13 ಇಂಚಿನ ಎಚ್‌ಪಿ ಸ್ಪೆಕ್ಟರ್ x360 ಕನ್ವರ್ಟಿಬಲ್ ಲ್ಯಾಪ್‌ಟಾಪ್ ಲಾಂಚ್‌!

|

ಜನಪ್ರಿಯ ಲ್ಯಾಪ್‌ಟಾಪ್‌ ಕಂಪೆನಿ ಎಚ್‌ಪಿ ನೆಕ್ಸ್ಟ್‌ ಜನರೇಷನ್‌ ಆಪ್ಡೇಟ್‌ ವರ್ಷನ್‌ ಸ್ಪೆಕ್ಟರ್ x360 13 ಕನ್ವರ್ಟಿಬಲ್ ಲ್ಯಾಪ್‌ಟಾಪ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದನ್ನ ಕಳೆದ ಸೆಪ್ಟೆಂಬರ್ ಅಂತ್ಯದಲ್ಲಿಯೇ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿತ್ತಾದರೂ ಭಾರತದಲ್ಲಿ ಇಂದು ಲಾಂಚ್‌ ಮಾಡಲಾಗಿದೆ. ಹೊಸ ಎಚ್‌ಪಿ ಸ್ಪೆಕ್ಟರ್ x360 13 ಅನ್ನು ಆಧುನಿಕ ಗ್ರಾಹಕರಿಗೆ ವಿಶೇಷವಾಗಿ ಪ್ರೀಮಿಯಂ ವಿನ್ಯಾಸ ಮತ್ತು ಉನ್ನತ ದರ್ಜೆಯ ಹಾರ್ಡ್‌ವೇರ್‌ನಿಂದ ವಿನ್ಯಾಸಗೊಳಿಸಲಾಗಿದ್ದು, ಉನ್ನತ ಮಟ್ಟದ ಡಿಸ್‌ಪ್ಲೇ ಇದಾಗಿದೆ.

ಹೆಚ್‌ಪಿ

ಹೌದು, ಹೆಚ್‌ಪಿ ಕಂಪೆನಿ ಬಿಡುಗಡೆ ಮಾಡಿರುವ ಹೊಸ ತಲೆಮಾರಿನ ಎಚ್‌ಪಿ ಸ್ಪೆಕ್ಟರ್ x360 13 ಐರಿಸ್ ಪ್ಲಸ್ ಗ್ರಾಫಿಕ್ಸ್ ಜೊತೆಗೆ ಇಂಟೆಲ್ ಕೋರ್10 ಪ್ರೊಸೆಸರ್‌ಗಳನ್ನು ಒಳಗೊಂಡಿದೆ. ಹೊಸ ಕನ್ವರ್ಟಿಬಲ್ ಈ ಹಿಂದಿನ ಡಿಸ್‌ಪ್ಲೇ ಗಿಂತ ಶೇಖಡಾ 13 ರಷ್ಟು ಚಿಕ್ಕದಾಗಿದ್ದು, ಆದರೆ 90% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಹಾಗಾದ್ರೆ ಸ್ಪೆಕ್ಟರ್ x360 13ಕನ್ವರ್ಟಿಬಲ್ ನೋಟ್‌ಬುಕ್ ಯಾವೆಲ್ಲಾ ವಿಶೇಷತೆಗಳನ್ನ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಹೆಚ್‌ಪಿ ಕಂಪೆನಿಯ ಹೊಸ ಸ್ಪೆಕ್ಟರ್ x360 13ಕನ್ವರ್ಟಿಬಲ್ ಲ್ಯಾಪ್‌ಟಾಪ್‌ 4K OLED ಬೆಂಬಲದ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 400 ನಿಟ್‌ಗಳ ಬ್ರೈಟ್‌ನೆಸ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇನ್ನು ಡಿಸ್‌ಪ್ಲೇ ಗಾತ್ರ 13.3-ಇಂಚಿನಷ್ಟಿದೆ. ಇದು HP ಯ ಟ್ರೂ ಬ್ಲ್ಯಾಕ್ ಎಚ್ಡಿಆರ್ ತಂತ್ರಜ್ಞಾನವನ್ನು 100,000 ಕ್ಕೆ ಬೆಂಬಲಿಸುತ್ತದೆ.

