ಐಫೋನ್‌ನಲ್ಲಿ ಫೇಸ್‌ಬುಕ್ ನಿಂದ ಆಪ್‌ಗಳು ಕ್ರ್ಯಾಶ್ ಆಗುವುದನ್ನು ತಡೆಯುವುದು ಹೇಗೆ?
ಕೆಲವೊಮ್ಮೆ ನಿಮ್ಮ ಐಫೋನ್ ಮತ್ತು ಐಪ್ಯಾಡ್‌ನಲ್ಲಿ ಅಪ್ಲಿಕೇಶನ್‌ಗಳು ಕ್ರ್ಯಾಶ್ ಆಗುತ್ತಲೇ ಇರುತ್ತವೆ. ಇತ್ತಿಚಿನ ದಿನಗಳಲ್ಲಿ ಈ ರೀತಿಯ ದೋಷಗಳು ಹೆಚ್ಚಾಗಿ ಕಾಣಿಸುತ್ತಿದ್ದು. ಇದಕ್ಕೆ ಐಒಎಸ್ ಡಿವೈಸ್‌ಗಳ ಮೇಲೆ ಪರಿಣಾಮ ಬೀರುವ ಫೇಸ್‌ಬುಕ್ ದೋಷವೇ ಕಾರಣ ಎಂದು ಹೇಳಲಾಗ್ತಿದೆ. ಅದರಲ್ಲೂ ಸ್ಪಾಟಿಫೈ, ಪಿಂಟ್ರೆಸ್ಟ್, ಪಬ್‌ಜಿ ಮೊಬೈಲ್ ಗೇಮ್ ಮುಂತಾದ ಹಲವಾರು ಅಪ್ಲಿಕೇಶನ್‌ಗಳು ಆಗಾಗ ಕ್ರ್ಯಾಶ್ ಆಗುತ್ತಿವೆ. ಇದರಿಂದಾಗಿ ನಿಮಗೆ ಒಂದು ಅಪ್ಲಿಕೇಶನ್‌ಗಳನ್ನ ಬಳಸುವಾಗ ತೊಂದರೆ ಉಂಟಾಗಲಿದೆ. ಹಾಗಂತ ಇದಕ್ಕೆ ಚಿಂತಿಸುವ ಆಗಿಲ್ಲ. ಇದನ್ನ ತಪ್ಪಿಸುವ ಕೆಲವು ಮಾರ್ಗಗಳಿವೆ ಅವುಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಹೌದು, ಬಳಕೆದಾರರ ಲಾಗಿನ್‌ಗಳನ್ನು ನಿರ್ವಹಿಸಲು ಅನೇಕ ಅಪ್ಲಿಕೇಶನ್‌ಗಳು ಬಳಸುವ ಫೇಸ್‌ಬುಕ್‌ನ ಎಸ್‌ಡಿಕೆ ದೋಷದಿಂದಾಗಿ ಕೆಲವು ಅಪ್ಲಿಕೇಶನ್‌ಗಳು ಕ್ರ್ಯಾಶ್ ಆಗುತ್ತಿವೆ ಎಂದು ಹೇಳಲಾಗ್ತಿದೆ. ಸಾಮಾನ್ಯವಾಗಿ ನಿರ್ದಿಷ್ಟ ಸೈಟ್‌ಗೆ ಲಾಗ್ ಇನ್ ಮಾಡಲು ತಮ್ಮ ಫೇಸ್‌ಬುಕ್ ಖಾತೆಯನ್ನು ಬಳಸದ ಬಳಕೆದಾರರು ಸಹ ಐಒಎಸ್ ಮತ್ತು ಐಪ್ಯಾಡೋಸ್ ಡಿವೈಸ್‌ಗಳಲ್ಲಿ ಈ ರೀತಿಯ ತೊಮದರೆಯನ್ನು ಹೆದರಿಸುತ್ತಿದ್ದಾರೆ. ಅಲ್ಲದೆ ಫೇಸ್‌ಬುಕ್‌ನ ಐಒಎಸ್ ಎಸ್‌ಡಿಕೆ ಅಪ್ಲಿಕೇಶನ್‌ಗಳು ಕ್ರ್ಯಾಶ್ ಆಗಿರೋದು ಇದು ಎರಡನೇ ಬಾರಿ ಎನ್ನಲಾಗ್ತಿದೆ. ಇದಕ್ಕೆ ಪರಿಹಾರವೇನು ಅನ್ನೊದನ್ನ ಹಂತಹಂತವಾಗಿ ತಿಳಿದುಕೊಳ್ಳೋಣ ಬನ್ನಿರಿ.

