ಪೆನಂಬ್ರಲ್ "ಚಂದ್ರ ಗ್ರಹಣ''ಕ್ಕೆ ಸಾಕ್ಷಿಯಾಗಲಿದೆ ಭಾರತ! ಈ ಗ್ರಹಣದ ವಿಶೇಷತೆ ಏನು?

|

ಜಗತ್ತು ಮತ್ತೊಂದು ಖಗೋಳ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ. ಖಗೋಳದಲ್ಲಿ ನಡೆಯುವ ಮತ್ತೊಂದು ಚಂದ್ರ ಗ್ರಹಣಕ್ಕೆ ಇಡೀ ಭೂಮಂಡಲವೇ ಕಾತುರದಿಂದ ಕಾಯುತ್ತಿದೆ. ಸದ್ಯ ಈ ಚಂದ್ರಗ್ರಹಣ ಈ ವರ್ಷದ ಸಂಭವಿಸಿದ ನಾಲ್ಕು ಗ್ರಹಣಗಳಲ್ಲಿ ಎರಡನೆ ಚಂದ್ರಗ್ರಹಣವಾಗಿದೆ. ಸದ್ಯ ಈ ಗ್ರಹಣದ ಬಗ್ಗೆ ಎಲ್ಲರೂ ಕಾತುರದಿಂದ ಕಾಯುತ್ತಿದ್ದು, ನಭೋ ಮಂಡಲದಲ್ಲಿ ನಡೆಯುವ ವಿಸ್ಮಯ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.

ಭಾರತ

ಹೌದು ಭಾರತವೂ ಸೇರಿದಂತೆ ವಿಶ್ವದ ಹಲವಾರು ದೇಶಗಳಲ್ಲಿ ಚಂದ್ರಗ್ರಹಣ ಕಾಣಿಸಲಿದೆ. ಹುಣ್ಣಿಮೆಯ ಚಂದ್ರ ಗ್ರಹಣದಲ್ಲಿ ಬಂದಿಯಾಗಲಿದ್ದಾನೆ. ಅಷ್ಟೇ ಅಲ್ಲ ಈ ಗ್ರಹಣವು ಭಾಗಶಃ ಪೆನಂಬ್ರಲ್ ಗ್ರಹಣವಾಗಲಿದೆ, ಅಂದರೆ ಚಂದ್ರನು ಪೆನಂಬ್ರಾ ಎಂದು ಕರೆಯಲ್ಪಡುವ ಭೂಮಿಯ ನೆರಳಿನ ಮಸುಕಾದ, ಹೊರ ಭಾಗದ ಮೂಲಕ ಚಲಿಸುತ್ತಾನೆ ಎಂದು ಹೇಳಲಾಗ್ತಿದೆ. ಈ ರೀತಿಯ ಪೆನಂಬ್ರಲ್ ಗ್ರಹಣವು ಸಾಮಾನ್ಯವಾಗಿ ಸಾಮಾನ್ಯ ಹುಣ್ಣಿಮೆಯೆಂದು ಸಂಭವಿಸಲಿದೆ ಎನ್ನಲಾಗ್ತಿದೆ. ಅಷ್ಟಕ್ಕೂ ಈ ಗ್ರಹಣದ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪೆನಂಬ್ರಲ್ ಚಂದ್ರ ಗ್ರಹಣ ಅಂದರೆ ಏನು?

ಪೆನಂಬ್ರಲ್ ಚಂದ್ರ ಗ್ರಹಣ ಅಂದರೆ ಏನು?

ಸದ್ಯ ಸಂಭವಿಸಲಿರುವ ಚಂದ್ರಗ್ರಹಣವನ್ನು ಸ್ಟ್ರಾಬೆರಿ ಮೂನ್ ಎಕ್ಲಿಪ್ಸ್, ಮೀಡ್ ಮೂನ್ ಎಕ್ಲಿಪ್ಸ್, ಹನಿ ಮೂನ್ ಎಕ್ಲಿಪ್ಸ್ ಎಂಬ ಹೆಸರಿನಿಂದ ಉಲ್ಲೇಖಿಸಲಾಗುತ್ತಿದೆ. ಹಾಗೇ ನೋಡುವುದಾದರೆ ಪೆನಂಬ್ರಲ್ ಚಂದ್ರ ಗ್ರಹಣವು ಮೂರು ವಿಧದ ಚಂದ್ರ ಗ್ರಹಣಗಳಲ್ಲಿ ಒಂದಾಗಿದೆ - ಒಟ್ಟು, ಭಾಗಶಃ ಮತ್ತು ಪೆನಂಬ್ರಲ್. ಪೆನಂಬ್ರಲ್ ಚಂದ್ರಗ್ರಹಣದ ಸಮಯದಲ್ಲಿ, ಭೂಮಿಯು ಸೂರ್ಯನ ಕೆಲವು ಬೆಳಕನ್ನು ನೇರವಾಗಿ ಚಂದ್ರನನ್ನು ತಲುಪದಂತೆ ತಡೆಯುತ್ತದೆ. ಅಲ್ಲದೆ ಭೂಮಿಯ ನೆರಳಿನ ಹೊರ ಭಾಗವನ್ನು ‘ಪೆನಂಬ್ರಾ' ಎಂದು ಕರೆಯಲಾಗುತ್ತದೆ, ಇದು ಚಂದ್ರನ ಎಲ್ಲಾ ಅಥವಾ ಭಾಗವನ್ನು ಒಳಗೊಳ್ಳುತ್ತದೆ. ‘ಉಂಬ್ರಾ' ಎಂದು ಕರೆಯಲ್ಪಡುವ ಭೂಮಿಯ ನೆರಳಿನ ಡಾರ್ಕ್ ಕೋರ್‌ಗೆ ಹೋಲಿಸಿದರೆ ಪೆನಂಬ್ರಾ ಮಸುಕಾಗಿರುವುದರಿಂದ, ಈ ಗ್ರಹಣವನ್ನು ಗುರುತಿಸುವುದು ಕಷ್ಟ. ಇದಕ್ಕಾಗಿಯೇ ಕೆಲವೊಮ್ಮೆ ಪೆನಂಬ್ರಲ್ ಚಂದ್ರ ಗ್ರಹಣವನ್ನು ಹುಣ್ಣಿಮೆ ಎಂದು ತಪ್ಪಾಗಿ ಹೇಳಲಾಗುತ್ತದೆ.

