ಮ ವ್ಯವಹಾರ, ಹಿಸ್ಟರಿ ಮತ್ತು ಖಾತೆ ವಿವರಗಳನ್ನು ಈ ವಿಭಾಗದಲ್ಲಿ ಪರಿಶೀಲಿಸಬಹುದು. ಇದು GPay ಅಥವಾ Paytm ಅನ್ನು ಬಳಸುವಷ್ಟು ಸರಳವಾಗಿದೆ, ನೀವು ಚಾಟ್‌ನ ಒಳಗಿನಿಂದ ಎಲ್ಲವನ್ನೂ ಮಾಡಬಹುದು.

Best Mobiles in India

English summary
WhatsApp Pay is now live in India and everyone can use it. Here’s how you set it up and get going.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X