ಭಾರತದಲ್ಲಿ Huawei Band 10 ಬಿಡುಗಡೆ: ಬೆಲೆ, ವೈಶಿಷ್ಟ್ಯಗಳ ಸಂಪೂರ್ಣ ಮಾಹಿತಿ!
ಭಾರತದ ಗ್ಯಾಜೆಟ್ ಮಾರುಕಟ್ಟೆಯ ನಿರೀಕ್ಷೆಯಂತೆಯೇ, Huawei ತನ್ನ ಹೊಸ ಫಿಟ್‌ನೆಸ್ ಟ್ರ್ಯಾಕರ್ Huawei Band 10 ಅನ್ನು ದೇಶದಲ್ಲಿ ಶುಕ್ರವಾರದಂದು ಬಿಡುಗಡೆ ಮಾಡಿದೆ. ಈ ಹೊಸ ಸ್ಮಾರ್ಟ್ ಬ್ಯಾಂಡ್ ಸುಧಾರಿತ ವೈಶಿಷ್ಟ್ಯಗಳು ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬಂದಿದ್ದು, ಫಿಟ್‌ನೆಸ್ ಉತ್ಸಾಹಿಗಳನ್ನು ಆಕರ್ಷಿಸುವವಂತಹ 14 ದಿನಗಳ ಬ್ಯಾಟರಿ ಬಾಳಿಕೆ, ಆಕರ್ಷಕ AMOLED ಡಿಸ್‌ಪ್ಲೇ ಮತ್ತು ಸಮಗ್ರ ಆರೋಗ್ಯ ಟ್ರ್ಯಾಕಿಂಗ್ ಸಾಮರ್ಥ್ಯಗಳೊಂದಿಗೆ ಪರಿಚಯಗೊಂಡಿದೆ. ಹಾಗಾದರೆ, ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಲು ಸಜ್ಜಾಗಿ ಬಂದಿರುವ ಹೊಸ Huawei Band 10 ಫಿಟ್‌ನೆಸ್ ಟ್ರ್ಯಾಕರ್ ಸಾಧನವು ಹೇಗಿದೆ?, ಇದರ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯೋಣ ಬನ್ನಿ.
Huawei Band 10: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Huawei Band 10 ಸಾಧನದ ಬೆಲೆ ಪಾಲಿಮರ್ ಕೇಸ್ ಆಯ್ಕೆಗಳಿಗೆ ರೂ. 6,499 ರಿಂದ ಪ್ರಾರಂಭವಾಗುತ್ತದೆ. ಹೆಚ್ಚು ಪ್ರೀಮಿಯಂ ಆಗಿರುವ ಅಲ್ಯೂಮಿನಿಯಂ ಅಲಾಯ್ ಕೇಸ್ ರೂಪಾಂತರಗಳು ರೂ. 6,999 ಕ್ಕೆ ಲಭ್ಯವಿದೆ. ಆದಾಗ್ಯೂ, Huawei ಜೂನ್ 10 ರವರೆಗೆ ವಿಶೇಷ ಬಿಡುಗಡೆ ಕೊಡುಗೆಯನ್ನು ಘೋಷಿಸಿದೆ. ಈ ಅವಧಿಯಲ್ಲಿ, ಪಾಲಿಮರ್ ಆವೃತ್ತಿಯನ್ನು ರೂ. 3,699 ಕ್ಕೆ ಮತ್ತು ಅಲ್ಯೂಮಿನಿಯಂ ಆವೃತ್ತಿಯನ್ನು ರೂ. 4,199 ಕ್ಕೆ ಖರೀದಿಸಬಹುದು. ಈ ಸ್ಮಾರ್ಟ್ ಬ್ಯಾಂಡ್ ಪ್ರತ್ಯೇಕವಾಗಿ ಅಮೆಜಾನ್ ಮೂಲಕ ದೇಶದಲ್ಲಿ ಖರೀದಿಗೆ ಲಭ್ಯವಿದೆ. ಬಣ್ಣದ ಆಯ್ಕೆಗಳಿಗೆ ಬಂದಾಗ, Huawei Band 10 ರ ಕಪ್ಪು ಮತ್ತು ಗುಲಾಬಿ ಬಣ್ಣಗಳು ಪಾಲಿಮರ್ ಕೇಸ್‌ನೊಂದಿಗೆ ಲಭ್ಯವಿದೆ. ಇನ್ನು, ನೀಲಿ, ಹಸಿರು, ಮ್ಯಾಟ್ ಕಪ್ಪು, ನೇರಳೆ ಮತ್ತು ಬಿಳಿ ಬಣ್ಣಗಳು ಅಲ್ಯೂಮಿನಿಯಂ ಕೇಸ್ ಆಯ್ಕೆಯಲ್ಲಿ ದೊರೆಯುತ್ತವೆ.