ಈ ಗ್ರಹಣ ಯಾವಾಗ ಸಂಭವಿಸಲಿದೆ.

ಈ ಗ್ರಹಣ ಯಾವಾಗ ಸಂಭವಿಸಲಿದೆ.

ಇನ್ನು ಈ ಗ್ರಹಣ ಜೂನ್ 5-6 ರಹುಣ್ಣಿಮೆಯು ಪೆನಂಬ್ರಲ್ ಚಂದ್ರಗ್ರಹಣದೊಂದಿಗೆ ಹೊಂದಿಕೆಯಾಗುತ್ತಿದೆ. ಇದು ಭಾರತ ಮತ್ತು ವಿಶ್ವದ ಇತರ ಭಾಗಗಳಿಂದ ಗೋಚರಿಸುತ್ತದೆ ಎನ್ನಲಾಗ್ತಿದೆ. ಆದಾಗ್ಯೂ, ಇದು ಉತ್ತರ ಅಮೆರಿಕಾ ಮತ್ತು ದಕ್ಷಿಣ ಅಮೆರಿಕದ ಹೆಚ್ಚಿನ ಭಾಗಗಳಲ್ಲಿ ಈ ಗ್ರಹಣದ ಕೌತುಕವನ್ನ ಕಣ್ತುಂಬಿಕೊಳ್ಳಬಹುದಾಗಿದೆ. ಇನ್ನು ಈ ಪೆನಂಬ್ರಲ್ ಚಂದ್ರ ಗ್ರಹಣವು ಜೂನ್ 5 ರಂದು ರಾತ್ರಿ 11: 15 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಜೂನ್ 6 ರಂದು ಬೆಳಿಗ್ಗೆ 2:34 ರವರೆಗೆ ಇರುತ್ತದೆ, ಇದು ಸುಮಾರು ಮೂರು ಗಂಟೆ 18 ನಿಮಿಷಗಳ ಕಾಲ ಗ್ರಹಣ ಸಂಭವಿಸಲಿದೆ. ಇದು ಪೂರ್ವ ಆಫ್ರಿಕಾ, ಮಧ್ಯಪ್ರಾಚ್ಯ, ಭಾರತ ಸೇರಿದಂತೆ ದಕ್ಷಿಣ ಏಷ್ಯಾ, ಮತ್ತು ಆಸ್ಟ್ರೇಲಿಯಾದಿಂದ ಗೋಚರಿಸುತ್ತದೆ.

ಪೆನಂಬ್ರಲ್ ಚಂದ್ರ ಗ್ರಹಣವನ್ನು ನೊಡುವುದು ಹೇಗೆ ?

ಪೆನಂಬ್ರಲ್ ಚಂದ್ರ ಗ್ರಹಣವನ್ನು ನೊಡುವುದು ಹೇಗೆ ?

ಪೆನಂಬ್ರಲ್ ಚಂದ್ರ ಗ್ರಹಣವನ್ನ ಕಣ್ತುಂಬಿಕೊಳ್ಳಬೇಕಾದರೆ ಟೆಲಿಸ್ಕೋಪ್ ಅಲ್ಲಿ ವೀಕ್ಷಿಸಬಹುದಾಗಿದೆ. ಅಲ್ಲದೆ ಜನಪ್ರಿಯ YouTube ಚಾನಲ್‌ಗಳ ಲೈವ್‌ ಕಾರ್ಯಕ್ರಮಗಳಲ್ಲಿಯೂ ಸಹ ನೋಡಬಹುದಾಗಿದೆ. ಇನ್ನು ನಾಸಾದ ಮಾಹಿತಿಯ ಪ್ರಕಾರ, ದಕ್ಷಿಣ ಅಮೆರಿಕ, ಪಶ್ಚಿಮ ಆಫ್ರಿಕಾ ಮತ್ತು ಯುರೋಪಿನ ಪೂರ್ವ ಕರಾವಳಿಯಲ್ಲಿ ಮೂನ್‌ರೈಸ್‌ನಲ್ಲಿ ವಾಸಿಸುವ ಜನರಿಗೆ ಮತ್ತು ಜಪಾನ್ ಮತ್ತು ನ್ಯೂಜಿಲೆಂಡ್‌ನ ಮೂನ್‌ಸೆಟ್‌ನಲ್ಲಿ ಜನರಿಗೆ ಗ್ರಹಣ ಗೋಚರಿಸುತ್ತದೆ.

Best Mobiles in India

English summary
A penumbral lunar eclipse can also be mistaken as a full Moon, however, this time the eclipse and the full moon are coinciding.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X