HP ಸಂಸ್ಥೆಯಿಂದ ಪಾಪ್‌-ಅಪ್‌-ವೆಬ್‌ಕ್ಯಾಮ್‌ ಒಳಗೊಂಡ ಹೊಸ ಲ್ಯಾಪ್‌ಟಾಪ್‌ ಲಾಂಚ್‌!

|

ಜನಪ್ರಿಯ ಲ್ಯಾಪ್‌ಟಾಪ್‌ ತಯಾರಕರಲ್ಲಿ ಒಂದಾಗಿರುವ HP ಸಂಸ್ಥೆ ತನ್ನ ಹೊಸ HP AIO 24 ಮತ್ತು ಪೆವಿಲಿಯನ್ 27 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಮೂಲಕ HP ತನ್ನ ಆಲ್-ಒನ್ ಪಿಸಿಗಳ ಶ್ರೇಣಿಯನ್ನು ವಿಸ್ತರಿಸಿದೆ. ಇನ್ನು ಈ ಹೊಸ AIO ಪಿಸಿಗಳು ಅಮೆಜಾನ್ ಅಲೆಕ್ಸಾ ಇಂಟಿಗ್ರೇಶನ್‌ ಅನ್ನು ಹೊಂದಿದೆ. ಅಲ್ಲದೆ ಈ ಲ್ಯಾಫ್‌ಟಾಪ್‌ಗಳು ಹೆಚ್‌ಡಿ ಪಾಪ್-ಅಪ್ ವೆಬ್‌ಕ್ಯಾಮ್ ಅನ್ನು ಒಳಗೊಂಡಿದೆ. ಇನ್ನು HP AIO 24 10 ನೇ ತಲೆಮಾರಿನ ಇಂಟೆಲ್ ಕೋರ್ I5 ಪ್ರೊಸೆಸರ್ ಹೊಂದಿದ್ದರೆ, HP ಪೆವಿಲಿಯನ್ 27 10 ನೇ ತಲೆಮಾರಿನ ಇಂಟೆಲ್ ಕೋರ್ I7 ಪ್ರೊಸೆಸರ್ ಹೊಂದಿದೆ.

HP

ಹೌದು, HP ಸಂಸ್ಥೆ ತನ್ನ ಆಲ್‌ ಓನ್‌ ಪಿಸಿಗಳ ಶ್ರೇಣಿಯಲ್ಲಿ ಎರಡು ಹೊಸ ಲ್ಯಾಪ್‌ಟಾಪ್‌ಗಳನ್ನ ಬಿಡುಗಡೆ ಮಾಡಿದೆ. ಈ ಎರಡು ಲ್ಯಾಪ್‌ಟಾಪ್‌ಗಳು ಡ್ಯುಯಲ್ ಮೈಕ್ರೊಫೋನ್‌, ಇಂಟರ್‌ಬಿಲ್ಟ್‌ ಸ್ಪೀಕರ್ಸ್‌ ಮತ್ತು ಗ್ರಾಫಿಕ್ಸ್ ಬೆಂಬಲವನ್ನು ಸಹ ಒಳಗೊಂಡಿವೆ. HP ಪೆವಿಲಿಯನ್ 27 ಉತ್ತಮ ಅನುಭವಕ್ಕಾಗಿ ಟಚ್‌ಸ್ಕ್ರೀನ್ ಬೆಂಬಲದೊಂದಿಗೆ ಬರುತ್ತದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ಗಳು ಯಾವೆಲ್ಲಾ ಫೀಚರ್ಸ್‌ಗಳನ್ನ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

HP AIO 24 ವಿಶೇಷತೆ

HP AIO 24 ವಿಶೇಷತೆ

HP AIO 24 ಲ್ಯಾಪ್‌ಟಾಪ್‌ 24ಇಂಚಿನ IPS ಡಿಸ್‌ಪ್ಲೇಯನ್ನು ಹೊಂದಿದೆ. ಇದು 10 ನೇ ತಲೆಮಾರಿನ ಇಂಟೆಲ್ ಕೋರ್ I5 ಪ್ರೊಸೆಸರ್ ಅನ್ನು ಹೊಂದಿದೆ. ಇದು ಎನ್ವಿಡಿಯಾ ಜೀಫೋರ್ಸ್ MX330 ಗ್ರಾಫಿಕ್ಸ್‌ ಅನ್ನು ಹೊಂದಿದೆ. ಅಲ್ಲದೆ AIO ಪಿಸಿ ವೈಡ್‌ವಿಷನ್ ಫುಲ್-ಹೆಚ್‌ಡಿ ಇನ್ಫ್ರಾರೆಡ್ ಪಾಪ್-ಅಪ್ ವೆಬ್‌ಕ್ಯಾಮ್‌ ಅನ್ನು ಒಳಗೊಂಡಿದೆ. ಜೊತೆಗೆ ಇದು 88 ಡಿಗ್ರಿ ವೀಕ್ಷಣೆಯ ಕ್ಷೇತ್ರವನ್ನು ಹೊಂದಿದೆ. ಇದಲ್ಲದೆ ಇಂಟರ್‌ಬಿಲ್ಟ್‌ ಮೈಕ್ರೊಫೋನ್ ಮತ್ತು ಸ್ಪೀಕರ್‌ ಅನ್ನು ಸಹ ಒಳಗೊಂಡಿದೆ.

