ವಾಟ್ಸಾಪ್‌ನಲ್ಲಿ ದಸರಾ ಹಬ್ಬದ ಸ್ಟಿಕ್ಕರ್‌ಗಳನ್ನು ಸೆಂಡ್‌ ಮಾಡಲು ಹೀಗೆ ಮಾಡಿ?

|

ಇಂದಿನ ಜೀವನ ಶೈಲಿಯಲ್ಲಿ ಹಬ್ಬಗಳನ್ನು ಸಂಭ್ರಮಿಸುವ ವಿಧಾನವೇ ಬದಲಾಗಿ ಹೋಗಿದೆ. ಅದರಲ್ಲೂ ಹಬ್ಬ ಹರಿದಿನಗಳ ಸಮಯದಲ್ಲಿ ವಾಟ್ಸಾಪ್‌ ಸ್ಟಿಕ್ಕರ್‌ಗಳ ಮೂಲಕ ಶುಭಾಶಯ ವಿನಿಮಯ ಮಾಡುವುದು ಟ್ರೆಂಡ್‌ ಆಗಿದೆ. ಇನ್ನು ವಾಟ್ಸಾಪ್‌ ಕೂಡ ಹಬ್ಬ ಹರಿದಿನಗಳಿಗೆ ವಿಶೇಷವಾಗಿ ಹೊಸ ಸ್ಟಿಕ್ಕರ್‌ ಪ್ಯಾಕ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ದೇಶದೆಲ್ಲೆಡೆ ನವರಾತ್ರಿಯ ಸಂಭ್ರಮ ಜೋರಾಗಿದೆ. ದಸರಾ ಹಬ್ಬದ ಪ್ರಯುಕ್ತ ವಾಟ್ಸಾಪ್‌ ಸ್ಟಿಕ್ಕರ್‌ ಮೂಲಕ ನಿಮ್ಮ ಶುಭಾಶಯ ವಿನಿಮಯ ಮಾಡಿಕೊಳ್ಳಬಹುದಾಗಿದೆ.

ದಸರಾ

ಹೌದು, ನವರಾತ್ರಿ ಮುಗಿದು ನಾಳೆ ದಸರಾ ಹಬ್ಬದ ಸಂಭ್ರಮ ದೇಶದೆಲ್ಲೆಡೆ ಕಳೆ ಗಟ್ಟಲಿದೆ. ಇಂತಹ ಸನ್ನಿವೇಶದಲ್ಲಿ ದಸರಾ ಸಂಭ್ರಮದ ಶುಭಾಶಯಗಳನ್ನು ವಾಟ್ಸಾಪ್‌ ಸ್ಟಿಕ್ಕರ್‌ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ವಾಟ್ಸಾಫ್‌ನಲ್ಲಿಸಾಕಷ್ಟು ವಿವಿಧ ರೀತಿಯ ಸ್ಟಿಕ್ಕರ್‌ ಪ್ಯಾಕ್‌ಗಳನ್ನು ಹೊಂದಿದೆ. ನೀವು ಕೂಡ ದಸರಾ ಹಬ್ಬದ ವಾಟ್ಸಾಪ್‌ ಸ್ಟಿಕ್ಕರ್‌ ಪ್ಯಾಕ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಮೂಲಕ ವಾಟ್ಸಾಪ್‌ನಲ್ಲಿ ಸಂದೇಶ ವಿನಿಮಯ ಮಾಡಬಹುದಾಗಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ದಸರಾ ಹಬ್ಬದ ಸ್ಟಿಕ್ಕರ್‌ಗಳನ್ನು ಸೆಂಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ನಲ್ಲಿ ದಸರಾ 2021 ಸ್ಟಿಕ್ಕರ್‌ಗಳನ್ನು ಸೇರಿಸುವುದು ಹೇಗೆ?

ವಾಟ್ಸಾಪ್‌ನಲ್ಲಿ ದಸರಾ 2021 ಸ್ಟಿಕ್ಕರ್‌ಗಳನ್ನು ಸೇರಿಸುವುದು ಹೇಗೆ?

ಹಂತ:1 ವಾಟ್ಸಾಪ್‌ನಲ್ಲಿ ದಸರಾ ಸ್ಟಿಕ್ಕರ್‌ಗಳನ್ನು ಸೇರಿಸಲು, ಗೂಗಲ್ ಪ್ಲೇ ಸ್ಟೋರ್ ನಲ್ಲಿ ‘ದಸರಾ 2021 ವಾಟ್ಸಾಪ್ ಸ್ಟಿಕ್ಕರ್‌ಗಳು' ಎಂದು ಟೈಪ್ ಮಾಡಿ.
ಹಂತ:2 ನಂತರ ನೀವು ಬಯಸುವ ಸ್ಟಿಕ್ಕರ್ ಪ್ಯಾಕ್ ಆಪ್‌ಗಳನ್ನು ಆಯ್ಕೆ ಮಾಡಿ. ಅವುಗಳಲ್ಲಿ ಇನ್‌ಸ್ಟಾಲ್‌ ಕ್ಲಿಕ್ ಮಾಡಿ.
ಹಂತ:3 ಸ್ಟಿಕರ್ ಆಪ್ ಅನ್ನು ಇನ್‌ಸ್ಟಾಲ್ ಮಾಡಿದ ನಂತರ, ಅದನ್ನು ತೆರೆಯಿರಿ ಮತ್ತು 'ಓಪನ್ ಸ್ಟಿಕ್ಕರ್ಸ್ ಪ್ಯಾಕ್' ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:4 ಇದರಲ್ಲಿ ನೀವು ದಸರಾ 2021 ಸ್ಟಿಕರ್ ಪ್ಯಾಕ್‌ಗಳಲ್ಲಿ, ನಿಮಗೆ ಬೇಕಾದನ್ನು ಬಳಸುವುದಕ್ಕೆ ಸ್ಟಿಕರ್ ಪ್ಯಾಕ್‌ನ ಬಲಭಾಗದಲ್ಲಿರುವ ‘ಪ್ಲಸ್' ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ:5 ನಂತರ ಈ ಸ್ಟಿಕ್ಕರ್ ಪ್ಯಾಕ್‌ಗಳನ್ನು ಆಡ್‌ ಮಾಡಲು ವಾಟ್ಸಾಪ್‌ನಲ್ಲಿ ಟ್ಯಾಪ್ ಮಾಡಿ.
ಹಂತ:6 ಈಗ ನೀವು ಈ ಎಲ್ಲಾ ಸ್ಟಿಕ್ಕರ್ ಪ್ಯಾಕ್‌ಗಳನ್ನು ವಾಟ್ಸಾಪ್‌ನಲ್ಲಿರುವ ಸ್ಟಿಕರ್ ವಿಭಾಗದಲ್ಲಿ ಕಾಣಬಹುದು.

ವಾಟ್ಸಾಪ್‌ನಲ್ಲಿ ದಸರಾ GIF ಗಳನ್ನು ಶೇರ್‌ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ದಸರಾ GIF ಗಳನ್ನು ಶೇರ್‌ ಮಾಡುವುದು ಹೇಗೆ?

