Nearby Share ಬಳಸಿ ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಫೈಲ್‌ ಶೇರ್‌ ಮಾಡುವುದು ಹೇಗೆ?

|

ಚೀನಾ ಮೂಲದ ಆಪ್‌ಗಳನ್ನ ಭಾರತದಲ್ಲಿ ಬ್ಯಾನ್‌ ಮಾಡಿದ ನಂತರ ಹಲವು ಆಪ್‌ಗಳಿಗೆ ಪಯಾರ್ಯವಾದ ಆಪ್‌ಗಳು ಇದೀಗ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿವೆ. ಆದರೆ ಎಲ್ಲರ ಮನದಲ್ಲೂ ಅಚ್ಚಳಿಯದೆ ಉಳಿದಿದ್ದ ಫೈಲ್ ಶೇರ್‌ ಆಪ್‌ ಶೇರ್‌ಇಟ್‌ ಬದಲಿಗೆ ಯಾವ ಆಪ್‌ ಬಳಸಿದರೆ ಉತ್ತಮ ಅನ್ನು ಗೊಂದಲದಲ್ಲಿ ಬಳಕೆದಾರರು ಇದ್ದಾರೆ. ಸದ್ಯ ಇದೀಗ ಗೂಗಲ್‌ ತನ್ನ ಬಳಕೆದಾರರಿಗೆ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಫೈಲ್‌ ಶೇರ್‌ ಮಾಡಲು Nearby Share ಅನ್ನು ಪರಿಚಯಿಸಿದೆ. ಗೂಗಲ್ ನ ಈ ಹೊಸ ಫೈಲ್ ಶೇರ್‌ ಫೀಚರ್ಸ್‌ 2019 ರಿಂದಲೂ ಕಾರ್ಯನಿರ್ವಹಿಸುತ್ತಿದೆ.

ಫೈಲ್‌ಶೇರ್‌

ಹೌದು, ಫೈಲ್‌ಶೇರ್‌ ಮಾಡುವುದಕ್ಕೆ ಗೂಗಲ್‌ Nearby Share ಅನ್ನುವ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಾಗಲಿದೆ. ಇನ್ನು ಆಂಡ್ರಾಯ್ಡ್‌ನಲ್ಲಿ Nearby Share ಮೂಲಕ ಫೈಲ್‌ಗಳನ್ನ ಶೇರ್‌ ಮಾಡುವುದು ಹೇಗೆ ಅನ್ನೊದು ಕೆಲವರಿಗೆ ತಿಳಿದೆ ಇಲ್ಲ. ಹಾಗಾದ್ರೆ Nearby Share ಮೂಲಕ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಫೈಲ್‌ ಶೇರ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Nearby Share

Nearby Share

ಇನ್ನು Nearby Share ಆಂಡ್ರಾಯ್ಡ್ 6.0 ಬೆಂಬಲಿಸುವ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಇರಲಿದೆ ಎಂದು ಗೂಗಲ್ ಹೇಳಿದೆ. ಇನ್ನು ನೀವು ಬಳಸುವ ನಿಮ್ಮ Android ಫೋನ್ ಈ ಹೊಸ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆಯೇ ಅನ್ನೊದನ್ನ ಪರಿಶೀಲಿಸಲು, ಈ ಹಂತಗಳನ್ನು ಅನುಸರಿಸಿ.

