HP ಒಮೆನ್ 15 ಮತ್ತು ಪೆವಿಲಿಯನ್ ಗೇಮಿಂಗ್ 16 ಲ್ಯಾಪ್‌ಟಾಪ್ ಬಿಡುಗಡೆ!
ಲ್ಯಾಪ್‌ಟಾಪ್ ಮಾರುಕಟ್ಟೆಯಲ್ಲಿ ನಾನಾ ಮಾದರಿಯ ಲ್ಯಾಪ್‌ಟಾಪ್‌ಗಳು ಲಭ್ಯವಿವೆ. ಈಗಾಗಲೇ ಹಲವು ಕಂಪೆನಿಗಳು ವಿವಿಧ ಮಾದರಿಯ ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿವೆ. ಸದ್ಯ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಬ್ರ್ಯಾಂಡ್ ಕಂಪೆನಿಗಳ ಲ್ಯಾಪ್‌ಟಾಪ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ನಿಮಗೆಲ್ಲಾ ಗೊತ್ತಿರುವಂತೆ ಇತ್ತೀಚಿನ ದಿನಗಳಲ್ಲಿ ಗೇಮಿಂಗ್ ಲ್ಯಾಪ್‌ಟಾಪ್‌ಗಳು ಕೂಡ ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡ್ತೀವಿ. ಇದೀಗ HP ಕಂಪೆನಿ ತನ್ನ ಒಮೆನ್ ಸರಣಿಯಲ್ಲಿ ಹೊಸ ಮಾದರಿಯ ಗೇಮಿಂಗ್ ಲ್ಯಾಪ್‌ಟಾಪ್ ಅನ್ನು ಪರಿಚಯಿಸಿದೆ.

ಹೌದು, HP ಕಂಪೆನಿ ತನ್ನ ಹೊಸ ಒಮೆನ್ 15 ಮತ್ತು ಪೆವಿಲಿಯನ್ ಗೇಮಿಂಗ್ 16 ಲ್ಯಾಪ್‌ಟಾಪ್‌ಗಳನ್ನ ಬಿಡುಗಡೆ ಮಾಡಿದ್ದು, ಈ ಮೂಲಕ ತನ್ನ ಗೇಮಿಂಗ್ ಶ್ರೇಣಿಯ ಲ್ಯಾಪ್‌ಟಾಪ್ ಮಾರುಕಟ್ಟೆಯನ್ನ ಇನ್ನಷ್ಟು ವಿಸ್ತರಣೆ ಮಾಡಿದೆ. ಸದ್ಯ ಈ ಹೊಸ ಒಮೆನ್ 15 ಮಾದರಿಯು ಮರುವಿನ್ಯಾಸಗೊಳಿಸಲಾಗಿರುವ ಚಾಸಿಸ್ ಮಾದರಿಯಲ್ಲಿ ಲಭ್ಯವಾಗಲಿದೆ. ಇನ್ನು ಇದರಲ್ಲಿ ಇಂಟೆಲ್ ಮತ್ತು AMD ಪ್ರೊಸೆಸರ್‌ಗಳ ನಡುವೆ 10 ನೇ ತಲೆಮಾರಿನ ಇಂಟೆಲ್ ಕೋರ್ I7 ಮತ್ತು AMD ರೈಜೆನ್ 7 ವರೆಗಿನ ಆಯ್ಕೆಗಳ ನಡುವೆ ಆಯ್ಕೆ ಮಾಡಬಹುದಾಗಿದೆ. ಇದಲ್ಲದೆ, ಹೊಸ ಒಮೆನ್ 15 ಲ್ಯಾಪ್‌ಟಾಪ್ ಥಂಡರ್ಬೋಲ್ಟ್ 3 ಸೇರಿದಂತೆ 4GB RAM ಮತ್ತು 32GB ಮತ್ತು ಅಪ್‌ಗ್ರೇಡ್ ಕನೆಕ್ಟಿವಿಟಿ ಆಯ್ಕೆಗಳನ್ನು ನೀಡುತ್ತದೆ. ಇನ್ನು ಈ ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

