HTC ಬಿಡುಗಡೆ ಮಾಡಿರುವ VR ಹೆಡ್ ಸೆಟ್ ಬಳಸಲು ಮೊಬೈಲ್- PC ಬೇಕಾಗಿಲ್ಲ..!
HTC ಕಂಪನಿಯೂ ಸ್ಟಾಂಡಲೋನ್ VR ಹೆಡ್ ಸೆಟ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಇದನ್ನು ವಿವ್ ಫೋಕಸ್ ಎಂದು ಕರೆದಿದೆ. HTC ವಿವ್ ಫೋಕಸ್ ಹೆಡ್ ಸೆಟ್ ಬಿಜಿಂಗ್ ನಲ್ಲಿ ನಡೆದ ಡೆವಲಪರ್ ಕಾನ್ಫರೆನ್ಸ್ ನಲ್ಲಿ ಬಿಡುಗಡೆಗೊಂಡಿದೆ ಎನ್ನಲಾಗಿದೆ.

HTC ವಿವ್ ಫೋಕಸ್ ಹೆಡ್ ಸೆಟ್ ಸಿಕ್ಸ್ ಡಿಗ್ರಿ ಆಫ್ ಫ್ರಿಡಂ ಸಪೋರ್ಟ್ ಮಾಡಲಿದ್ದು, ಈ ಹೆಡ್ ಸೆಟ್ ಕಾರ್ಯನಿರ್ವಹಿಸಲು ಯಾವುದೇ ಸ್ಮಾರ್ಟ್ ಫೋನ್ ಇಲ್ಲವೇ ಕಂಪ್ಯೂಟರ್ ಅಗತ್ಯವಿಲ್ಲ ಎನ್ನಲಾಗಿದೆ. ಈ HTC ವಿವ್ ಫೋಕಸ್ ಹೆಡ್ ಸೆಟ್ ಬಿಡುಗಡೆಗೊಂಡಿದ್ದರೂ ಬೆಲೆ ಇನ್ನು ತಿಳಿಸಲಾಗಿಲ್ಲ.
HTC ವಿವ್ ಫೋಕಸ್ ಹೆಡ್ ಸೆಟ್ ಇಂಡಿಪೆಂಡೆಟ್ ಡಿವೈಸ್ ಆಗಿದ್ದು, ಈ ಹಿಂದಿನ HTC ವಿವ್ ಫೋಕಸ್ ಹೆಡ್ ಸೆಟ್ ಈ VR ಹೆಡ್ ಸೆಟ್ ಗಳ ಮಾದರಿಯಲ್ಲಿ ಬೇರೆ ಡಿವೈಸ್ ಸಹಾಯವನ್ನು ಬಯಸುವುದಿಲ್ಲ ಎನ್ನಲಾಗಿದೆ. ಇದರಲ್ಲಿ ಹೈ ಡೆಫನೆಷನ್ ಅಮೊಲೈಡ್ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ.
ಈಗಾಗಲೇ ಹಲವಾರು ಕಂಟೆಂಟ್ ಗಳು ಇದಕ್ಕಾಗಿಯೇ ಲಭ್ಯವಿದೆ ಎನ್ನಲಾಗಿದ್ದು, ಇದರ ಕ್ವಾಲಿಟಿಯೂ ಉತ್ತಮವಾಗಿದೆ ಎನ್ನಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಹೆಡ್ ಸೆಟ್ ಗಳಿಗಿಂತ ಭಿನ್ನವಾಗಿ ಈ HTC ವಿವ್ ಫೋಕಸ್ ಹೆಡ್ ಸೆಟ್ ಕಾಣಿಸಿಕೊಳ್ಳಲಿದೆ ಎನ್ನುವ ಮಾತು ಕೇಳಿಬಂದಿದೆ.


Click it and Unblock the Notifications