ಹಂತ:1 ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ> ಸ್ವಲ್ಪ ಕೆಳಗೆ ಸ್ಕ್ರಾಲ್ ಮಾಡಿ> Google ಆಯ್ಕೆಮಾಡಿ.
ಹಂತ:2 ಡಿವೈಸ್‌ ಕನೆಕ್ಷನ್‌ಗಳನ್ನು ಟ್ಯಾಪ್ ಮಾಡಿ.
ಹಂತ:3 ನಿಮ್ಮ ಫೋನ್ Nearby Share ಬೆಂಬಲಿಸಿದರೆ, ನೆಕ್ಸ್ಟ್‌ ಪೇಜ್‌ನಲ್ಲಿ ಕಾಣಲಿದೆ.
ಹಂತ:4 ನಂತರ ಸೆಟ್ಟಿಂಗ್‌ಗಳನ್ನು ಕಸ್ಟಮೈಸ್ ಮಾಡಲು Nearby Shareಅನ್ನು ಟ್ಯಾಪ್ ಮಾಡಿ.
ಹಂತ:5 ಇದೀಗ ನಿಮ್ಮ Google ಖಾತೆಯನ್ನು ನೀವು ಆಯ್ಕೆ ಮಾಡಿ ಮತ್ತು ಡಿವೈಸ್‌ ನೇಮ್ ಸೆಟ್‌ ಮಾಡಬಹುದು. ಇದಲ್ಲದೆ, ಡೇಟಾ ಬಳಕೆಯ ಮೇಲೆ ನಿಯಂತ್ರಣವನ್ನು ಹೊಂದಿರುವ ಜೊತೆಗೆ ನಿಮ್ಮ ಡಿವೈಸ್‌ ವಿಸಿಬ್ಲಿಟಿಯನ್ನು ಸಹ ನೀವು ಸೆಟ್‌ಮಾಡಬಹುದಾಗಿದೆ.

Nearby Share: ಫೈಲ್‌ಗಳನ್ನು ಶೇರ್‌ ಮಾಡುವುದು ಹೇಗೆ

Nearby Share: ಫೈಲ್‌ಗಳನ್ನು ಶೇರ್‌ ಮಾಡುವುದು ಹೇಗೆ

ಇನ್ನು ನೀವು ಫೋಟೋ, ವೀಡಿಯೊ, ಗೂಗಲ್ ಪ್ಲೇನಿಂದ ಅಪ್ಲಿಕೇಶನ್ ಅಥವಾ ಗೂಗಲ್ ಮ್ಯಾಪ್‌ನಿಂದ ನಿಮ್ಮ ಲೊಕೇಶನ್‌ ಅನ್ನು Nearby Share ಮೂಲಕ ಹೇಗೆ ಶೇರ್‌ಮಾಡಬಹುದು ಅನ್ನೊದನ್ನ ತಿಳಿಯಲು, ಈ ಹಂತಗಳನ್ನು ಅನುಸರಿಸಿ.

Nearby Share

ಹಂತ:1 ನೀವು ಶೇರ್‌ ಮಾಡಲು ಬಯಸುವ ಫೈಲ್ ತೆರೆಯಿರಿ> ಶೇರ್‌ ಐಕಾನ್ ಟ್ಯಾಪ್ ಮಾಡಿ> Nearby Share ಟ್ಯಾಪ್ ಮಾಡಿ. ನಿಮ್ಮ ಫೋನ್ ಈಗ ಹತ್ತಿರದ ಡಿವೈಸ್‌ಗಳಿಗಾಗಿ ಸರ್ಚ್‌ ಮಾಡಲಿದೆ.
ಹಂತ:2 ಇನ್ನು ನೀವು ಯಾರಿಗೆ ನಿಮ್ಮ ಫೈಲ್ ಅನ್ನು ಶೇರ್‌ ಮಾಡುತ್ತಿರುತ್ತಿರೋ ಅ ವ್ಯಕ್ತಿಯು ಸಹ ಅವರ Android ಫೋನ್‌ನಲ್ಲಿ Nearby Share ಅನ್ನು ಆಕ್ಟಿವ್ ಮಾಡಬೇಕು.
ಹಂತ:3 ನಂತರ ನಿಮ್ಮ ಫೋನ್ ರಿಸೀವರ್ Nearby Share ಫೋನ್ ಅನ್ನು ಸರ್ಚ್‌ ಮಾಡಿದ ನಂತರ, ನೀವು ಅವರ ಡಿವೈಸ್‌ ನೇಮ್‌ ಅನ್ನು ಟ್ಯಾಪ್ ಮಾಡಿ. ನಂತರ ರಿಸೀವರ್ ಕೂಡ ತಮ್ಮ ಫೋನ್‌ನಲ್ಲಿ ರಿಸೀವ್‌ ಐಕಾನ್‌ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.
ಹಂತ:4 ಇದಾದ ಕೆಲವೇ ಕ್ಷಣಗಳಲ್ಲಿ, ನೀವು ಶೇರ್‌ ಮಾಡಿದ ಫೈಲ್‌ಗಳು ಶೇರ್‌ ಆಗಲಿವೆ.

Best Mobiles in India

Read more about:
English summary
Android’s file sharing, Nearby Share is finally here.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X