HP 14s (2020) ಮತ್ತು HP ಪೆವಿಲಿಯನ್ x360 14 (2020) ಲ್ಯಾಪ್‌ಟಾಪ್‌ ಬಿಡುಗಡೆ!

|

ಟೆಕ್‌ ವಲಯದಲ್ಲಿ ನಾನಾ ಮಾದರಿಯ ಲ್ಯಾಪ್‌ಟಾಪ್‌ಗಳು ಲಭ್ಯವಿವೆ. ಟೆಕ್ನಾಲಜಿ ಮುಂದುವರೆದಂತೆ ನವೀನ ತಂತ್ರಜ್ಞಾನವನ್ನ ಒಳಗೊ0ಡಿರುವ ಲ್ಯಾಫ್‌ಟಾಪ್‌ಗಳು ಇಂದು ಮಾರುಕಟ್ಟೆಗೆ ಎಂಟ್ರಿ ನೀಡುತ್ತಿವೆ. ಸದ್ಯ ಈಗಾಗಲೇ ಹಲವು ಕಂಪೆನಿಗಳು ತಮ್ಮ ವೈವಿಧ್ಯಮಯವಾದ ಲ್ಯಾಪ್‌ಟಾಪ್‌ಗಳನ್ನ ಬಿಡುಗಡೆ ಮಾಡಿವೆ. ಇವುಗಳಲ್ಲಿ HP ಕಂಪೆನಿ ಕೂಡ ಒಂದಾಗಿದ್ದು, ಹಲವು ಬಿನ್ನ ಮಾದರಿಯ ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿದೆ. ಸದ್ಯ ಇದೀಗ ಮತ್ತೊಂದು ಹೊಸ ಮಾದರಿಯ ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿದೆ.

HP

ಹೌದು, HP ಕಂಪೆನಿ ತನ್ನ ಹೊಸ ಮಾದರಿಯ ಅದರಲ್ಲೂ ಯಾವಾಗಲೂ ಕನೆಕ್ಟಿವಿಟಿಯನ್ನ ಹೊಂದಿರುವ ಸಂಪರ್ಕಿತ ಪಿಸಿಗಳಾಗಿ HP14s(2020) ಮತ್ತು HP ಪೆವಿಲಿಯನ್ X 360 14 (2020) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಸದ್ಯ ಈ ಎರಡೂ ಹೊಸ HP ಲ್ಯಾಪ್‌ಟಾಪ್‌ಗಳು ವೈ-ಫೈ ಬೆಂಬಲವನ್ನು ಹೊಂದಿದ್ದು, 4G LTE ಕನೆಕ್ಟಿವಿಟಿಯನ್ನು ಹೊಂದಿರಲಿದೆ. ಇನ್ನು ಈ ಹೊಸ HP14 ಗಳು 10ನೇ ತಲೆಮಾರಿನ ಇಂಟೆಲ್ ಕೋರ್ I3 ಮತ್ತು ಕೋರ್ I5 ಪ್ರೊಸೆಸರ್‌ ಅನ್ನು ಹೊಂದಿರಲಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

HP 14s (2020) ಲ್ಯಾಪ್‌ಟಾಪ್‌

HP 14s (2020) ಲ್ಯಾಪ್‌ಟಾಪ್‌

ಸದ್ಯ HP14S (2020) ಲ್ಯಾಪ್‌ಟಾಪ್‌ 1920x1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 14 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನ ಹೊಂದಿದ್ದು, ಇದು IPS LCD ಡಿಸ್‌ಪ್ಲೇ ವಿನ್ಯಾಸವನ್ನು ಒಳಗೊಂಡಿರಲಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ ಡಿಸ್‌ಪ್ಲೇ 250 ನಿಟ್ಸ್ ಬ್ರೈಟ್‌ನೆಶ್‌ ಮತ್ತು 45% NTSC ಬಣ್ಣದ ಹರವನ್ನು ಹೊಂದಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ 10 ನೇ ತಲೆಮಾರಿನ ಇಂಟೆಲ್ ಕೋರ್ I5 ಪ್ರೊಸೆಸರ್ ಹೊಂದಿದೆ, ಜೊತೆಗೆ ಇಂಟೆಲ್ UHD ಗ್ರಾಫಿಕ್ಸ್ ಮತ್ತು 8GB DDR 4-2666SDRR ಅನ್ನು ಹೊಂದಿದೆ, ಇದಲ್ಲದೆ 256GB ಸಂಗ್ರಹ ಸಾಮರ್ಥ್ಯವನ್ನ ಸಹ ಒಳಗೊಂಡಿದೆ. ಜೊತೆಗೆ 4G ಸಂಪರ್ಕವನ್ನು ಸಕ್ರಿಯಗೊಳಿಸಲು, ಇಂಟರ್‌ ಬಿಲ್ಟ್‌ ಇಂಟೆಲ್ XMM 7360 4G LTE 6 ಮೋಡೆಮ್ ಮತ್ತು ಸಿಮ್ ಕಾರ್ಡ್ ಸ್ಲಾಟ್ ಅನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ ವಿ 5.0, ಯುಎಸ್‌ಬಿ ಟೈಪ್-ಸಿ ಪೋರ್ಟ್, ಎಚ್‌ಡಿಎಂಐ 1.4ಬಿ, ಎರಡು ಯುಎಸ್‌ಬಿ ಟೈಪ್-ಎ ಪೋರ್ಟ್‌ಗಳನ್ನು ಸಹ ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ 41Wh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ಉತ್ತಮ ಬ್ಯಾಟರಿ ಬಾಳಿಕೆಯನ್ನ ನೀಡಲಿದೆ.