ಪ್ರೊಸೆಸರ್‌

ಪ್ರೊಸೆಸರ್‌

ಎಚ್‌ಪಿ ಸ್ಪೆಕ್ಟರ್ x360 13 ರಿಫ್ರೆಶ್ ಮಾದರಿಯು ಕ್ವಾಡ್-ಕೋರ್ 10 ಇಂಟೆಲ್ ಕೋರ್ ಪ್ರೊಸೆಸರ್‌ ಹೊಂದಿದ್ದು, ಇದು ಹಿಂದಿನ ಪೀಳಿಗೆಯ ಕಾರ್ಯಕ್ಷಮತೆಯನ್ನು ಎರಡು ಪಟ್ಟು ತಲುಪಿಸುತ್ತದೆ ಎಂದು ಹೇಳಲಾಗಿದೆ. ಇದು ವೈ-ಫೈ 6 (802.11ax) ಮತ್ತು 4x4 ಗಿಗಾಬಿಟ್ ಎಲ್ ಟಿಇ ಸೇರಿದಂತೆ ಕ್ಯಾಟ್ 9 2 ಎಕ್ಸ್ 2 ಕಾನ್ಫಿಗರೇಶನ್ ಮೇಲೆ 122 ಪ್ರತಿಶತದಷ್ಟು ವೇಗವನ್ನು ಹೊಂದಿದೆ. ಅಲ್ಲದೆ ಯುಎಸ್‌ಬಿ ಟೈಪ್-ಸಿ ಪೋರ್ಟ್ ಪ್ಲೇಸ್‌ಮೆಂಟ್‌ ಅನ್ನು ಸಹ ಹೊಂದಿದೆ.

ಇತರೆ

ಇತರೆ

ಇನ್ನು ಈ ಡಿಸ್‌ಪ್ಲೇ ಯಲ್ಲಿ ಫಿಂಗರ್ಪ್ರಿಂಟ್ ರೀಡರ್ ಬೆಂಬಲವನ್ನು ಒದಗಿಸಲಾಗಿದ್ದು, 4-ಸೆಲ್, 60Whr ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ, ಇದನ್ನು ಒಂದೇ ಚಾರ್ಜ್‌ನಲ್ಲಿ 22 ಗಂಟೆಗಳ ಕಾಲ ಬಳಸಲು ಅವಕಾಶವಿದೆ. ಇನ್ನು ಸಿಸ್ಟಮ್ ಕಾರ್ಯಕ್ಷಮತೆಯನ್ನು ಅತ್ಯುತ್ತಮವಾಗಿಸಲು ಎಚ್‌ಪಿ ಕಮಾಂಡ್ ಸೆಂಟರ್ ಮತ್ತು ಎಚ್‌ಪಿ ನೆಟ್‌ವರ್ಕ್ ಬೂಸ್ಟರ್‌ನಂತಹ ಫಿಚರ್ಸ್ಗಳನ್ನ ನೀಡಲಾಗಿದೆ. ಅಲ್ಲದೆ ವೆಬ್‌ಕ್ಯಾಮ್ ಕಿಲ್ ಸ್ವಿಚ್ ಅನ್ನು ಹೊಂದಿದ್ದು, ಅದು ಬಳಕೆದಾರರು ವೆಬ್‌ಕ್ಯಾಮ್ ಅನ್ನು ಬಟನ್ ಒತ್ತುವ ಮೂಲಕ ಸುರಕ್ಷಿತವಾಗಿ ಆನ್ ಅಥವಾ ಆಫ್ ಮಾಡಲು ಅನುಮತಿಸುತ್ತದೆ. ಇದಲ್ಲದೆ, ಮೈಕ್ರೊಫೋನ್ ಆನ್ ಅಥವಾ ಆಫ್ ಮಾಡಲು ಎಲ್ಇಡಿ ಕೀಲಿಯೊಂದಿಗೆ ಮೀಸಲಾದ ಮ್ಯೂಟ್ ಮೈಕ್ ಇದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ನು ಭಾರತದಲ್ಲಿ ಎಚ್‌ಪಿ ಸ್ಪೆಕ್ಟರ್ x360 13 ಬೆಲೆ 99,990.ರೂಗಳಾಗಿದ್ದು ದೇಶದ 50 ಕ್ಕೂ ಹೆಚ್ಚು ನಗರಗಳಲ್ಲಿ 150 ಎಚ್‌ಪಿ ವರ್ಲ್ಡ್ ಸ್ಟೋರ್‌ಗಳು, ಎಚ್‌ಪಿ ಆನ್‌ಲೈನ್ ಸ್ಟೋರ್ ಮತ್ತು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ಪೋರ್ಟಲ್‌ಗಳ ಮೂಲಕ ನೋಟ್‌ಬುಕ್ ಮಾರಾಟವಾಗಲಿದೆ. ಇದಲ್ಲದೆ, ನೈಟ್ ಫಾಲ್ ಬ್ಲ್ಯಾಕ್ ಮತ್ತು ಪೋಸಿಡಾನ್ ಬ್ಲೂ ಕಲರ್‌ನಲ್ಲಿ ಲಭ್ಯವಿದೆ.

Best Mobiles in India

Read more about:
English summary
HP has launched its next-generation Spectre x360 13 convertible notebook in India. Introduced globally in late-September, the new HP Spectre x360 13 is specifically designed for modern consumers with a premium design and top-notch hardware that includes the 10th generation Intel Core processors along with Iris Plus graphics.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X