ಐಫೋನ್ 7 ಪ್ಲಸ್ ಹಿಂದಿಕ್ಕಿದ HTC U11 ಸ್ಮಾರ್ಟ್ ಫೋನ್..!

By: Precilla Dias

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳ ಅಬ್ಬರವೂ ಜೋರಾಗಿದೆ. ಇದೇ ಮಾದರಿಯಲ್ಲಿ ಸದ್ದು ಮಾಡುತ್ತಿರುವ HTC U11 ಸ್ಮಾರ್ಟ್ ಫೋನ್, ಐಫೋನ್ 7 ಪ್ಲಸ್ ಗಿಂತಲೂ ಉತ್ತಮ ಕಾರ್ಯದಕ್ಷತೆಯನ್ನು ಹೊಂದಿದ್ದು, ಮೇ ತಿಂಗಳಿನಲ್ಲಿ ಬೆಸ್ಟ್ ಫರ್ಪರ್ಮಿಂಗ್ ಸ್ಮಾರ್ಟ್ ಫೋನ್ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ.

ಐಫೋನ್ 7 ಪ್ಲಸ್ ಹಿಂದಿಕ್ಕಿದ HTC U11 ಸ್ಮಾರ್ಟ್ ಫೋನ್..!

ಬಿಡುಗಡೆಯಾದ ನಂತರದಲ್ಲಿ ಇದೇ ಮೊದಲ ಬಾರಿಗೆ ಐಫೋನ್ 7 ಪ್ಲಸ್ ಫರ್ಪರ್ಮಿಂಗ್ ಸ್ಮಾರ್ಟ್ ಫೋನ್ ಎಂಬ ಪಟ್ಟದಿಂದ ಕೆಳಗೆ ಇಳಿದಿದೆ. HTC U11 ಸ್ಮಾರ್ಟ್ ಫೋನ್ ಇದೇ ಮೊದಲ ಬಾರಿಗೆ ಒಟ್ಟು 1,80,079 ಸ್ಕೋರ್ ಮಾಡಿದ್ದು, ಐಫೋನ್ 7 ಪ್ಲಸ್ 1,74,229 ಪಾಯಿಂಟ್ ಗಳನ್ನು ಪಡೆದುಕೊಂಡಿದೆ ಎನ್ನಲಾಗಿದೆ.

ಇದೇ ಮಾದರಿಯಲ್ಲಿ ಶಿಯೋಮಿ ಮಿ 6 ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಒಟ್ಟು 1,72,400 ಪಾಯಿಂಟ್ ಗಳನ್ನು ಪಡೆದುಕೊಂಡಿದೆ. ನಂತರದ ಸ್ಥಾನದಲ್ಲಿ ಗ್ಯಾಲೆಕ್ಸಿ ಎಸ್ 8 ಮತ್ತು ಗ್ಯಾಲೆಕ್ಸಿ ಎಸ್8 ಪ್ಲಸ್ ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ಕಾಣಿಸಿಕೊಂಡಿವೆ.

ಶಿಯೋಮಿ ಮಿ 6 ಸ್ನಾಪ್ ಡ್ರಾಗನ್ 835 ಪ್ರೋಸೆಸರ್ ಹೊಂದಿದ್ದು, 6GB RAM ಹೊಂದಿದೆ. ಆದರೆ ಈ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಿಲ್ಲ ಎನ್ನಲಾಗಿದೆ. ಇದು ಗ್ಯಾಲೆಕ್ಸಿ ಎಸ್8 ಸ್ಮಾರ್ಟ್ ಫೋನಿನ ಅರ್ಧ ಬೆಲೆಗೆ ದೊರೆಯುತ್ತಿದೆ ಎನ್ನಲಾಗಿದೆ.

ಗ್ಯಾಲೆಕ್ಸಿ ಎಸ್ 8 ಮತ್ತು ಗ್ರಾಲೆಕ್ಸಿ ಎಸ್8 ಪ್ಲಸ್ ಸ್ನಾಪ್ ಡ್ರಾಗನ್ 835 ಪ್ರೋಸೆಸರ್ ಹೊಂದಿದೆ. ಈ ಫೋನ್ ಗಳಲ್ಲಿ 4GB RAM ಕಾಣಬಹುದಾಗಿದೆ. ಇದೇ ಮೊದಲ ಬಾರಿಗೆ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಐಎಸ್ಓ ಡಿವೈಸ್ ರಾಂಕಿಂಗ್ ಗೆ ಸಮನಾಗಿ ಕಾಣಿಸಿಕೊಂಡಿದೆ.

ಈ ಪಟ್ಟಯಲ್ಲಿ ನಂತರದ ಸ್ಥಾನದಲ್ಲಿ ಒನ್ ಪ್ಲಸ್ 3ಟಿ, ಒನ್ ಪ್ಲಸ್ 3, ಲಿಈಕೋ ಲಿ ಪ್ರೋ 3, ಲಿಈಕೋ ಲಿ ಮಾಕ್ಸ್ 2, ಅಸುಸ್ ಜೆನ್ ಫೋನ್ 3 ಡಿಲೆಕ್ಸ್ ಮತ್ತು ZTE ಅಕ್ಸನ್ 7 ಸ್ಮಾರ್ಟ್ ಫೋನ್ ಗಳಿದೆ.Read more about:
English summary
HTC U11 is the world's best performing smartphone according to Antutu benchmark.
Please Wait while comments are loading...
Opinion Poll

Social Counting