Home
ಸುದ್ದಿಜಾಲ

ಹೆಚ್‌ಟಿಸಿ ಸಂಸ್ಥೆಯಿಂದ HTC U20 5G ಮತ್ತು Desire 20 Pro ಸ್ಮಾರ್ಟ್‌ಫೋನ್‌ ಬಿಡುಗಡೆ!

ಟೆಕ್‌ ವಲಯದಲ್ಲಿ ಹಲವು ವೈವಿಧ್ಯಮಯವಾದ ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ. ಸ್ಮಾರ್ಟ್‌ಫೋನ್‌ ಪ್ರಿಯರ ಆಶಯಗಳಿಗೆ ತಕ್ಕಂತೆ ವಿಭಿನ್ನ ವಿನ್ಯಾಸಗಳ ಸ್ಮಾರ್ಟ್‌ಫೋನ್‌ಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಹಲವಾರು ಕಂಪೆನಿಗಳು ತಮ್ಮ ವಿವಿಧ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿವೆ. ಇವುಗಳಲ್ಲಿ ಹೆಚ್‌ಟಿಸಿ ಕಂಪೆನಿ ಕೂಡ ಒಂದಾಗಿದೆ. ಸದ್ಯ ಇದೀಗ ಹೆಚ್‌ಟಿಸಿ ಕಂಪೆನಿ ತನ್ನ ಎರಡು ಹೊಸ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ.

ಹೆಚ್‌ಟಿಸಿ

ಹೌದು, ಹೆಚ್‌ಟಿಸಿ ಕಂಪೆನಿ ತನ್ನ ಹೊಸ HTC U20 5G ಮತ್ತು HTC ಡಿಸೈರ್ 20 ಪ್ರೊ ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಿದೆ. ಪ್ರಾರಂಭದಲ್ಲಿ ಮಾರುಕಟ್ಟೆಯಲ್ಲಿ ಸಾಕಷ್ಟು ಸೌಂಡ್‌ ಮಾಡಿದ್ದ ಹೆಚ್‌ಟಿಸಿ ಕಂಪೆನಿ ಇದೀಗ ಈ ಎರಡು ಮಧ್ಯಮ ಶ್ರೇಣಿಯ ಫೋನ್‌ಗಳ ಮೂಲಕ ರಿ ಎಂಟ್ರಿ ನೀಡಿದೆ. ಇನ್ನೂ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಕ್ವಾಡ್-ರಿಯರ್‌ ಕ್ಯಾಮೆರಾ ಸೆಟ್‌ಅಪ್ ಮತ್ತು ಪಂಚ್-ಹೋಲ್‌ ಡಿಸ್‌ಪ್ಲೇ ವಿನ್ಯಾಸವನ್ನ ಹೊಂದಿದೆ ಎನ್ನಲಾಗ್ತಿದೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳ ವಿಶೇಷತೆ ಹಾಗೂ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

HTC U 20 5G ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ

HTC U 20 5G ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ

ಇನ್ನು ಈ ಸ್ಮಾರ್ಟ್‌ಫೋನ್‌ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.8 ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಆಗಿದ್ದು 20: 9 ರಚನೆಯ ಅನುಪಾತವನ್ನು ಒಳಗೊಂಡಿದೆ. ವೀಡಿಯೋ ವಿಕ್ಷಣೆಗೆ ಹಾಗೂ ವೀಡಿಯೊ ಕರೆಗಳಿಗೆ ಯೋಗ್ಯವಾದ ಡಿಸ್‌ಪ್ಲೇ ಮಾದರಿಯನ್ನ ಹೊಂದಿದೆ.

HTC U 20 5G ಸ್ಮಾರ್ಟ್‌ಫೋನ್‌ ಪ್ರೊಸೆಸರ್‌

HTC U 20 5G ಸ್ಮಾರ್ಟ್‌ಫೋನ್‌ ಪ್ರೊಸೆಸರ್‌

HTC U 20 5G ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 765G SoC ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿದೆ. ಅಲ್ಲದೆ ಇದು ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ 8GB RAM ಮತ್ತು 256GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನ ಒಳಗೊಂಡಿದೆ.

HTC U 20 5G ಸ್ಮಾರ್ಟ್‌ಫೋನ್‌ ಕ್ಯಾಮೆರಾ

HTC U 20 5G ಸ್ಮಾರ್ಟ್‌ಫೋನ್‌ ಕ್ಯಾಮೆರಾ

ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ, ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹಾಗೂ 118 ಡಿಗ್ರಿ ವೈಡ್-ಆಂಗಲ್ ಫೀಲ್ಡ್ ವ್ಯೂವ್‌ ಹೊಂದಿರುವ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌, ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಮ್ಯಾಕ್ರೋ , 4K ವಿಡಿಯೋ ರೆಕಾರ್ಡಿಂಗ್, ಫೇಸ್ ಡಿಟೆಕ್ಷನ್, ಡ್ಯುಯಲ್-ಎಲ್ಇಡಿ ಫ್ಲ್ಯಾಷ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

HTC U 20 5G ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಹೊಂದಿದ್ದು, 18W ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್, GPS, AGPS, ಬೀಡೌ, ಗ್ಲೋನಾಸ್, NFC, ಬ್ಲೂಟೂತ್ V5, ವೈ-ಫೈ, 5G, ಅನ್ನು ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಆಂಬಿಯೆಂಟ್ ಲೈಟ್ ಸೆನ್ಸರ್, ಡೈನಾಮಿಕ್ ಗ್ರಾವಿಟಿ ಸೆನ್ಸರ್, ಮತ್ತು ರಿಯರ್‌ ಫಿಂಗರ್‌ಪ್ರಿಂಟ್‌ ಸೆನ್ಸಾರ್ ಅನ್ನು ಹೊಂದಿದೆ.

HTC ಡಿಸೈರ್‌ 20 ಪ್ರೊ ಸ್ಮಾರ್ಟ್‌ಫೋನ್‌

HTC ಡಿಸೈರ್‌ 20 ಪ್ರೊ ಸ್ಮಾರ್ಟ್‌ಫೋನ್‌

HTC ಡಿಸೈರ್ 20 ಪ್ರೊ ಸ್ಮಾರ್ಟ್‌ಫೋನ್‌ 6.5-ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನ ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇಯು 19.5:9 ರಚನೆಯ ಅನುಪಾತವನ್ನ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 665 SoC ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ ಈ ಸ್ಮಾರ್ಟ್‌ಫೋನ್‌ 6GB RAM ಮತ್ತು 128GB ಸಂಗ್ರಹ ಸಾಮರ್ಥ್ಯವನ್ನ ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯವನ್ನ ವಿಸ್ತರಣೆ ಮಾಡಬಹುದಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ನು ಈ ಎರಡು ಸ್ಮಾರ್ಟ್‌ಫೋನ್‌ಗಳು ಯಾವ ಬೆಲೆಯನ್ನ ಹೊಂದಿರಲಿವೆ ಅನ್ನೊದು ಇನ್ನು ಬಹಿರಂಗವಾಗಿಲ್ಲ. ಇನ್ನು ಈ ಸ್ಮಾರ್ಟ್‌ಫೋನ್‌ 22.1 ಗಂಟೆಗಳ ಟಾಕ್ ಟೈಮ್ ಮತ್ತು 156.2 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಅನ್ನು ಸಹ ನಿಡಲಿದೆ ಎಂದು ಹೇಳಲಾಗಿದೆ.

Best Mobiles in India

English summary
HTC U20 5G and HTC Desire 20 Pro phones have launched in Taiwan as the company's latest smartphone offerings.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+