ಹೆಚ್‌ಟಿಸಿಯ ನೂತನ ಡಿಸೈರ್ ಎಸ್‌ವಿ ಬಿಡುಗಡೆ
ಭಾರತೀಯ ಮಾರುಕಟ್ಟೆಗೆ ಆಪಲ್‌ನ ಐಫೋನ್ 5 ಕಾಲಿರಿಸಿರುವ ಸಂಭ್ರಮದಲ್ಲಿರುವ ಗ್ರಾಹಕರುಗಳಿಗೆ ಮತ್ತೊಂದು ಸಿಹಿ ಸುದ್ಧಿ ಏನೆಂದರೆ ಥೈವಾನ್ ಮೂಲದ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಯಾದ ಹೆಚ್‌ಟಿಸಿ ತನ್ನಯ ಬಹು ನಿರೀಕ್ಷಿತ ವಿಂಡೋಸ್ ಫೋನ್ 8 ಚಾಲಿತ ನೂತನ ಸ್ಮಾರ್ಟ್‌ಫೋನ್‌ಗಳಾದಂತಹ ಹೆಚ್‌ಟಿಸಿ 8ಎಕ್ಸ್, 8ಎಸ್ ಹಾಗೂ ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಚಾಲಿತ ಒನ್‌ಎಕ್ಸ್+ ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಇದಲ್ಲದೆ ಸಂಸ್ಥೆಯು ಇತ್ತೀಚೆಗೆ ನಡೆಸಿದ ಬಿಡುಗಡೆ ಸಮಾರಂಭದಲ್ಲಿ ನೂತನ ವಿನ್ಯಾಸ ಹೊಂದಿರುವಂತಹ ಹೆಚ್‌ಟಿಸಿ ಡಿಸೈರ್ ಎಸ್‌ವಿ ಕೂಡ ಮಾರುಕಟ್ಟೆಗೆ ಪರಿಚಯಿಸಿದ್ದು ಅದರ ಫೀಚರ್ಸ್‌ಗಳು ಈ ರಿತಿ ಇವೆ.
ಗಾತ್ರ ಹಾಗೂ ತೂಕ : ಹೆಚ್‌ಟಿಸಿ ಡಿಸೈರ್ ಎಸ್‌ವಿ ಕೇವಲ 10.7 mm ದಪ್ಪವಿದ್ದು 131 ಗ್ರಾಂ ತೂಕವಿದೆ.
ದರ್ಶಕ : ಡ್ಯುಯೆಲ್ ಸಿಮ್ ಸ್ಮಾರ್ಟ್‌ಫೋನ್‌ನಲ್ಲಿ 4.3 ಇಂಚಿನ ಸೂಪರ್ LCD 2 ಟಚ್‌ಸ್ಕ್ರೀನ್ ನೊಂದಿಗೆ 480 x 800 ಪಿಕ್ಸೆಲ್ಸ್ ಹೊಂದಿದೆ.
ಪ್ರೊಸೆಸರ್ : ಹೆಚ್‌ಟಿಸಿ ಡಿಸೈರ್ ಎಸ್‌ವಿ ನಲ್ಲಿ 1GHz ಡ್ಯುಯೆಲ್ ಕೋರ್ ಪ್ರೊಸೆಸರ್ ಹೊಂದಿದೆ.
ಓಎಸ್ : ನೂತನ ಹೆಚ್‌ಟಿಸಿ ಡಿಸೈರ್ ಎಸ್‌ವಿ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 4.0 ಐಸಿಎಸ್ ಆಪರೇಟಿಂಗ್ ಸಿಸ್ಟಂ ಹೊಂದಿದೆ. ಹಾಗೂ ಶೀಘ್ರದಲ್ಲೇ ಆಂಡ್ರಾಯ್ಡ್ 4.1 ಜೆಲ್ಲಿಬೀನ್‌ಗೆ ಅಪ್ಗ್ರೇಡ್ ಆಗಲಿದೆ.
ಸ್ಟೋರೇಜ್ : ನೂತನ ಸ್ಮಾರ್ಟ್ ಫೋನ್ 768MB RAM, 4GB ಯೊಂದಿಗೆ 32GB ವರೆಗಿನ ಮೆಮೊರಿ ವಿಸ್ತರಣಾ ಸಾಮರ್ತ್ಯ ಹೊಂದಿರುವ ಮಾದರಿಯಲ್ಲಿ ಲಭ್ಯವಿದ್ದು. ಹೆಚ್ಚುವರಿ ಎರೆಡು ವರ್ಷಗಳವರೆಗೆ 25GB ಯ ಆನ್‌ಲೈನ್ ಡ್ರಾಪ್ ಬಾಕ್ಸ ಸ್ಟೋರೇಜ್ ಸಹ ನೀಡಲಾಗಿದೆ.
ಕ್ಯಾಮೆರಾ : ಹೆಚ್‌ಟಿಸಿ ಡಿಸೈರ್ ಎಸ್‌ವಿ ಸ್ಮಾರ್ಟ್‌ಫೋನ್‌ನಲ್ಲಿ ಹಿಂಬದಿಯ 8MP ಕ್ಯಾಮೆರಾ ಹೊಂದಿದ್ದು LED ಫ್ಲಾಷ್ ಹಾಗೂ ಬಿಎಸ್‌ಐ ಸೆನ್ಸಾರ್ ಫೀಚರ್ಸ್‌ನಿಂದ ಕೂಡಿದೆ. ಅಂದಹಾಗೆ ವಿಡಿಯೋ ಕರೆಗಾಗಿ ಮುಂಬದಿಯ ಕ್ಯಾಮೆರಾ ಇಲ್ಲವಾಗಿದೆ.
ಕನೆಕ್ಟಿವಿಟಿ : 3G, ವೈ-ಫೈ, ಬ್ಲೂಟೂತ್ 4.0 ಹಾಗೂ ಮೈಕ್ರೋ ಯುಎಸ್‌ಬಿ 2.0 ಹೊಂದಿದೆ.
ಬ್ಯಾಟರಿ : ಹೆಚ್‌ಟಿಸಿ ಡಿಸೈರ್ ಎಸ್‌ವಿ ಸ್ಮಾರ್ಟ್‌ಫೋನ್‌ನಲ್ಲಿ 1,620 mAh Li-ion ಬ್ಯಾಟರಿ ನೀಡಲಾಗಿದೆ.
ಬೆಲೆ ಹಾಗೂ ಲಭ್ಯತೆ
ಹೆಚ್‌ಟಿಸಿ ಡಿಸೈರ್ ಎಸ್‌ವಿ ರೂ. 22,590 ದರದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಹಳದಿ ಹಾಗೂ ಸ್ಟೆಲ್ತ್ ಬ್ಲಾಕ್ ಬಣ್ಣಗಳಲ್ಲಿ ದೊರೆಯಲಿದೆ. ಅಂದಹಾಗೆ ಇದೇ ತಿಂಗಳಿನಿಂದ ನೂತನ ಸ್ಮಾರ್ಟ್ ಫೋನ್ ಖರೀದಿಗೆ ಲಭ್ಯವಾಗಲಿದೆ.
ಆನ್‌ಲೈನ್‌ನಲ್ಲಿ ಸ್ಮಾರ್ಟ್‌ಫೋನ್‌ಖರೀದಿಗಾಗಿ ಗೋಪ್ರೋಬೋ ಗೆ ಭೇಟಿನೀಡಿ.


Click it and Unblock the Notifications









