ಶೀಘ್ರದಲ್ಲೇ HTC U24 ಸರಣಿಯ ಸ್ಮಾರ್ಟ್‌ಫೋನ್ ಲಾಂಚ್ ! ನಿರೀಕ್ಷಿತ ಫೀಚರ್ಸ್ ಏನಿರಲಿವೆ ?
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇತ್ತೀಚೆಗೆ HTC ಫೋನ್‌ಗಳು ಸಹ ಸದ್ದು ಮಾಡಲು ಪ್ರಾರಂಭಿಸಿವೆ. ಈ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳು ಪ್ರಸ್ತುತ ದಿನಗಳಲ್ಲಿ ವಿವಿಧ ಸುಧಾರಿತ ಫೀಚರ್ಸ್‌ನೊಂದಿಗೆ ಆಕರ್ಷಕ ನೋಟವನ್ನು ಪಡೆದುಕೊಂಡು ಮಾರುಕಟ್ಟೆಗೆ ಲಗ್ಗೆ ಇಟ್ಟು ದೊಡ್ಡ ದೊಡ್ಡ ಬ್ರಾಂಡ್‌ಗಳಿಗೆ ಪೈಪೋಟಿ ನೀಡಲು ಆರಂಭಿಸಿವೆ. ಇದೀಗ HTC ನೂತನ U ಸರಣಿಯ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡುವ ಕುರಿತು ಮಾಹಿತಿ ನೀಡಿದೆ. ಈ ಫೋನ್ ಉತ್ತಮ ಕ್ಯಾಮೆರಾ ಆಯ್ಕೆ ಜೊತೆಗೆ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಹಾಗಾದ್ರೆ ಬನ್ನಿ HTC ಘೋಷಣೆ ಮಾಡಿರುವ ನೂತನ ಸ್ಮಾರ್ಟ್‌ಫೋನ್ ಕುರಿತಾದ ಮಾಹಿತಿ ಈ ಲೇಖನದ ಮೂಲಕ ತಿಳಿಯೋಣ.
HTC ಸಂಸ್ಥೆ ತನ್ನ U ಸರಣಿಯ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡುವ ಕುರಿತು ಮಾಹಿತಿ ಹಂಚಿಕೊಂಡಿದೆ. ಜೂನ್ 6 ರಂದು ತನ್ನ ಮಾನಿಕರ್ ಕುರಿತು ಸಾಮಾಜಿಕ ಮಾಧ್ಯಮದ ಮೂಲಕ ಮಾಹಿತಿ ಬಹಿರಂಗಪಡಿಸದೆ. ಫೋನ್ ಮುಂದಿನ ವಾರ ಬಿಡುಗಡೆಯಾಗಲಿದೆ, ಇದು HTC U24 ಮತ್ತು HTC U24 Pro ಎಂದು ಊಹಿಸಲಾಗಿದೆ. ಪ್ರೊ ಮಾದರಿಯು ಸ್ನಾಪ್‌ಡ್ರಾಗನ್ 7 Gen 3 SoC ನಿಂದ ಚಾಲಿತವಾಗುವ ನಿರೀಕ್ಷೆಯಿದೆ. ಸಂಸ್ಥೆ ಕಳೆದ ವರ್ಷದ ಬಿಡುಗಡೆಯಾಗಿರುವ HTC U23 ಮತ್ತು HTC U23 ಪ್ರೊನ ಮುಂದುವರೆದ ಜನರೇಷನ್ ಸ್ಮಾರ್ಟ್‌ಫೋನ್ ಆಗಿ ಈ ಮಾದರಿಗಳನ್ನು ಬಿಡುಗಡೆ ಮಾಡಬಹುದು ಎಂದು ಊಹಿಸಲಾಗಿದೆ.

