Home
ಸುದ್ದಿಜಾಲ

ಗೇಮಿಂಗ್‌ ಪ್ರಿಯರಿಗಾಗಿ ಹೊಸ ಲ್ಯಾಪ್‌ಟಾಪ್‌ ಪರಿಚಯಿಸಿದ ಹೆಚ್‌ಪಿ!..ಹೇಗಿದೆ ಫೀಚರ್ಸ್‌!

ಲ್ಯಾಪ್‌ಟಾಪ್‌ ಮಾರುಕಟ್ಟೆಯ ಮುಂಚೂಣಿ ಬ್ರಾಂಡ್‌ಗಳಲ್ಲಿ ಹೆಚ್‌ಪಿ ಕಂಪೆನಿ ಕೂಡ ಒಂದಾಗಿದೆ. ತನ್ನ ಭಿನ್ನ ಶ್ರೇಣಿಯ ಲ್ಯಾಪ್‌ಟಾಪ್‌ಗಳ ಮೂಲಕ ಎಲ್ಲಾ ವರ್ಗದ ಜನರ ನೆಚ್ಚಿನ ಬ್ರಾಂಡ್‌ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತದ ಮಾರುಕಟ್ಟೆಯಲ್ಲಿ ಹೆಚ್‌ಪಿ ಓಮೆನ್‌ 17 ಲ್ಯಾಪ್‌ಟಾಪ್‌ ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್‌ ಇತ್ತೀಚಿನ ಜನ್ ಎನ್‌ವಿಡಿಯಾ ಜಿಫೋರ್ಸ್‌ RTX4080 ಮೊಬೈಲ್ GPU ಅನ್ನು ಒಳಗೊಂಡಿದೆ. ಜೊತೆಗೆ ಉತ್ತಮ ಗೇಮಿಂಗ್ ಕಾರ್ಯಕ್ಷಮತೆಗಾಗಿ ಒಮೆನ್ ಗೇಮಿಂಗ್ ಹಬ್‌ ಅನ್ನು ಸಹ ಹೊಂದಿದೆ.

ಹೌದು, ಹೆಚ್‌ಪಿ ಓಮೆನ್‌ 17 ಲ್ಯಾಪ್‌ಟಾಪ್‌ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಲ್ಯಾಪ್‌ಟಾಪ್‌ DLSS 3 ಹೊಂದಿದ್ದು, ಗೇಮಿಂಗ್ ಅನುಭವವನ್ನು ಸುಧಾರಿಸುತ್ತದೆ. ಇದು 13 ನೇ-ಜನ್ ಇಂಟೆಲ್ ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ 83Wh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, 330W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೇಮಿಂಗ್‌ ಪ್ರಿಯರಿಗಾಗಿ ಹೊಸ ಲ್ಯಾಪ್‌ಟಾಪ್‌ ಪರಿಚಯಿಸಿದ ಹೆಚ್‌ಪಿ!ಹೇಗಿದೆ ಫೀಚರ್ಸ್

ಹೆಚ್‌ಪಿ ಓಮೆನ್‌ 17 (2023) ಫೀಚರ್ಸ್‌ ಹೇಗಿದೆ?

ಹೆಚ್‌ಪಿ ಓಮೆನ್‌ 17 (2023) ಲ್ಯಾಪ್‌ಟಾಪ್‌ 17.3 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 1920x1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, 144Hz ರಿಫ್ರೆಶ್ ರೇಟ್‌ ಬೆಂಬಲಿಸಲಿದೆ. ಇದನ್ನು 240Hz ರಿಫ್ರೆಶ್ ರೇಟ್‌ ಬೆಂಬಲಿಸು QHD ಡಿಸ್‌ಪ್ಲೇಯನ್ನು ಆಯ್ಕೆಯಲ್ಲಿ ಸಹ ಖರೀದಿಸಬಹುದಾಗಿದೆ. ಈ ಎರಡೂ ಡಿಸ್‌ಪ್ಲೇ ಮಾದರಿಗಳು IPS LCD ಟೆಕ್ನಾಲಜಿಯನ್ನು ಒಳಗೊಂಡಿವೆ.

