Home
ಸುದ್ದಿಜಾಲ

Google ಮೀಟ್ ಮೂಲಕ ವೀಡಿಯೊ ಕಾನ್ಪರೆನ್ಸ್‌ ಅನ್ನು ಲೈವ್ ಸ್ಟ್ರೀಮ್ ಮಾಡುವುದು ಹೇಗೆ?

ಸರ್ಚ್‌ ಇಂಜಿನ್‌ ದೈತ್ಯ ವೀಡಿಯೋ ಸ್ಟ್ರೀಮಿಂಗ್ ಆಪ್‌ ಗೂಗಲ್‌ ಮೀಟ್‌ ಅನ್ನು ಪರಿಚಯಿಸಿರೋದು ನಿಮಗೆಲ್ಲಾ ತಿಳಿದೆ ಇದೆ. ಜಾಗತಿಕವಾಗಿ ಕೊರೋನಾ ಸಾಂಕ್ರಾಮಿಕ ವೈರಸ್‌ ಹರಡಿದ ನಂತರ ವೀಡಿಯೋ ಸ್ಟ್ರೀಮಿಂಗ್‌ ಆಪ್‌ಗಲಿಗೆ ಜನಪ್ರಿಯತೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಹಲವು ಹೊಸ ವಿಡಿಯೋ ಸ್ಟ್ರೀಮಿಂಗ್‌ ಆಪ್‌ ಗಳನ್ನ ಪರಿಚಯಿಸಿವೆ. ಇದರಲ್ಲಿ ಗೂಗಲ್‌ ಮೀಟ್‌ ವೀಡಿಯೋ ಆಪ್‌ಕೂಡ ಒಂದಾಗಿದೆ. ಸದ್ಯ ಬಳಕೆದಾರರ ವೀಡಿಯೋ ಸ್ಟ್ರೀಮಿಂಗ್‌ ಆಪ್‌ಗಳಲ್ಲಿ ಗೂಗಲ್‌ ಮೀಟ್‌ ಕೂಡ ಒಂದಾಗಿದೆ. ಹಾಗಾದ್ರೆ ಗೂಗಲ್‌ ಮೀಟ್‌ ಬಳಸಿ ವೀಡಿಯೊ ಮೀಟಿಂಗ್‌ ಅನ್ನು ಲೈವ್ ಸ್ಟ್ರೀಮ್ ಮಾಡುವುದು ಹೇಗೆ ಅನ್ನೊದನ್ನ ತಿಳಿಯೋಣ ಬನ್ನಿರಿ.