ನೂತನ ಸ್ಮಾರ್ಟ್‌ಫೋನ್ ಘೋಷಿಸಿದ HTC:
ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳ ಮೂಲಕ HTC ತೈವಾನ್ ದೇಶದಲ್ಲಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಕುರಿತು ಮಾಹಿತಿ ಬಹಿರಂಗಪಡಿಸಿದೆ. ಇದರ ಬಿಡುಗಡೆ ಕಾರ್ಯಕ್ರಮ ಜೂನ್ 12 ರಂದು ಬೆಳಿಗ್ಗೆ 8:00 ಗಂಟೆಗೆ ನಡೆಯಲಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪೋಸ್ಟರ್ ಮುಂಬರಲಿರುವ ಸ್ಮಾರ್ಟ್‌ಫೋನ್‌ನ ಟ್ಯಾಗ್ ಜೊತೆಗೆ ಸೈಡ್ ಪ್ರೊಫೈಲ್ ಅನ್ನು ಬಹಿರಂಗಪಡಿಸಿದೆ. HTC ಮಾನಿಕರ್ ಅನ್ನು ಬಹಿರಂಗಪಡಿಸದಿದ್ದರೂ, ಆರಂಭಿಕ ವದಂತಿಗಳ ಆಧಾರದ ಮೇಲೆ HTC U24 ಅಥವಾ HTC U24 Pro ಮುಂದಿನ ವಾರ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
HTC U24 ಸರಣಿಯ ನಿರೀಕ್ಷಿತ ಫೀಚರ್ಸ್:
ಏಪ್ರಿಲ್‌ನಲ್ಲಿ ಗೀಕ್‌ಬೆಂಚ್ ಮತ್ತು ಬ್ಲೂಟೂತ್ SIG ವೆಬ್‌ಸೈಟ್‌ಗಳಲ್ಲಿ ವರದಿಯಾದ ಮಾಡೆಲ್ ಸಂಖ್ಯೆ 2QDA100 ನೊಂದಿಗೆ ಬಂದ ವದಂತಿಯ ಪ್ರಕಾರ HTC U24 ಪ್ರೊ ಮಾದರಿಯ HTC ಸ್ಮಾರ್ಟ್‌ಫೋನ್ ಅನ್ನು ಗುರುತಿಸಲಾಗಿದೆ. ಪಟ್ಟಿಯ ಆಧಾರಾದಲ್ಲಿ ನೋಡುವುದಾದರೆ ಈ ಫೋನ್ Qualcomm ನ Snapdragon 7 Gen 3 SoC ಮೂಲಕ ಕಾರ್ಯನಿರ್ವಹಿಸಲಿದೆ. ಇದು 12GB RAM, ಆಂಡ್ರಾಯ್ಡ್ 14 ಮತ್ತು 5.3 ಬ್ಲೂಟೂತ್ ಸಂಪರ್ಕದೊಂದಿಗೆ ಬರಲಿದೆ ಎಂದು ಹೇಳಿದೆ. ಗೀಕ್‌ಬೆಂಚ್‌ನಲ್ಲಿ ಮಲ್ಟಿ ಕೋರ್ ಮತ್ತು ಸಿಂಗಲ್ ಕೋರ್ ಪರೀಕ್ಷೆಗಳಲ್ಲಿ ಕ್ರಮವಾಗಿ 3,006 ಮತ್ತು 1,095 ಅಂಕಗಳನ್ನು ಗಳಿಸಿದೆ.
HTC U24 ಮತ್ತು HTC U24 Pro ಕ್ರಮವಾಗಿ HTC U23 ಮತ್ತು HTC U23 Proನ ಅಪ್ಡೇಟ್ ವರ್ಶನ್ ಆಗಿ ಬರುವ ನಿರೀಕ್ಷೆಯಿದೆ. ಮುಂಬರುವ ಮಾದರಿಗಳು ಫುಲ್ HD+ 120Hz OLED ಡಿಸ್‌ಪ್ಲೇ ಮತ್ತು IP67 ಪ್ರಮಾಣೀಕೃತ ನಿರ್ಮಾಣವನ್ನು ಹೊಂದಿರುಬಹುದು. HTC U23 ಮತ್ತು HTC U23 Pro ಇವುಗಳು 6.7 ಇಂಚಿನ ಫುಲ್ HD+ (1,080x 2,400 ಪಿಕ್ಸೆಲ್) OLED ಡಿಸ್‌ಪ್ಲೇ ಪ್ಯಾನೆಲ್ 120Hz ರಿಫ್ರೆಶ್ ರೇಟ್ ಹೊಂದಿರಲಿವೆ.
ಇವುಗಳು ಸ್ನಾಪ್‌ಡ್ರಾಗನ್ 7 Gen 1 SoC ನಲ್ಲಿ ರನ್ ಆಗಲಿದ್ದು, 12GB RAM ಮತ್ತು 256GB ವರೆಗಿನ ಆಂತರಿಕ ಸ್ಟೋರೇಜ್ ಸಾಮರ್ಥ್ಯದಿಂದ ಜೋಡಿಸಲಾಗಿದೆ. HTC U23 ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕ ಹೊಂದಿದೆ, ಇದು 64 MP ಪ್ರಾಥಮಿಕ ಸೆನ್ಸಾರ್ ಹೊಂದಿದೆ. HTC U23 Pro ನ ಕ್ವಾಡ್ ರಿಯರ್ ಕ್ಯಾಮೆರಾ ಘಟಕವು 108MP ಪ್ರಾಥಮಿಕ ಸೆನ್ಸಾರ್ ಹೊಂದಿದೆ. ಎರಡೂ ಫೋನ್‌ಗಳು 32 MP ಮುಂಭಾಗದ ಕ್ಯಾಮೆರಾವನ್ನು ಹೊಂದಿವೆ. ಜೊತೆಗೆ 30W ವೈಯರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 4,600mAh ಬ್ಯಾಟರಿಗಳನ್ನು ಹೊಂದಿವೆ


Click it and Unblock the Notifications