ಇನ್ನು ಈ ಲ್ಯಾಪ್‌ಟಾಪ್‌ ಇಂಟೆಲ್ ಐ9-13900 ಎಚ್‌ಎಕ್ಸ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಜಿಫೋರ್ಸ್ ಆರ್‌ಟಿಎಕ್ಸ್ ಜಿಪಿಯು ಗ್ರಾಫಿಕ್ಸ್‌ ಕಾರ್ಡ್‌ ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಗೇಮರ್‌ಗಳಿಗೆ ಸೂಕ್ತವಾದ ವಿನ್ಯಾಸವನ್ನು ಪಡೆದಿದ್ದು, Wi-Fi 6e ಬೆಂಬಲದೊಂದಿಗೆ ವೇಗದ ಇಂಟರ್‌ನೆಟ್ ಅನ್ನು ಅನ್‌ಲಾಕ್ ಮಾಡಬಹುದಾಗದೆ. ಜೊತೆಗೆ ನಾಯ್ಸ್‌ ಕ್ಯಾನ್ಸಲೇಶನ್‌ ಮತ್ತು ಸಂಯೋಜಿತ ಡ್ಯುಯಲ್ ಅರೇ ಡಿಜಿಟಲ್ ಮೈಕ್ರೊಫೋನ್‌ಗಳೊಂದಿಗೆ HP ವೈಡ್ ವಿಷನ್ 720p HD ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಗೇಮಿಂಗ್‌ ಪ್ರಿಯರಿಗಾಗಿ ಹೊಸ ಲ್ಯಾಪ್‌ಟಾಪ್‌ ಪರಿಚಯಿಸಿದ ಹೆಚ್‌ಪಿ!ಹೇಗಿದೆ ಫೀಚರ್ಸ್

ಇದಲ್ಲದೆ ಈ ಲ್ಯಾಪ್‌ಟಾಪ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ USB ಟೈಪ್-C (40Gbps), 1 ಥಂಡರ್ಬೋಲ್ಟ್ 4, 1 ಥಂಡರ್ಬೋಲ್ಟ್ 3, 3 USB ಟೈಪ್-A, 1 RJ-45, 1 ಹೆಡ್‌ಫೋನ್/ ಮೈಕ್ರೊಫೋನ್ ಕಾಂಬೊ, 1 AC ಸ್ಮಾರ್ಟ್ ಪಿನ್, 1 ಮಿನಿ ಡಿಸ್‌ಪ್ಲೇ ಪೋರ್ಟ್, ಮತ್ತು 1 HDMI 2.1 ಅನ್ನು ಬೆಂಬಲಿಸಲಿದೆ. ಇದರೊಂದಿಗೆ ಈ ಲ್ಯಾಪ್‌ಟಾಪ್‌ ಫುಲ್‌ ಸೈಜ್‌ 4 ರೇಂಜ್‌ RGB ಬ್ಯಾಕ್‌ಲಿಟ್ ಕೀಬೋರ್ಡ್ ಅನ್ನು ಸಹ ಹೊಂದಿದೆ. ಜೊತೆಗೆ 83Wh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 330W ಚಾರ್ಜಿಂಗ್‌ ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಹೆಚ್‌ಪಿ ಓಮೆನ್‌ 17 ಲ್ಯಾಪ್‌ಟಾಪ್‌ ಆರಂಭಿಕ ಬೆಲೆ 2,69,990ರೂ. ಆಗಿದೆ. ಈ ಲ್ಯಾಪ್‌ಟಾಪ್‌ Omen ಪ್ಲೇಗ್ರೌಂಡ್ ಸ್ಟೋರ್‌ಗಳು, HP ವರ್ಲ್ಡ್ ಸ್ಟೋರ್‌ಗಳು ಮತ್ತು HP ಆನ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯವಾಗಲಿದೆ.

ಗೇಮಿಂಗ್‌ ಪ್ರಿಯರಿಗಾಗಿ ಹೊಸ ಲ್ಯಾಪ್‌ಟಾಪ್‌ ಪರಿಚಯಿಸಿದ ಹೆಚ್‌ಪಿ!ಹೇಗಿದೆ ಫೀಚರ್ಸ್

ಇದಲ್ಲದೆ ಹೆಚ್‌ಪಿ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸ ಹೆಚ್‌ಪಿ Envy x360 15 (2023) ಲ್ಯಾಪ್‌ಟಾಪ್‌ ಅನಾವರಣ ಮಾಡಿದೆ. ಈ ಲ್ಯಾಪ್‌ಟಾಪ್‌ 12 ನೇ Gen ಇಂಟೆಲ್ ಕೋರ್ i7 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ವೆಬ್‌ಕ್ಯಾಮ್‌ ಅನ್ನು ಕೂಡ ಒಳಗೊಂಡಿದೆ. ಅಲ್ಲದೆ ಐಆರ್ ಫೇಸ್ ರೆಕಗ್ನಿಷನ್ ಟೆಕ್ನಾಲಜಿಯನ್ನು ಕೂಡ ಈ ಲ್ಯಾಪ್‌ಟಾಪ್‌ನಲ್ಲಿ ಅಳವಡಿಸಲಾಗಿದೆ.

Best Mobiles in India

English summary
The gaming laptop also comes bundled with an Omen Gaming Hub to help users tweak settings to get the best gaming performance for specific titles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+