Home
ಸುದ್ದಿಜಾಲ

ವಾಟ್ಸಾಪ್‌ನ ಈ ನಡೆಯಿಂದ ನಿಮಗೆ ಲಾಭವಾಗೋದು ಗ್ಯಾರಂಟಿ!

ವಾಟ್ಸಾಪ್‌ ತನ್ನ ಬಳಕೆದಾರರ ಅನುಕೂಲಕ್ಕಾಗಿ ಹಲವು ಫೀಚರ್ಸ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಾಲಕ್ಕೆ ಅನುಗುಣವಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್‌ ಬಳಕೆದಾರರಿಗೆ ಹೊಸ ಅಪ್ಡೇಟ್‌ನಲ್ಲಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಜೊತೆಗೆ ಮುಂದಿನ ಅಪ್ಡೇಟ್‌ನಲ್ಲಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಲಿದೆ ಎಂದು ವರದಿಯಾಗಿದೆ. ಇದರಲ್ಲಿ ಡೇಟ್‌ ಫೀಚರ್ಸ್‌ ಮೂಲಕ ವಾಟ್ಸಾಪ್‌ ಸರ್ಚ್‌ ಮಾಡಲು ಅವಕಾಶ ಸಿಗಲಿದೆ ಎಂದು ಹೇಳಲಾಗಿದೆ.

ವಾಟ್ಸಾಪ್‌ನ ಈ ನಡೆಯಿಂದ ನಿಮಗೆ ಲಾಭವಾಗೋದು ಗ್ಯಾರಂಟಿ!

ಹೌದು, ವಾಟ್ಸಾಪ್‌ ಹೊಸ ಅಪ್ಡೇಟ್‌ನಲ್ಲಿ ಎರಡು ಪ್ರಮುಖ ಫೀಚರ್ಸ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಇದರಲ್ಲಿ ದಿನಾಂಕದ ಪ್ರಕಾರ ಸರ್ಚ್‌ ಮಾಡುವ ಅವಕಾಶ ದೊರೆಯಲಿದೆ. ಇದರಿಂದ ನೀವು ಸೆಂಡ್‌ ಮಾಡಿರುವ ಸಂದೇಶಗಳು, ಇಮೇಜ್‌ಗಳನ್ನು ದಿನಾಂಕದ ಆಧಾರದ ಮೇಲೆ ಸರ್ಚ್‌ ಮಾಡಲು ಸಾಧ್ಯವಾಗಲಿದೆ. ಕಂಟ್ಯಾಕ್ಟ್‌ ಅಥವಾ ಗ್ರೂಪ್‌ನಲ್ಲಿ ಸರ್ಚ್‌ ಅನ್ನು ಟ್ಯಾಪ್‌ ಮಾಡುವ ಮೂಲಕ 'ಕ್ಯಾಲೆಂಡರ್' ಐಕಾನ್ ಅನ್ನು ಆಯ್ಕೆ ಮಾಡುವ ಅವಕಾಶ ಸಿಗಲಿದೆ ಎನ್ನಲಾಗಿದೆ. ಹಾಗಾದ್ರೆ ಈ ಹೊಸ ಫೀಚರ್ಸ್‌ ನಿಮಗೆ ಹೇಗೆ ಉಪಯುಕ್ತವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸರ್ಚ್‌ ಬೈ ಡೇಟ್‌ ಫೀಚರ್ಸ್‌ ಸೇರ್ಪಡೆ ಮೂಲಕ ಬಳಕೆದಾರರಿಗೆ ಹೊಸ ಅವಕಾಶ ಕಲ್ಪಿಸಿದೆ. ಇದರಿಂದ ನೀವು ವಾಟ್ಸಾಪ್‌ನಲ್ಲಿ ನಿಮ್ಮ ಹಳೆಯ ಚಾಟ್‌ ಅನ್ನು ಸರ್ಚ್‌ ಮಾಡೋದು ಸುಲಭವಾಗಲಿದೆ. ದಿನಾಂಕದ ಆಧಾರದ ಮೇಲೆ ನೀವು ಸೆಂಡ್‌ ಮಾಡಿರುವ ಸಂದೇಶಗಳನ್ನು ಪತ್ತೆ ಹಚ್ಚುವುದು ಸುಲಭವಾಗಲಿದೆ. ಅಲ್ಲದೆ ಆ ದಿನದಂದ ನೀವು ಸೆಂಡ್‌ ಮಾಡಿದ ಫೋಟೋಗಳು, ವೀಡಿಯೋಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

ವಾಟ್ಸಾಪ್‌ನ ಈ ನಡೆಯಿಂದ ನಿಮಗೆ ಲಾಭವಾಗೋದು ಗ್ಯಾರಂಟಿ!

