Home
ಸುದ್ದಿಜಾಲ

ವಾಣಿಜ್ಯ ಲ್ಯಾಪ್‌ಟಾಪ್‌ಗಳಲ್ಲಿ 'ಎಚ್‌ಪಿ 'ಪ್ರೊ ಬುಕ್ 445 ಜಿ6' ಬೆಸ್ಟ್ ಆಯ್ಕೆ!

ನೀವು ವಾಣಿಜ್ಯ ಲ್ಯಾಪ್‌ಟಾಪ್ ಒಂದನ್ನು ಖರೀದಿಸಬೇಕು ಎಂದುಕೊಂಡಿದ್ದರೆ ಅತ್ಯಂತ ತೆಳು ಹಾಗೂ ಸ್ಟೈಲಿಶ್ ಆಗಿರುವ 'ಪ್ರೊಬುಕ್ 445 ಜಿ6' ನೋಟ್ಬುಕ್ ನಿಮ್ಮ ಆಯ್ಕೆಯಾಗಬಹುದು. ಏಕೆಂದರೆ, ಜನಪ್ರಿಯ ಲ್ಯಾಪ್‌ಟಾಪ್ ತಯಾರಕ ಎಚ್‌ಪಿ ಭಾರತದಲ್ಲಿ ಇತ್ತೀಚಿಗಷ್ಟೇ ಪರಿಚಯಿಸಿರುವ 'ಪ್ರೊ ಬುಕ್ 445 ಜಿ6' ವಾಣಿಜ್ಯ ಕೆಲಸಗಳಿಗೆ ಹೇಳಿಮಾಡಿಸಿದಂತಹ ಸಾಧನವಾಗಿದೆ.

ರೈಜೆನ್ ಕ್ವಾಡ್-ಕೋರ್

ಎಎಮ್‌ಡಿ ರೈಜೆನ್ ಕ್ವಾಡ್-ಕೋರ್ ಸಿಪಿಯುಗಳ ಆಯ್ಕೆ, ದೀರ್ಘ ಬ್ಯಾಟರಿ ಭರವಸೆಯೊಂದಿಗೆ ಎಚ್‌ಪಿ 'ಪ್ರೋಬುಕ್ 445 ಜಿ 6' ನೋಟ್ ಬುಕ್ ಬಿಡುಗಡೆಯಾಗಿದ್ದು, ಅಲ್ಟ್ರಾ ಸ್ಲಿಮ್ ಹಾಗೂ ಸ್ಟೈಲಿಶ್ ಆಗಿರುವ ಈ ನೋಟ್ಬುಕ್ ತುಂಬಾ ಹಗುರವಾಗಿದೆ. 18MM ದಪ್ಪವಿರುವ ಇದರ ತೂಕ ಕೇವಲ 1.6 ಕಿ.ಗ್ರಾಂ.ಗಳಿರುವುದರಿಂದ ವಾಣಿಜ್ಯ ಗ್ರಾಹಕರನ್ನು ಸೆಳೆಯುವಲ್ಲಿ ಸಫಲವಾಗಿದೆ.

ಉದ್ಯಮಗಳಿಗೆ ಹೆಚ್ಚು ನೆರವಾಗಲಿದೆ

ಈ ಪ್ರೋಬುಕ್ 445 ಜಿ 6' 400 ಸರಣಿಯ ಮೊದಲ ಪ್ರೊ ಬುಕ್ ಉತ್ಪನ್ನವಾಗಿದ್ದು, ಎಎಂಡಿ ರೈಜನ್ ಪ್ರೊಸೆಸರ್ ಹೊಂದಿರುವ ಈ ನೋಟ್ ಬುಕ್ ಅನ್ನು ಆಧುನಿಕ ವ್ಯವಹಾರದ ಉತ್ಪಾದನೆ ಹೆಚ್ಚಿಸುವ ಸಲುವಾಗಿ ತಯಾರಿಸಲಾಗಿದೆ. ಎಎಂಡಿ ರೈಜನ್ ಪ್ರೊಸೆಸರ್ ಹೊಂದಿರುವ ಈ ನೋಟ್ ಬುಕ್ ಉದ್ಯಮಗಳಿಗೆ ಹೆಚ್ಚು ನೆರವಾಗಲಿದೆ ಎಂದು ಎಚ್‌ಪಿ ಕಂಪೆನಿಯು ಹೇಳಿಕೊಂಡಿದೆ.

 30 ನಿಮಿಷಗಳಲ್ಲಿ 50 ಪ್ರತಿಶತ ಫಾಸ್ಟ್ ಚಾರ್ಜ್

14 ಇಂಚಿನ ಪ್ರದರ್ಶನ, 30 ನಿಮಿಷಗಳಲ್ಲಿ 50 ಪ್ರತಿಶತ ಫಾಸ್ಟ್ ಚಾರ್ಜ್, 16GB ವರೆಗೆ ಡಿಡಿಆರ್ 4 RAM , M.2 SSD 512GB ಮತ್ತು 1TB ಯಾಂತ್ರಿಕ ಹಾರ್ಡ್ ಡ್ರೈವ್ ಸೇರಿದಂತೆ, ಯುಎಸ್‌ಬಿ ಟೈಪ್-ಸಿ ಪೋರ್ಟ್, ಎಚ್‌ಡಿಎಂಐ 1.4 ಬಿ, ಲ್ಯಾನ್, ಹೆಡ್‌ಫೋನ್ ಮತ್ತು ಮೈಕ್ರೊಫೋನ್ ಕಾಂಬೊ ಮತ್ತು ಎಸ್‌ಡಿ ಕಾರ್ಡ್ ರೀಡರ್ ಅನ್ನು ಈ ಪ್ರೋ ಬುಕ್ ಒಳಗೊಂಡಿದೆ.

67,260 ರೂ.ಗಳಿಗೆ

ಈ ಸಾಧನವನ್ನು ವ್ಯಾಪಾರಕ್ಕಾಗಿ ವಿನ್ಯಾಸಗೊಳಿಸಲಾಗಿರುವುದರಿಂದ,ಇದು ಹೆಚ್ಚುವರಿ ಡೇಟಾ ಮತ್ತು ಗುರುತಿನ ಕಳ್ಳತನ ತಡೆಗಟ್ಟುವ ವ್ಯವಸ್ಥೆಯನ್ನು ಹೊಂದಿದೆ. ಇದು BIOSphere Gen4 ಅನ್ನು ಹೊಂದಿದ್ದು, ಮಾಲ್‌ವೇರ್‌ನಿಂದ ಸ್ವಯಂಚಾಲಿತ ರಕ್ಷಣೆ ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ. ಈ 'ಎಚ್‌ಪಿ ಪ್ರೋ ಬುಕ್ 445 ಜಿ' 67,260 ರೂ.ಗಳಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.

Best Mobiles in India

English summary
we are testing a ProBook 400 series laptop, specifically the ProBook 430 G6. It is currently the smallest model of this series. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+