Home
ಸುದ್ದಿಜಾಲ

ನಿಮ್ಮ ಮೊಬೈಲ್‌ ಚಾರ್ಜಿಂಗ್‌ ಬೇಗ ಖಾಲಿ ಆಗ್ತಾ ಇದೀಯಾ! ಕೂಡಲೇ ಈ ಕೆಲಸ ಮಾಡಿರಿ!

ನಿಮ್ಮ ಮೊಬೈಲ್‌ ಬ್ಯಾಟರಿ ದಿನಕಳೆದಂತೆ ಬೇಗ ಬೇಗ ಖಾಲಿ ಆಗ್ತಾ ಇದೀಯಾ. ಹೊಸದಾಗಿ ಸ್ಮಾರ್ಟ್‌ಫೋನ್‌ ಖರೀದಿಸಿದಾಗ ದಿನಪೂರ್ತಿ ಬ್ಯಾಟರಿ ಬಾಳಿಕೆ ನೀಡ್ತಾ ಇತ್ತು. ಆದರೆ ಇತ್ತೀಚಿಗೆ ಯಾಕೋ ಮೂರು ನಾಲ್ಕು ಗಂಟೆಗಳಿಗೆ ಮೊಬೈಲ್‌ ಬ್ಯಾಟರಿ ಖಾಲಿಯಾಗ್ತಾ ಇದೆ. ಹೀಗೆ ಮೊಬೈಲ್‌ ಬ್ಯಾಟರಿ ಬಾಳಿಕೆ ಕಡಿಮೆ ಆಗ್ತಾ ಇರೋದ್ರ ಬಗ್ಗೆ ಚರ್ಚೆ ನಡೆಯೋದು ಸಾಮಾನ್ಯವಾಗಿದೆ.

ಹೌದು, ಮೊಬೈಲ್‌ ಬಳಕೆಯಲ್ಲಿ ಬ್ಯಾಟರಿ ದಕ್ಷತೆ ಕೂಡ ಅತ್ಯವಶ್ಯಕವಾಗಿದೆ. ಏಕೆಂದರೆ ಬ್ಯಾಟರಿ ಬ್ಯಾಕ್‌ಅಪ್‌ ಒಂದು ಸಲ ಕಡಿಮೆಯಾದರೆ ಅದನ್ನು ಮತ್ತೊಮ್ಮೆ ಸರಿ ದಿಕ್ಕಿಗೆ ತರುವುದಕ್ಕೆ ಯಾವುದೇ ಮಾರ್ಗವಿಲ್ಲ. ಆದರಿಂದ ನಿಮ್ಮ ಮೊಬೈಲ್‌ ಹೆಚ್ಚಿನ ಸಮಯ ಬ್ಯಾಟರಿ ಬ್ಯಾಕ್‌ಅಪ್‌ ನೀಡಬೇಕಾದರೆ ಬ್ಯಾಟರಿ ಆರೋಗ್ಯ ಕಾಪಾಡುವುದು ಅತಿ ಅವಶ್ಯಕವಾಗಿದೆ. ಹಾಗಾದ್ರೆ ನಿಮ್ಮ ಮೊಬೈಲ್‌ ಬ್ಯಾಟರಿ ಬ್ಯಾಕ್‌ಅಪ್‌ ಹಾಳಾಗಾದಂತೆ ಹಾಗೂ ಬ್ಯಾಟರಿ ಆರೋಗ್ಯ ಉತ್ತಮವಾಗಿರುವಂತೆ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಮ್ಮ ಮೊಬೈಲ್‌ ಚಾರ್ಜಿಂಗ್‌ ಬೇಗ ಖಾಲಿ ಆಗ್ತಾ ಇದೀಯಾ! ಕೂಡಲೇ ಈ ಕೆಲಸ ಮಾಡಿರಿ!

