ನಿಮ್ಮ ಫೋನ್ ನಂಬರ್‌ಗೆ ಅಪರಿಚಿತ ಸಂಖ್ಯೆಯ ಕರೆಗಳು ಬರದಂತೆ ತಡೆಗಟ್ಟಲು ಹೀಗೆ ಮಾಡಿ!
ಇಂದಿನ ದಿನಗಳಲ್ಲಿ ಅಪರಿಚಿತ ಸಂಖ್ಯೆಗಳಿಂದ ಬರುವ ಕಾಲ್‌ಗಳಿಂದ ಉಂಟಾಗುವ ಕಿರಕಿರಿ ಅಷ್ಟಿಷ್ಟಲ್ಲ. ಅದರಲ್ಲೂ ಸ್ಪ್ಯಾಮಾ್ ಮತ್ತು ಮಾರ್ಕೆಟಿಂಗ್ ಕರೆಗಳಿಂದ ಜನರು ಕಿರಿಕಿರಿ ಅನುಭವಿಸುವುದು ಸಾಮಾನ್ಯವಾಗಿಬಿಟ್ಟಿದೆ. ಇಂತಹ ಸಂಖ್ಯೆಗಳನ್ನು ನೀವು ಬ್ಲಾಕ್ ಮಾಡಿದ್ದರೂ ಕೂಡ ಮತ್ತೆ ಮತ್ತೆ ಬೇರೆ ಬೇರೆ ಸಂಖ್ಯೆಯಿಂದ ಮಾರ್ಕೆಟಿಂಗ್ ಕರೆಗಳು ಬರುತ್ತಲೇ ಇರುತ್ತವೆ. ಇಂತಹ ಸನ್ನಿವೇಶದಲ್ಲಿ ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳನ್ನು ತಡೆಗಟ್ಟುವುದಕ್ಕೆ ಕೆಲವು ಟ್ರಿಕ್ಸ್‌ಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ.

ಹೌದು, ಸ್ಪ್ಯಾಮ್ ಕರೆಗಳನ್ನು ತಪ್ಪಿಸಲು ಕೆಲವು ಅಂಶಗಳನ್ನು ಅನುಸರಿಸಬೇಕಾದ ಅಗತ್ಯವಿದೆ. ಇದರ ಮೂಲಕ ಸ್ಪ್ಯಾಮ್ ಕರೆಗಳು ಹಾಗೂ ಮಾರ್ಕೆಟಿಂಗ್ ಕರೆಗಳನ್ನು ಬ್ಲಾಕ್ ಮಾಡಲು ಸಾಧ್ಯವಾಗಲಿದೆ. ಜೊತೆಗೆ ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳನ್ನು ತಪ್ಪಿಸಲು ಸಾಧ್ಯವಾಗಲಿದೆ. ಹಾಗಾದ್ರೆ ನೀವು ಸ್ಪ್ಯಾಮ್ ಕರೆಗಳನ್ನು ತಪ್ಪಿಸಲು ಅನುಸರಿಬೇಕಾದ ಮಾರ್ಗಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ನ್ಯಾಷನಲ್ ಡೋಂಟ್ ಕಾಲ್ ರಿಜಿಸ್ಟ್ರಿಯಲ್ಲಿ ನೋಂದಾಯಿಸಿ
ಸ್ಪ್ಯಾಮ್ ಮತ್ತು ಮಾರ್ಕೆಟಿಂಗ್ ಕಾಲ್‌ಗಳನ್ನು ತಡೆಗಟ್ಟುವುದಕ್ಕೆ ಇರುವ ವೇದಿಕೆ ಎಂದರೆ ನ್ಯಾಷನಲ್ ಡೋಂಟ್ ಕಾಲ್ ರಿಜಿಸ್ಟಿ. ಇದನ್ನು ಟ್ರಾಯ್ (TRAI) ಪ್ರಾರಂಭಿಸಿದ್ದು, ನಿಮಗೆ ಅನಗತ್ಯ ಕರೆಗಳ ಕಿರಿಕಿರಿಯನ್ನು ತಪ್ಪಿಸಲಿದೆ. ಈ ಸೇವೆಯು DND ಸೇವೆಯನ್ನು ಆಕ್ಟಿವ್ ಮಾಡುವ ಮೂಲಕ ಟೆಲಿ ಮಾರ್ಕೆಟಿಂಗ್ ಕರೆಗಳಿಂದ ಮುಕ್ತಿ ನೀಡಲಿದೆ.

