Subscribe to Gizbot

ಎಚ್‌ಟಿಸಿ ಸ್ಮಾರ್ಟ್‌ವಾಚ್ ಆನ್‌ಲೈನ್‌ನಲ್ಲಿ ಸೋರಿಕೆ

Written By:

ಈ ತಿಂಗಳ ಮುಂಚೆಯೇ, ಎಚ್‌ಟಿಸಿಯ ಸ್ಮಾರ್ಟ್‌ವಾಚ್ ಗೂಗಲ್‌ನ ಆಂಡ್ರಾಯ್ಡ್ ವೇರ್ ಪ್ಲಾಟ್‌ಫಾರ್ಮ್ ಆನ್‌ಲೈನ್‌ನಲ್ಲಿ ಸೋರಿಕಯಾಗಿತ್ತು. ಇದರ ಚಿತ್ರ ಕೂಡ ಕಂಡುಬಂದಿದ್ದು ಎಚ್‌ಟಿಸಿ ಪ್ರೇಮಿಗಳಿಗೆ ಕಾತರತೆಯನ್ನು ಇದು ಹೆಚ್ಚಿಸಿತ್ತು. ಈಗ ಕೂಡ ಇದರ ಚಿತ್ರ ಲಭ್ಯವಾಗಿದ್ದು, ತೈವಾನ್ ಮೂಲದ ಸ್ಮಾರ್ಟ್‌ಫೋನ್ ತಯಾರಕರು ತಮ್ಮ ಮುಂಬರಲಿರುವ ಸ್ಮಾರ್ಟ್‌ವಾಚ್‌ನ ಅಧಿಕೃತ ವೀಡಿಯೋವನ್ನು ಯೂಟ್ಯೂಬ್‌ನಲ್ಲಿ ತೋರಿಸಿದ್ದಾರೆ.

ಈ ಸ್ಮಾರ್ಟ್‌ವಾಚ್ ಹೆಚ್ಚು ಕಡಿಮೆ ಇದರಲ್ಲಿ ಆಂಡ್ರಾಯ್ಡ್ ಪವರ್ ಇದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಎಚ್‌ಟಿಸಿ ತನ್ನ ಅತ್ಯಾಧುನಿಕ ವೇರಿಯೇಬಲ್ ಅನ್ನು ಕೂಡಲೇ ಲಾಂಚ್ ಮಾಡಲಿದ್ದು, ಒಮ್ಮೊಮ್ಮೆ ಈ ವದಂತಿಗಳು ಹಬ್ಬಿರುವ ವಿಷಯಗಳನ್ನು ಕೂಡ ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ.

ಅಧಿಕೃತ ವೀಡಿಯೋದಲ್ಲಿ ಎಚ್‌ಟಿಸಿ ಸ್ಮಾರ್ಟ್‌ವಾಚ್

ವಾಚ್‌ನ ಆಕಾರವನ್ನು ಕುರಿತೂ ಕೂಡ ಹೆಚ್ಚಿನ ನಿರೀಕ್ಷೆ ಇದ್ದು ಸ್ಯಾಮ್‌ಸಂಗ್ ಮತ್ತು ಎಲ್‌ಜಿ ಯ ಗೇರ್ ಲೈವ್ ಹಾಗೂ ಜಿ ವಾಚ್ ಅನ್ನು ಹೋಲಲಿದೆಯೇ ಎಂಬುದು ಕೂಡ ಗಮನಿಸಬೇಕಾದ ಅಂಶವಾಗಿದೆ. ಎಚ್‌ಟಿಸಿಯ ಈ ಸ್ಮಾರ್ಟ್‌ವಾಚ್ ಸ್ಕ್ವೇರ್ ಪ್ರಕಾರದಲ್ಲಿದ್ದು ಇದು ಸಮಯವನ್ನು ಕಪ್ಪು ಹಿನ್ನಲೆಯಲ್ಲಿ ಬಿಳಿಯಾಗಿ ತೋರಿಸಲಿದೆ.

<center><iframe width="100%" height="360" src="//www.youtube.com/embed/UHvbLkFbYJM?feature=player_embedded" frameborder="0" allowfullscreen></iframe></center>

ಮೋಟೋರೋಲಾ ತನ್ನ ಮೋಟೋ 360ಗಾಗಿ ವೃತ್ತಾಕಾರದ ಡಿಸ್‌ಪ್ಲೇಯನ್ನು ಆಯ್ಕೆಮಾಡಿಕೊಂಡಿತ್ತು. ಎಚ್‌ಟಿಸಿ ತನ್ನ ಗ್ರಾಹಕರಿಗೆ ಇಷ್ಟವಾಗುವ ರೀತಿಯಲ್ಲಿ ಈ ವಾಚ್ ಅನ್ನು ಪ್ರಸ್ತುಪಡಿಸಲಿದ್ದು ತನ್ನ ಅಭಿಮಾನಿಗಳಿಗೆ ಪುಳಕ ಉಂಟುಮಾಡುವ ರೀತಿಯಲ್ಲಿ ಇದು ಬಿಡುಗಡೆ ಮಾಡಲಿದೆ.

English summary
This article tells that HTC smartwatch apperas via official company video.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot