ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಟಿವಿ ರಿಮೋಟ್ ಆಗಿ ಬಳಸುವುದು ಹೇಗೆ? ಈ ಟ್ರಿಕ್ಸ್ ಫಾಲೋ ಮಾಡಿ!
ಮನೆಯಲ್ಲಿ ಟಿವಿ ನೋಡುವಾಗ ರಿಮೋಟ್ ಸಿಗದೆ ಹೋದರೆ ಆಗುವ ಬೇಸರ ಅಷ್ಟಿಷ್ಟಲ್ಲ. ಅದರಲ್ಲೂ ಚಾನಲ್ ಚೇಂಜ್ ಮಾಡಬೇಕು ಅಂದುಕೊಂಡಾಗ ರಿಮೋಟ್ ಸಿಗದಿದ್ದರೆ ಸಿಕ್ಕಿದ್ದನ್ನೆಲ್ಲಾ ಎಸೆಯುವವರು ಕೂಡ ಇದ್ದಾರೆ. ಆದರೆ ಕಾಲ ಬದಲಾಗಿದೆ, ರಿಮೋಟ್ ಸಿಗದೆ ಇದ್ದರೆ ಏನಂತೆ ಸ್ಮಾರ್ಟ್‌ಫೋನ್‌ಗಳನ್ನು ಸಹ ರಿಮೋಟ್ ಮಾದರಿಯಲ್ಲಿ ಬಳಸಬಹುದಾಗಿದೆ.
ಹೌದು, ಸ್ಮಾರ್ಟ್‌ಟಿವಿಯನ್ನು ಕಂಟ್ರೋಲ್ ಮಾಡುವುದಕ್ಕೆ ಸ್ಮಾರ್ಟ್‌ಫೋನ್ ಬಳಸಬಹುದಾಗಿದೆ. ಇದರಿಂದ ರಿಮೋಟ್ ಇಲ್ಲದೆ ಹೋದರೂ ಫೋನ್ ಮೂಲಕವೇ ನಿಮಗೆ ಬೇಕಾದ ಚಾನಲ್ ಬದಲಾಯಿಸಬಹುದು. ಆದರೆ ಇದಕ್ಕಾಗಿ ನೀವು ಕೆಲವು ಟ್ರಿಕ್ಸ್‌ಗಳನ್ನು ಅನುಸರಿಸಬೇಖಾಗುತ್ತದೆ. ಹಾಗಾದ್ರೆ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ರಿಮೋಟ್ ಆಗಿ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ಟಿವಿಯನ್ನು ಸ್ಮಾರ್ಟ್‌ಫೊನ್ ನಿಯಂಯತ್ರಿಸುವ ಕಾಲ ಬದು ಸಾಕಷ್ಟು ದಿನಗಳೇ ಕಳೆದುಹೋಗಿವೆ. ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಟಿವಿ ಅಪ್ಲಿಕೇಶನ್ ಬಳಸಿಕೊಂಡು ರಿಮೋಟ್ ಆಗಿ ಬಳಸಬಹುದು. ಹಾಗಂತ ಇದು ಏಕಾಏಕಿ ಸಾಧ್ಯವಿಲ್ಲ, ಇದಕ್ಕಾಗಿ ನೀವು ಕೆಲವು ಟ್ಯಾಪ್‌ಗಳನ್ನು ಮಾಡಬೇಕಾಗುತ್ತದೆ. ಸದ್ಯ ನೀವು ಸ್ಮಾರ್ಟ್‌ಫೋನ್ ಅನ್ನು ರಿಮೋಟ್ ಆಗಿ ಬಳಸುವುದಕ್ಕೆ ಪಾಲಿಸುವುದಕ್ಕೆ ಅನುಸರಿಸಬೇಕಾದ ಅಂಶಗಳು ಈ ಕೆಳಗಿನಂತಿವೆ.
ಸ್ಮಾರ್ಟ್‌ಫೋನ್ ಅನ್ನು ಟಿವಿ ರಿಮೋಟ್ ಆಗಿ ಬಳಸುವುದು ಹೇಗೆ?
* ಮೊದಲಿಗೆ ನಿಮ್ಮ ಫೋನ್‌ನಲ್ಲಿ ಗೂಗಲ್‌ಟಿವಿ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿರಿ.
* ನಂತರ ನೀವು ಕನೆಕ್ಟ್ ಮಾಡಲು ಬಯಸುವ ಟಿವಿ ಆನ್ ಆಗಿದೆಯೇ ಅಂತಾ ಖಚಿತಪಡಿಸಿಕೊಳ್ಳಿ.
* ಇದೀಗ ನೀವು ಸಂಪರ್ಕಿಸಲು ಬಯಸುವ ಟಿವಿ ಮತ್ತು ನಿಮ್ಮ ಫೋನ್ ಒಂದೇ ವೈ-ಫೈ ನೆಟ್‌ವರ್ಕ್‌ನಲ್ಲಿದೆಯೇ ಅನ್ನೊದನ್ನ ಖಚಿತಪಡಿಸಿಕೊಳ್ಳಿ.