ಚಾರ್ಜ್‌ ಮಾಡುವಾಗ 80% ಕ್ಕಿಂತ ಹೆಚ್ಚು ಚಾರ್ಜ್‌ ಮಾಡಬೇಡಿ
ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವಾಗ ಅದನ್ನು ಪ್ರತಿಭಾರಿಯು ಫುಲ್‌ ಚಾರ್ಜ್‌ ಮಾಡಲು ಹೋಗಬೇಡಿ. ಮೊಬೈಲ್‌ 80% ಚಾರ್ಜ್‌ ಆಗುತ್ತಿದ್ದ ಹಾಗೇ ಚಾರ್ಜಿಂಗ್‌ ಅನ್ನು ತೆಗೆದುಹಾಕಿ. ಇದರಿಂದ ನಿಮ್ಮ ಬ್ಯಾಟರಿಯ ಆರೋಗ್ಯ ಉತ್ತಮವಾಗಿರಲಿದೆ.

ನಿಮ್ಮ ಮೊಬೈಲ್‌ 20% ಕ್ಕಿಂತ ಕಡಿಮೆ ಇರದಂತೆ ನೋಡಿಕೊಳ್ಳಿರಿ
ಇನ್ನು ನಿಮ್ಮ ಮೊಬೈಲ್‌ ಬ್ಯಾಟರಿ ಸಾಮರ್ಥ್ಯ 20% ಕ್ಕಿಂತ ಕಡಿಮೆ ಆಗದಂತೆ ನೋಡಿಕೊಳ್ಳುವುದು ಕೂಡ ಬ್ಯಾಟರಿ ಆರೋಗ್ಯಕ್ಕೆ ಉತ್ತಮ. ಯಾವಾಗಲೂ ನಿಮ್ಮ ಸ್ಮಾರ್ಟ್‌ಫೋನ್‌ ಬ್ಯಾಟರಿ ಮಟ್ಟ ಸರಾಸರಿ ಚಾರ್ಜ್‌ ಪರ್ಸಟೆಂಜ್‌ನಿಂದ ಕಡಿಮೆ ಆಗಬಾರದು. ಇದರಿಂದ ನಿಮ್ಮ ಮೊಬೈಲ್‌ ಬ್ಯಾಟರಿ ದಕ್ಷತೆ ಉತ್ತಮವಾಗಿರಲಿದೆ. ಮೊಬೈಲ್‌ ಚಾರ್ಜಿಂಗ್‌ ಪರ್ಸಟೆಂಜ್‌ ಕಡಿಮೆ ಆಗುತ್ತಿದ್ದ ಹಾಗೇ ಚಾರ್ಜ್‌ ಮಾಡಿರಿ. ಹಾಗಂತ 20% ಕ್ಕಿಂತ ಕಡಿಮೆ ಇದ್ದಾಗಲೇ ಚಾರ್ಜಿಂಗ್‌ ತೆಗೆದುಹಾಕಿ ಮೊಬೈಲ್‌ ಬಳಸಲು ಹೋಗಬೇಡಿರಿ.

ನಿಮ್ಮ ಮೊಬೈಲ್‌ ಚಾರ್ಜಿಂಗ್‌ ಬೇಗ ಖಾಲಿ ಆಗ್ತಾ ಇದೀಯಾ! ಕೂಡಲೇ ಈ ಕೆಲಸ ಮಾಡಿರಿ!

ಕಂಪೆನಿಯಿಂದ ನೀಡಿದ ಚಾರ್ಜರ್‌ ಅನ್ನೇ ಬಳಸಿರಿ
ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ನೀಡಿದ ಚಾರ್ಜರ್‌ ಅನ್ನೇ ಬಳಸಿರಿ, ಇಲ್ಲವೇ ಕಂಪೆನಿಯ ಚಾರ್ಜರ್‌ ಅನ್ನು ಬಳಸುವುದು ಸೂಕ್ತವಾಗಿದೆ. ಒಂದು ವೇಳೆ ನೀವು ಸಿಕ್ಕ ಸಿಕ್ಕ ಮೊಬೈಲ್‌ ಚಾರ್ಜರ್‌ ಮೂಲಕ ಫೋನ್‌ ಚಾರ್ಜಿಂಗ್‌ ಮಾಡಿದರೆ ಫೋನ್‌ನ ಬ್ಯಾಟರಿ ಗುಣಮಟ್ಟ ಹಾಳಾಗಲಿದೆ. ಏಕೆಂದರೆ ಅಧಿಕೃತವಾಗಿ ಹೊಂದಾಣಿಕೆಯಾಗುವ ಚಾರ್ಜರ್ ನಿಖರವಾದ ಪವರ್‌ ಸಪ್ಲೇ ಮಾಡಲಿದ, ಅಲ್ಲದೆ ವೇಗದ ಚಾರ್ಜಿಂಗ್ ಮಾನದಂಡದೊಂದಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಆದರಿಂದ ಬೇರೆ ಚಾರ್ಜರ್‌ಗಳನ್ನು ಬಳಸಲು ಹೋಗಬೇಡಿ.

