ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಬ್ಲೂಟೂತ್ ವರ್ಕ್ ಆಗುತ್ತಿಲ್ಲವೇ? ಹೀಗೆ ಮಾಡಿರಿ?
ವಿಂಡೋಸ್ ಲ್ಯಾಪ್‌ಟಾಪ್ ಬಳಕೆದಾರರಿಗೆ ಸಾಮಾನ್ಯವಾಗಿ ಎದುರಾಗುವ ಸಮಸ್ಯೆ ಎಂದರೆ ಬ್ಲೂಟೂತ್ ಕನೆಕ್ಟಿವಿಟಿ. ಲ್ಯಾಪ್‌ಟಾಪ್‌ನಲ್ಲಿ ಬ್ಲೂಟೂತ್ ಕನೆಕ್ಟ್ ಮಾಡುವುದಕ್ಕೆ ತಿಳಿಯದ ಕೆಲವರು ಅದನ್ನು ಬಳಸುವುದಕ್ಕೆ ಕೂಡ ಮುಂದಾಗುವುದಿಲ್ಲ. ಆದರೆ ಕೆಲವು ಹಂತಗಳನ್ನು ಅನುಸರಿಸಿದರೆ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಬ್ಲೂಟೂತ್ ಅನ್ನು ಕನೆಕ್ಟ್ ಮಾಡಬಹುದಾಗಿದೆ.
ಹೌದು, ಕೆಲವೊಮ್ಮೆ ಲ್ಯಾಪ್‌ಟಾಪ್‌ನಲ್ಲಿ ಬ್ಲೂಟೂತ್ ಕನೆಕ್ಟಿವಿಟಿಯನ್ನು ಆನ್ ಮಾಡಿದರು ಕೂಡ ಕನೆಕ್ಟ್ ಆಗುವುದಿಲ್ಲ. ಇದರಿಂದ ಬ್ಲೂಟೂತ್ ಡಿವೈಸ್‌ನೊಂದಿಗೆ ಕನೆಕ್ಟಿವಿಟಿ ಸಾಧಿಸುವುದಕ್ಕೆ ತೊಂದರೆಯಾಗಲಿದೆ. ಇಂತಹ ಸನ್ನಿವೇಶದಲ್ಲಿ ಏನು ಮಾಡಬೇಕು ಅನ್ನೊದು ಕೆಲವರಿಗೆ ತಿಳಿದಿಲ್ಲ. ಹಾಗಾದ್ರೆ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಸಮಸ್ಯೆಯನ್ನು ಬಗೆಹರಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಲ್ಯಾಪ್‌ಟಾಪ್‌ನಲ್ಲಿ ಬ್ಲೂಟೂತ್ ಸಮಸ್ಯೆ ಎದುರಾಗಲು ಕಾರಣವೇನು?
ಲ್ಯಾಪ್‌ಟಾಪ್‌ನಲ್ಲಿ ಬ್ಲೂಟೂತ್ ಕಾರ್ಯನಿರ್ವಹಿಸದಿರುವುದಕ್ಕೆ ಹಲವು ಕಾರಣಗಳನ್ನು ಕಾಣಬಹುದು. ಇದರಲ್ಲಿ ಪ್ರಮುಖವಾಗಿ ಡ್ರೈವರ್ ಸಮಸ್ಯೆ, ಬ್ಲೂಟೂತ್ ಹಾರ್ಡ್‌ವೇರ್ ಸಮಸ್ಯೆ ಕಾರಣವಾಗಿರಬಹುದು. ಇಂತಹ ಸಮಯಯದಲ್ಲಿ ನೀವು ಮಾಡಬೇಕಾದ ವಿಚಾರಗಳ ಬಗ್ಗೆ ಕೆಳಗಿನ ಹಂತಗಳಲ್ಲಿ ತಿಳಿಯಿರಿ.
ನಿಮ್ಮ ಲ್ಯಾಪ್‌ಟಾಪ್ ಅನ್ನು ರಿಸ್ಟಾರ್ಟ್ ಮಾಡಿ!
ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಕಾರ್ಯನಿರ್ವಹಿಸದಿದ್ದರೆ ಮೊದಲಿಗೆ ನಿಮ್ಮ ಲ್ಯಾಪ್‌ಟಾಪ್ ಅನ್ನು ರಿಸ್ಟಾರ್ಟ್ ಮಾಡಿ. ಇದರಿಂದ ನಿಮ್ಮ ವಿಂಡೋಸ್ ಲ್ಯಾಪ್‌ಟಾಪ್‌ನಲ್ಲಿ ಎಲ್ಲಾ ಡ್ರೈವರ್‌ಗಳು, ಹಾರ್ಡ್‌ವೇರ್ ರಿಬೂಟ್ ಆಗುತ್ತದೆ. ಇದರಿಂದ ಬ್ಲೂಟೂತ್ ಸಮಸ್ಯೆ ಕೂಡ ಬಗೆಹರಿಯುವ ಸಾಧ್ಯತೆಯಿರಲಿದೆ.

ಬ್ಲೂಟೂತ್ ಡ್ರೈವರ್‌ಗಳನ್ನು ಚೆಕ್ ಮಾಡಿ
ನಿಮ್ಮ ವಿಂಡೋಸ್ ಲ್ಯಾಪ್‌ಟಾಪ್‌ನಲ್ಲಿ ಡಿವೈಸ್ ಮ್ಯಾನೇಜರ್ ಅನ್ನು ತೆರೆಯಿರಿ, ನಂತರ ಬ್ಲೂಟೂತ್ ಆಯ್ಕೆಗೆ ನ್ಯಾವಿಗೇಟ್ ಮಾಡಿ, ಇದರಲ್ಲಿ ಡ್ರೈವರ್ ಅಪ್ಡೇಟ್‌ಗಾಗಿ ಪರಿಶೀಲಿಸಬೇಕಾಗುತ್ತದೆ. ನಂತರ ನೀವು ಡ್ರೈರ್ ಅನ್ನು ಆಕ್ಟಿವ್‌ಗೊಳಿಸುವ ಮೂಲಕ ಬ್ಲೂಟೂತ್ ಸಮಸ್ಯೆ ಬಗೆಹರಿದಿದೆಯಾ ಅನ್ನೊದನ್ನ ಚೆಕ್ ಮಾಡಬಹುದಾಗಿದೆ.
ಬ್ಲೂಟೂತ್ ಸೇವೆಯನ್ನು ರಿಸ್ಟಾರ್ಟ್ ಮಾಡಿ
ನಿಮ್ಮ ವಿಂಡೋಸ್ ಲ್ಯಾಪ್‌ಟಾಪ್‌ನಲ್ಲಿ ಬ್ಲೂಟೂತ್ ಸೇವೆ ಕಾರ್ಯನಿರ್ವಹಿಸದಿದ್ದಾಗ ನೀವು ಮಾಡಬಹುದಾದ ಮತ್ತೊಂದು ಟ್ರಿಕ್ಸ್ ಇದಾಗಿದೆ. ಇದಕ್ಕಾಗಿ ನೀವು Windows + R ಕೀಲಿಯನ್ನು ಒತ್ತಿ ಮತ್ತು services.msc ಎಂದು ಟೈಪ್ ಮಾಡಬೇಕಾಗುತ್ತದೆ. ಹೀಗೆ ಮಾಡಿದರೆ ಬ್ಲೂಟೂತ್ ಸೇವೆಯು ರಿಸ್ಟಾರ್ಟ್ ಆಗಲಿದೆ.

ಬ್ಲೂಟೂತ್ ಡ್ರೈವರ್‌ಗಳನ್ನು ಅಪ್ಡೇಟ್ ಮಾಡಿ
ಬ್ಲೂಟೂತ್ ಸೇವೆಯು ಕೆಲವೊಮ್ಮೆ ಅಪ್ಡೇಟ್ ಕಾರಣಕ್ಕೂ ಕಾರ್ಯನಿರ್ವಹಿಸುವುದಿಲ್ಲ. ಇಂತಹ ಸಮಯದಲ್ಲಿ ನೀವು ಬ್ಲೂಟೂತ್ ತಯಾರಕರ ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ. ಬೇಟಿ ನೀಡಿದ ನಂತರ ನಿಮ್ಮ ಲ್ಯಾಪ್‌ಟಾಪ್‌ಗಾಗಿ ಅಪ್ಡೇಟ್ ಬ್ಲೂಟೂತ್ ಡ್ರೈವರ್‌ಗಳನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಹೊಸದಾಗಿ ಡೌನ್‌ಲೋಡ್ ಮಾಡಿದ ಬ್ಲೂಟೂತ್ ಡ್ರೈವರ್‌ಗಳನ್ನು ಇನ್‌ಸ್ಟಾಲ್ ಮಾಡುವ ಮೂಲಕ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಬ್ಲೂಟೂತ್ ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ.