* ನಿಮ್ಮ ಟಿವಿಗೆ ಗೂಗಲ್ ಟಿವಿ ಅಪ್ಲಿಕೇಶನ್ ಅನ್ನು ಕನೆಕ್ಟ್ ಮಾಡುವ ಅಗತ್ಯವಿದೆ.
* ಇದಕ್ಕಾಗಿ ನೀವು ಸ್ಕ್ರೀನ್ ಕೆಳಗಿನ ಬಲಭಾಗದಲ್ಲಿರುವ 'ಕನೆಕ್ಟ್ ಟಿವಿ' ಬಟನ್ ಅನ್ನು ಒತ್ತಿರಿ.
* ಇದರಲ್ಲಿ ನಿಮ್ಮ ಟಿವಿಯನ್ನು ಆಯ್ಕೆಮಾಡಿ ಮತ್ತು ಟಿವಿ ಸ್ಕ್ರೀನ್‌ನಲ್ಲಿ ಗೋಚರಿಸುವ ಕೋಡ್ ಅನ್ನು ನಮೂದಿಸಿ.
* ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 'ಜೋಡಿ' ಬಟನ್ ಮೇಲೆ ಕ್ಲಿಕ್ ಮಾಡಿ.
* 'ಕನೆಕ್ಟ್ ಟಿವಿ' ಈಗ 'ಟಿವಿ ರಿಮೋಟ್' ಬಟನ್ ಆಗಿ ಕಾಣಿಸುತ್ತದೆ.
* ಇದರ ಮೇಲೆ ಕ್ಲಿಕ್ ಮಾಡುವುದರಿಂದ ಟಿವಿ ರಿಮೋಟ್ ಆಗಿ ಬಳಸಬಹುದಾಗಿದೆ.
ಈ ಮೂಲಕ ಸ್ಮಾರ್ಟ್‌ಫೋನ್ ಅನ್ನು ಟಿವಿ ರಿಮೋಟ್ ಮಾದರಿಯಲ್ಲಿ ಬಳಸಬಹುದು. ಇದಕ್ಕಾಗಿ ಗೂಗಲ್ ಅಸಿಸ್ಟೆಂಟ್ ಅನ್ನು ಟ್ರಿಗರ್ ಮಾಡಬಹುದು ಮತ್ತು ಚಾನಲ್‌ಗಳನ್ನು ಸರ್ಫ್ ಮಾಡಬಹುದು. ಜೊತೆಗೆ ಸ್ಮಾರ್ಟ್‌ಟಿವಿಯನ್ನು ಗೂಗಲ್‌ಹೋಮ್ ಅಪ್ಲಿಕೇಶನ್‌ನಿಂದ ಅಥವಾ ತ್ವರಿತ ಸೆಟ್ಟಿಂಗ್‌ಗಳ ಟೈಲ್ ಸೇರಿಸುವ ಮೂಲಕ ಕಂಟ್ರೋಲ್ ಮಾಡಬಹುದಾಗಿದೆ

ಒಂದು ವೇಳೆ ನೀವು ಸ್ಯಾಮ್ ಸಂಗ್ ಅಥವಾ ಎಲ್ ಜಿ ಸ್ಮಾರ್ಟ್ ಟಿವಿ ಹೊಂದಿದ್ದರೆ ಅವುಗಳು ತಮ್ಮದೇ ಸ್ವಾಮ್ಯದ os ನಿಂದ ರನ್ ಆಗುತ್ತದೆ. ಆಗ ಅವುಗಳ ನಿರ್ಧಿಷ್ಟ ರಿಮೋಟ್ ಆಪ್ ಗಳನ್ನು ಡೌನ್ ಲೋಡ್ ಮಾಡಿ ಮತ್ತು ಕೆಲವು ಅಂಶಗಳನ್ನು ಫಾಲೋ ಮಾಡಬೇಕಾಗುತ್ತದೆ.
* ಫಾಲೋ ಮಾಡಿ ಸ್ಮಾರ್ಟ್ ಟಿವಿ ಮತ್ತು ಫೋನ್ ಎರಡೂ ಒಂದೇ ವೈಫೈ ನೆಟ್ ವರ್ಕ್ ಗೆ ಕನೆಕ್ಟ್ ಆಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.
* ಎಲ್ ಜಿ/ ಸ್ಯಾಮ್ ಸಂಗ್ ಸ್ಮಾರ್ಟ್ ಟಿವಿ ಆಪ್ ನ್ನು ಡೌನ್ ಲೋಡ್ ಮಾಡಿ.
* LG TV Plus ( Android | iOS) • Samsung SmartThings ( Android | iOS) ಸೆಟಪ್ ಪೂರ್ಣಗೊಳಿಸಲು ತೆರೆಯ ಮೇಲಿನ ಸೂಚನೆಗಳನ್ನು ಅನುಸರಿಸಿ.


Click it and Unblock the Notifications








