Home
ಸುದ್ದಿಜಾಲ

ಜಿಯೋ ಫೋನ್‌ನಲ್ಲಿ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳುವುದು ಹೇಗೆ?

ಟೆಲಿಕಾಂ ವಲಯದಲ್ಲಿ ಸಂಚಲನ ಸೃಷ್ಟಿಸಿರುವ ರಿಲಾಯನ್ಸ್‌ ಜಿಯೊ ದೇಶದಲ್ಲಿ ಜಿಯೋ ಫೋನ್‌ ಅನ್ನು ಸಹ ಪರಿಚಯಿಸಿರೋದು ತಿಳಿದೇ ಇದೆ. ರಿಲಯನ್ಸ್ ಜಿಯೋ ಸಂಸ್ಥೆಯ ಜಿಯೋ ಫೋನ್ ದೇಶದ ಅತ್ಯಂತ ಜನಪ್ರಿಯ ಫೀಚರ್ ಫೋನ್‌ಗಳಲ್ಲಿ ಒಂದಾಗಿದೆ. ವೈ-ಫೈ ಬೆಂಬಲ, VoLTE ತಂತ್ರಜ್ಞಾನ ಮತ್ತು ಗೂಗಲ್ ಅಸಿಸ್ಟೆಂಟ್‌ನ ಬೆಂಬಲದೊಂದಿಗೆ ಫೀಚರ್ ಫೋನ್ ಇತರ ಡಿವೈಸ್‌ಗಳಿಗಿಂತ ಸಾಕಷ್ಟು ಭಿನ್ನವಾಗಿ ಗುರುತಿಸಿಕೊಂಡಿದೆ. ಸದ್ಯ ಇಲ್ಲಿಯವರೆಗೆ, ಜಿಯೋ ಕಂಪನಿಯು ಜಿಯೋ ಫೋನ್ ಮತ್ತು ಜಿಯೋ ಫೋನ್ 2 ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಫೀಚರ್‌ ಫೋನ್‌ನಲ್ಲಿ ವಿಶೇಷ ಫೀಚರ್ಸ್‌ ಇದ್ದು, ಅದರಲ್ಲಿ ಸ್ಕ್ರೀನ್‌ ಶಾಟ್‌ ತೆಗೆದುಕೊಳ್ಳುವ ಅವಕಾಶ ಕೂಡ ಒಂದಾಗಿದೆ.

ಜಿಯೋ

ಹೌದು, ಸಾಮಾನ್ಯ ಫೀಚರ್‌ ಫೋನ್‌ ಹೊಂದಿರದ ಕೆಲವು ವಿಶೇಷತೆಗಳನ್ನ ಜಿಯೋ ಫೋನ್‌ ಹೊಂದಿದೆ. ಅದರಲ್ಲಿ ವೈಫೈ ಕನೆಕ್ಟಿವಿಟಿ, VOLTE ಟೆಕ್ನಾಲಜಿ ಕೂಡ ಸೇರಿದೆ. ಇನ್ನು ಈ ಡಿವೈಸ್‌ ಕೈಯೋಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಯೂಟ್ಯೂಬ್ ಮತ್ತು ವಾಟ್ಸಾಪ್ ನಂತಹ ಅಪ್ಲಿಕೇಶನ್‌ಗಳನ್ನು ಸಹ ಹೊಂದಿದೆ. ಜನರು ಈ ಫೀಚರ್ಸ್‌ಗಳನ್ನು ಜಿಯೋ ಫೋನ್‌ಗಳಲ್ಲಿ ಆನಂದಿಸುತ್ತಿದ್ದಾರೆ. ಆದರೆ ಇನ್ನೂ, ಕೆಲವರಿಗೆ ಜಿಯೋ ಫೋನ್‌ನಲ್ಲಿ ಸ್ಕ್ರೀನ್‌ಶಾಟ್ ಕ್ಲಿಕ್ ಮಾಡುವುದು ಹೇಗೆ ಅನ್ನೊ ಗೊಂದಲ ಇದೆ. ಹಾಗಂತ ಚಿಂತಿಸುವ ಅವಶ್ಯಕತೆ ಇಲ್ಲ. ಈ ಲೇಖನದಲ್ಲಿ ಜಿಯೋ ಫೋನ್‌ನಲ್ಲಿ ಸ್ಕ್ರೀನ್‌ಶಾಟ್‌ ತೆಗೆಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ ಫೋನ್

