ಹುವಾಮಿಯ ಹೊಸ ಸ್ಮಾರ್ಟ್‌ವಾಚ್‌ ಲಾಂಚ್‌!..ಹಲವು ವಿಶೇಷತೆ!

|

ಜಾಗತಿಕ ಮಾರುಕಟ್ಟೆಯಲ್ಲಿ ತಂತ್ರಜ್ಞಾನ ಆಧಾರಿತ ವಸ್ತುಗಳೇ ಹೆಚ್ಚಿನ ಸದ್ದು ಮಾಡ್ತಿವೆ. ಸಧ್ಯ ಸ್ಮಾರ್ಟ್‌ಫೋನ್‌ಗಳಂತೆಯೇ ಸ್ಮಾರ್ಟ್‌ವಾಚ್‌ಗಳ ಮಾರುಕಟ್ಟೆಯಲ್ಲೂ ಪೈಫೋಟಿ ಶುರುವಾಗಿರೋದು ನಿಮಗೆಲ್ಲಾ ಗೊತ್ತೇ ಇದೆ. ಅಷ್ಟೇ ಅಲ್ಲ ಸ್ಮಾರ್ಟ್‌ವಾಚ್ ಡಿವೈಸ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು ದಿನಕಳೆದಂತೆ ಹೊಸಹೊಸ ಸ್ಮಾರ್ಟ್‌ ವಾಚ್‌ಗಳು ಬಿಡುಗಡೆ ಯಾಗ್ತಿವೆ. ಜೊತೆಗೆ ಪಿಟ್ನೆಸ್‌ ವಾಚ್‌ ಡಿವೈಸ್‌ಗಳು ಸಹ ಮಾರುಕಟ್ಟೆಗೆ ಲಗ್ಗೆ ಹಾಕ್ತಿವೆ.

ಹುವಾಮಿ

ಹೌದು ಶಿಯೋಮಿ ಒಡೆತನದ ಬ್ರಾಂಡ್‌ ಹುವಾಮಿ ತನ್ನ ಅಮಾಜ್‌ಫಿಟ್‌ ಜಿಟಿಎಸ್‌ ಸ್ಮಾರ್ಟ್‌ವಾಚ್‌ನ ಹೊಸ ಆವೃತ್ತಿಯನ್ನ ಚೀನಾದಲ್ಲಿ ಬಿಡುಗಡೆ ಮಾಡ್ತಿದೆ. ಕಳೆದ ಆಕ್ಟೋಬರ್‌ನಲ್ಲಷ್ಟೇ ಈ ಮಾದರಿಯ ಸ್ಮಾರ್ಟ್‌ವಾಚ್‌ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿತ್ತು. ಅಲ್ಯೂಮಿನಿಯಂ ಪದರದಿಂದ ಬಿಲ್ಡ್‌ ಆಗಿರೋ ಅಮಾಜ್‌ಫಿಟ್‌ ಜಿಟಿಎಸ್‌ ಸ್ಮಾರ್ಟ್‌ವಾಚ್‌ ಭಾರತದಲ್ಲಿ 9999ರೂ ಬೆಲೆಯನ್ನು ಹೊಂದಿದೆ.

ಸ್ಮಾರ್ಟ್‌ ವಾಚ್‌

ಅಮಾಜ್‌ಫೀಟ್‌ ಜೆಟಿಎಸ್‌ ಸ್ಮಾರ್ಟ್‌ ವಾಚ್‌ ಚೀನಾ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಸಧ್ಯ ಅಮಾಜ್‌ಫೀಟ್‌ಡಿವೈಸ್‌ ಡಿಸೆಂಬರ್ 1 ರಂದು ಚೀನಾ ಮಾರುಕಟ್ಟೆ ಹೊರತು ಪಡಿಸಿ ಬೇರೆ ಕಡೆ ಬಿಡುಗಡೆಯಾಗುತ್ತಿಲ್ಲ. ಚೀನಾದಲ್ಲಿ ಟಿಮಾಲ್, ಜೆಡಿ ಡಾಟ್ ಕಾಮ್‌ನ ಅಮಾಜ್‌ಫಿಟ್ ಸ್ಟೋರ್ ಮತ್ತು ಯೂಪಿನ್ ಆನ್‌ಲೈನ್ ಸ್ಟೋರ್ ಮೂಲಕ ಮಾರಾಟವಾಗಲಿದೆ. ಈ ಡಿವೈಸ್‌ ಸ್ವಿಮ್ಮ ಪ್ರೂಫ್‌ ಡಿಸೈನ್‌ ಮತ್ತು ಆನ್‌ ಡಿವೈಸ್‌ ಸಿಲಿಕೋನ್ ಫ್ಲೋರೋ-ರಬ್ಬರ್ ಪಟ್ಟಿಯಿಂದಾಗಿ ಸ್ಮಾರ್ಟ್‌ ವಾಚ್‌ ಪ್ರಿಯರ ಗಮನ ಸೆಳೆದಿದೆ.