HP ಪೆವಿಲಿಯನ್ x360 14 (2020)

HP ಪೆವಿಲಿಯನ್ x360 14 (2020)

HP ಪೆವಿಲಿಯನ್ x360 14 (2020) ಲ್ಯಾಪ್‌ಟಾಪ್‌ 14 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನ ಹೊಂದಿದ್ದು, 10 ನೇ ತಲೆಮಾರಿನ ಇಂಟೆಲ್ ಕೋರ್ I5 ಪ್ರೊಸೆಸರ್ ಹೊಂದಿದೆ. ಇದನ್ನು ಇಂಟೆಲ್ ಐರಿಸ್ ಪ್ಲಸ್ ಗ್ರಾಫಿಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇನ್ನು ಈ ನೋಟ್‌ಬುಕ್‌ 4G ಸಿಮ್ ಕಾರ್ಡ್ ಸ್ಲಾಟ್ ಅನ್ನು ಒಳಗೊಂಡಿದೆ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್‌ ಅನ್ನು ಹೊಂದಿದೆ. ಇನ್ನು ಇದು ಅಮೆಜಾನ್ ಅಲೆಕ್ಸಾಕ್ಕೆ ಹ್ಯಾಂಡ್ಸ್-ಫ್ರೀ ಪ್ರವೇಶವನ್ನು ಹೊಂದಿದ್ದು, ವಾಯ್ಸ್‌ ಅಸಿಸ್ಟೆಂಟ್‌ ಮೂಲಕ ಎಚ್ಚರಗೊಳಿಸುತ್ತದೆ. ಅಲ್ಲದೆ ಬಿ & ಒ ಆಡಿಯೋ ಮತ್ತು ಎಚ್‌ಪಿ ಆಡಿಯೊ ಬೂಸ್ಟ್‌ನಿಂದ ನಿಯಂತ್ರಿಸಲ್ಪಡುವ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ. ಇದಲ್ಲದೆ, ಒಂದೇ ಚಾರ್ಜ್‌ನಲ್ಲಿ 11 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿರುವ ಲ್ಯಾಪ್‌ಟಾಪ್ ಇದಾಗಿದೆ. ಇನ್ನು ಮೈಕ್ರೊ-ಎಡ್ಜ್ ಡಿಸ್ಪ್ಲೇಯನ್ನು ಹೊಂದಿದ್ದು, 78% ಸ್ಕ್ರೀನ್-ಟು-ಬಾಡಿ ಅನುಪಾತವನ್ನ ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ನು ಭಾರತದಲ್ಲಿ HP14S (2020) ಲ್ಯಾಪ್‌ಟಾಪ್‌ ಇಂಟೆಲ್ ಕೋರ್ I3 ಪ್ರೊಸೆಸರ್ ಮತ್ತು 4GB RAM ಕಾನ್ಫಿಗರೇಶನ್‌ ಹೊಂದಿದ್ದರೆ ಅದರ ಬೆಲೆ 44,999ರೂ. ಆಗಿದೆ. ಇದಲ್ಲದೆ 8GB RAM ಹೊಂದಿರುವ ಇಂಟೆಲ್ ಕೋರ್ I5 ಪ್ರೊಸೆಸರ್ ಆಯ್ಕೆಯು ರೂ. 64,999 ಬೆಲೆಯನ್ನ ಹೊಂದಿರಲಿದೆ. ಇನ್ನು ಈ ಎರಡು ಮಾದರಿಯ ಲ್ಯಾಪ್‌ಟಾಪ್‌ಗಳು ಎಚ್‌ಪಿ ವರ್ಲ್ಡ್ ಮಳಿಗೆಗಳ ಮೂಲಕ ಮತ್ತು ಆನ್‌ಲೈನ್‌ನಲ್ಲಿ ಎಚ್‌ಪಿ ಆನ್‌ಲೈನ್ ಸ್ಟೋರ್ ಮೂಲಕ ಖರೀದಿಸಲು ಲಭ್ಯವಿದೆ. ಇನ್ನು ಭಾರತದಲ್ಲಿ ಎಚ್‌ಪಿ ಪೆವಿಲಿಯನ್ x360 14 (2020) ಬೆಲೆಯನ್ನು ರೂ. 84,999 ರೂ. ಜುಲೈ 1 ರಿಂದ ಲ್ಯಾಪ್‌ಟಾಪ್ ಲಭ್ಯವಿರುತ್ತದೆ.

Best Mobiles in India

English summary
HP 14s (2020) price in India starts at Rs. 44,999, while HP Pavilion x360 14 (2020) comes with a price tag of Rs. 84,999.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X