ಜಿಯೋ ಫೋನ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಅವಕಾಶವನ್ನು ನೀಡಿದೆ. ಜಿಯೋ ಫೋನ್‌ನಲ್ಲಿ ನೀವು ಸ್ಕ್ರೀನ್‌ ಶಾಟ್‌ ತೆಗೆದುಕೊಳ್ಳುವುದಕ್ಕೆ ಹಲವು ಕೆಲವು ವಿಧಾನಗಳಿವೆ. ಅಲ್ಲದೆ ಸ್ಕ್ರೀನ್‌ಶಾಟ್‌ಗಳನ್ನು ಕ್ಲಿಕ್ ಮಾಡಲು ನಿಮಗೆ ಸಹಾಯ ಮಾಡುವ ಎರಡು ಮಾರ್ಗಗಳಿವೆ. ಅದರಲ್ಲಿ ಮೊದಲು, ನೀವು ವಾಲ್ಯೂಮ್ ಬಟನ್ ಮತ್ತು ಪವರ್ ಬಟನ್ ಅನ್ನು ಒಟ್ಟಿಗೆ ಒತ್ತಿ ಸ್ಕ್ರೀನ್‌ ಶಾಟ್‌ ತೆಗೆದುಕೊಳ್ಳುವುದು. ಇಲ್ಲವೇ ಜಿಯೋ ಫೋನ್‌ನಲ್ಲಿ ಸ್ಕ್ರೀನ್‌ಶಾಟ್ ಕ್ಲಿಕ್ ಮಾಡಲು ಗೂಗಲ್ ಅಸಿಸ್ಟೆಂಟ್‌ಗೆ ಅನುವು ಮಾಡಿಕೊಡುವ ವಿಧಾನವಿದೆ. ಈ ವಿಧಾನಗಳಲ್ಲಿ ಸ್ಕ್ರೀನ್‌ಶಾಟ್‌ ತೆಗೆಯುವುದು ಹೇಗೆ ಅನ್ನೊದನ್ನ ಇಲ್ಲಿ ತಿಳಿಯಿರಿ.

ಜಿಯೋ ಫೋನ್‌ನಲ್ಲಿ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳುವುದು ಹೇಗೆ?

ಜಿಯೋ ಫೋನ್‌ನಲ್ಲಿ ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳುವುದು ಹೇಗೆ?

ಹಂತ:1 ನೀವು ಜಿಯೋಫೋನ್ ಅನ್ನು ಅನ್ಲಾಕ್ ಮಾಡಬೇಕಾಗುತ್ತದೆ ಮತ್ತು ನಂತರ ನೀವು ಸೆರೆಹಿಡಿಯಲು ಬಯಸುವ ಸ್ಕ್ರೀನ್‌ ಅನ್ನು ಸರ್ಚ್‌ ಮಾಡಿ.
ಹಂತ:2 ನಂತರ, ನೀವು ರೈಟ್‌ ಬಟನ್‌ ಅನ್ನು ಒತ್ತುವ ಅಗತ್ಯವಿದೆ. ನಂತರ ಸೇವೆಗಳನ್ನು ಸಕ್ರಿಯಗೊಳಿಸಲು ನೀವು ಸರಿ ಗೂಗಲ್ ಎಂದು ಗೂಗಲ್‌ ಅಸಿಸ್ಟೆಂಟ್‌ಗೆ ಹೇಳಬೇಕು.
ಹಂತ:3 ಅದರ ನಂತರ, ಸ್ಕ್ರೀನ್‌ಶಾಟ್‌ ತೆಗೆದುಕೊಳ್ಳಲು ಗೂಗಲ್ ಅಸಿಸ್ಟೆಂಟ್ ನಿಮಗೆ ಅನುಮತಿಸುತ್ತದೆ.
ಹಂತ:4 ಇದು ಮುಗಿದ ನಂತರ, ನೀವು 'ಸ್ಕ್ರೀನ್‌ಶಾಟ್ ಸೇವ್ ಟು' ಎಂಬ ನೋಟಿಫೀಕೇಷನ್‌ ಬರಲಿದೆ. ನಂತರ ನೀವು ರೈಟ್‌ ಬಟನ್‌ ಅನ್ನು ಒತ್ತಿ.

ಸ್ಕ್ರೀನ್‌ಶಾಟ್

ಜಿಯೋ ಫೋನ್‌ನಲ್ಲಿ ಸ್ಕ್ರೀನ್‌ಶಾಟ್ ಅನ್ನು ಪಡೆಯುವುದು ಹೇಗೆ?
ನೀವು ಸ್ಕ್ರೀನ್‌ಶಾಟ್ ಕ್ಲಿಕ್ ಮಾಡುವುದು ಮುಗಿದ ನಂತರ, ನೀವು ಹ್ಯಾಂಡ್‌ಸೆಟ್ ಅನ್ನು ಅನ್ಲಾಕ್ ಮಾಡಬೇಕು. ನಂತರ, ನೀವು ಗ್ಯಾಲರಿಯನ್ನು ತೆರೆಯಬೇಕು, ಅದರ ನಂತರ ನೀವು ಸ್ಕ್ರೀನ್‌ಶಾಟ್ ಫೋಲ್ಡರ್ ಅನ್ನು ಸರ್ಚ್‌ ಮಾಡಿದರೆ ಅಲ್ಲಿ ಸ್ಕ್ರೀನ್‌ಶಾಟ್‌ ಲಭ್ಯವಾಗಲಿದೆ.

Best Mobiles in India

English summary
people are enjoying these features on the Jio Phones, but still, some people are looking or searching for an option to click screenshot in Jio Phone.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+