ಡಿಸ್‌ಪ್ಲೇ

ಹಾಗೆಯೇ ಅಗತ್ಯ ಫಿಟ್ನೆಸ್‌ ಸೌಲಭ್ಯಗಳ ಮಾಹಿತಿ ತಿಳಿಸುವ ಸೌಲಭ್ಯ ಪಡೆದಿದೆ. ಇದು ದೇಹದಲ್ಲಿನ ಟೈಟಾನಿಯಂ ಅನ್ನು ನಿಯಂತ್ರಿಸಲ್ಪಡುತ್ತದೆ. ಜೊತೆಗೆ ಇದು ಚರ್ಮ-ಸ್ನೇಹಿ ಆಗಿದ್ದು ದೂಳಿನ ಕಣಗಳಿಂದ ಮುಕ್ತವಾಗಿರುತ್ತದೆ. ಇನ್ನು ಅಮಾಜ್‌ಫಿಟ್ ಜಿಟಿಎಸ್ 1.65-ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದರ ಬ್ಯಾಟರಿ ಅವಧಿಯು 14 ದಿನಗಳವರೆಗೆ ಇರುತ್ತದೆ. ಅಲ್ಲದೆ ಇದು ಸಂಪೂರ್ಣ ವಾಟರ್‌ ಪ್ರೂಪ್‌ ವಾಚ್‌ ಆಗಿದೆ .

ಬಯೋ-ಟ್ರ್ಯಾಕಿಂಗ್

ಇದರಲ್ಲಿ ಬಯೋ-ಟ್ರ್ಯಾಕಿಂಗ್ ಆಪ್ಟಿಕಲ್ ಸೆನ್ಸರ್, 6-ಆಕ್ಸಿಸ್ ಆಕ್ಸಿಲರೊಮೀಟರ್, 3-ಆಕ್ಸಿಸ್ ಜಿಯೋಮ್ಯಾಗ್ನೆಟಿಕ್ ಸೆನ್ಸರ್, ಮತ್ತು ಆಂಬಿಯೆಂಟ್ ಲೈಟ್ ಸೆನ್ಸಾರ್ ಒಳಗೊಂಡಿದ್ದು. ದೇಹದ ಚಲನೆ,ವ್ಯಾಯಾಮ ಎಲ್ಲವನ್ನು ಗ್ರಹಿಸುತ್ತದೆ. ಅಲ್ಲದೆ ಫಿಟ್‌ನೆಟ್‌ ಡಿವೈಸ್‌ಗಳ ಮಾದರಿಯಲ್ಲಿ ಇದೊಂದು ಉತ್ತಮವಾದ ಸ್ಮಾರ್ಟ್‌ವಾಚ್‌ ಆಗಿ ಗುರ್ತಿಸಿಕೊಂಡಿದ್ದು. ಹಾರ್ಟ್‌ ಬೀಟ್‌ ಟ್ರಾಕಿಂಗ್ ಸೇರಿದಂತೆ ದೈನಂದಿನ ಚಟುವಟಿಕೆಗಳನ್ನು ಟ್ರಾಕಿಂಗ್ ಮಾಡುವ ಸೌಲಭ್ಯಗಳನ್ನು ಹೊಂದಿದೆ.

ಡಿವೈಸ್‌

ಜೊತೆಗೆ ಈ ಡಿವೈಸ್‌ 12ರೀತಿಯ ದೈಹಿಕ ಚಟುವಟಿಕೆಗಳನ್ನ ಕೌಂಟ್‌ ಮಾಡಬಲ್ಲದು. ಔಟ್‌ಡೋರ್‌ ರನ್ನಿಂಗ್‌, ಟ್ರೆಡ್‌ಮಿಲ್‌ ಕಸರತ್ತು,ವಾಕಿಂಗ್‌, ಔಟ್‌ಡೋರ್‌ ಮತ್ತು ಇನ್‌ಡೋರ್‌ ಸೈಕ್ಲಿಂಗ್‌, ಸ್ವಿಮ್ಮಿಂಗ್‌, ಪರ್ವತಾರೋಹಣ, ಸೇರಿದಂತೆ ಎಲ್ಲ ರೀತಿಯ ದೈಹಿಕ ಕಸರತ್ತುಗಳ ಫಿಟ್‌ನೆಸ್‌ ವರದಿಯನ್ನ ನೀಡುತ್ತದೆ. ಸಧ್ಯ ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 9,999ರೂ ಆಗಿದ್ದು ಇದು ಅಮೆಜಾನ್ ಇಂಡಿಯಾ ಮೂಲಕ ಖರೀದಿಸಲು ಲಭ್ಯವಿದೆ.

Best Mobiles in India

English summary
Xiaomi-backed brand Huami has announced the launch of a new Titanium edition of its Amazfit GTS smartwatch in China. This new edition sports a titanium build along with a fluoro-rubber strap in comparison to the aluminium build and silicone strap found in the standard Amazfit GTS.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X