ಮಾರುಕಟ್ಟೆಗೆ ಎಚ್‌ಟಿಸಿ ಹೊಸ ಕೊಡುಗೆ

Written By:

ಏಷ್ಯಾ ಮಾರುಕಟ್ಟೆಯ ಮೇಲೆ ನೇರ ದಾಳಿಯನ್ನಿರಿಸಿ, ಹೊಸ ಡಿಸೈರ್ 516 ಸಿ ಡ್ಯುಯಲ್ ಸಿಮ್ ಬೆಂಬಲದೊಂದಿಗೆ ರೂ 12,990 ಕ್ಕೆ ಬರುತ್ತಿದೆ. ಎಚ್‌ಟಿಸಿ ಡಿಸೈರ್
516 ಸಿ ಇಂದಿನಿಂದ ಭಾರತದಲ್ಲಿ ಸ್ನ್ಯಾಪ್‌ಡೀಲ್‌ನಲ್ಲಿ ಲಭ್ಯವಾಗುತ್ತಿದೆ. ಈ ಹೊಸ ಸ್ಮಾರ್ಟ್‌ಫೋನ್ ಡಿಸೈರ್ 516 ನ ಹೊಸ ಆವೃತ್ತಿಯಾಗಿದ್ದು ಡ್ಯುಯಲ್ ಸಿಮ್ ಬೆಂಬಲದೊಂದಿಗೆ ಭಾರತದಲ್ಲಿ ಜೂನ್‌ನಲ್ಲಿ ಲಾಂಚ್ ಆಗಿತ್ತು.

ಎಚ್‌ಟಿಸಿ ಡಿಸೈರ್ 516ಸಿ, 5 ಇಂಚಿನ (960 × 540 pixels) qHD ಕ್ಯಾಪಸಿಟೀವ್ ಟಚ್ ಸ್ಕ್ರೀನ್‌ನೊಂದಿಗೆ ಬಂದಿದೆ. ಇದರಲ್ಲಿ 1.2 GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್ ಇದರಲ್ಲಿದ್ದು, ಹೊಸ ಎಚ್‌ಟಿಸಿ ಸ್ಮಾರ್ಟ್‌ಫೋನ್ ಒಂದು ಮಧ್ಯಮ ಶ್ರೇಣಿಯ ಫೋನ್ ಆಗಿದ್ದು 1 ಜಿಬಿ RAM ನೊಂದಿಗೆ ಬಂದಿದೆ, ಮತ್ತು ಆಂಡ್ರಾಯ್ಡ್ ಓಎಸ್ ಸೆನ್ಸ್ UI ಸ್ಲ್ಯಾಪ್‌ಡ್ ಇದರಲ್ಲಿದೆ.

ಹೊಸ ಎಚ್‌ಟಿಸಿ ಡಿಸೈರ್ 516ಸಿ ರೂ 12,990 ಕ್ಕೆ

ಇದನ್ನೂ ಓದಿ: ಈ ದೀಪಾವಳಿ ಆಚರಣೆ ಕ್ವಾಡ್ ಕೋರ್ ಫೋನ್ಸ್‌ನೊಂದಿಗೆ

ಇನ್ನು ಕ್ಯಾಮೆರಾ ವಿಶೇಷತೆಗಳತ್ತ ಗಮನಹರಿಸುವುದಾದರೆ, 5 ಎಮ್‌ಪಿ ರಿಯರ್ ಸ್ನ್ಯಾಪರ್ ಜೊತೆಗೆ LED ಫ್ಲ್ಯಾಶ್ ಇದರಲ್ಲಿದೆ ಮತ್ತು 0.3 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಡಿವೈಸ್ ಹೊಂದಿದೆ. ಫೋನ್‌ನ ಆಂತರಿಕ ಸಂಗ್ರಹಣೆ 4 ಜಿಬಿಯಾಗಿದ್ದು ಇದನ್ನು 64 ಜಿಬಿಗೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದು. ಸಂಪರ್ಕ ವಿಶೇಷತೆಗಳತ್ತ ಗಮನ ಹರಿಸುವುದಾದರೆ ಇದು 3G EVDO Rev.A + 2G EDGE, Wi-Fi 802.11 b/g/n, DLNA, ಬ್ಲ್ಯೂಟೂತ್ 4.0, GPS ಅನ್ನು ಒಳಗೊಂಡಿದೆ.

ಇನ್ನೂ ಹೆಚ್ಚಾಗಿ ಹೇಳಬೇಕೆಂದರೆ ಇದು ಡ್ಯುಯಲ್ ಸಿಮ್ ಫೋನ್ ಆಗಿದ್ದು ಫೋನ್ 9.7 ಎಮ್‌ಎಮ್ ದಪ್ಪ ಹಾಗೂ ತೂಕ 160 ಗ್ರಾಮ್ ಆಗಿದೆ. ಫೋನ್‌ನ ಬ್ಯಾಟರಿ ಸಾಮರ್ಥ್ಯ 1950 mAh ಬ್ಯಾಟರಿಯಾಗಿದ್ದು ಹೊಸ ಡಿಸೈರ್ 516 ಸಿ ಇತ್ತೀಚಿನ ಮೋಟೋ ಜಿ 2014 ಆವೃತ್ತಿಯಂತಿದೆ.

English summary
This article tells about HTC Desire 516c With 5-inch Display, Dual SIM Support Launched in India At Rs 12,990.h
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot