ಶಿಯೊಮಿ ಹೊಡತಕ್ಕೆ ಬೆಚ್ಚಿ ಭಾರತೀಯ ಮಾರುಕಟ್ಟೆಯಿಂದ ಹೊರ ಬಿದ್ದ ದೈತ್ಯ ಸ್ಮಾರ್ಟ್‌ಫೋನ್ ಕಂಪನಿ...!

|

ದೇಶಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ತಲೆಮಾರಿನ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ತನ್ನದೇ ಒಂದು ಬಳಕೆದಾರರ ವೃಂದವನ್ನು ಕಟ್ಟಿಕೊಂಡಿದ್ದ HTC ಸ್ಮಾರ್ಟ್‌ಫೋನ್ ಕಂಪನಿ ಸದ್ಯ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸುತ್ತಿದೆ ಎನ್ನಲಾಗಿದೆ. ಚೀನಾ ಸ್ಮಾರ್ಟ್‌ಫೋನ್ ಕಂಪನಿಗಳ ಹಾವಳಿಯಿಂದಾಗಿ ಮಾರುಕಟ್ಟೆಯಲ್ಲಿ ಉತ್ತಮ ನೆಲೆಯನ್ನು ಕಂಡುಕೊಳ್ಳಲು ಪರದಾಡುತ್ತಿದ್ದ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆಯಿಂದ ಹಿಂದೆ ಸೆರೆಯುವ ನಿರ್ಧಾರಕ್ಕೆ ಬಂದಿದೆ.

ಭಾರತೀಯ ಮಾರುಕಟ್ಟೆಯಿಂದ ಹೊರ ಬಿದ್ದ ದೈತ್ಯ ಸ್ಮಾರ್ಟ್‌ಫೋನ್ ಕಂಪನಿ...!

ಮಾರುಕಟ್ಟೆಗೆ HTC ಲಾಂಚ್ ಮಾಡಿದ್ದ ಫೋನ್‌ ಗಳು ಬಳಕೆದಾರರನ್ನು ಸೆಳೆಯವ ವಿಷಯದಲ್ಲಿ ಹಿಂದುಳಿದಿದ್ದವು ಮತ್ತು ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಸದ್ದು ಮಾಡಲು ವಿಫಲವಾಗಿರುವುದು ಇದಕ್ಕೆ ಕಾರಣ ಎನ್ನಲಾಗಿದ್ದು, ಟಾಪ್ ವಿಶೇಷತೆಗಳನ್ನು ಹೊಂದಿದ್ದ ಟಾಪ್ ಫೋನ್‌ಗಳು ಸಹ ಬಳಕೆದಾರರನ್ನು ಆಕರ್ಷಿಸುವಲ್ಲಿ ವಿಫಲವಾಗಿತ್ತು.

ಶಿಯೋಮಿಯಿಂದ ಹೊಡೆತ:

ಶಿಯೋಮಿಯಿಂದ ಹೊಡೆತ:

ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬೆಳವಣಿಗೆ ಸಾಧಿಸಿರುವ ಶಿಯೋಮಿಯಿಂದಾಗಿ HTC ದೊಡ್ಡ ಮಟ್ಟದ ಹೊಡೆತ ತಿಂದಿದೆ ಎನ್ನಲಾಗಿದೆ. ಇದರಿಂದಾಗಿ ಚೇತರಿಸಿಕೊಳ್ಳುವ ಸಲುವಾಗಿ ಮಾರುಕಟ್ಟೆಯಿಂದ ನಿರ್ಗಮಿಸುತ್ತಿದೆ ಎನ್ನುವ ಮಾತು ಕೇಳಿಬಂದಿದೆ.

ನೌಕರರು ಮನೆಗೆ:

ನೌಕರರು ಮನೆಗೆ:

HTC ದಕ್ಷಿಣ ಏಷ್ಯಾ ಮುಖ್ಯಸ್ಥ ಫಾಸಿಲ್ ಸಿದ್ಧಕಿ, ಸೇಲ್ ಮುಖ್ಯಸ್ಥ ಬಾಲಚಂದ್ರನ್ ಮತ್ತು ಪ್ರಾಡೆಕ್ಟ್ ಹೆಡ್ ಆರ್. ನಾಯರ್ ಈಗಾಗಲೇ ಕಂಪನಿಯನ್ನು ತೊರೆದಿದ್ದಾರೆ. ಇದು HTC ಭಾರತೀಯ ಮಾರುಕಟ್ಟೆಗೆ ಗುಡ್ ಬಾಯ್ ಹೇಳುತ್ತಿದೆ ಎನ್ನುವ ವಾದಕ್ಕೆ ಸಾಕ್ಷಿಯಾಗಿದೆ. ಇದಲ್ಲದೆ ಕಂಪನಿಯೂ ಈ ಕುರಿತು ಮಾಹಿತಿಯನ್ನು ನೀಡಿದೆ.

