Home
ಸುದ್ದಿಜಾಲ

HP Z ಬುಕ್‌ ಸ್ಟುಡಿಯೋ ಮತ್ತು Z ಬುಕ್‌ ಕ್ರಿಯೆಟ್‌ ಲ್ಯಾಪ್‌ಟಾಪ್‌ ಬಿಡುಗಡೆ!

ಟೆಕ್‌ ಮಾರುಕಟ್ಟೆಯಲ್ಲಿ ಸಾಕಷ್ಟು ಬಗೆಯ ಲ್ಯಾಪ್‌ಟಾಪ್‌ಗಳು ಲಬ್ಯವಿವೆ. ಈಗಾಗಲೇ ಹಲವು ಕಂಪೆನಿಗಳು ತಮ್ಮ ವಿವಿಧ ಮಾದರಿಯ ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸುವೆ. ಇವುಗಳಲ್ಲಿ ಹೆಚ್‌ಪಿ ಕಂಪೆನಿ ಕೂಡ ಒಂದಾಗಿದೆ. ಸದ್ಯ ಹೆಚ್‌ಪಿ ಕಂಪೆನಿ ತನ್ನ ಲ್ಯಾಪ್‌ಟಾಪ್‌ ಮಾರುಕಟ್ಟೆಯನ್ನ ಇನ್ನಷ್ಟು ವಿಸ್ತರಿಸಿಕೊಂಡಿದೆ. ಇದೀಗ ಎಚ್‌ಪಿ Z ‌ಬುಕ್ ಸ್ಟುಡಿಯೋ ಮತ್ತು ಎಚ್‌ಪಿ Z ‌ಬುಕ್ ಕ್ರಿಯೆಟ್‌ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ.

ಹೆಚ್‌ಪಿ

ಹೌದು ಹೆಚ್‌ಪಿ ತನ್ನ ಲ್ಯಾಪ್‌ಟಾಪ್‌ ಮಾರುಕಟ್ಟೆಯನ್ನ ವಿಸ್ತರಿಸಿಕೊಳ್ಳಲು ಮುಂದಾಗಿದ್ದು, ಇದರ ಅಂಗವಾಗಿ ಹೊಸ ಮಾದರಿಯ ಲ್ಯಾಪ್‌ಟಾಪ್ಗಳನ್ನ ಪರಿಚಯಿಸಿದೆ. ಸದ್ಯ ಇದೀಗ ಪರಿಚಯಿಸಿರುವ ಎಚ್‌ಪಿ Z ‌ಬುಕ್ ಸ್ಟುಡಿಯೋ ಮತ್ತು ಎಚ್‌ಪಿ Z ‌ಬುಕ್ ಕ್ರಿಯೆಟ್‌ ಲ್ಯಾಪ್‌ಟಾಪ್‌ಗಳು ಹೊಸ ಪ್ರೊಸೆಸರ್‌ಗಳು ಮತ್ತು ಜಿಪಿಯು ಆಯ್ಕೆಗಳೊಂದಿಗೆ ಬಮದಿವೆ. ಜೊತೆಗೆ ತನ್ನ ಎಚ್‌ಪಿ ಎನ್‌ವಿ 15 ಮತ್ತು ಎಚ್‌ಪಿ ಎನ್‌ವಿ 13 ಲ್ಯಾಪ್‌ಟಾಪ್‌ಗಳನ್ನು ಸಹ ರಿಫ್ರೆಶ್ ಮಾಡಿ ಬಿಡುಗಡೆ ಮಾಡಿದೆ. ಅಷ್ಟಕ್ಕೂ ಈ ಹೊಸ ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಎಚ್‌ಪಿ