ಹಂತ:1 ವಾಟ್ಸಾಪ್‌ನಲ್ಲಿ GIF ಅನ್ನು ಶೇರ್‌ ಮಾಡಲು ಬಯಸುವ ಚಾಟ್ ತೆರೆಯಿರಿ.
ಹಂತ:2 ನಂತರ ವಾಟ್ಸಾಪ್‌ ಚಾಟ್ ಬಾರ್‌ನ ಬಲಭಾಗದಲ್ಲಿ ಸ್ಟಿಕರ್ ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ:3 ಈಗ GIF ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:4 ದಸರಾ 2021 ಎಂದು ಟೈಪ್ ಮಾಡಿ.
ಹಂತ:5 ನೀವು ಹಂಚಿಕೊಳ್ಳಲು ಬಯಸುವ GIF ಅನ್ನು ಟ್ಯಾಪ್ ಮಾಡಿ ಮತ್ತು ನಂತರ ಸೆಂಡ್‌ ಐಕಾನ್ ಅನ್ನು ಟ್ಯಾಪ್ ಮಾಡಿ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಇತ್ತೀಚಿಗೆ ಬಳಕದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದಲ್ಲದೆ ವಾಟ್ಸಾಪ್‌ ತನ್ನ ಮುಂದಿನ ಅಪ್‌ಡೇಟ್‌ನಲ್ಲಿ ಕೆಲವು ಹೊಸ ಫೀಚರ್ಸ್‌ ಪರಿಚಯಿಸಲಿದೆ. ಅವುಗಳೆಂದರೇ ಮ್ಯಾನೇಜ್ ಚಾಟ್ಸ್‌ ಬ್ಯಾಕ್‌ಅಪ್ ಸೈಜ್‌(Manage Chats Backup Size), ಕಮ್ಯೂನಿಟಿ ಫೀಚರ್ ಫಾರ್ ಗ್ರೂಪ್ ಕನ್ವರ್ಸೇಶನ್ (Community Feature for Group Conversations) ಎನ್ನಲಾಗಿದೆ. ಸದ್ಯ ವಾಟ್ಸಾಪ್‌ನ ಈ ಫೀಚರ್ಸ್‌ಗಳು ಪ್ರಾಯೋಗಿಕ ಹಂತದಲ್ಲಿವೆ ಎಂದು ಹೇಳಲಾಗಿದೆ. ಈ ಹೊಸ ಫೀಚರ್ಸ್‌ಗಳು ಬಳಕೆದಾರರ ಅನುಭವವನ್ನು ಇನ್ನಷ್ಟು ಉತ್ತಮ ಪಡಿಸಲಿವೆ ಎನ್ನಲಾಗಿದೆ.

ವಾಟ್ಸಾಪ್‌

ವಾಟ್ಸಾಪ್‌ ಬೀಟಾ ಟ್ರ್ಯಾಕರ್ WABetaInfo ವರದಿಯ ಪ್ರಕಾರ, ಬಳಕೆದಾರರು ವಾಟ್ಸಾಪ್‌ ಚಾಟ್‌ ಬ್ಯಾಕ್‌ಅಪ್‌ ಅನ್ನು ಕ್ಲೌಡ್‌ಗೆ ಅಪ್‌ಲೋಡ್ ಮಾಡುವ ಮೊದಲು ತಮ್ಮ ಬ್ಯಾಕ್‌ಅಪ್ ಗಾತ್ರವನ್ನು ನಿರ್ವಹಿಸಲು ಅನುಮತಿಸಲು ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದೆ. ಹಾಗೆಯೇ 'ಕಮ್ಯೂನಿಟಿ ಫೀಚರ್ ಫಾರ್ ಗ್ರೂಪ್ ಕನ್ವರ್ಸೇಶನ್' ಆಯ್ಕೆಯು ಬಳಕೆದಾರರಿಗೆ ಉತ್ತಮ ಗ್ರೂಪ್‌ ಸಂಭಾಷಣೆಯ ಅನುಭವವನ್ನು ಒದಗಿಸಲು ಸಹಾಯ ಮಾಡಲು ವಾಟ್ಸಾಪ್ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದೆ. ಇನ್ನು ವಾಟ್ಸಾಪ್‌ನ ಬರಲಿರುವ ಈ ಹೊಸ ಫೀಚರ್ಸ್‌ಗಳು ಆರಂಭದಲ್ಲಿ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

Best Mobiles in India

English summary
Here’s how you can download and share WhatsApp stickers from on Dussehra 2021.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X