Home
ಸುದ್ದಿಜಾಲ

ಸಂಗಾತಿ ಜೊತೆಯಿದ್ದಾಗ ಮೊಬೈಲ್ ಬಳಸಲೇಬಾರದಂತೆ!..ಶಾಕಿಂಗ್ ಕಾರಣ ಗೊತ್ತಾ?!

By Bhaskar N J

ಮೊಬೈಲ್ ಚಟದಿಂದ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ಎಂಬುದಕ್ಕೆ ಮತ್ತೊಂದು ಸಮೀಕ್ಷೆ ಬಹಿರಂಗಪಡಿಸಿದೆ. ನೂತನ ಸಮೀಕ್ಷೆಯೊಂದರ ಪ್ರಕಾರ, ಡೇಟಿಂಗ್ ಅಂತ ಹೋದ ಜೋಡಿಗಳು ಪರಸ್ಪರ ರೊಮ್ಯಾಂಟಿಕ್‌ ಮೂಡ್, ಮಾತುಕತೆ ಇತ್ಯಾದಿಗಳನ್ನು ಮಾಡುವ ಬದಲು ಮೊಬೈಲ್‌ನಲ್ಲೇ ಹೆಚ್ಚು ಹೊತ್ತು ಕಳೆಯುತ್ತಿದ್ದಾರೆ ಎಂಬ ವರದಿಯನ್ನು ಸಿದ್ದಪಡಿಸಿದೆ.

ಹೌದು, ಡೇಟಿಂಗ್ ಅಂತ ಹೋದ ಜೋಡಿಗಳನ್ನು ಇಂಟೆಲ್‌ ಸೆಕ್ಯುರಿಟಿ ಕಂಪನಿ ಸಮೀಕ್ಷೆ ನಡೆಸಿ ಈ ರೀತಿಯ ವರದಿ ತಯಾರಿಸಿದೆ. ಡೇಟಿಂಗ್ ಜೋಡಿಗಳಿಗೆ ಕೇಳಲಾದ ಪ್ರಶ್ನೆಗಳಿಗಲ್ಲಿ ಶೇ.60ರಷ್ಟು ಮಂದಿ ಡೇಟಿಂಗ್‌ ವೇಳೆ ಸ್ಮಾರ್ಟ್‌ ಫೋನ್‌ ಹೆಚ್ಚು ನೋಡಿದ್ದೇವೆ, ನಮ್ಮ ಸಂಬಂಧದ ಮಧ್ಯೆ ಸ್ಮಾರ್ಟ್‌ ಫೋನ್‌ ಬಂದಿದೆ ಎಂದು ಹೇಳಿದ್ದಾರೆ ಎಂದು ವರದಿಯಲ್ಲಿ ಹೇಳಿದೆ.

ಸಂಗಾತಿ ಜೊತೆಯಿದ್ದಾಗ ಮೊಬೈಲ್ ಬಳಸಲೇಬಾರದಂತೆ!..ಶಾಕಿಂಗ್ ಕಾರಣ ಗೊತ್ತಾ?!

ಸ್ಮಾರ್ಟ್‌ಫೋನ್‌ನಿಂದ ನಮ್ಮ ಡೇಟಿಂಗ್ ನೀರಸವಾಗಿದೆ. ಸಂಗಾತಿಯ ಜೊತೆಯಲ್ಲಿ ಸಣ್ಣಸಣ್ಣ ವಿಷಯಗಳನ್ನು ಸಹ ಎಂಜಾಯ್ ಮಾಡೋಕೇ ಆಗಿಲ್ಲ. ನಾವು ಎಲ್ಲೆಲ್ಲಿ ಓಡಾಡಿದೆವು, ಯಾವ ರೆಸ್ಟೋರೆಂಟ್‌ನಲ್ಲಿ ಏನು ತಿಂದಿದ್ದು?, ರೆಸ್ಟೋರೆಂಟ್ ಊಟ ಹೇಗಿತ್ತು ಎಂಬುದನ್ನು ನಾವು ನೆನಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಶೇ. 50 ಪರ್ಸೆಂಟ್ ಜೋಡಿಗಳು ಹೇಳಿಕೊಂಡಿವೆ.

ಸಂಗಾತಿ ಫೋನ್‌ನಲ್ಲೇಯೇ ಇದ್ದಿದ್ದರಿಂದ ನಮ್ಮ ಮೊದಲ ಡೇಟಿಂಗ್ ಅಷ್ಟೇನೂ ಚೆನ್ನಾಗಿರ್ಲಿಲ್ಲ ಅಂತ ಕಡ್ಡಿ ಮುರಿದಂತೆ ಶೇ.57ರಷ್ಟು ಮಂದಿ ಹೇಳಿದ್ದಾರೆ. ಸ್ಮಾರ್ಟ್‌ಪೋನಿನ ಬಳಕೆಯಿಂದಾಗಿ ಸಂಗಾತಿಗಳ ಮೇಲೆ ಪರಸ್ಪರ ನಂಬಿಕೆ ಕಳೆದುಕೊಳ್ಳುವಂತಹ ಆಲೋಚನೆಗಳು ಕೂಡ ಎದುರಾಗುತ್ತದೆ ಎಂದು ಸಮೀಕ್ಷೆಯಲ್ಲಿ ಶೇ. 70 ರಷ್ಟು ಸಂಗಾತಿಗಳು ಹೇಳಿದ್ದಾರೆ.

ಸಂಗಾತಿ ಜೊತೆಯಿದ್ದಾಗ ಮೊಬೈಲ್ ಬಳಸಲೇಬಾರದಂತೆ!..ಶಾಕಿಂಗ್ ಕಾರಣ ಗೊತ್ತಾ?!

ಸ್ಮಾರ್ಟ್‌ಫೋನ್ ಎಂಬುದು ಈಗಾಗಲೇ ನಮ್ಮ ಜೀವನದ ಮೇಲೆ ಹಲವು ಕಟ್ಟ ಪರಿಣಾಮಗಳನ್ನು ಬಿರಿದೆ. ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿರುವ ಸ್ಮಾರ್ಟ್‌ಫೋನ್ ಅನ್ನು ಬಳಸದೇ ಇರಲು ಸಾಧ್ಯವಿಲ್ಲ. ಆದರೆ, ಪ್ರೀತಿಪಾತ್ರರ ನಡುವೆ ಸ್ಮಾರ್ಟ್‌ಫೋನ್ ಬಳಕೆ ಇತಿಮಿತಿಯಲ್ಲಿದ್ದರೆ ಸರಿ. ಇಲ್ಲವಾದರೆ, ಸ್ಮಾರ್ಟ್‌ಫೋನ್ ಅನ್ನೇ ಪ್ರಿತಿಸಿಕೊಂಡಿರಬೇಕಾಗುತ್ತದೆ.!

Best Mobiles in India

English summary
Other research reveals the dark side of cell phones. dulled when a person feels the urge to check their phone, to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+