ಇನ್ನು ಎಚ್‌ಪಿ Z ‌ಬುಕ್ ಕ್ರಿಯೆಟ್‌ ಮತ್ತು ಎಚ್‌ಪಿ Z ‌ಬುಕ್ ಸ್ಟುಡಿಯೋ ಲ್ಯಾಪ್‌ಟಾಪ್‌ಗಳು ಎನ್‌ವಿಡಿಯಾ ಜೀಫೋರ್ಸ್ ಮತ್ತು ಕ್ವಾಡ್ರೊ ಜಿಪಿಯು ಗಳನ್ನ ಹೊಮದಿವೆ. ಅಲ್ಲದೆ ಈ ಲ್ಯಾಪ್‌ಟಾಪ್‌ಗಳು ಆರ್‌ಟಿಎಕ್ಸ್ ಆಯ್ಕೆಗಳನ್ನು ಸಹ ಹೊಂದಿವೆ. ಇದಲ್ಲದೆ ಈ ಲ್ಯಾಪ್‌ಟಾಪ್‌ಗಳ ಬ್ಯಾಟರಿ ಸಾಮರ್ಥ್ಯವು ಉತ್ತಮ ವಾಗಿದ್ದು, ಇಡೀ ದಿನದ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಇನ್ನು ಹೊಸದಾಗಿ ರಿಫ್ರೆಶ್ ಮಾಡಿರುವ ಎಚ್‌ಪಿ nv15 ಆಲ್-ಅಲ್ಯೂಮಿನಿಯಂ ಚಾಸಿಸ್ ಮತ್ತು ಟಚ್‌ನೊಂದಿಗೆ 4k oled ಡಿಸ್‌ಪ್ಲೇ ಹೊಮದಿದ್ದು, ಹೊಸ ಡೈಮಂಡ್-ಕಟ್ ವಿನ್ಯಾಸವನ್ನು ಹೊಂದಿವೆ. ಅಲ್ಲದೆ nv15 ಲ್ಯಾಪ್‌ಟಾಪ್ 10 ನೇ ಜನ್ ಇಂಟೆಲ್ ಕೋರ್ ಪ್ರೊಸೆಸರ್‌ ಅನ್ನು ಒಳಗೊಂಡಿದೆ.

ಸ್ಟುಡಿಯೋ

HP ZBook ಸ್ಟುಡಿಯೋ ಮತ್ತು HP ZBook ಕ್ರಿಯೆಟ್‌ ಲ್ಯಾಪ್‌ಟಾಪ್‌ಗಳು 15.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿವೆ. ಅಲ್ಲದೆ ಈ ಲ್ಯಾಪ್‌ಟಾಪ್‌ಗಳು ಕ್ವಾಡ್ರೊ ಅಥವಾ ಜೀಫೋರ್ಸ್ ಗ್ರಾಫಿಕ್ಸ್‌ನ ಆಯ್ಕೆಗಳೊಂದಿಗೆ ಬರಲಿವೆ. ಜೊತೆಗೆ ಹೊಸ ತಲೆಮಾರಿನ ಇಂಟೆಲ್ ಕೋರ್ ಮತ್ತು ಕ್ಸಿಯಾನ್ ಪ್ರೊಸೆಸರ್‌ವೇಗವನ್ನ ಪಡೆದುಕೊಂಡಿವೆ. ಇದಲ್ಲದೆ ಈ ಲ್ಯಾಪ್‌ಟಾಪ್‌ಗಳ ಹೊರಭಾಗವು ಅಲ್ಯೂಮಿನಿಯಂ ಕವಚದಿಂದ ಆವೃತವಾಗಿದೆ. ಒಟ್ಟಾರೆ 17.5 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಇನ್ನು HP ZBook ಸ್ಟುಡಿಯೋ ಮತ್ತು HP ZBook ರಚಿಸಿ MIL-STD 810G ಸ್ಟ್ಯಾಂಡರ್ಡ್‌ಗೆ ಅನುಸಾರವಾಗಿವೆ.

ಲ್ಯಾಪ್‌ಟಾಪ್‌ಗಳು

ಇನ್ನು ಈ ಲ್ಯಾಪ್‌ಟಾಪ್‌ಗಳು 150 Hz ರೋಲ್-ಆಫ್ ಬಾಸ್ ಮತ್ತು ಸ್ಪೀಕರ್‌ಗಳನ್ನು ಹೊಂದಿದ್ದು, ಬ್ಯಾಂಗ್ ಮತ್ತು ಒಲುಫ್‌ಸೆನ್ ಕಸ್ಟಮ್-ಟ್ಯೂನ್ ಮಾಡುತ್ತವೆ. ಜೊತೆಗೆ ಈ ಲ್ಯಾಪ್‌ಟಾಪ್‌ಗಳು Z ‌ಬುಕ್ ಸ್ಟುಡಿಯೋ, Power ಸ್ಲೈಡರ್ ಮತ್ತು Z ಪ್ರಿಡಿಕ್ಟಿವ್ ಫ್ಯಾನ್ ಅಲ್ಗಾರಿದಮ್‌ ಫೀಚರ್ಸ್‌ಗಳನ್ನ ಹೊಂದಿವೆ. ಸದ್ಯ ಈ ಲ್ಯಾಪ್‌ಟಾಪ್‌ಗಳು ಬಿಡುಗಡೆ ಆಗಿದೆಯಾದರೂ ಇದೇ ಆಗಸ್ಟ್‌ ತಿಂಗಳಿನಲ್ಲಿ ಯುಎಸ್‌ನಲ್ಲಿ ಲಭ್ಯವಾಗಲಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳು HP.com ಮೂಲಕ ಮಾರಾಟವಾಗಲಿವೆ.

Best Mobiles in India

English summary
The HP ZBook Studio and HP ZBook Create laptops are expected to be available in August in the US.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+