HTC ವೈವ್ ಈಗ ಭಾರತದಲ್ಲಿ ಹಿಂದಿಗಿಂತ ರೂ 16000 ಅಗ್ಗ!

By Tejaswini P G

  HTC ವೈವ್ ಭಾರತದಲ್ಲಿ ತಮ್ಮ ವೈವ್ ವರ್ಚ್ಯುವಲ್ ರಿಯಾಲಿಟಿ ಸಿಸ್ಟಮ್ ನ ಬೆಲೆಯನ್ನು ರೂ 16,000ದಷ್ಟು ಕಡಿತಗೊಳಿಸಲಿದ್ದಾರೆಂದು ಘೋಷಿಸಿದ್ದಾರೆ. ಆ ಪ್ರಕಾರವಾಗಿ HTC ವೈವ್ ವಿಆರ್ ಸಿಸ್ಟಮ್ ನಮ್ಮ ದೇಶದಲ್ಲಿ ಈಗ ದೊರೆಯಲಿದೆ ಕೇವಲ ರೂ 76,990ಕ್ಕೆ.

  HTC ವೈವ್ ಈಗ ಭಾರತದಲ್ಲಿ ಹಿಂದಿಗಿಂತ ರೂ 16000 ಅಗ್ಗ!

  ಈ ಭಾರೀ ದರಕಡಿತದೊಂದಿಗೆ, ಗ್ರಾಹಕರಿಗೆ ಸಿಗಲಿದೆ ಮತ್ತಷ್ಟು ಉಡುಗೊರೆಗಳು.ವೈವ್ ಗ್ರಾಹಕರಿಗೆ ವೈವ್ಪೋರ್ಟ್ ಗೆ ಉಚಿತ ಚಂದಾದಾರಿಕೆ ಸಿಗಲಿದ್ದು, ಅದನ್ನು ಬಳಸಿ ಪ್ರತೀ ತಿಂಗಳು ವೈವ್ಪೋರ್ಟ್ ನಲ್ಲಿ ಐದು ಕಾರ್ಯಕ್ರಮಗಳನ್ನು ಉಚಿತವಾಗಿ ನೋಡಬಹುದಾಗಿದೆ. ಅಲ್ಲದೆ ಗ್ರಾಹಕರಿಗೆ ಮಾರುಕಟ್ಟೆಯಲ್ಲಿರುವ ಗೂಗಲ್ ಟಿಲ್ಟ್ ಬ್ರಶ್,ಎವೆರೆಸ್ಟ್ ವಿಆರ್,ರಿಚೀಸ್ ಪ್ಲ್ಯಾಂಕ್ ಎಕ್ಸ್ಪೀರಿಯೆನ್ಸ್ ಮೊದಲಾದವುಗಳಲ್ಲಿ ಲಭ್ಯವಿರುವ ವಿಆರ್ ಕಂಟೆಂಟ್ಗಳನ್ನು ವೀಕ್ಷಿಸುವ ಸೌಲಭ್ಯವೂ ದೊರಕಲಿದೆ.

  HTCಯ ಮುಖ್ಯಸ್ಥೆ, ಚೆರ್ ವಾಂಗ್ "ಜನರಿಗೆ ಉತ್ತಮ ಗುಣಮಟ್ಟದ ಹಾಗೂ ಮುಂದುವರೆದ ತಂತ್ರಜ್ಞಾನ ಹೊಂದಿರುವ ವಿಆರ್ ಸಿಸ್ಟಮ್ಗಳನ್ನು ನೀಡುವುದೇ ವೈವ್ ನಲ್ಲಿ ನಮ್ಮ ಗುರಿಯಾಗಿದೆ. ಈ ಮೂಲಕ ಜಗತ್ತಿನೆಲ್ಲಡೆ ಜನರು ವಿಆರ್ ಸಿಸ್ಟಮ್ಗಳನ್ನು ಬಳಸುವಂತಾಗಬೇಕು ಎಂಬುದು ನಮ್ಮ ಆಶಯ. ನಮ್ಮ ಗುರಿಯನ್ನು ಸಾಧಿಸುವ ಸಲುವಾಗಿ ವೈವ್ ವಿಆರ್ ಸಿಸ್ಟಮ್ ನ ಬೆಲೆಯನ್ನು ಕಡಿತಗೊಳಿಸಿದ್ದು, ಹೆಚ್ಚಿನ ಜನರಿಗೆ ಕೈಗೆಟಕುವಂತೆ ಮಾಡಲು ಪ್ರಯತ್ನಿಸಿದ್ದೇವೆ.

