HP: ಜಬರ್ದಸ್ತ್ ಗೇಮಿಂಗ್ ಲ್ಯಾಪ್‌ಟಾಪ್ ಲಾಂಚ್; ಅಚ್ಚರಿ ಫೀಚರ್ಸ್.. ದುಬಾರಿ ಬೆಲೆ!
ಭಾರತೀಯ ಲ್ಯಾಪ್‌ಟಾಪ್ ಮಾರುಕಟ್ಟೆಯಲ್ಲಿ ಹೆಚ್‍ಪಿ ಜನಪ್ರಿಯವಾಗಿದೆ. ಕಂಪನಿಯು ತನ್ನ ಅಭಿಮಾನಿಗಳಿಗಾಗಿ ಹೊಸ ಗೇಮಿಂಗ್ ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿದೆ. ಹೌದು, ಹೆಚ್‌ಪಿ ವಿಕ್ಟಸ್ 15 (HP Victus 15) ಇಂದು ಅಧಿಕೃತವಾಗಿ ದೇಶೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಇದು ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ ಖರೀದಿಗೆ ಲಭ್ಯವಿದೆ. ಬನ್ನಿ, ಹೆಚ್‌ಪಿ ವಿಕ್ಟಸ್ 15 ಲ್ಯಾಪ್‌ಟಾಪ್ ಬೆಲೆ, ಲಭ್ಯತೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಹೊಸ ಹೆಚ್‌ಪಿ ವಿಕ್ಟಸ್ 15 (HP Victus 15) ಒಂದು ಎಐ (AI) ಗೇಮಿಂಗ್ ಲ್ಯಾಪ್‌ಟಾಪ್ ಆಗಿದೆ. ಇದು ಅತ್ಯುತ್ತಮ AMD Ryzen 9 8945HS ಶಕ್ತಿಶಾಲಿ ಪ್ರೊಸೆಸರ್ ಹೊಂದಿದೆ. ಮತ್ತು ಮೀಸಲಾದ NPU ಸಹ ಒಳಗೊಂಡಿದೆ. ಹೆಚ್‌ಪಿ ವಿಕ್ಟಸ್ 15 ಲ್ಯಾಪ್‌ಟಾಪ್ ವೇಗ, ದಕ್ಷತೆ ಮತ್ತು ಹೊಂದಾಣಿಕೆಯ ಬುದ್ಧಿಮತ್ತೆಯ ಮೂಲಕ ಗೇಮಿಂಗ್ ಅನುಭವವನ್ನು ಹೆಚ್ಚಿಸುತ್ತದೆ. ಇದು 15.6 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಲ್ಯಾಪ್‌ಟಾಪ್‌ನ ಇನ್ನಿತರ ವಿವರಗಳನ್ನು ತಿಳಿಯಲು ಮುಂದೆ ಓದಿ.

ಹೆಚ್ಪಿ ವಿಕ್ಟಸ್ 15 ಲ್ಯಾಪ್‌ಟಾಪ್ 35.79 x 25.5 x 2.35 ಸೆಂ.ಮೀ. ಅಳತೆ ಹೊಂದಿದೆ. ಹಾಗೆಯೇ ಇದು ಸುಮಾರು 2.29 ಕಿಲೋ ತೂಕ ಹೊಂದಿದೆ. ಇದು ಸಂಪೂರ್ಣ ಗಾತ್ರದ, ಬ್ಯಾಕ್‌ಲಿಟ್ ಪರ್ಫಾರ್ಮೆನ್ಸ್ ಬ್ಲೂ ಅಪಾರದರ್ಶಕ ಕೀಬೋರ್ಡ್‌ನೊಂದಿಗೆ ಸಂಖ್ಯಾ ಕೀಪ್ಯಾಡ್‌ನೊಂದಿಗೆ ಬರುತ್ತದೆ. ಈ ಲ್ಯಾಪ್‌ಟಾಪ್ ಹೆಚ್‌ಪಿ ಇಮೇಜ್‌ಪ್ಯಾಡ್ ಅನ್ನು ಹೊಂದಿದೆ.
