ಹೆಚ್‌ಪಿ ಪೆವಿಲಿಯನ್‌ ಪ್ಲಸ್‌ ಲ್ಯಾಪ್‌ಟಾಪ್‌ ಅನಾವರಣ! 11 ಗಂಟೆಗಳ ಬ್ಯಾಟರಿ ಅವಧಿ!

|

ಲ್ಯಾಪ್‌ಟಾಪ್‌ ಮಾರುಕಟ್ಟೆಯಲ್ಲಿ ಹೆಚ್‌ಪಿ ಕಂಪೆನಿ ಜನಪ್ರಿಯ ಬ್ರ್ಯಾಂಡ್‌ ಎನಿಸಿಕೊಂಡಿದೆ. ತನ್ನ ವೈವಿಧ್ಯಮಯ ಲ್ಯಾಪ್‌ಟಾಪ್‌ಗಳ ಮೂಲಕ ಗ್ರಾಹಕರ ನೆಚ್ಚಿನ ಆಯ್ಕೆಗಳಲ್ಲಿ ಒಂದೆನಿಸಿಕೊಂಡಿದೆ. ಈಗಾಗಲೇ ಹಲವು ಆಕರ್ಷಕ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿರುವ ಹೆಚ್‌ಪಿ ಕಂಪೆನಿ ಇದೀಗ ಹೆಚ್‌ಪಿ ಪೆವಿಲಿಯನ್‌ ಪ್ಲಸ್‌ ಅನ್ನು ಲಾಂಚ್‌ ಮಾಡಿದೆ. ಇದರೊಂದಿಗೆ ಹೆಚ್‌ಪಿ ಪೆವಿಲಿಯನ್‌ x360 ಲ್ಯಾಪ್‌ಟಾಪ್‌ ಅನ್ನು ಕೂಡ ಪರಿಚಯಿಸಿದೆ. ಇನ್ನು ಹೆಚ್‌ಪಿ ಪೆವಿಲಿಯನ್‌ ಪ್ಲಸ್‌ ಲ್ಯಾಪ್‌ಟಾಪ್‌ 12 ನೇ ತಲೆಮಾರಿನ ಇಂಟೆಲ್ H ಕೋರ್ ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ.

ಹೆಚ್‌ಪಿ ಕಂಪೆನಿ

ಹೌದು, ಹೆಚ್‌ಪಿ ಕಂಪೆನಿ ಭಾರತದಲ್ಲಿ ಹೊಸ ಹೆಚ್‌ಪಿ ಪೆವಿಲಿಯನ್‌ ಪ್ಲಸ್‌ ಮತ್ತು ಹೆಚ್‌ಪಿ ಪೆವಿಲಿಯನ್‌ x360 ಲ್ಯಾಪ್‌ಟಾಪ್‌ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಹೆಚ್‌ಪಿ ಪೆವಿಲಿಯನ್ ಪ್ಲಸ್ ಲ್ಯಾಪ್‌ಟಾಪ್ 14 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಹೆಚ್‌ಪಿ ಪೆವಿಲಿಯನ್‌ x360 ಲ್ಯಾಪ್‌ಟಾಪ್‌ ಕೂಡ 14 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು HP ಪೆವಿಲಿಯನ್ ಪ್ಲಸ್ ಲ್ಯಾಪ್‌ಟಾಪ್‌ ಇದುವರೆಗಿನ ತೆಳುವಾದ ಪೆವಿಲಿಯನ್ ಲ್ಯಾಪ್‌ಟಾಪ್ ಎಂದು ಹೆಚ್‌ಪಿ ಕಂಪೆನಿ ಹೇಳಿಕೊಂಡಿದೆ.

ಹೆಚ್‌ಪಿ ಪೆವಿಲಿಯನ್‌ ಪ್ಲಸ್‌

ಇನ್ನು ಹೆಚ್‌ಪಿ ಪೆವಿಲಿಯನ್‌ ಪ್ಲಸ್‌ ಲ್ಯಾಪ್‌ಟಾಪ್‌ HP ಪ್ರೆಸೆನ್ಸ್ ತಂತ್ರಜ್ಞಾನ ಮತ್ತು AI ನಾಯ್ಸ್‌ ರಿಮೂವಲ್‌ ಟೆಕ್ನಾಲಜಿಯನ್ನು ಒಳಗೊಂಡ 5MP ಕ್ಯಾಮೆರಾವನ್ನು ಹೊಂದಿದೆ. ಇದು ಫಿಂಗರ್‌ಪ್ರಿಂಟ್ ರೀಡರ್‌ನೊಂದಿಗೆ ಬ್ಯಾಕ್‌ಲಿಟ್ ಕೀಬೋರ್ಡ್ ಅನ್ನು ಸಹ ಹೊಂದಿದೆ. ಇನ್ನು HP ಪೆವಿಲಿಯನ್ x360 ಕನ್ವರ್ಟಿಬಲ್ ಲ್ಯಾಪ್‌ಟಾಪ್ 12ನೇ ತಲೆಮಾರಿನ ಇಂಟೆಲ್ ಕೋರ್ ಯು-ಸರಣಿ ಪ್ರೊಸೆಸರ್‌ ಅನ್ನು ಹೊಂದಿದೆ. ಈ ಎರಡೂ ಲ್ಯಾಪ್‌ಟಾಪ್‌ಗಳು HP ಪ್ಯಾಲೆಟ್ ಮತ್ತು HP ಕಮಾಂಡ್ ಸೆಂಟರ್‌ಗೆ ಬೆಂಬಲವನ್ನು ನೀಡಲಿವೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಹೆಚ್‌ಪಿ ಪೆವಿಲಿಯನ್ ಪ್ಲಸ್ ಲ್ಯಾಪ್‌ಟಾಪ್‌