ಗೂಗಲ್‌

ಹೌದು, ಗೂಗಲ್‌ ಸಂಸ್ಥೆ ಪರಿಚಯಿಸಿರುವ ಗೂಗಲ್‌ ಮೀಟ್‌ ವೀಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ ಬಳಕೆದಾರರ ನೆಚ್ಚಿನ ಆಪ್‌ ಆಗಿ ಗುರುತಿಸಿಕೊಂಡಿದೆ. ಸದ್ಯ ಗೂಗಲ್‌ ತನ್ನ ಉದ್ಯಮ-ಕೇಂದ್ರಿತ ಮೀಟ್ ಅನ್ನು ಎಲ್ಲಾ ಬಳಕೆದಾರರಿಗೆ ಉಚಿತವಾಗಿ ದೊರೆಯುವಂತೆ ಮಾಡಿದೆ. ಇದೇ ಕಾರಣಕ್ಕೆ ಗೂಗಲ್ ತನ್ನ ಗೂಗಲ್‌ ಮೀಟ್‌ನಲ್ಲಿ ಅನೇಕ ಹೊಸ ಆಪ್ಡೇಟ್‌ಗಳನ್ನ ಮಾಡುತ್ತಲೇ ಬಂದಿದೆ. ಅಲ್ಲದೆ ಹೊಸ ಹೊಸ ಫೀಚರ್ಸ್‌ಗಳನ್ನ ಪರಿಚಯಿಸುತ್ತಿದೆ. ಸದ್ಯ ತನ್ನ ಸೂಟ್ ಬಳಕೆದಾರರಿಗಾಗಿ ಮೀಟ್ಸ್ ಇನ್ ಜಿಮೇಲ್‌ನ ಆಳವಾದ ಏಕೀಕರಣ ಮತ್ತು ಉಚಿತ ಆವೃತ್ತಿಯನ್ನು ನೀಡಿದೆ. ಇದೇ ಕಾರಣಕ್ಕೆ ವೀಡಿಯೊ ಸಭೆಯನ್ನು ಲೈವ್ ಸ್ಟ್ರೀಮ್ ಮಾಡುವುದು ಸುಲಭವಾಗಿದೆ. ಹಾಗಾದ್ರೆ ವೀಡಿಯೊ ಸಭೆಯನ್ನು ಲೈವ್ ಸ್ಟ್ರೀಮ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ ಮೀಟ್‌ ಅನ್ನು ಬಳಸಿ ವೀಡಿಯೊ ಸಭೆಯನ್ನು ಲೈವ್ ಸ್ಟ್ರೀಮ್ ಮಾಡುವುದರಿಂದ ಬಳಕೆದಾರರು ತಮ್ಮ ಸಭೆಯಲ್ಲಿ ಉತ್ತಮವಾಗಿ ಭಾಗವಹಿಸಲು ಸಾಧ್ಯವಾಗಲಿದೆ. ಇದೇ ಕಾರಣಕ್ಕೆ ಎಲ್ಲಾ ಬಳಕೆದಾರರು ಗೂಗಲ್‌ ಮೀಟ್‌ ಬಳಸಿ ವೀಡಿಯೊ ಸಭೆಯನ್ನು ಲೈವ್ ಸ್ಟ್ರೀಮ್ ಮಾಡುವುದಕ್ಕೆ ಪ್ರಯತ್ನಿಸುತ್ತಾರೆ. ಅಲ್ಲದೆ ಬಳಕೆದಾರರ ವರ್ಚುವಲ್ ಮೀಟಿಂಗ್‌ಗಳನ್ನು ಲೈವ್ ಸ್ಟ್ರೀಮ್ ಮಾಡುವ ಸಾಮರ್ಥ್ಯ Google ಮೀಟ್‌ನ ಪ್ರಮುಖ ಫೀಚರ್ಸ್‌ಗಳಲ್ಲಿ ಒಂದಾಗಿದೆ. ಈ ಫೀಚರ್ಸ್‌ ಅನ್ನು ಕ್ರಿಯಾತ್ಮಕತೆಯ ವೆಬ್‌ನಾರ್‌ಗಳು, ಕಾರ್ಯಾಗಾರಗಳು ಮತ್ತು ಇತರ ಹಲವು ಉದ್ದೇಶಗಳಿಗಾಗಿ ಬಳಸಬಹುದಾಗಿದೆ.

ಗೂಗಲ್‌

ಸದ್ಯ ಗೂಗಲ್‌ ಮೀಟ್‌ ಬಳಸಿ ಜಿ ಸೂಟ್ ಎಂಟರ್‌ಪ್ರೈಸೆಸ್, ಶಿಕ್ಷಣಕ್ಕಾಗಿ ಜಿ ಸೂಟ್ ಎಂಟರ್ಪ್ರೈಸ್ ಮತ್ತು ಜಿ ಸೂಟ್ ಎಂಟರ್‌ಪ್ರೈಸ್ ಎಸೆನ್ಷಿಯಲ್ಸ್ ಬಳಕೆದಾರರೊಂದಿಗೆ ಇಂಟರ್‌ ಲೈವ್ ಸ್ಟ್ರೀಮಿಂಗ್ ಅನ್ನು ಮಾಡಬಹುದಾಗಿದೆ. ಅದರಲ್ಲಿ ನೀವು ಯಾವುದಾದರೂ ಒಂದಕ್ಕೆ ಚಂದಾದಾರರು ಆಗಿರಬೇಖಾಗುತ್ತದೆ. ಇದರಿಂದ ಗೂಗಲ್‌ ಮೀಟ್‌ ಲೈವ್ ಸ್ಟ್ರೀಮ್‌ಗೆ ಹೋಗಬಹುದು. ಇನ್ನು ನೀವು Google ಮೀಟ್ ಅನ್ನು ಬಳಸಿ ವೀಡಿಯೊ ಸಭೆಯನ್ನು ಲೈವ್ ಸ್ಟ್ರೀಮ್ ಮಾಡುವುದಕ್ಕೆ ಕೆಲವು ಹಂತಗಳಿದ್ದು, ಆ ಹಂತಗಳನ್ನ ಇಲ್ಲಿ ಹಂತಹಂತವಾಗಿ ತಿಳಿಯೋಣ ಬನ್ನಿರಿ.