ಮೊಬೈಲ್‌ ಬಿಸಿಯಾಗುವುದನ್ನು ತಪ್ಪಿಸಿರಿ
ಬ್ಯಾಟರಿ ಬ್ಯಾಕ್‌ಅಪ್‌ ಉತ್ತಮ ವಾಗಿರಬೇಕೆಂದರೆ ನಿಮ್ಮ ಮೊಬೈಲ್‌ ಬಿಸಿ ಆಗುವುದನ್ನು ತಪ್ಪಿಸಬೇಕು. ನಿಮ್ಮ ಮೊಬೈಲ್‌ ಪದೇ ಪದೇ ಬಿಸಿ ಆಗುತ್ತಿದೆ ಎಂದರೆ ಬ್ಯಾಟರಿ ಹಾಳಾಗುತ್ತಿದೆ ಎಂದರ್ಥ. ಅದರಲ್ಲೂ ಮೊಬೈಲ್‌ನಲ್ಲಿ ಗೇಮ್‌ ಆಡುವವರು ಫೋನ್‌ ಬಿಸಿಯಾಗದಂತೆ ಎಚ್ಚರಿಕೆ ವಹಿಸಿದರೆ ಸೂಕ್ತ. ಒಂದು ವೇಳೆ ಮೊಬೈಲ್‌ ಬಿಸಿಯಾಗಿದೆ ಎಂದರೆ ಮೊಬೈಲ್‌ ತಂಪಾಗುವ ತನ್ನ ಬಳಕೆ ಮಾಡದೆ ಇರುವುದು ಬೆಸ್ಟ್‌.

ನಿಮ್ಮ ಮೊಬೈಲ್‌ ಚಾರ್ಜಿಂಗ್‌ ಬೇಗ ಖಾಲಿ ಆಗ್ತಾ ಇದೀಯಾ! ಕೂಡಲೇ ಈ ಕೆಲಸ ಮಾಡಿರಿ!

ಮೊಬೈಲ್‌ ಸಾಫ್ಟ್‌ವೇರ್ ಆಗಾಗ ಅಪ್ಡೇಟ್‌ ಮಾಡಿ
ಇನ್ನು ನಿಮ್ಮ ಸ್ಮಾರ್ಟ್‌ಫೋನ್‌ ಹೊಸ ಅಪ್ಡೇಟ್‌ನಲ್ಲಿದೆಯಾ ಚೆಕ್‌ ಮಾಡಿಕೊಳ್ಳಿರಿ. ಆಗಾಗ ಬರುವ ಮೊಬೈಲ್‌ ಸಾಫ್ಟ್‌ವೇರ್‌ ಅಪ್ಡೇಟ್‌ ಅನ್ನು ರನ್‌ ಮಾಡಿರಿ. ಅಲ್ಲದೆ ಮೊಬೈಲ್‌ ಸಾಫ್ಟ್‌ವೇರ್‌ ಅಪ್ಡೇಟ್‌ ಮಾಡುವಾಗ ನಿಮ್ಮ ಬ್ಯಾಟರಿಯು 50% ಕ್ಕಿಂತ ಹೆಚ್ಚು ಚಾರ್ಜಿಂಗ್‌ ಉಳಿಸಿಕೊಂಡಿದೆಯಾ ಅನ್ನೊದನ್ನ ಖಚಿತಪಡಿಸಿಕೊಳ್ಳಿರಿ. ಈ ಮೂಲಕ ನಿಮ್ಮ ಮೊಬೈಲ್‌ ಬ್ಯಾಟರಿ ದಕ್ಷತೆ ಅತ್ಯುತ್ತಮವಾಗಿರುವುದಕ್ಕೆ ಸಹಾಯವಾಗಲಿದೆ.

Best Mobiles in India

English summary
Fully charging your smartphone for a long time puts a strain on the battery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+