ಹೆಚ್‌ಪಿ ಪೆವಿಲಿಯನ್ ಪ್ಲಸ್ ಲ್ಯಾಪ್‌ಟಾಪ್‌

ಹೆಚ್‌ಪಿ ಪೆವಿಲಿಯನ್ ಪ್ಲಸ್ ಲ್ಯಾಪ್‌ಟಾಪ್ 14 ಇಂಚಿನ IPS ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2240×1400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಬೆಂಬಲಿಸಲಿದೆ. ಇದಲ್ಲದೆ 16:10 ಆಕಾರ ಅನುಪಾತವನ್ನು ಹೊಂದಿದ್ದು, ಆಂಟಿ-ಗ್ಲೇರ್ ಮತ್ತು ಲೋ ಬ್ಲೂ ಲೈಟ್‌ನ ಲೇಪನವನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ 12ನೇ ತಲೆಮಾರಿನ ಇಂಟೆಲ್ ಕೋರ್ H ಸರಣಿ ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಇಂಟೆಲ್ Xe ಗ್ರಾಫಿಕ್ಸ್‌ ಅನ್ನು ಒಳಗೊಂಡಿದೆ. ಹಾಗೆಯೇ 16GB DDR4-3200 MHz RAM ಮತ್ತು 512GB PCIe NVMe TLC SSD ಸ್ಟೋರೇಜ್ ಸ್ಪೇಸ್‌ ಅನ್ನು ಹೊಂದಿದೆ. ಇದು ವಿಂಡೋಸ್ 11 ಹೋಮ್ ಆಪರೇಟಿಂಗ್ ಸಿಸ್ಟಮ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಲ್ಯಾಪ್‌ಟಾಪ್‌

ಇನ್ನು ಈ ಲ್ಯಾಪ್‌ಟಾಪ್‌ HP ಪ್ರೆಸೆನ್ಸ್ ಟೆಕ್ನಾಲಜಿ ಮತ್ತು AI ನಾಯ್ಸ್‌ ರಿಮೂವಲ್‌ ಟೆಕ್ನಾಲಜಿಯನ್ನು ಹೊಂದಿರುವ 5 ಮೆಗಾಪಿಕ್ಸೆಲ್‌ ಕ್ಯಾಮೆರಾವನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ ಫಿಂಗರ್‌ಪ್ರಿಂಟ್ ರೀಡರ್‌ ಒಳಗೊಂಡ ಬ್ಯಾಕ್‌ಲಿಟ್ ಕೀಬೋರ್ಡ್ ಅನ್ನು ಹೊಂದಿದೆ. ಇದರಲ್ಲಿ ಗೇಮಿಂಗ್, ಕ್ರಿಯೆಟಿಂಗ್‌, ಸ್ಟ್ರೀಮಿಂಗ್ ಅಥವಾ ಮಲ್ಟಿ ಟಾಸ್ಕಿಂಗ್‌ ಮಾಡುವಾಗ ಗಾಳಿಯ ಹರಿವನ್ನು ಸುಧಾರಿಸುವುದಕ್ಕಾಗಿ ಎರಡು ಫ್ಯಾನ್‌ಗಳು ಮತ್ತು ಎರಡು ಹೀಟ್ ಪೈಪ್‌ಗಳನ್ನು ನೀಡಲಾಗಿದೆ. ಈ ಲ್ಯಾಪ್‌ಟಾಪ್‌ ಕಾರ್ಯಕ್ಷಮತೆ ಮೋಡ್, ಸಮತೋಲಿತ ಮೋಡ್ ಮತ್ತು ಪವರ್ ಸೇವರ್ ಮೋಡ್‌ಗೆ ಬೆಂಬಲವನ್ನು ನೀಡಲಿದೆ. ಇದು 51 Wh Li-ion ಪಾಲಿಮರ್ ಬ್ಯಾಟರಿ ಹೊಂದಿದ್ದು, 11.5 ಗಂಟೆಗಳ ಬ್ಯಾಟರಿ ಅವಧಿಯನ್ನು ಒದಗಿಸುತ್ತದೆ.

