SBI ATMನಲ್ಲಿ OTP ಸೇವೆ ಮೂಲಕ ಹಣವನ್ನು ವಿಥ್‌ ಡ್ರಾ ಮಾಡುವುದು ಹೇಗೆ?

|

ಎಟಿಎಂ ಸೇವೆಗಳ ಸುರಕ್ಷತೆಯನ್ನು ಹೆಚ್ಚಿಸಲು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ಹಲವು ಮಾದರಿಯ ಕ್ರಮಗಳನ್ನ ಕೈ ಗೊಂಡಿದೆ. ನಿಮಗೆಲ್ಲಾ ತಿಳಿದಿರುವಂತೆ ಗ್ರಾಹಕರ ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಂಡು ಒಟಿಪಿ ಆಧಾರಿತ ಕ್ಯಾಶ್‌ ವಿಥ್‌ ಡ್ರಾ ಸೇವೆಯನ್ನು ಜನವರಿ 1, 2020 ರಿಂದ ಪರಿಚಯಿಸಿದೆ. ಇದರ ಅನ್ವಯ ಗ್ರಾಹಕರು ಎಟಿಎಂ ನಲ್ಲಿ ಒಟಿಪಿ ಆಧಾರಿತ ಸೇವೆ ಮೂಲಕ 10,000 ರೂ.ಗಳ ತನಕ ಹಣವನ್ನ ವಿಥ್‌ ಡ್ರಾ ಮಾಡಬಹುದಾಗಿದೆ. ಆದರೂ ಈ ಸೇವೆ ಬೆಳಿಗ್ಗೆ 8 ರಿಂದ ಸಂಜೆ 8 ರವರೆಗೆ ಮಾತ್ರ ಲಭ್ಯವಿತ್ತು. ಆದರೆ ಇದೀಗ ಈ ಸೇವೆಯ ಮೂಲಕ ದಿನವಿಡೀ ಬಳಕೆದಾರರಿಗೆ ಹಣವನ್ನು ಹಿಂಪಡೆಯಲು ಅವಕಾಶ ನೀಡುವುದಾಗಿ ಎಸ್‌ಬಿಐ ಘೋಷಿಸಿದೆ.

SBI

ಹೌದು, SBI ಬ್ಯಾಂಕ್ ಗ್ರಾಹಕರು ATM ನಲ್ಲಿ ಹಣವನ್ನು ವಿಥ್‌ಡ್ರಾ ಮಾಡುವಾಗ ಮೊಬೈಲ್‌ಗೆ ಬರುವ ಒಟಿಪಿ ನಂಬರ್‌ ನಮೂದಿಸಿದ ನಂತರ ಹಣ ಡ್ರಾ ಮಾಡುವ ಸೇವೆಯನ್ನು ಪರಿಚಯಿಸಿದೆ. ಇದರಿಂದ ಬ್ಯಾಂಕ್‌ ಖಾತೆಯೊಂದಿಗೆ ಸಂಯೋಜಿಸಿದ ಮೊಬೈಲ್‌ ಇದ್ದರೆ ಮಾತ್ರ ATMನಲ್ಲಿ ಹಣ ಡ್ರಾ ಮಾಡಲು ಸಾಧ್ಯವಾಗಲಿದೆ. ಹೀಗಾಗಿ ಗ್ರಾಹಕರ ATM ಕಾರ್ಡ್‌ ಅನ್ನು ಇತರರು ದುರ್ಬಳಕೆ ಮಾಡುವುದನ್ನು ತಡೆಯಬಹುದಾಗಿದೆ. ಸದ್ಯ ಈ ಸೇವೆ ಇದೀಗ ದಿನವೀಡಿ ಲಭ್ಯವಿದೆ. ಹಾಗಾದ್ರೆ SBI ಬ್ಯಾಂಕ್‌ಗಳ ATMನಲ್ಲಿ OTP ಮೂಲಕ ಹಣವನ್ನು ಡ್ರಾ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

SBI

ಬಳಕೆದಾರರು SBI ಬ್ಯಾಂಕ್‌ ATMನಲ್ಲಿ 10,000ರೂ ವಿಥ್‌ ಡ್ರಾ ಮಾಡಬೇಕಾದರೆ ನಿಮ್ಮ ಮೊಬೈಲ್ ಅನ್ನು ಡೆಬಿಟ್ ಕಾರ್ಡ್ ಜೊತೆಗೆ ಇಟ್ಟುಕೊಳ್ಳಬೇಕು. ನೀವು ATM ಗೇ ಹೋಗಿ ನಿಮ್ಮ ಡೆಬಿಟ್‌ ಕಾರ್ಡ್‌ ಸ್ವೈಪ್‌ ಮಾಡಿದರೆ ನಿಮ್ಮ ಮೊಬೈಲ್‌ಗೆ OTPಯನ್ನು ಕಳುಹಿಸಲಾಗುತ್ತದೆ. ಆದ್ದರಿಂದ, ನಿಮ್ಮ ಪ್ರಸ್ತುತ ಮೊಬೈಲ್ ಸಂಖ್ಯೆಯನ್ನು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ನವೀಕರಿಸಬೇಕಾಗಿದೆ. ಸದ್ಯ ಒಟಿಪಿ ಸೇವೆಯ ಮೂಲಕ ಹಣವನ್ನು ಹಿಂಪಡೆಯುವುದು ಹೇಗೆ ಎಂಬುದನ್ನು ಹಂತಹಂತವಾಗಿ ತಿಳಿಯೋಣ ಬನ್ನಿರಿ.

