ಹುವಾಮಿ ಅಮಾಜ್‌ಫಿಟ್ X ಸ್ಮಾರ್ಟ್‌ವಾಚ್ ಬಿಡುಗಡೆ!
ಟೆಕ್ ವಲಯದಲ್ಲಿ ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲ ಸ್ಮಾರ್ಟ್‌ವಾಚ್‌ಗಳಿಗೂ ಕೂಡ ಉತ್ತಮ ಮಾರುಕಟ್ಟೆಯಿದೆ. ನಿಮಗೆಲ್ಲಾ ತಿಳಿದಿರುವಂತೆ ಟೆಕ್ನಾಲಜಿ ಮುಂದುವರೆದಂತೆ ಸಾಕಷ್ಟು ವೈವಿಧ್ಯಮಯವಾದ ಸ್ಮಾರ್ಟ್‌ವಾಚ್‌ಗಳು ಇಂದು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಆದರೂ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಬ್ರ್ಯಾಂಡ್‌ಗಳ ಸ್ಮಾರ್ಟ್‌ವಾಚ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇವುಗಳಲ್ಲಿ ಹುವಾಮಿ ಅಮಾಜ್‌ಫಿಟ್ ವಾಚ್‌ಗಳು ಕೂಡ ಸೇರಿವೆ. ಸದ್ಯ ಹೊಸತನದ ಸ್ಮಾರ್ಟ್‌ವಾಚ್‌ಗಳಿಗೆ ಹೆಸರುವಾಸಿಯಾಗಿರುವ ಹುವಾಮಿ ಅಮಾಜ್‌ಫಿಟ್ ಹೊಸ ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದೆ.

ಹೌದು, ಹುವಾಮಿ ಅಮಾಜ್‌ಫೀಟ್ ಶಿಯೋಮಿ ಕಂಪೆನಿಯ ಉಪಬ್ರ್ಯಾಂಡ್‌ಗಳಲ್ಲಿ ಒಂದಾಗಿದ್ದು, ವೆರಿಯೆಬಲ್ ವಾಚ್‌ಗಳನ್ನ ಪರಿಚಯಿಸಿದೆ. ಹಲವು ಸ್ಮಾರ್ಟ್‌ವಾಚ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸ ಸೈ ಎನಿಸಿಕೊಂಡಿರುವ ಹುವಾಮಿ ಅಮಾಜ್ ಫಿಟ್ ಇದೀಗ ಹೊಸ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ. ಸದ್ಯ ಈ ಸ್ಮಾರ್ಟ್‌ವಾಚ್ ಬಾಗಿದ ಮಾದರಿಯ ಡಿಸ್‌ಪ್ಲೇಯನ್ನ ಹೊಂದಿದ್ದು,ನವೀನ ಮಾದರಿಯ ವಿನ್ಯಾಸವನ್ನ ಒಳಗೊಂಡಿದೆ. ಹಾಗಾದ್ರೆ ಈ ಸ್ಮಾರ್ಟ್‌ವಾಚ್ ವಿಶೇಷತೆಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಇನ್ನು ಹುವಾಮಿಯ ಈ ಹೊಸ ಸ್ಮಾರ್ಟ್‌ವಾಚ್ ಅಮಾಜ್‌ಫಿಟ್ ಎಕ್ಸ್ ಫಿಟ್‌ನೆಸ್ ಬ್ಯಾಂಡ್‌ನ ಅತ್ಯಂತ ಗಮನಾರ್ಹ ಅಂಶವೆಂದರೆ ಅದರ 2.07-ಇಂಚಿನ ಬಾಗಿದ ಅಮೋಲೆಡ್ ಡಿಸ್ಪ್ಲೇ, 206x640 ಪಿಕ್ಸೆಲ್‌ಗಳ ರೆಸಲ್ಯೂಶನ್, 400 ನಿಟ್ಸ್ ಗರಿಷ್ಠ ಹೊಳಪು, ಮತ್ತು 326 ಪಿಪಿಐನ ಸಾಕಷ್ಟು ಹೆಚ್ಚಿನ ಪಿಕ್ಸೆಲ್ ಸಾಂದ್ರತೆಯನ್ನ ಒಳಗೊಂಡಿದ್ದು, 92-ಡಿಗ್ರಿಗಳಷ್ಟು ಬಾಗಿದ ಚಾಪವನ್ನು ಹೊಂದಿದ್ದು, ಧರಿಸುವಾಗ ಹೆಚ್ಚು ನೈಸರ್ಗಿಕ ಮತ್ತು ಆರಾಮದಾಯಕವಾದ ಫಿಟ್ ನೀಡುತ್ತದೆ ಎಂದು ಹೇಳಲಾಗಿದೆ. ಅಮಾಜ್‌ಫಿಟ್ ಎಕ್ಸ್ 5 ಎಟಿಎಂ ವಾಟರ್ ರೆಸಿಸ್ಟೆನ್ಸ್ ರೇಟಿಂಗ್ ಅನ್ನು ಹೊಂದಿದೆ. ಇದಲ್ಲದೆ ಫಿಟ್‌ನೆಸ್-ಕೇಂದ್ರಿತ ಫೀಚರ್ಸ್‌ಗಳಲ್ಲಿ 24x7 ಹಾರ್ಟ್‌ಬೀಟ್ ಟ್ರ್ಯಾಕಿಂಗ್, ಸ್ಲಿಪಿಂಗ್ ಟ್ರ್ಯಾಕಿಂಗ್, ರಕ್ತದ ಆಮ್ಲಜನಕದ ಶುದ್ದತೆಯ ಮಟ್ಟವನ್ನು ಅಳೆಯುವ ಸಾಮರ್ಥ್ಯವನ್ನ ಒಳಗೊಂಡಿದೆ.

ಸದ್ಯ ಇದು ಮಣಿಕಟ್ಟಿನ ಮೇಲೆ ಹೆಚ್ಚು ಆರಾಮದಾಯಕವಾದ ಫಿಟ್ ಅನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ. ಇದಲ್ಲದೆ , ಅಮಾಜ್‌ಫಿಟ್ ಎಕ್ಸ್ ಯಾವುದೇ ರೀತಿಯ ಭೌತಿಕ ಗುಂಡಿಗಳನ್ನು ಹೊಂದಿರುವುದಿಲ್ಲ. ಅಲ್ಲದೆ ಬಳಕೆದಾರರ-ಇಂಟರ್ಫೇಸ್ ಅನ್ನು ನ್ಯಾವಿಗೇಟ್ ಮಾಡಲು ಅಮೋಲೆಡ್ ಡಿಸ್‌ಪ್ಲೇಯಲ್ಲಿ ಸನ್ನೆಗಳ ಮೇಲೆ ಮಾತ್ರ ಅವಲಂಬಿತವಾಗಿರುತ್ತದೆ. ಈ ಸ್ಮಾರ್ಟ್‌ವಾಚ್‌ನ ಸುತ್ತಮುತ್ತಲಿನ ಫ್ರೇಮ್ ಲೋಹದಿಂದ ಮಾಡಲ್ಪಟ್ಟಿದೆ ಮತ್ತು ಒತ್ತಡದ ಸೂಕ್ಷ್ಮ ಸೆನ್ಸಾರ್ ಅನ್ನು ಒಂದು ಬದಿಯಲ್ಲಿ ಮರೆಮಾಡುತ್ತದೆ, ಅದು UI ಅನ್ನು ನ್ಯಾವಿಗೇಟ್ ಮಾಡಲು ಸನ್ನೆಗಳನ್ನು ಗುರುತಿಸಲು ಬಳಸಲಾಗುತ್ತದೆ. ಈಜು, ಓಟ, ಮತ್ತು ಸೈಕ್ಲಿಂಗ್ ಮುಂತಾದ ಚಟುವಟಿಕೆಗಳಿಗೆ ಒಂಬತ್ತು ಕ್ರೀಡಾ ವಿಧಾನಗಳಿವೆ. ಇದು ಬಳಕೆದಾರರು ತಮ್ಮ ದೈನಂದಿನ ಚಟುವಟಿಕೆಗಳಿಗೆ ಅನುಗುಣವಾಗಿ ಫಿಟ್‌ನೆಸ್ ಗುರಿಗಳನ್ನು ಹೊಂದಿಸಲು ಅನುವು ಮಾಡಿಕೊಡುತ್ತದೆ.