HP ಒಮೆನ್ 15 ಲ್ಯಾಪ್‌ಟಾಪ್
HP ಒಮೆನ್ 15 ಲ್ಯಾಪ್‌ಟಾಪ್‌ನಲ್ಲಿ HP 8% ಕಡಿಮೆ ಮತ್ತು 11% ತೆಳುವಾದ ಚೌಕಟ್ಟನ್ನು ನೀಡಿದೆ. ಇದಲ್ಲದೆ, ಇದು ಹೊಸ 180 ಡಿಗ್ರಿ ಫ್ಲಾಟ್ ಹಿಂಜ್ ವಿನ್ಯಾಸ ಹೊಂದಿರುವ 15.6-ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಅಲ್ಲದೆ ಎನ್ವಿಡಿಯಾ ಜಿ-ಸಿಂಕ್ ಟೆಕ್ನಾಲಜಿಯ ಜೊತೆಗೆ ಗ್ರಾಹಕರು ಅಲ್ಟ್ರಾ-ಎಚ್‌ಡಿ 120Hz ಅಥವಾ ಫುಲ್ ಹೆಚ್‌ಡಿ 300Hz ಕಾನ್ಫಿಗರೇಶನ್ ಹೊಂದಿರುವ OLED ಡಿಸ್‌ಪ್ಲೇಯನ್ನು ಆಯ್ಕೆ ಮಾಡಬಹುದಾಗಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ನಲ್ಲಿ 10 ನೇ ತಲೆಮಾರಿನ ಇಂಟೆಲ್ ಕೋರ್ I7 H-ಸೀರೀಸ್ ಮತ್ತು AMD ರೈಜೆನ್ 7 4800 H-ಸೀರಿಸ್ ಪ್ರೊಸೆಸರ್ ಆಯ್ಕೆಗಳನ್ನ ಸಹ ನೀಡಲಾಗಿದೆ. ಹಾಗೇಯೇ 4GB RAM ಮತ್ತು 32GB ಸಂಗ್ರಹ ಸಾಮರ್ಥ್ಯದ ಆಯ್ಕೆಯನ್ನ ಹೊಂದಿದೆ.

ಇದಲ್ಲದೆ ಈ ಲ್ಯಾಪ್‌ಟಾಪ್ ಎನ್ವಿಡಿಯಾ ಜಿಫೋರ್ಸ್ RTX2070 ಸೂಪರ್ ವರೆಗೆ ಮ್ಯಾಕ್ಸ್-ಕ್ಯೂ ಡಿಸೈನ್ ಗ್ರಾಫಿಕ್ಸ್ ಅನ್ನು ಒಳಗೊಂಡಿದೆ. ಅಲ್ಲದೆ RAID 0 ಬೆಂಬಲದೊಂದಿಗೆ ಇದು 1TB ಪಿಸಿಐಇ ಎಸ್‌ಎಸ್‌ಡಿ ಅನ್ನು ಸಹ ಒಳಗೊಂಡಿದೆ. ಇನ್ನು ಈ ಹೊಸ ಒಮೆನ್ 15 ಮಾದರಿಯ ರಿಬ್ರಾಂಡೆಡ್ ಒಮೆನ್ ಲೋಗ ಇದೆ. ಅಂತೆಯೇ, IR ಥರ್ಮೋಪೈಲ್ ಸೆನ್ಸಾರ್ ಅನ್ನು ಒದಗಿಸಲಾಗಿದೆ. ಇದು ಫ್ಯಾನ್ ಅಕೌಸ್ಟಿಕ್ ಕಂಟ್ರೋಲ್ ಕಾಪಾಡಿಕೊಳ್ಳುವ ಮೂಲಕ ಉಷ್ಣ ದಕ್ಷತೆಯನ್ನು ಉತ್ತಮಗೊಳಿಸಲು ಪ್ರಚೋದಿಸುತ್ತದೆ. ಇನ್ನು ಈ ಲ್ಯಾಪ್‌ಟಾಪ್‌ನಲ್ಲಿ ಒಮೆನ್ ಟೆಂಪೆಸ್ಟ್ ಕೂಲಿಂಗ್ ಟೆಕ್ನಾಲಜಿ ಜೊತೆಗೆ 12 ವಿ ಫ್ಯಾನ್ ಮತ್ತು ಮೂರು-ಸೈಡೆಡ್ ವೆಂಟಿಂಗ್ ಜೊತೆಗೆ ಐದು-ವೇ ಏರ್ ಹರಿವನ್ನ ಒಳಗೊಂಡಿದೆ. ಅಲ್ಲದೆ RGB ಪರ್-ಕೀ ಲೈಟಿಂಗ್ ಅನ್ನು ನೀಡಿದೆ. ಜೊತೆಗೆ ಕಾನ್ಫಿಗರೇಶನ್ ಅನ್ನು ವಿಸ್ತರಿಸಲು ಬಯಸಿದರೆ, ಡಿಸ್‌ಪ್ಲೇ ಪ್ರವೇಶವನ್ನು ಫಿಲಿಪ್ಸ್-ಹೆಡ್ ಸ್ಕ್ರೂಗಳನ್ನ ಹೊಂದಿದೆ.ಇನ್ನು ಈ ಲ್ಯಾಪ್‌ಟಾಪ್ ಸಿಂಗಲ್ ಚಾರ್ಜ್‌ನಲ್ಲಿ 12.5 ಗಂಟೆಗಳ ಬ್ಯಾಟರಿ ಅವಧಿಯನ್ನು ತಲುಪಿಸುತ್ತದೆ ಎಂದು ಹೇಳಲಾಗಿದೆ.

HP ಪೆವಿಲಿಯನ್ ಗೇಮಿಂಗ್ 16
HP ಪೆವಿಲಿಯನ್ ಗೇಮಿಂಗ್ 16 ಸ್ಮಾರ್ಟ್‌ಫೋನ್ ಮೈಕ್ರೊ-ಎಡ್ಜ್ ಬೆಜೆಲ್‌ಗಳನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ 300 ನಿಟ್ಸ್ IPS-ಲೆವೆಲ್ ಪ್ಯಾನಲ್ ಮತ್ತು 1080p ರೆಸಲ್ಯೂಶನ್‌ನಲ್ಲಿ 144Hz ವರೆಗೆ ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ 10 ನೇ ತಲೆಮಾರಿನ ಇಂಟೆಲ್ ಕೋರ್ I7 ಅನ್ನು ಹೊಂದಿದೆ. ಜೊತೆಗೆ ಎನ್ವಿಡಿಯಾ ಜೀಫೋರ್ಸ್ RTX 2060 ವರೆಗೆ ಮ್ಯಾಕ್ಸ್-ಕ್ಯೂ ವಿನ್ಯಾಸ ಗ್ರಾಫಿಕ್ಸ್ ಹೊಂದಿದೆ. ಇದಲ್ಲದೆ ವೈ-ಫೈ 6 ಕನೆಕ್ಟಿವಿಟಿ ಆಯ್ಕೆಯನ್ನು ಸಹ ಹೊಂದಿದೆ. ಇದಲ್ಲದೆ, ಲ್ಯಾಪ್ಟಾಪ್ ಕೋನೀಯ ಕಪ್ಪು ಚಾಸಿಸ್ನಲ್ಲಿ ಬರುತ್ತದೆ. ಇನ್ನು ಪೆವಿಲಿಯನ್ ಗೇಮಿಂಗ್ 16 ಕಂಪನಿಯ ಮೊದಲ 16 ಇಂಚಿನ ಗೇಮಿಂಗ್ ಲ್ಯಾಪ್‌ಟಾಪ್ ಆಗಿದೆ.

ಬೆಲೆ ಮತ್ತು ಲಭ್ಯತೆ
HP ಒಮೆನ್ 15 (2020) ಲ್ಯಾಪ್‌ಟಾಪ್ ಬೆಲೆ $ 999.99 (ಸುಮಾರು ₹ 75,300) ಹೊಂದಿದ್ದು. ಇನ್ನು ಈ ಲ್ಯಾಪ್‌ಟಾಪ್ ಯುಎಸ್‌ನಲ್ಲಿ ಬೆಸ್ಟ್ ಭೈ ಮತ್ತು ಎಚ್ಪಿ.ಕಾಮ್ ಮೂಲಕ ಮೈಕಾ ಸಿಲ್ವರ್ ಮತ್ತು ಶ್ಯಾಡೋ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಮಾರಾಟವಾಗಲಿದೆ. ಇನ್ನು HP ಪೆವಿಲಿಯನ್ ಗೇಮಿಂಗ್ 16 ಲ್ಯಾಪ್‌ಟಾಪ್ ಬೆಲೆ $ 799.99 (ಸುಮಾರು, 60,300) ರಿಂದ ಪ್ರಾರಂಭವಾಗಲಿದೆ. ಇನ್ನು ಈ ಲ್ಯಾಪ್‌ಟಾಪ್ ತಿಂಗಳ ಕೊನೆಯಲ್ಲಿ HP.com ಮೂಲಕ ಖರೀದಿಸಲು ಲಭ್ಯವಿರುತ್ತದೆ.


Click it and Unblock the Notifications