DND ಸೇವೆಯನ್ನು ಆಕ್ಟಿವ್ ಮಾಡಲು ಹೀಗೆ ಮಾಡಿ!
* ಮೊದಲಿಗೆ ನಿಮ್ಮ ಮೊಬೈಲ್‌ನಲ್ಲಿ 1909 ಸಂಖ್ಯೆಗೆ START ಎಂದು ಸಂದೇಶವನ್ನು ಕಳುಹಿಸಿ.
* ಸಂದೇಶವನ್ನು ಕಳುಹಿಸಿದ ನಂತರ ನಿಮ್ಮ ಸೇವಾ ಪೂರೈಕೆದಾರರು ನಿಮಗೆ ಕೆಲವು ವರ್ಗಗಳ ಆಯ್ಕೆಯನ್ನು ಕಳುಹಿಸುತ್ತಾರೆ (ಬ್ಯಾಂಕಿಂಗ್, ಆತಿಥ್ಯ ಮತ್ತು ಇತರರು ತಮ್ಮ ಕೋಡ್‌ನೊಂದಿಗೆ)
* ಇದರಲ್ಲಿ ನೀವು ಯಾವ ವರ್ಗದ ಕರೆಯನ್ನು ಬ್ಲಾಕ್ ಮಾಡಲು ಬಯಸುತ್ತೀರಾ ಅದನ್ನು ಆಯ್ಕೆ ಮಾಡಿರಿ.
* ನಿಮ್ಮ ರಿಕ್ವೆಸ್ಟ್ ಪೂರ್ಣಗೊಂಡ ನಂತರ DND ಸೇವೆಯು ಆಕ್ಟಿವ್ ಆಗಿರುವುದರ ದೃಢೀಕರಣ ಸಂದೇಶ ಬರಲಿದೆ.
* ದೃಢೀಕರಣ ಸಂದೇಶ ಬಂದ 24 ಗಂಟೆಗಳ ಒಳಗೆ DND ಸೇವೆಯು ಪ್ರಾರಂಭವಾಗುತ್ತದೆ.
ಆಂಡ್ರಾಯ್ಡ್ ಫೋನ್‌ನಲ್ಲಿ ಸ್ಪ್ಯಾಮ್ ಕರೆಗಳನ್ನು ಹಸ್ತಚಾಲಿತವಾಗಿ ಬ್ಲಾಕ್ ಮಾಡುವುದು ಹೇಗೆ?
* ಮೊದಲಿಗೆ ನಿಮ್ಮ ಫೋನ್‌ನಲ್ಲಿ ಕಾಲ್ ಟ್ಯಾಬ್ ತೆರೆಯಿರಿ.
* ಇದರಲ್ಲಿ ನೀವು ಬ್ಲಾಕ್ ಮಾಡುವ ಕಂಟ್ಯಾಕ್ಟ್ ಮೇಲೆ ಟ್ಯಾಪ್ ಮಾಡಿ
* ನಿಮಗೆ ಬ್ಲಾಕ್ ಮಾಡುವ ಆಯ್ಕೆಯು ಕಾಣಲಿದೆ ಅದನ್ನು ಟ್ಯಾಪ್ ಮಾಡಿದರೆ ನಂಬರ್ ಬ್ಲಾಕ್ ಆಗಲಿದೆ.
