Home
ಸುದ್ದಿಜಾಲ

EPFO: ಆನ್‌ಲೈನ್‌ ಮೂಲಕವೇ ನಿಮ್ಮ PF ಹಣವನ್ನು ವಾಪಾಸ್‌ ಪಡೆಯಲು ಹೀಗೆ ಮಾಡಿ!

ಕಾರ್ಮಿಕರ ಪಾಲಿಗೆ ಭವಿಷ್ಯ ನಿಧಿ (PF) ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕ ನೆರವನ್ನು ನೀಡಲಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ನೌಕರರಿಗೆ ಹಲವು ಅನುಕೂಲಕರ ಆನ್‌ಲೈನ್‌ ಸೇವೆಗಳನ್ನು ನೀಡುತ್ತಾ ಬಂದಿದೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ PF ಹಣವನ್ನು ವಿಥ್‌ ಡ್ರಾ ಮಾಡಿಕೊಳ್ಳುವುದು ಸುಲಭವಾಗಿದ್ದು, ಆನ್‌ಲೈನ್‌ನಲ್ಲಿಯೇ PF ಹಣ ಪಡೆದುಕೊಳ್ಳಬಹುದಾಗಿದೆ.

ಹೌದು, ಹೆಚ್ಚಿನ ಉದ್ಯೋಗಿಗಳು ಆನ್‌ಲೈನ್‌ ಮೂಲಕವೇ PF ಹಣವನ್ನು ಪಡೆದುಕೊಳ್ಳುವುದು ಸಾಮಾನ್ಯವಾಗಿ ಹೋಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಆನ್‌ಲೈನ್‌ ಮೂಲಕ PF ಡ್ರಾ ಮಾಡಲು ಅವಕಾಶ ನೀಡಿದ ನಂತರ PF ಕಚೇರಿಯಲ್ಲಿ ಸರದಿ ಸಾಲು ನಿಲ್ಲುವವರ ಸಂಖ್ಯೆ ಕಡಿಮೆಯಾಗಿದೆ. ಹಾಗಾದ್ರೆ ಮನೆಯಲ್ಲಿಯೇ ಕುಳಿತು ಆನ್‌ಲೈನ್‌ ಮೂಲಕ ನಿಮ್ಮ PF ಹಣವನ್ನು ಪಡೆದುಕೊಳ್ಳುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

EPFO: ಆನ್‌ಲೈನ್‌ ಮೂಲಕವೇ ನಿಮ್ಮ PF ಹಣವನ್ನು ವಾಪಾಸ್‌ ಪಡೆಯಲು ಹೀಗೆ ಮಾಡಿ!

PF ಹಣವನ್ನು ಆನ್‌ಲೈನ್‌ ಮೂಲಕವೇ ವಾಪಾಸು ಪಡೆಯುವುದಕ್ಕೆ ಅವಕಾಶವಿದೆ. ಇದಕ್ಕಾಗಿ ನೀವು ಕೆಲವು ಅಂಶಗಳನ್ನು ಅನುಸರಿಸಬೇಕಾಗುತ್ತದೆ. ಅಂದರೆ ನೀವು ನಿಮ್ಮ ಸಂಪೂರ್ಣ PF ಹಣವನ್ನು ಐಪಿಎಫ್ ನಲ್ಲಿ ಪಡೆಯಲು ಇಚ್ಛಿಸಿದರೆ ನೀವು ನಿರುದ್ಯೋಗಿ ಆಗಿ ಇಂತಿಷ್ಟು ದಿನಗಳು ಕಳೆದಿರಬೇಕು ಎನ್ನುವ ನಿಯಮವಿದೆ. ಇದರ ನಡುವೆಯು ವೈದ್ಯಕೀಯ ಅನಾರೋಗ್ಯ, ಮದುವೆ, ವಿಪತ್ತು ಮತ್ತು ಮನೆಯ ನವೀಕರಣದಂತಹ ಕೆಲವು ಸಂದರ್ಭಗಳಲ್ಲಿ PF ಹಣ ಹಿಂತೆಗೆದುಕೊಳ್ಳಲು EPFO ಅವಕಾಶ ನೀಡಿದೆ.

ಆನ್‌ಲೈನ್‌ ಮೂಲಕ ನಿಮ್ಮ PF ಹಣವನ್ನು ವಾಪಾಸ್‌ ಪಡೆಯಲು ಹೀಗೆ ಮಾಡಿರಿ!
* ಮೊದಲಿಗೆ UAN ಮೆಂಬರ್‌ ಇ-ಸೇವಾ ಪೋರ್ಟಲ್‌ಗೆ ಭೇಟಿ ನೀಡಿರಿ.
* ನಂತರ ನಿಮ್ಮ UAN ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ
* ಇದೀಗ ಕಂಡುಬರುವ ಕ್ಯಾಪ್ಚಾವನ್ನು ನಮೂದಿಸಿರಿ ಮತ್ತು ಸೈನ್ ಬಟನ್ ಕ್ಲಿಕ್ ಮಾಡಿ
* ಇದಾದ ನಂತರ ಮೇಲಿನ ಮೆನುವಿನಿಂದ ಆನ್‌ಲೈನ್ ಸೇವೆಗಳ ಮೇಲೆ ಟ್ಯಾಪ್‌ ಮಾಡಿ
* ಇದೀಗ CLAIM (ಫಾರ್ಮ್-31,19,10C & 10D) ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು
* ಇದಾದ ಮೇಲೆ ಆನ್‌ಲೈನ್ ಕ್ಲೈಮ್ ಫಾರ್ಮ್‌ನಲ್ಲಿ ನಿಮ್ಮ ವಿವರಗಳನ್ನು ಪರಿಶೀಲಿಸಿ.
* ನಂತರ, ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿರಿ.
* ಇದೀಗ ವೆರಿಫೈ ಬಟನ್ ಕ್ಲಿಕ್ ಮಾಡಬೇಕು ಹಾಗೂ ಪ್ರಮಾಣಪತ್ರದಲ್ಲಿ ಹೌದು ಬಟನ್ ಟ್ಯಾಪ್‌ ಮಾಡಬೇಕಾಗುತ್ತದೆ.
* ಆನ್‌ಲೈನ್ ಕ್ಲೈಮ್‌ ಮಾಡುವುದಕ್ಕಾಗಿ ಕಂಟಿನ್ಯೂ ಕ್ಲಿಕ್ ಮಾಡಿರಿ
* ನಂತರ ಪಿಎಫ್ ಹಿಂಪಡೆಯಲು ಅರ್ಜಿ ಸಲ್ಲಿಸಿದ್ದೀರಾ ಎಂದು ಕ್ಲೈಮ್ ಫಾರ್ಮ್ ನಮೂದಿಸಬೇಕು
* ಇದಾದ ನಂತರ ನಿಮಗೆ ಬೇಕಾದ ಪಿಎಫ್‌ ಮೊತ್ತ ಹಾಗೂ ಚೆಕ್‌ನ ಸ್ಕ್ಯಾನ್‌ ಪ್ರತಿಯನ್ನು ಅಪ್‌ಲೋಡ್‌ ಮಾಡಿರಿ
* ಯಾವ ಅಗತ್ಯಕ್ಕಾಗಿ ನೀವು ಪಿಎಫ್ ಕ್ಲೀಮ್ ಮಾಡುತ್ತೀದ್ದಿರಾ ಅನ್ನೋದನ್ನ ನಮೂದಿಸಲು ಕೆಳಗಡೆ ನೀಡಿರುವ ಉದ್ದೇಶಗಳನ್ನು ಆಯ್ಕೆ ಮಾಡಬೇಕಾಗುತ್ತದೆ.
* ನಂತರ ಟೆಕ್ಸ್ಟ್‌ ಬಾಕ್ಸ್‌ನಲ್ಲಿ ಪಿಎಫ್‌ ಮೊತ್ತ ಹಾಗೂ ನೌಕರರ ವಿಳಾಸವನ್ನುನ ನಮೂದಿಸಬೇಕಾಗುತ್ತದೆ.
* ಇದೀಗ ಪ್ರಮಾಣಪತ್ರದ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ ಮತ್ತು ನಿಮ್ಮ ರಿಕ್ವೆಸ್ಟ್‌ ಅನ್ನು ಸಬ್ಮಿಟ್‌ ಮಾಡಬೇಕಾಗುತ್ತದೆ.

EPFO: ಆನ್‌ಲೈನ್‌ ಮೂಲಕವೇ ನಿಮ್ಮ PF ಹಣವನ್ನು ವಾಪಾಸ್‌ ಪಡೆಯಲು ಹೀಗೆ ಮಾಡಿ!

PF ಬ್ಯಾಲೆನ್ಸ್ ಚೆಕ್ ಮಾಡಲು ಈ ಕ್ರಮಗಳನ್ನು ಅನುಸರಿಸಿರಿ
* ಮೊದಲಿಗೆ ಅಧಿಕೃತ EPFO ವೆಬ್‌ಸೈಟ್‌ epfindia.gov.in ಗೆ ಭೇಟಿ ನೀಡಿ
* ಇದರಲ್ಲಿ ಡ್ಯಾಶ್‌ಬೋರ್ಡ್‌ನ ಮೇಲ್ಭಾಗದಲ್ಲಿ ಉಲ್ಲೇಖಿಸಲಾದ 'ಸರ್ವೀಸ್‌' ವಿಭಾಗದ ಮೇಲೆ ಕ್ಲಿಕ್ ಮಾಡಿ.
* ನಂತರ 'ಉದ್ಯೋಗಿಗಳಿಗಾಗಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ಇದರಲ್ಲಿ ಹೊಸ ಪೇಜ್ ತೆರೆಯಲಿದೆ, 'ಸರ್ವೀಸ್‌' ಆಯ್ಕೆಯಲ್ಲಿ ಕಾಣಿಸುವ 'ಮೆಂಬರ್‌ ಪಾಸ್‌ಬುಕ್' ಆಯ್ಕೆಯ ಮೇಲೆ ಟ್ಯಾಪ್‌ ಮಾಡಿ.
* 'ಮೆಂಬರ್‌ ಪಾಸ್‌ಬುಕ್' ಅನ್ನು ಆಯ್ಕೆ ಮಾಡಿದ ನಂತರ, ಚಂದಾದಾರರನ್ನು ಲಾಗಿನ್ ಪೇಜ್‌ಗೆ ನಿರ್ದೇಶಿಸಲಾಗುತ್ತದೆ.
* ಇದೀಗ ಪಾಸ್‌ವರ್ಡ್‌ನೊಂದಿಗೆ UAN ವಿವರಗಳನ್ನು ನಮೂದಿಸಿ ಮತ್ತು ಕ್ಯಾಪ್ಚಾ ಕೋಡ್‌ಗೆ ಉತ್ತರಿಸಿ.
* ನಂತರ 'ಲಾಗಿನ್' ಕ್ಲಿಕ್ ಮಾಡಿ.
* ಇದೀಗ ನಿಮ್ಮ ಪಿಎಫ್‌ ಹಣದ ವಿವರಗಳನ್ನು ವೀಕ್ಷಿಸಬಹುದಾಗಿದೆ.

Best Mobiles in India

English summary
How To Withdraw PF Money From Your EPF Account Online: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+