ಡಿಜಿಲಾಕರ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್ ಅನ್ನು ಅಪ್ಲೋಡ್‌ ಮಾಡುವುದು ಹೇಗೆ?

|

ಇತ್ತಿಚಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಡಿಜಿಟಲ್‌ ಇಂಡಿಯಾದ ಕನಸ್ಸನ್ನು ಇನ್ನಷ್ಟು ವಿಸ್ತಾರ ಮಾಡುವುದಕ್ಕಾಗಿ ಸರ್ಕಾರ ಕುಡ ಸಾಕಷ್ಟು ಸಾರ್ವಜನಿಕ ಸೇವೆ ನೀಡುವ ಹೊಸ ಹೊಸ ಆಪ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಡಿಜಿಲಾಕರ್‌ ಅಪ್ಲಿಕೇಶನ್‌ ಕೂಡ ಒಂದು. ಈ ಅಪ್ಲಿಕೇಶನ್‌ ಅಲ್ಲಿ ಡ್ರೈವಿಂಗ್‌ ಲೈಸೆನ್ಸ್‌, ಆರ್‌ಸಿ ಬುಕ್‌ ಸಂಬಂದಿತ ದಾಖಲೆಗಳನ್ನು ಡಿಟಲ್‌ ರೂಪದಲ್ಲಿ ಇಡುವುದಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿದೆ.

ಡಿಜಿಲಾಕರ್ ಅಪ್ಲಿಕೇಶನ್‌

ಹೌದು, ವಾಹನ ನೋಂದಣಿ ಪ್ರಮಾಣಪತ್ರ ಮತ್ತು ಚಾಲನಾ ಪರವಾನಗಿಯಂತಹ ಪ್ರಮುಖ ದಾಖಲೆಗಳನ್ನು ನಾಗರಿಕರಿಗೆ ಲಭ್ಯವಾಗುವಂತೆ ಮಾಡಲು ಡಿಜಿಲಾಕರ್ ಅಪ್ಲಿಕೇಶನ್‌ ಅನ್ನು ಸರ್ಕಾರ ಪರಿಚಯಿಸರೋದು ನಿಮಗೆಲ್ಲಾ ತಿಳಿದೆ ಇದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದೊಂದಿಗೆ ಡಿಜಿಲಾಕರ್‌ ಅಪ್ಲಿಕೇಶನ್‌ ಕೂಡ ಕೈ ಜೋಡಿಸಿದೆ. ಈ ಪಾಲುದಾರಿಕೆಯ ಭಾಗವಾಗಿ, ಡಿಜಿಲಾಕರ್ ಅನ್ನು ರಾಷ್ಟ್ರೀಯ ರಿಜಿಸ್ಟರ್‌ನೊಂದಿಗೆ ಸಂಯೋಜಿಸಲಾಗಿದೆ. ಅಲ್ಲದೆ ಇದು ದೇಶಾದ್ಯಂತ ವಾಹನ ನೋಂದಣಿ ಮತ್ತು ಚಾಲನಾ ಪರವಾನಗಿ ಡೇಟಾದ ರಾಷ್ಟ್ರೀಯ ಡೇಟಾಬೇಸ್ ಆಗಿದೆ. ಹಾಗಾದ್ರೆ ಡಿಜಿಲಾಕರ್‌ನಲ್ಲಿ ಡ್ರೈವಿಂಗ್‌ ಲೈಸೆನ್ಸ, ಆರ್‌ಸಿ ಬುಕ್‌ ದಾಖಲೆಯನ್ನು ಆಪ್ಲೋಡ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಜಿಲಾಕರ್

ಇನ್ನು ಡಿಜಿಲಾಕರ್ ಅನ್ನು ಅಧಿಕೃತ ವೆಬ್‌ಸೈಟ್ www.digilocker.gov.in ಅಥವಾ ಅಧಿಕೃತ ಅಪ್ಲಿಕೇಶನ್ ಮೂಲಕ ಪ್ರವೇಶಿಸಬಹುದು. ಬಳಕೆದಾರರು ತಮ್ಮ ಡಿಎಲ್ ಮತ್ತು ಆರ್‌ಸಿ ಡಿಜಿಟಲ್ ಪ್ರತಿಗಳನ್ನು ತಮ್ಮ ಡೆಸ್ಕ್‌ಟಾಪ್ ಮತ್ತು ಮೊಬೈಲ್ ಡಿವೈಸ್‌ಗಳಲ್ಲಿ ಸಂಗ್ರಹಿಸಿಟ್ಟಿದ್ದರೆ ಅದನ್ನು ಕೆಲವೇ ಕ್ಲಿಕ್‌ಗಳಲ್ಲಿ ಡಿಜಿಲಾಕರ್‌ನಲ್ಲಿ ಅಪ್ಲೋಡ್‌ ಮಾಡಲು ಇದು ಅನುಮತಿಸುತ್ತದೆ.

ಡ್ರೈವಿಂಗ್ ಲೈಸೆನ್ಸ್, ಆರ್‌ಸಿ ಬುಕ್‌ ಅನ್ನು ಡಿಜಿಲಾಕರ್‌ನಲ್ಲಿ ಅಪ್ಲೋಡ್‌ ಮಾಡುವುದು ಹೇಗೆ?

ಡ್ರೈವಿಂಗ್ ಲೈಸೆನ್ಸ್, ಆರ್‌ಸಿ ಬುಕ್‌ ಅನ್ನು ಡಿಜಿಲಾಕರ್‌ನಲ್ಲಿ ಅಪ್ಲೋಡ್‌ ಮಾಡುವುದು ಹೇಗೆ?