ಐಫೋನ್‌ನಲ್ಲಿ ಸ್ಪ್ಯಾಮ್ ಕರೆಗಳನ್ನು ಬ್ಲಾಕ್ ಮಾಡಲು ಹೀಗೆ ಮಾಡಿ
* ಫೋನ್ ಅಪ್ಲಿಕೇಶನ್ ತೆರೆಯಿರಿ> ಇತ್ತೀಚಿನದು> ಸ್ವೀಕರಿಸಿದ ಸ್ಪ್ಯಾಮ್ ಸಂಖ್ಯೆಯ ಬಲಭಾಗದಲ್ಲಿರುವ 'i' ಆಯ್ಕೆಯನ್ನು ಟ್ಯಾಪ್ ಮಾಡಿ.
* ನಂತರ ಆ ಸಂಖ್ಯೆಯನ್ನು ಬ್ಲಾಕ್ ಮಾಡಿ.

ನಿಮ್ಮ ಫೋನ್‌ನಲ್ಲಿ ಅಪರಿಚಿತ ಸಂಖ್ಯೆಯ ಕರೆಗಳನ್ನು ಫಿಲ್ಟರ್ ಮಾಡುವುದು ಹೇಗೆ?
* ನಿಮ್ಮ ಫೋನ್ ಅಪ್ಲಿಕೇಶನ್ ತೆರೆಯಿರಿ.
* ನಂತರ ಸರ್ಚ್ ಬಾರ್‌ನಲ್ಲಿ ಕಾಣುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ.
* ಇದೀಗ ಸೆಟ್ಟಿಂಗ್ಸ್ ಮೇಲೆ ಟ್ಯಾಪ್ ಮಾಡಿ.
* ನಂತರ ಕಾಲರ್ ಐಡಿ ಮತ್ತು ಸ್ಪ್ಯಾಮ್ ತೆರೆಯಿರಿ.
* ಇದರಲ್ಲಿ ಫಿಲ್ಟರ್ ಸ್ಪ್ಯಾಮ್ ಕರೆಗಳ ಆಯ್ಕೆಯನ್ನು ಟಾಗಲ್ ಮಾಡಿದರೆ ನಿಮಗೆ ಸ್ಪ್ಯಾಮ್ ಕರೆಗಳ ಸಂಖ್ಯೆಗಳು ಗೋಚರಿಸಲಿದೆ.
ಟ್ರೂ ಕಾಲರ್ ಮೂಲಕ ಸ್ಪ್ಯಾಮ್ ಕರೆಗಳನ್ನು ಬ್ಲಾಕ್ ಮಾಡುವುದು ಹೇಗೆ?
ನಿಮ್ಮ ಮೊಬೈಲ್ ನಂಬರ್‌ಗೆ ಬರುವ ಸ್ಪ್ಯಾಮ್ ಕರೆಗಳನ್ನು ಬ್ಲಾಕ್ ಮಾಡುವುದಕ್ಕೆ ಟ್ರೂ ಕಾಲರ್ ಅಪ್ಲಿಕೇಶನ್ ಕೂಡ ಅವಕಾಶ ನೀಡಿದೆ. ಇದಕ್ಕಾಗಿ ನೀವು ಟ್ರೂ ಕಾಲರ್ ಅಪ್ಲಿಕೇಶನ್ ತೆರೆಯಬೇಕು. ನಂತರ ನಿಮ್ಮ ಖಾತೆಯನ್ನು ಸೆಟಪ್ ಮಾಡಿ> ಸೆಟ್ಟಿಂಗ್‌ಗಳಿಗೆ ಹೋಗಿ> ಬ್ಲಾಕ್ ಮಾಡಿ> ಅಲ್ಲದೆ ನೀವು ಗುರುತಿಸುವ ಸಂಖ್ಯೆಗಳಿಂದ ಕರೆಗಳನ್ನು ಬ್ಲಾಕ್ ಮಾಡುವ ಡೀಫಾಲ್ಟ್ ಅಪ್ಲಿಕೇಶನ್‌ನಂತೆ ಟ್ರೂ ಕಾಲರ್ ಅನ್ನು ಆಕ್ಟಿವ್ ಮಾಡಬಹುದಾಗಿದೆ.


Click it and Unblock the Notifications