ಗೂಗಲ್‌ ಮೀಟ್‌ನಲ್ಲಿ ವೀಡಿಯೊ ಸಭೆಯನ್ನು ಲೈವ್ ಸ್ಟ್ರೀಮ್ ಮಾಡುವುದು ಹೇಗೆ

ಗೂಗಲ್‌ ಮೀಟ್‌ನಲ್ಲಿ ವೀಡಿಯೊ ಸಭೆಯನ್ನು ಲೈವ್ ಸ್ಟ್ರೀಮ್ ಮಾಡುವುದು ಹೇಗೆ

ಹಂತ 1: ನಿಮ್ಮ ಬ್ರೌಸರ್‌ನಲ್ಲಿ Google ಕ್ಯಾಲೆಂಡರ್ ತೆರೆಯಿರಿ.

ಹಂತ 2: ಪ್ಲಸ್ ಐಕಾನ್ ಮೇಲೆ ಟ್ಯಾಪ್ ಮಾಡಿ> select more options

ಹಂತ 3: ಈವೆಂಟ್‌ನ ಮೂಲ ಮಾಹಿತಿಯನ್ನು ನಮೂದಿಸಿ.

ಹಂತ 4: ಸಭೆಯಲ್ಲಿ ಭಾಗವಹಿಸುವ ಅತಿಥಿಗಳನ್ನು ಸೇರಿಸಿ.

ಹಂತ 5: ಗೂಗಲ್ ಮೀಟ್‌ನೊಂದಿಗೆ ಜಾಯಿನ್‌ ಆಗಿ, ಲೈವ್ ಸ್ಟ್ರೀಮ್ ಸೇರಿಸಲು ಕೆಳಗಿನ down arrow ಮೇಲೆ ಕ್ಲಿಕ್ ಮಾಡಿ.

ಹಂತ 6: ಇನ್ನು ವೀಡಿಯೋ ಸ್ಟ್ರೀಮಿಂಗ್‌ ಅನ್ನು ಕೇವಲ ವೀಕ್ಷಣೆ ಮಾಡುವುದಕ್ಕಾದರೆ ಲೈವ್ ಸ್ಟ್ರೀಮ್ URL ಅನ್ನು ಹಂಚಿಕೊಳ್ಳಿ. 100,000 ದಷ್ಟು ಅತಿಥಿಗಳನ್ನು ಮಾತ್ರ view-only ಅಲ್ಲಿ ಸೇರಿಸಲು Google ಬಳಕೆದಾರರನ್ನು ಅನುಮತಿಸುತ್ತದೆ.
ಹಂತ 7: ಆದರೆ view-only ಅತಿಥಿಗಳಿಗಾಗಿ ನೀವು ಹೆಚ್ಚುವರಿ ಈವೆಂಟ್ ಅನ್ನು ಸಹ ರಚಿಸಬಹುದು.

ಹಂತ 8: ನಂತರ live cast ಸ್ಟ್ರೀಮಿಂಗ್ ಅನ್ನು ಟ್ಯಾಪ್ ಮಾಡಿ.

Best Mobiles in India

English summary
If you use Google Meet for work or school, Google allows you to add up to up to 100,000 people for a view-only live streaming.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+