ಮೊದಲನೆಯದಾಗಿ, ನಿವು ನಿಮ್ಮ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಲು ನಿಮ್ಮ ಡಿಜಿಲಾಕರ್ ಖಾತೆಯನ್ನು ನೀವು ಸೆಟ್‌ಮಾಡಬೇಕಾಗುತ್ತದೆ. ಡಿಜಿಲಾಕರ್ ಖಾತೆಯನ್ನು ನಿವು ಸೆಟ್‌ ಮಾಡಬೇಕಾದರೆ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ. ನಂತರ ನಿಮ್ಮ ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ಪ್ರಮಾಣಪತ್ರಗಳನ್ನು ಡಿಜಿಲಾಕರ್‌ಗೆ ಅಪ್‌ಲೋಡ್ ಮಾಡಬೇಕಾಗುತ್ತದೆ.

ಡಿಜಿಲಾಕರ್

ಹಂತ:1 ನಿಮ್ಮ Android ಅಥವಾ iOS ಸಾಧನದಲ್ಲಿ ಉಚಿತ ಡಿಜಿಲಾಕರ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
ಹಂತ:2 ನಂತರ ನಿವು ಸದಾ ಬಳಸುವ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಅಕೌಂಟ್‌ ಅನ್ನು ಕ್ರಿಯೆಟ್‌ ಮಾಡಿ. ಇದು ನಿಮ್ಮ ಡಿಜಿಲಾಕರ್ ಖಾತೆಯನ್ನು ಪ್ರವೇಶಿಸಲು ಅಗತ್ಯವಿರುವ ಒಂದು-ಬಾರಿ ಪಾಸ್‌ವರ್ಡ್ (ಒಟಿಪಿ) ಅನ್ನು ನಿಮಗೆ ಕಳುಹಿಸುತ್ತದೆ. ನಿಮ್ಮ ಖಾತೆಗಾಗಿ ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್ ರಚಿಸಲು ಇದು ನಿಮ್ಮನ್ನು ಕೇಳುತ್ತದೆ.
ಹಂತ:3 ಇದಾದ ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯಲ್ಲಿರುವ ಕೀಲಿಯು ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿಯನ್ನು ಹೆಸರು, ವಿಳಾಸ ಇತ್ಯಾದಿಗಳನ್ನು ಸ್ವಯಂಚಾಲಿತವಾಗಿ ಭರ್ತಿ ಮಾಡುತ್ತದೆ. ಆದರೆ ನಿಮ್ಮ ಬಳಿಯಿರುವ ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ಪ್ರಮಾಣಪತ್ರಗಳಲ್ಲಿನ ವಿವರಗಳು ಆಧಾರ್ ಕಾರ್ಡ್‌ನಲ್ಲಿ ಹೊಂದಿಕೆಯಾಗಬೇಕು ಅನ್ನೊದು ಮುಖ್ಯವಾಗಿರುತ್ತದೆ.

ಡಿಜಿಲಾಕರ್

ಹಂತ:4 ಇದೀಗ ರಿಯಲ್‌ ಟೈಂನಲ್ಲಿ ನಿಮ್ಮ ಅಕೌಂಟ್‌ ಅನ್ನು ಡಿಜಿಲಾಕರ್‌ನಲ್ಲಿ ಪಡೆದುಕೊಳ್ಳಲು ನಿಮ್ಮ ಚಾಲನಾ ಪರವಾನಗಿ ಸಂಖ್ಯೆಯನ್ನು ಸೇರಿಸಿ. ಇದು ರೆಕಾರ್ಡ್ ಕೀಪಿಂಗ್‌ಗಾಗಿ ಟೈಮ್ ಸ್ಟ್ಯಾಂಪ್ ಅನ್ನು ಹಾಕುತ್ತದೆ.
ಹಂತ:5 ಡ್ರೈವಿಂಗ್‌ ಲೈಸೆನ್ಸ್‌ ನಂತರ ವಾಹನ ನೋಂದಣಿ ಪ್ರಮಾಣಪತ್ರ ಮತ್ತು ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಹಾಗೂ ಇತರ ದಾಖಲೆಗಳನ್ನು ಉಳಿಸಲು ಡಿಜಿಲಾಕರ್ ಅಪ್ಲಿಕೇಶನ್ ನಿಮಗೆ ಅನುಮತಿಸುತ್ತದೆ.

ಡಿಜಿಲಾಕರ್‌

ಈ ಮೂಲಕ ಡಿಜಿಲಾಕರ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್, ಆರ್‌ಸಿ ಬುಕ್‌ ಅನ್ನು ಡಿಜಿಲಾಕರ್‌ನಲ್ಲಿ ಅಪ್ಲೋಡ್‌ ಮಾಡಬಹುದಾಗಿದೆ. ಅಲ್ಲದೆ ಇನ್ಮುಂದೆ ನೀವು ವಾಹನ ಚಲಾಯಿಸುವಾಗ ಡಿಜಿಲಾಕರ್‌ ಅಪ್ಲಿಕೇಶನ್‌ ಇದ್ದರೆ ಸಾಕು ಅಗತ್ಯವೆನಿಸಿದಾಗ ಡಿಜಿಲಾಕರ್‌ನಲ್ಲಿರುವ ದಾಖಲೆಗಳನ್ನು ತೊರಿಸಬಹುದಾಗಿರುತ್ತದೆ.

Best Mobiles in India

Read more about:
English summary
DigiLocker, a cloud-based government platform teamed up with the Ministry of Road Transport and Highways to make important documents such as vehicle registration certificate and driving licence available to citizens.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X