SBI ಬ್ಯಾಂಕ್‌ನಲ್ಲಿ OTP ಸೇವೆಯ ಮೂಲಕ ಹಣವನ್ನು ವಿಥ್‌ ಡ್ರಾ ಮಾಡುವುದು ಹೇಗೆ?

SBI ಬ್ಯಾಂಕ್‌ನಲ್ಲಿ OTP ಸೇವೆಯ ಮೂಲಕ ಹಣವನ್ನು ವಿಥ್‌ ಡ್ರಾ ಮಾಡುವುದು ಹೇಗೆ?

ಹಂತ 1: ಡೆಬಿಟ್ ಕಾರ್ಡ್ ಸ್ವೈಪ್‌ ಮಾಡಿದ ನಂತರ, ನೀವು ಭಾಷೆಯನ್ನು ಆರಿಸಬೇಕಾಗುತ್ತದೆ ಮತ್ತು ನಂತರ 'ಬ್ಯಾಂಕಿಂಗ್ ಆಯ್ಕೆ' ಆಯ್ಕೆಮಾಡಿ.

ಹಂತ 2: ನಂತರ ನಿಮ್ಮ ಪಿನ್ ಸಂಖ್ಯೆಯನ್ನು ನಮೂದಿಸಿ ಮತ್ತು ನೀವು ಹಣವನ್ನು ಹಿಂತೆಗೆದುಕೊಳ್ಳುವ ಆಯ್ಕೆಯನ್ನು ಆರಿಸಿದ ನಂತರ ಮತ್ತು ನಿಮ್ಮ ಅಕೌಂಟ್‌ ಟೈಪ್‌ ಅನ್ನು ಆರಿಸಿ.
ಹಂತ 3: ನಂತರ ಎಟಿಎಂ ಒಟಿಪಿಯನ್ನು ಕೇಳಿದ ನಂತರ ನೀವು ವಿಥ್‌ ಡ್ರಾ ಮಾಡುವ ಹಣದ ಮೊತ್ತವನ್ನು ಎಂಟ್ರಿ ಮಾಡಿ.
ಹಂತ 4: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು OTPಯನ್ನು ಪಡೆದ ನಂತರ , ನಿಮ್ಮ OTPಯನ್ನು ನಮೂದಿಸಿದರೆ ನೀವು ವಿಥ್‌ ಡ್ರಾ ಮಾಡಲು ಬಯಸಿದ ಹಣವನ್ನು ನೀವು ಡ್ರಾ ಮಾಡಬಹುದಾಗಿದೆ.

SBI

ಇನ್ನು SBIನ OTP ಆಧಾರಿತ ವಿಥ್‌ ಡ್ರಾ ಸೇವೆಯು 10,000ರೂ ಡ್ರಾ ಮಾಡುವಾಗ ಮಾತ್ರ ಲಭ್ಯವಾಗಲಿದೆ. ಇದರಿಂದ ಬಳಕೆದಾರರನ್ನು ಅನಧಿಕೃತ ವಹಿವಾಟಿನಿಂದ ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್‌ಬಿಐ ಹೇಳಿಕೊಂಡಿದೆ. ವಿಶೇಷವೆಂದರೆ, ಈ ಸೇವೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗಳಲ್ಲಿ ಮಾತ್ರ ಲಭ್ಯವಿದೆ. ಸದ್ಯ ಒಟಿಪಿ ಸೇವೆಯನ್ನು ಬಳಸಿಕೊಂಡು ನೀವು ಈಗ ದಿನದ 24 ಗಂಟೆಗಳ ಕಾಲ ನಿಮ್ಮ ಹಣವನ್ನು ಪಡೆಯಬಹುದು. ಆದರೆ ಈ ಸೇವೆ SBI ಎಟಿಎಂ ಗಳಲ್ಲಿ ಮಾತ್ರ ಲಭ್ಯವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಎಟಿಎಂ ಗಳಲ್ಲಿ ಲಭ್ಯವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

Best Mobiles in India

English summary
State Bank of India introduced the OTP-based cash withdrawal of above Rs. 10,000 on January 1, 2020.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X