ಸಾಮಾನ್ಯವಾಗಿ ವಟ್ಸಾಪ್‌ನಲ್ಲಿ ನೀವು ಬಹುಮುಖ್ಯವಾದ ಮಾಹಿತಿಯನ್ನು ಹಂಚಿಕೊಂಡಿದ್ದು, ಅದರ ಬಗ್ಗೆ ಮತ್ತೊಮ್ಮೆ ತಿಳಿದುಕೊಳ್ಳಲು ಬಯಸಿದರೆ ಚಾಟ್‌ ವಿಂಡೋದಲ್ಲಿ ಹಳೆಯ ಸಂದೇಶವನ್ನು ಸರ್ಚ್‌ ಮಾಡಲು ಸಂದೇಶಗಳ್ನು ಸ್ಕ್ರೋಲ್‌ ಮಾಡುತ್ತಾ ಹೋಗಬೇಕಾಗುತ್ತದೆ. ಇದರಿಂದ ಸಾಕಷ್ಟು ಸಮಯ ಸ್ಕ್ರೋಲಿಂಗ್‌ನಲ್ಲಿಯೇ ಕಳೆಯುತ್ತಿದೆ. ಆದರೆ ಸರ್ಚ್‌ ಬೈ ಡೇಟ್‌ ಫೀಚರ್ಸ್‌ ನಿಮಗೆ ನೀವು ಸಂದೇಶ ಕಳುಹಿಸಿದ ದಿನಾಂಕ ನಮೂದಿಸಿದರೆ ಸಾಕು ಆ ದಿನಂದು ನೀವು ಕಳುಹಿಸಿದ ಸಂದೇಶಗಳನ್ನು ತೆರೆದಿಡುತ್ತದೆ. ಇದರಿಂದ ನೀವು ಸ್ಕ್ರೋಲಿಂಗ್‌ ಮಾಡಬೇಕಾದ ಅಗತ್ಯವೇ ಬರುವುದಿಲ್ಲ.

ವಾಟ್ಸಾಪ್‌ನ ಈ ನಡೆಯಿಂದ ನಿಮಗೆ ಲಾಭವಾಗೋದು ಗ್ಯಾರಂಟಿ!

ವಾಟ್ಸಾಪ್‌ ಸರ್ಚ್‌ ಬೈ ಡೇಟ್‌ ಫೀಚರ್ಸ್‌ ಬಳಸುವುದು ಹೇಗೆ?
* ಮೊದಲಿಗೆ ವಾಟ್ಸಾಪ್‌ ತೆರೆಯಿರಿ, ನಂತರ ನೀವು ಸಂದೇಶವನ್ನು ಸರ್ಚ್‌ ಮಾಡಲು ಬಯಸುವ ಚಾಟ್‌ ವಿಂಡೋವನ್ನು ತೆರೆಯಿರಿ
* ಇದೀಗ ಚಾಟ್‌ನಲ್ಲಿ ಸರ್ಚ್‌ ಮೆಸೇಜ್‌ ಮೇಲೆ ಟ್ಯಾಪ್‌ ಮಾಡಿ
* ನಂತರ ನಿಮಗೆ ಸರ್ಚ್‌ ಬಾರ್‌ ಬಲ ಮೂಲೆಯಲ್ಲಿ ಕ್ಯಾಲೆಂಡರ್ ಐಕಾನ್ ಕಾಣಲಿದೆ
* ಇದರಲ್ಲಿ ಕ್ಯಾಲೆಂಡರ್ ಐಕಾನ್ ಮೇಲೆ ಟ್ಯಾಪ್ ಮಾಡಿ
* ಇಲ್ಲಿ ನಿಮಗೆ ಯಾವ ದಿನಾಂಕ ಸಂದೇಶವನ್ನು ಸರ್ಚ್‌ ಮಾಡ್ತಾ ಇದ್ದೀರಾ ಆ ದಿನಾಂಕ ಮತ್ತು ವರ್ಷ ಹಾಗೂ ತಿಂಗಳನ್ನು ಆಯ್ಕೆ ಮಾಡಿ
* ನಂತರ 'ಜಂಪ್ ಟು ಡೇಟ್' ಅನ್ನು ಟ್ಯಾಪ್ ಮಾಡಿ
* ಇದೀಗ ನೀವು ಆಯ್ಕೆಮಾಡಿದ ದಿನಾಂಕದಂದು ಲಬ್ಯವಿರುವ ಸಂದೇಶಗಳಿಗೆ ನಿಮ್ಮನ್ನು ಕರೆದೊಯ್ಯಲಿದೆ.

ಇದಲ್ಲದೆ ವಾಟ್ಸಾಪ್‌ ಹೊಸ ಅಪ್ಡೇಟ್‌ನಲ್ಲಿ ಮೀಡಿಯಾ ಫೈಲ್‌ಗಳನ್ನು ಬೇರೆ ಅಪ್ಲಿಕೇಶನ್‌ಗಳಿಂದ ವಾಟ್ಸಾಪ್‌ಗೆ ಡೈರೆಕ್ಟ್‌ ಆಗಿ ಡ್ರ್ಯಾಗ್‌ ಮಾಡುವ ಅವಕಾಶ ನೀಡಲಿದೆ. ಇದರಿಂದ ನೀವು ಯಾವುದೇ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ನಲ್ಲಿರುವ ಫೋಟೋ, ಫೈಲ್‌, ವೀಡಿಯೊಗಳನ್ನು ವಾಟ್ಸಾಪ್‌ ಚಾಟ್‌ಗಳಿಗೆ ಶೇರ್‌ ಮಾಡಲು ಡ್ರ್ಯಾಗ್‌ ಮತ್ತು ಡ್ರಾಪ್‌ ಅನ್ನು ಬಳಸಬಹುದು ಎನ್ನಲಾಗಿದೆ. ಇನ್ನು ಈ ಎರಡೂ ಫೀಚರ್ಸ್‌ಗಳು ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ವರದಿಯಾಗಿದೆ.

Best Mobiles in India

English summary
How to use WhatsApp search by date feature: follow these steps
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+