ಥೈವಾನ್‌ನಿಂದ ಮಾರಾಟ:

ಥೈವಾನ್‌ನಿಂದ ಮಾರಾಟ:

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಮಾರಾಟವನ್ನು ನಿಲ್ಲಿಸುತ್ತಿರುವ HTC ಸುಮಾರು 80 ಮಂದಿ ಟೀಮ್ ಅನ್ನು ಬೇರೆ ಕಡೆ ಕೆಲಸ ನೋಡಿಕೊಳ್ಳುವಂತೆ ಸೂಚಿಸಿದೆ ಎನ್ನಲಾಗಿದೆ. ಇದಲ್ಲದೇ ಥೈವಾನ್ ನಿಂದಲೇ HTC ವರ್ಚುವಲ್ ರಿಯಾಲಿಟಿ ವಸ್ತುಗಳನ್ನು ಮಾರಾಟ ಮಾಡಲಿದೆ ಎಂದು ಮಾಹಿತಿ ಲಭ್ಯವಾಗಿದೆ.

ಮತ್ತೆ ಬರಲಿದೆ:

ಮತ್ತೆ ಬರಲಿದೆ:

ಸದ್ಯ ಸ್ಮಾರ್ಟ್‌ಫೋನ್ ಮಾರಾಟವನ್ನು ನಿಲ್ಲಿಸುತ್ತಿರುವ HTC, ಮತ್ತೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ಕಂಪನಿಯ ಮೂಲಗಳು ತಿಳಿಸಿದ್ದು, ಮತ್ತೆ ಲಾಂಚ್ ಆಗುವ ಸಂದರ್ಭದಲ್ಲಿ ಕೇವಲ ಆನ್‌ಲೈನಿನಲ್ಲಿ ಮಾತ್ರವೇ ಮಾರಾಟ ಮಾಡುವ ಕಂಪನಿಯಾಗಿ ಉಳಿದುಕೊಳ್ಳಲಿದೆ ಎನ್ನಲಾಗಿದೆ.

ಮಾರಾಟಗಾರರಿಗೆ ನಷ್ಟ:

ಮಾರಾಟಗಾರರಿಗೆ ನಷ್ಟ:

HTCಯನ್ನು ನಂಬಿಕೊಂಡು ಹಣವನ್ನು ಹೂಡಿಕೆಯನ್ನು ಮಾಡಿದ್ದ ಮಾರಾಟಗಾರರಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಲಿದೆ ಎನ್ನಲಾಗಿದ್ದು, ಇವರೆಲ್ಲ ಸದ್ಯ HTC ವಿರುದ್ಧ ಕೋರ್ಟ್ ಮೇಟ್ಟಿಲು ಏರುವ ಸಾಧ್ಯತೆ ಇದೆ. ಇದು ಒಂದು ರೀತಿಯಲ್ಲಿ HTCಗೆ ನುಂಗಲಾರದ ತುತ್ತಾಗಿ ಪರಿಣಮಿಸಲಿದೆ.

ಕುಸಿದಿದ್ದ ಮಾರಾಟ:

ಕುಸಿದಿದ್ದ ಮಾರಾಟ:

HTC ಸ್ಮಾರ್ಟ್‌ಫೋನ್‌ಗಳು ಜಾಗತಿಕವಾಗಿ ಬೇಡಿಕೆಯನ್ನು ಕಳೆದುಕೊಂಡಿದ್ದು, ಈ ವರ್ಷದ ಮೊದಲ ಕ್ವಾಟರ್ ನಲ್ಲಿ ಕೇಲವ 630000 ಸ್ಮಾರ್ಟ್‌ಫೋನ್‌ಗಳನ್ನ ಜಾಗತಿಕವಾಗಿ ಮಾರಾಟ ಮಾಡಿದೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಬಿಡುತ್ತಿದೆ.

Best Mobiles in India

English summary
HTC to quit Indian smartphone market. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X