HP ಪೆವಿಲಿಯನ್ 27 ವಿಶೇಷತೆ

HP ಪೆವಿಲಿಯನ್ 27 ವಿಶೇಷತೆ

HP ಪೆವಿಲಿಯನ್ 27 ಲ್ಯಾಪ್‌ಟಾಪ್‌ ಮೂರು-ಬದಿಯ ಮೈಕ್ರೊ-ಎಡ್ಜ್ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಇದು 86.2% ರಷ್ಟು ಸ್ಕ್ರೀನ್-ಟು-ಬಾಡಿ ಅನುಪಾತವನ್ನು ನೀಡುತ್ತದೆ. ಜೊತೆಗೆ ಇದು ಟಿಯುವಿ ರೈನ್‌ಲ್ಯಾಂಡ್ ಟೆಕ್ನಾಲಜಿಯಯಿಂದ ನಿಯಂತ್ರಿಸಲ್ಪಡುತ್ತದೆ. ಇದು 10 ನೇ ತಲೆಮಾರಿನ ಇಂಟೆಲ್ ಕೋರ್ I7 ಪ್ರೊಸೆಸರ್ ಜೊತೆಗೆ ಎನ್ವಿಡಿಯಾ ಜೀಫೋರ್ಸ್ MX ಮತ್ತು ಎನ್ವಿಡಿಯಾ ಜಿಫೋರ್ಸ್ GTX ಗ್ರಾಫಿಕ್ಸ್ ಅನ್ನು ಒಳಗೊಂಡಿದೆ. AIO SSD 2 ಪ್ರೈಮರಿ ಡ್ರೈವ್‌ನೊಂದಿಗೆ ವೇಗವಾಗಿ ಬೂಟ್ ಅಪ್ ಅನುಭವವನ್ನು ನೀಡಲಿದೆ. ಅಲ್ಲದೆ ಎಚ್‌ಪಿ ಪೆವಿಲಿಯನ್ 27 ಕಸ್ಟಮ್-ಟ್ಯೂನ್ಡ್ ಬಿ & ಒ ಸ್ಪೀಕರ್‌ಗಳನ್ನು ಅಕೌಸ್ಟಿಕ್ ಫ್ಯಾಬ್ರಿಕ್‌ನಲ್ಲಿ ಸುತ್ತಿಡಲಾಗಿದೆ. ಎಐಒ ಪಾಪ್-ಅಪ್ ವೈಡ್-ವಿಷನ್ ಐಆರ್ ವೆಬ್‌ಕ್ಯಾಮ್ ಮತ್ತು ಅಲೆಕ್ಸಾ ಮೂಲಕ ಧ್ವನಿ ಆಜ್ಞೆಗಳನ್ನು ಬೆಂಬಲಿಸುವ ಕ್ವಾಡ್ ಮೈಕ್ರೊಫೋನ್ಗಳನ್ನು ಸಹ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ HP AIO 24 ಬೆಲೆ ರೂ. 64,999, ಆಗಿದ್ದು, ಟಚ್‌ಸ್ಕ್ರೀನ್ ಬೆಂಬಲಿಸುವ HP ಪೆವಿಲಿಯನ್ 27 ಬೆಲೆ 99,999.ರೂ ಆಗಿದೆ. ಇನ್ನು ಎರಡೂ ಹೊಸ ಎಐಒ ಮಾದರಿಗಳು ದೇಶದ ಎಚ್‌ಪಿ ವರ್ಲ್ಡ್ ರಿಟೇಲ್‌ ಸ್ಟೋರ್‌ಗಳು ಮತ್ತು ಎಚ್‌ಪಿ ಆನ್‌ಲೈನ್ ಸ್ಟೋರ್ ಮೂಲಕ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

Best Mobiles in India

Read more about:
English summary
HP has expanded its range of All-in-One (AIO) PCs by launching the HP AIO 24 and Pavilion 27 in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X