ಈ ರೀತಿಯ ಫೇಸ್‌ಬುಕ್ ದೋಷಗಳನ್ನ ಪರಿಹರಿಸುವುದಕ್ಕಾಗಿ ಐಫೋನ್‌ನಲ್ಲಿ ಲಾಕ್‌ಡೌನ್ ಅಪ್ಲಿಕೇಶನ್‌ಗಳನ್ನ ನೀಡಲಾಗಿದೆ. ಈ ಅಪ್ಲಿಕೇಶನ್‌ಗಳು ಐಒಎಸ್‌ನಲ್ಲಿ ಡೌನ್‌ಲೋಡ್ ಆಗುವ ಆಪ್‌ಗಳ ಗೌಪ್ಯತೆ ರಕ್ಷಣೆ ಮಾಡುವ ಫೈರ್‌ವಾಲ್ ಅಪ್ಲಿಕೇಶನ್ ಆಗಿದೆ. ಟ್ರ್ಯಾಕರ್‌ಗಳು ಮತ್ತು ಫೇಸ್‌ಬುಕ್‌ನ ಐಒಎಸ್ ಎಸ್‌ಡಿಕೆ ನಂತಹ ಫೀಚರ್ಸ್‌ಗಳನ್ನು ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳಲ್ಲಿ ಲೋಡ್ ಮಾಡುವುದನ್ನು ನಿರ್ಬಂಧಿಸಲು ಇದು ವಿಪಿಎನ್ ಅನ್ನು ಬಳಸುತ್ತದೆ. ಫೇಸ್‌ಬುಕ್ ಐಒಎಸ್ ಎಸ್‌ಡಿಕೆ ನಿಲುಗಡೆ ಸಮಯದಲ್ಲಿ ಸ್ಪಾಟಿಫೈ, ಪಿಂಟ್ರೆಸ್ಟ್ ಮುಂತಾದ ಅಪ್ಲಿಕೇಶನ್‌ಗಳನ್ನು ಪ್ರಾರಂಭಿಸಲು ಇದು ಅನುಮತಿಸುತ್ತದೆ.

ಸದ್ಯ ನೀವು ಆಪಲ್ ಆಪ್ ಸ್ಟೋರ್‌ನಿಂದ ಲಾಕ್‌ಡೌನ್ ಅಪ್ಲಿಕೇಶನ್‌ಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದಾಗಿದೆ.
* ಆಪಲ್ ಆಪ್ ಸ್ಟೋರ್‌ನಲ್ಲಿಲಾಕ್‌ಡೌನ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ.
* ಅಪ್ಲಿಕೇಶನ್ ಅನ್ನು ಪ್ರಾರಂಭಿಸಿ ಮತ್ತು ಆನ್-ಸ್ಕ್ರೀನ್ ಟ್ಯುಟೋರಿಯಲ್ ಅನ್ನು ಅನುಸರಿಸಿ.
* ಸೈನ್ ಇನ್ ಮಾಡುವ ಅಥವಾ ಲಾಗ್ ಇನ್ ಮಾಡುವ ಅಗತ್ಯವಿಲ್ಲ. ಪ್ರಾಂಪ್ಟ್ ಬಂದಾಗ ರದ್ದುಮಾಡಿ ಒತ್ತಿರಿ.
* ಅಪ್ಲಿಕೇಶನ್‌ನ ಮೇಲಿರುವ "ಫೈರ್‌ವಾಲ್ ಆನ್" ಬಟನ್ ಕ್ಲಿಕ್ ಮಾಡಿ.

* ಐಫೋನ್‌ನಲ್ಲಿ ವಿಪಿಎನ್ ಪ್ರೊಫೈಲ್ ಅನ್ನು ಸೆಟ್ ಮಾಡಲು ಅಗ್ರಿ ಬಟನ್ ಕ್ಲಿಕ್ ಮಾಡಿ.
* ನಂತರ ನೀವು ಲಾಕ್‌ಡೌನ್ ಅಪ್ಲಿಕೇಶನ್‌ಗಳಿಂದ VPN / ಫೈರ್‌ವಾಲ್ ಅನ್ನು ಟಾಗಲ್ ಮಾಡಬಹುದು.
* ಇದೀಗ ನಿಮ್ಮ ಅಪ್ಲಿಕೇಶನ್‌ಗಳು ದೋಷ ಮುಕ್ತವಾಗಿ ಕಾರ್ಯನಿರ್ವಹಿಸುತ್ತವೆ.
ಸದ್ಯ ಇದು ಫೇಸ್‌ಬುಕ್ ಐಒಎಸ್ ಎಸ್‌ಡಿಕೆ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರವಾಗಿದೆ ಮತ್ತು ಕ್ರ್ಯಾಶ್ ಆಗುತ್ತಿರುವ ಅಪ್ಲಿಕೇಶನ್‌ಗಳನ್ನು ತೆರೆಯಲು ನಿಮಗೆ ಸಹಾಯ ಮಾಡುತ್ತದೆ. ಈ ಸಮಸ್ಯೆ ಮುಗಿದ ನಂತರ ನಿಮ್ಮ ಫೋನ್ ಮತ್ತು ಅಪ್ಲಿಕೇಶನ್‌ನಿಂದ VPN ಪ್ರೊಫೈಲ್ ಅನ್ನು ತೆಗೆದುಹಾಕಲು ನೀವು ಬಯಸಿದರೆ, ನೀವು ಅದನ್ನು ಡಿಲಿಟ್ ಮಾಡಬಹುದಾಗಿದೆ.


Click it and Unblock the Notifications