ವಿಂಡೋಸ್ ಟ್ರಬಲ್ ಶೂಟರ್ ಅನ್ನು ರನ್ ಮಾಡಿ
ಇನ್ನು ವಿಂಡೋಸ್ ಲ್ಯಾಪ್‌ಟಾಪ್‌ನಲ್ಲಿ ಟ್ರಬಲ್ ಶೂಟರ್ ಅನ್ನು ರನ್ ಮಾಡುವ ಮೂಲಕ ಕೂಡ ಬ್ಲೂಟೂತ್ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಅವಕಾಶವಿದೆ. ಇದಕ್ಕಾಗಿ ನೀವು ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ಅಪ್ಡೇಟ್ ಮತ್ತು ಸೆಕ್ಯುರಿಟಿಯನ್ನು ಆಯ್ಕೆಮಾಡಿ. ನಂತರ ಟ್ರಬಲ್‌ಶೂಟ್ ಕ್ಲಿಕ್ ಮಾಡಿ ಮತ್ತು ಬ್ಲೂಟೂತ್ ಆಯ್ಕೆಮಾಡಬೇಕಾಗುತ್ತದೆ. ಇದೀಗ ಟ್ರಬಲ್‌ಶೂಟರ್ ಅನ್ನು ರನ್ ಮಾಡಿದರೆ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಸಮಸ್ಯೆಯನ್ನು ಪರಿಹರಿಸಲು ಸೂಚನೆಗಳನ್ನು ನೀಡಲಿದೆ ಅದನ್ನು ಅನುಸರಿಸಬೇಕಾಗುತ್ತದೆ.

ವಿಂಡೋಸ್ ಅನ್ನು ಅಪ್ಡೇಟ್ ಮಾಡಿ
ಕೆಲವೊಮ್ಮೆ ನಿಮ್ಮ ವಿಂಡೋಸ್ ಲ್ಯಾಪ್‌ಟಾಪ್‌ನಲ್ಲಿ ವಿಂಡೋಸ್ ಅಪ್ಡೇಟ್ ಮಾಡದೆ ಹೋದರು ಕೂಡ ಬ್ಲೂಟೂತ್ ಕನೆಕ್ಟಿವಿಟಿ ಸಮಸ್ಯೆ ಎದುರಾಗಲಿದೆ. ಆದರಿಂದ ನೀವು ಇತ್ತೀಚಿನ ವಿಂಡೋಸ್ ಅಪ್ಡೇಟ್ ಇನ್‌ಸ್ಟಾಲ್ ಮಾಡಿದ್ದೀರಾ ಅನ್ನೊದನ್ನ ಖಚಿತಪಡಿಸಿಕೊಳ್ಳಬೇಕಿದೆ. ಇಲ್ಲದೆ ಹೋದರೆ ಹೊಸ ಅಪ್ಡೇಟ್‌ಗಾಗಿ ಸೆಟ್ಟಿಂಗ್ಸ್‌ಗೆ ಹೋಗಿ ಅಪ್ಡೇಟ್ ಮತ್ತು ಸೆಕ್ಯುರಿಟಿ ಆಯ್ಕೆ ಮಾಡುವ ಮೂಲಕ ಅಪ್ಡೇಟ್ ಚೆಕ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ.
ಹಾರ್ಡ್‌ವೇರ್ ಚೆಕ್ ಮಾಡಿ
ಕೆಲವೊಮ್ಮೆ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಬ್ಲೂಟೂತ್ ಹಾರ್ಡ್‌ವೇರ್ ಇದೆಯಾ ಅಂತಾ ತಿಳಿದುಕೊಳ್ಳುವುದು ಕೂಡ ಮುಖ್ಯವಾಗಲಿದೆ. ಇದಕ್ಕಾಗಿ ನೀವು ಡಿವೈಸ್ ಮ್ಯಾನೇಜರ್‌ಗೆ ಹೋಗಬೇಕಾಗುತ್ತದೆ. ನಂತರ "ಬ್ಲೂಟೂತ್" ಆಯ್ಕೆಮಾಡುವ ಮೂಲಕ ಡಿವೈಸ್‌ನಲ್ಲಿ ಯಾವ ಸಮಸ್ಯೆಯಿದೆ ಅಂತಾ ಪರಿಶೀಲಿಸಬಹುದಾಗಿದೆ.


Click it and Unblock the Notifications