ಅಲ್ಲದೆ ಈ ಸ್ಮಾರ್ಟ್‌ವಾಚ್ 200mAh ಲಿಥಿಯಂ-ಪಾಲಿಮರ್ ಬ್ಯಾಟರಿಯನ್ನು ಪ್ಯಾಕ್ ಅಪ್ ನೀಡುತ್ತದೆ. ಜೊತೆಗೆ ಒಂದೇ ಚಾರ್ಜ್‌ನಲ್ಲಿ 7 ದಿನಗಳ ಕಾಲ ಉಳಿಯುತ್ತದೆ ಎಂದು ಹೇಳಲಾಗುತ್ತದೆ. ಬ್ಲೂಟೂತ್ 5.0 ಸಂಪರ್ಕವನ್ನು ನಿರ್ವಹಿಸುತ್ತದೆ, ಆದರೆ ಜಿಪಿಎಸ್ ಮತ್ತು ಗ್ಲೋನಾಸ್ ಸ್ಥಾನಿಕ ಕರ್ತವ್ಯಗಳನ್ನು ನಿರ್ವಹಿಸುತ್ತವೆ. ಅಮಾಜ್‌ಫಿಟ್ ಎಕ್ಸ್ ಪಿಪಿಜಿ ಹೃದಯ ಬಡಿತ ಸಂವೇದಕ, ರಕ್ತ ಆಮ್ಲಜನಕ ಸ್ಯಾಚುರೇಶನ್ ಸೆನ್ಸರ್, ಅಕ್ಸೆಲೆರೊಮೀಟರ್, ಗೈರೊಸ್ಕೋಪ್ ಮತ್ತು ಆಂಬಿಯೆಂಟ್ ಲೈಟ್ ಸೆನ್ಸಾರ್ ಅನ್ನು ಹೊಂದಿದೆ. ಸದ್ಯ ಹುವಾಮಿ ಅಮಾಜ್‌ಫಿಟ್ ಎಕ್ಸ್ ಇಂಡಿಗೊಗೊ ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್ ಮೂಲಕ ಲಭ್ಯವಿದೆ, ಆದ್ದರಿಂದ ಆರಂಭಿಕ ಬೆಲೆ ಸಾಮಾನ್ಯ ಖರೀದಿದಾರರಿಗೆ ಭಿನ್ನವಾಗಿರುತ್ತದೆ. ಇದರ ಆರಂಭಿಕ ಬೆಲೆ $149 (ಸುಮಾರು ರೂ. 11,300) ರಿಂದ ಪ್ರಾರಂಭವಾಗಿದ್ದರೆ, ಐಜಿಜಿ ಸ್ಪೆಷಲ್ ಅಮಾಜ್‌ಫಿಟ್ ಎಕ್ಸ್ ಬೆಲೆ $179 (ಸುಮಾರು 13,500 ರೂ.) ಆಗಿದೆ. ಅಲ್ಲದೆ ಈ ಡಿವೈಸ್‌ನ ನಿಯಮಿತ ಬೆಲೆ $329 (ಸರಿಸುಮಾರು 25,000 ರೂ.) ಆಗಿದ್ದು, ಆಗಸ್ಟ್ ತಿಂಗಳಲ್ಲಿ ಖರೀದಿಸಲು ಲಬ್ಯವಾಗಲಿದೆ.


Click it and Unblock the Notifications