ಸಿಇಎಸ್ 2015 ನಲ್ಲಿ ಎಚ್‌ಟಿಸಿ ಡಿಸೈರ್ 826 ಲಾಂಚ್

By Shwetha
|

ಸಿಇಎಸ್ 2015 ನಲ್ಲಿ ಎಚ್‌ಟಿಸಿ ತನ್ನ ಪ್ರಥಮ ಡಿಸೈರ್ ಶ್ರೇಣಿಗಳ ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್‌ ಚಾಲನೆಯಲ್ಲಿರುವ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಎಚ್‌ಟಿಸಿ ಡಿಸೈರ್ 826 ಎಂದು ಇದಕ್ಕೆ ನಾಮಕರಣ ಮಾಡಿದೆ.

ಎಚ್‌ಟಿಸಿ ಡಿಸೈರ್ 826 ನ ಬೆಲೆ ಇನ್ನೂ ತಿಳಿದು ಬಂದಿಲ್ಲ ಆದರೆ ಕಂಪೆನಿ ಹೇಳುವಂತೆ ಇದು ಚೀನಾದಲ್ಲಿ ಪ್ರಥಮ ಲಾಂಚ್ ಆಗಲಿದ್ದು ನಂತರ ಏಷ್ಯಾದ ಮಾರುಕಟ್ಟೆಗೆ ಬರಲಿದೆ ಎಂದಾಗಿದೆ. ಎಚ್‌ಟಿಸಿಯ ಭಾರತೀಯ ವೆಬ್‌ಸೈಟ್‌ಗಳಲ್ಲಿ "ಶೀಘ್ರದಲ್ಲಿ ಬರಲಿದೆ" ಎಂಬ ತಲೆಬರಹದಡಿಯಲ್ಲಿ ಫೋನ್ ಪಟ್ಟಿಯಾಗಿದೆ.

ಸಿಇಎಸ್ 2015 ನಲ್ಲಿ ಎಚ್‌ಟಿಸಿ ಡಿಸೈರ್ 826 ಲಾಂಚ್

4ಜಿ ಬೆಂಬಲಿತ ಡಿಸೈರ್ 826 ಸ್ಮಾರ್ಟ್‌ಫೋನ್ ಎರಡು ಆವೃತ್ತಿಗಳಲ್ಲಿ (ಸಿಂಗಲ್ ಸಿಮ್ ಮತ್ತು ಡ್ಯುಯಲ್ ಸಿಮ್) ಬಂದಿದೆ. ಎಚ್‌ಟಿಸಿ ಡಿಸೈರ್ 826 ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್ ಅನ್ನು ಪಡೆದುಕೊಂಡಿದ್ದು ಮೇಲ್ಭಾಗದಲ್ಲಿ ಎಚ್‌ಟಿಸಿ ಸೆನ್ಸ್ ಯುಐ ಸ್ಕಿನ್ ಟಾಪ್ ಅನ್ನು ಹೊಂದಿದೆ ಮತ್ತು 5.5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ.

ಡಿಸೈರ್ 826 ಸ್ಮಾರ್ಟ್‌ಫೋನ್ ಓಕ್ಟಾ ಕೋರ್ 64 ಬಿಟ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ಪ್ರೊಸೆಸರ್ ಅನ್ನು ಹೊಂದಿದ್ದು ಅಡ್ರೆನೊ 405 ಜಿಪಿಯು ಫೋನ್‌ನಲ್ಲಿದೆ. 2ಜಿಬಿ RAM ಡಿವೈಸ್‌ನಲ್ಲಿದ್ದು ಇದು 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಬಿಎಸ್ಐ ಸೆನ್ಸಾರ್, ಎಲ್‌ಇಡಿ ಫ್ಲ್ಯಾಶ್ ಅನ್ನು ಹೊಂದಿದೆ. ಇನ್ನು ಫೋನ್‌ನ ಮುಂಭಾಗ ಕ್ಯಾಮೆರಾ 4 ಅಲ್ಟ್ರಾ ಪಿಕ್ಸೆಲ್ ಶೂಟರ್ ಅನ್ನು ಪಡೆದುಕೊಂಡಿದೆ. ಸಂಗ್ರಹಣಾ ಸಾಮರ್ಥ್ಯ 16ಜಿಬಿಯಾಗಿದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದೆ.

Best Mobiles in India

English summary
HTC at CES 2015 has launched its first Desire series smartphone with Android 5.0 Lollipop, dubbed the HTC Desire 826.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X