  ಕಳವಾದ ಮೊಬೈಲ್ ಪತ್ತೆ ಅಸಾಧ್ಯ?..ಪೊಲೀಸರಿಗೆ ದೊಡ್ಡ ತಲೆನೊವಾದ ಚೀನಾ ಡಿವೈಸ್!?

  ಈ ಮೂಲಕ ವಿಆರ್ ಉದ್ಯಮವನ್ನೇ ಮುಂದಕ್ಕೊಯ್ಯುವ ಪ್ರಯತ್ನ ನಮ್ಮದು.ವೈವ್ ನೂತನ ತಂತ್ರಜ್ಞಾನ, ಶ್ರೇಷ್ಠ ಕಂಟೆಂಟ್ ಮತ್ತು ಸಾಟಿಯಿಲ್ಲದ ಜಾಗತಿಕ ಪಾರ್ಟ್ನರ್ಗಳನ್ನು ಹೊಂದುವ ಮೂಲಕ ವೈವ್ ವಿಆರ್ ನ ಎಲ್ಲಾ ಭರವಸೆಗಳನ್ನು ಈಡೇರಿಸುತ್ತಿದೆ. ವೈವ್ಪೋರ್ಟ್ನಲ್ಲಿರುವ ಆಸಕ್ತಿದಾಯಕ ಟೈಟಲ್ಗಳು ಹಾಗೂ ಬರಲಿರುವ ವೈವ್ ಟ್ರ್ಯಾಕರ್ ಗಳಿಂದಾಗಿ ವೈವ್ ನಿಮ್ಮದಾಗಿಸಿಕೊಳ್ಳಲು ಇದು ಸಕಾಲ. ವೈವ್ ಬಳಸಿ ವಿಆರ್ ನ ಶ್ರೇಷ್ಠ ಅನುಭವ ಪಡೆಯಿರಿ" ಎಂದಿದ್ದಾರೆ.

  ವೈವ್ ವಿಆರ್ ಸಿಸ್ಟಮ್ನೊಂದಿಗೆ ಟ್ರ್ಯಾಕಿಂಗ್ ಗಾಗಿ 2 ಬೇಸ್ ಸ್ಟೇಶನ್ ಗಳು,ವಿಆರ್ ಅನುಭವಕ್ಕಾಗಿ 2 ಮೋಶನ್ ಕಂಟ್ರೋಲರ್ಗಳು,ಕನೆಕ್ಶನ್ ಕೇಬಲ್ಗಳು ಮತ್ತು ನೂತನ ಮತ್ತು ಹಗುರವಾದ ಭಾಗಗಳಿದ್ದು, ಬಳಸಲು ತುಂಬ ಹಿತಕರವಾಗಿದೆ.

  ವೈವ್ ವಿಆರ್ ಸಿಸ್ಟಮ್ ಒಂದು ಸ್ವತಂತ್ರ ಪ್ಲ್ಯಾಟ್ಫಾರ್ಮ್ ಆಗಿದ್ದು, ಅದನ್ನು ಯಾವುದೇ ಸ್ಮಾರ್ಟ್ಫೋನ್ಗೆ ಅಥವಾ ಕನ್ಸೋಲ್ ಗೆ ಜೋಡಿಸುವ ಅವಶ್ಯಕತೆಯಿಲ್ಲ.HTC ಈ ತಂತ್ರಜ್ಞಾನವನ್ನು ದೇಶದಾದ್ಯಂತ ಜನರಿಗೆ ಕೈಗೆಟಕುವಂತೆ ಮಾಡಲು ಪ್ರಯತ್ನಿಸುತ್ತಿದೆಯಾದರೂ, ಈಗಲೂ HTC ವೈವ್ ವಿಆರ್ ನ ಬೆಲೆ ದೇಶದ ಹೆಚ್ಚಿನ ಗ್ಯಾಜೆಟ್ ಪ್ರಿಯರಿಗೆ ಕೈಗೆಟಕುವಂತಿಲ್ಲ.

  Read more about:
  English summary
  HTC Vive VR system is an independent virtual reality platform which is now available for a discount of Rs. 16,000 in India.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more