HP ಪೆವಿಲಿಯನ್ x360 ಲ್ಯಾಪ್‌ಟಾಪ್‌

HP ಪೆವಿಲಿಯನ್ x360 ಲ್ಯಾಪ್‌ಟಾಪ್‌

ಹೆಚ್‌ಪಿ ಪೆವಿಲಿಯನ್ x360 ಕನ್ವರ್ಟಿಬಲ್ ಲ್ಯಾಪ್‌ಟಾಪ್ 14 ಇಂಚಿನ IPS ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1920×1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ ಈ ಡಿಸ್‌ಪ್ಲೇ 250 ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡಲಿದೆ. HP ಪೆವಿಲಿಯನ್ x360 ಲ್ಯಾಪ್‌ಟಾಪ್‌ ಡಿಸ್‌ಪ್ಲೇ ಐಸೇಫ್ ಡಿಸ್‌ಪ್ಲೇ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಇದು 12 ನೇ ತಲೆಮಾರಿನ ಇಂಟೆಲ್ ಕೋರ್ ಯು-ಸರಣಿ ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ವಿಂಡೋಸ್ 11 ಹೋಮ್ ಅನ್ನು ರನ್ ಮಾಡುತ್ತದೆ. ಇನ್ನು ಈ ಲ್ಯಾಪ್‌ಟಾಪ್‌ ಇಂಟೆಲ್ Xe ಗ್ರಾಫಿಕ್ಸ್‌ ಅನ್ನು ಒಳಗೊಂಡಿದೆ. ಹಾಗೆಯೇ 16GB DDR4-3200 MHz RAM ಮತ್ತು 512GB PCIe NVMe M.2 SSD ಸ್ಟೋರೇಜ್ ಸ್ಪೇಸ್‌ ಅನ್ನು ಒಳಗೊಂಡಿದೆ.

ಲ್ಯಾಪ್‌ಟಾಪ್‌

ಇನ್ನು ಈ ಲ್ಯಾಪ್‌ಟಾಪ್‌ ಕೂಡ HP ಪ್ರೆಸೆನ್ಸ್ ಟೆಕ್ನಾಲಜಿಯನ್ನು ಒಳಗೊಂಡ 5ಮೆಗಾಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾ ಹೊಂದಿದೆ. ಇದು 'ಪರ್ಫಾರ್ಮೆನ್ಸ್ ಮೋಡ್' ಜೊತೆಗೆ HP ಕಮಾಂಡ್ ಸೆಂಟರ್, 'ಬ್ಯಾಲೆನ್ಸ್ಡ್ ಮೋಡ್' ಮತ್ತು 'ಪವರ್ ಸೇವರ್ ಮೋಡ್' ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಲ್ಯಾಪ್‌ಟಾಪ್‌ ಹಸ್ತಚಾಲಿತ ಕ್ಯಾಮೆರಾ ಶಟರ್ ಡೋರ್ ಅನ್ನು ಒಳಗೊಂಡಿರುವ ಮೊದಲ HP ಕನ್ಸೂಮರ್‌ ಲ್ಯಾಪ್‌ಟಾಪ್ ಆಗಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ ಮೂರು-ಸೆಲ್, 43 Wh Li-ion ಪಾಲಿಮರ್ ಬ್ಯಾಟರಿಯನ್ನು ಹೊಂದಿದೆ, ಇದು 11 ಗಂಟೆಗಳ ಬ್ಯಾಟರಿ ಅವಧಿಯನ್ನು ಒದಗಿಸುತ್ತದೆ. ಈ ಲ್ಯಾಪ್‌ಟಾಪ್‌ ಸ್ಪೇಸ್‌ ಬ್ಲೂ, ಪೇಲ್‌ ರೋಸ್‌ ಗೋಲ್ಡ್‌ ಮತ್ತು ನ್ಯಾಚುರಲ್‌ ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಬಿಡುಗಡೆ ಆಗಿರುವ ಹೆಚ್‌ಪಿ ಪೆವಿಲಿಯನ್ ಪ್ಲಸ್ 14 ಇಂಚಿನ ಲ್ಯಾಪ್‌ಟಾಪ್ ಬೆಲೆ 78,999ರೂ. ಆಗಿದೆ. ಈ ಲ್ಯಾಪ್‌ಟಾಪ್ ನ್ಯಾಚುರಲ್ ಸಿಲ್ವರ್ ಮತ್ತು ವಾರ್ಮ್ ಗೋಲ್ಡ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ.
ಇನ್ನು ಹೆಚ್‌ಪಿ ಪೆವಿಲಿಯನ್ x360 14 ಇಂಚಿನ ಲ್ಯಾಪ್‌ಟಾಪ್ 76,999ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಸದ್ಯ ಈ ಲ್ಯಾಪ್‌ಟಾಪ್‌ಗಳು ಭಾರತದಲ್ಲಿ ಯಾವಾಗ ಖರೀದಿಗೆ ಲಭ್ಯವಿರುತ್ತವೆ ಎಂಬುದನ್ನು HP ಕಂಪೆನಿ ಇನ್ನು ಕೂಡ ದೃಢಪಡಿಸಿಲ್ಲ.

Best Mobiles in India

English summary
HP Pavilion Plus 14, Pavilion x360 14 launched in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X