ಹೆಚ್‌ಪಿ ವಿಕ್ಟಸ್ 15 ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಹೆಚ್‌ಪಿ ವಿಕ್ಟಸ್ 15 ಲ್ಯಾಪ್‌ಟಾಪ್ 15.6 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಫುಲ್ ಹೆಚ್‌ಡಿ ಪ್ಲಸ್ ಐಪಿಎಸ್ ಮೈಕ್ರೋ ಎಡ್ಜ್ ಡಿಸ್ಪ್ಲೇ ಆಗಿದೆ. ಈ ಡಿಸ್ಪ್ಲೇಯು 1920 x 1080p ರೆಸಲ್ಯೂಶನ್ ಬೆಂಬಲ ಬರುತ್ತದೆ. ಹಾಗೆಯೇ 144Hz ರಿಫ್ರೆಶ್ ದರ, 300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 62.5% sRGB ಬಣ್ಣದ ಕವರೇಜ್ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಹೆಚ್‌ಪಿ ವಿಕ್ಟಸ್ 15 ಲ್ಯಾಪ್ AMD Ryzen 9 8945HS ಪ್ರೊಸೆಸರ್ ಹೊಂದಿದೆ. ಇದು ಗರಿಷ್ಠ ಬೂಸ್ಟ್ ಕ್ಲಾಕ್ 5.2GHz ವರೆಗೆ ಇದೆ. ಎಲ್ಲಾ ಕಾರ್ಯಗಳನ್ನು NVIDIA GeForce RTX 4060, 8GB VRAM ಜೊತೆಗೆ ನಿರ್ವಹಿಸುತ್ತದೆ. ಈ ಲ್ಯಾಪ್‌ಟಾಪ್ 16GB RAM ನೊಂದಿಗೆ ಬರುತ್ತದೆ. ಇದು 5600 MT/s (1 x 16GB) ವೇಗದಲ್ಲಿ ಕೆಲಸ ನಿರ್ವಹಿಸುತ್ತದೆ. ಈ ಲ್ಯಾಪ್ 1TB ಸ್ಟೋರೇಜ್ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಹೆಚ್‌ಪಿ ವಿಕ್ಟಸ್ 15 ಲ್ಯಾಪ್‌ಟಾಪ್ 4-ಸೆಲ್, 70Wh ಲಿ-ಐಯಾನ್ ಪಾಲಿಮರ್ ಬ್ಯಾಟರಿ ಹೊಂದಿದೆ. ಇದು ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಚಾರ್ಜಿಂಗ್‌ಗಾಗಿ 120W AC ಪವರ್ ಅಡಾಪ್ಟರ್ ಅನ್ನು ಒದಗಿಸಲಾಗಿದೆ. ನೀವು ಕೇವಲ 30 ನಿಮಿಷಗಳಲ್ಲಿ ಈ ಬ್ಯಾಟರಿಯನ್ನು ಶೇ.50 ರಷ್ಟು ಚಾರ್ಜ್ ಆಗುತ್ತದೆ ಎಂದು ಹೇಳಿದೆ.
ಕ್ಯಾಮೆರಾ ಮತ್ತು ಆಡಿಯೋ
ಹೆಚ್‌ಪಿ ವಿಕ್ಟಸ್ 15 ಲ್ಯಾಪ್‌ಟಾಪ್ DTS:X ಅಲ್ಟ್ರಾ, ಡ್ಯುಯಲ್ ಸ್ಪೀಕರ್‌ಗಳು ಮತ್ತು ಹೆಚ್‌ಪಿ ಆಡಿಯೋ ಬೂಸ್ಟ್‌ನೊಂದಿಗೆ ಬರುತ್ತದೆ. ಇದು ಆಡಿಯೊ ಗುಣಮಟ್ಟವನ್ನು ಸುಧಾರಿಸುತ್ತದೆ. ಸಂಯೋಜಿತ ಕ್ಯಾಮೆರಾ HP ವೈಡ್ ವಿಷನ್ 720p HD ಕ್ಯಾಮೆರಾ ಆಗಿದೆ. ಇದು ತಾತ್ಕಾಲಿಕ ಶಬ್ದ ಕಡಿತ ಮತ್ತು ಡ್ಯುಯಲ್ ಅರೇ ಡಿಜಿಟಲ್ ಮೈಕ್ರೊಫೋನ್‌ಗಳನ್ನು ಒಳಗೊಂಡಿದೆ.
ಇತರೆ ವೈಶಿಷ್ಟ್ಯಗಳು
ಹೆಚ್‌ಪಿ ವಿಕ್ಟಸ್ 15 ಲ್ಯಾಪ್‌ಟಾಪ್ 10/100/1000 GbE LAN ನೊಂದಿಗೆ ವೈರ್ಡ್ ನೆಟ್‌ವರ್ಕ್ ಸಪೋರ್ಟ್ ಮಾಡುತ್ತದೆ. ಜೊತೆಗೆ ಇದು ರಿಯಲ್‌ಟೆಕ್ ವೈ-ಫೈ 6 ಮತ್ತು ಬ್ಲೂಟೂತ್ v5.4 ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.
HP ವಿಕ್ಟಸ್ 15 ಬೆಲೆ ಮತ್ತು ಲಭ್ಯತೆ
ಹೆಚ್‌ಪಿ ವಿಕ್ಟಸ್ 15 ಎಐ (AI) ಗೇಮಿಂಗ್ ಲ್ಯಾಪ್‌ಟಾಪ್ ಅನ್ನು 1,12,990 ರೂ.ಗೆ ಬಿಡುಗಡೆ ಮಾಡಲಾಗಿದೆ. ಇದು (ಫೆಬ್ರವರಿ 17) ಇಂದಿನಿಂದ ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ ಖರೀದಿಗೆ ಲಭ್ಯವಿದೆ.


Click it and Unblock the Notifications