ವಿಶಿಷ್ಟತೆಗಳು ಮತ್ತು ವೈಶಿಷ್ಟ್ಯಗಳು
Huawei Band 10, 1.47-ಇಂಚಿನ AMOLED ಆಯತಾಕಾರದ ಡಿಸ್‌ಪ್ಲೇಯನ್ನು ಹೊಂದಿದ್ದು, 194x368 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 282ppi ಪಿಕ್ಸೆಲ್ ಸಾಂದ್ರತೆಯನ್ನು ನೀಡುತ್ತದೆ. ಇದು ಆಲ್ವೇಸ್ ಆನ್ ಡಿಸ್‌ಪ್ಲೇ (AOD) ಬೆಂಬಲವನ್ನು ಹೊಂದಿದೆ. ಪರದೆಯು ಸ್ವೈಪ್ ಮತ್ತು ಟಚ್ ಗೆಸ್ಚರ್‌ಗಳನ್ನು ಬೆಂಬಲಿಸುತ್ತದೆ, ಜೊತೆಗೆ ನ್ಯಾವಿಗೇಷನ್‌ಗಾಗಿ ಸೈಡ್ ಬಟನ್ ಅನ್ನು ಸಹ ಹೊಂದಿದೆ. ಫಿಟ್‌ನೆಸ್ ಟ್ರ್ಯಾಕಿಂಗ್‌ಗಾಗಿ, ಇದು ಓಟ, ಸೈಕ್ಲಿಂಗ್, ಯೋಗ, ಈಜು ಸೇರಿದಂತೆ 100 ಪೂರ್ವನಿಗದಿಪಡಿಸಿದ ವ್ಯಾಯಾಮ ಮೋಡ್‌ಗಳನ್ನು ಒಳಗೊಂಡಿದೆ. ಅಕ್ಸೆಲೆರೊಮೀಟರ್, ಗೈರೊಸ್ಕೋಪ್ ಮತ್ತು ಮ್ಯಾಗ್ನೆಟೋಮೀಟರ್‌ನಂತಹ ಸಂವೇದಕಗಳು ನಿಖರವಾದ ಟ್ರ್ಯಾಕಿಂಗ್‌ಗೆ ಸಹಾಯ ಮಾಡುತ್ತವೆ.
ಈ Huawei Band 10 ಸ್ಮಾರ್ಟ್ ಬ್ಯಾಂಡ್ ಅನ್ನು ವಿಶೇಷವಾಗಿ ಈಜುಗಾರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಒಂಬತ್ತು-ಅಕ್ಷದ ಸಂವೇದಕ ಮತ್ತು AI-ಬೆಂಬಲಿತ ಸ್ಟ್ರೋಕ್ ಗುರುತಿಸುವಿಕೆ ವೈಶಿಷ್ಟ್ಯಗಳ ಸಹಾಯದಿಂದ ಈಜು ಸ್ಟ್ರೋಕ್ ಮತ್ತು ಲ್ಯಾಪ್ ಪತ್ತೆಯಲ್ಲಿ 95 ಪ್ರತಿಶತ ನಿಖರವಾಗಿದೆ ಎಂದು Huawei ಹೇಳಿಕೊಂಡಿದೆ. 5ATM ಜಲ-ನಿರೋಧಕ ರೇಟಿಂಗ್‌ನೊಂದಿಗೆ, ಇದು ನೀರಿನಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಕಾರ್ಯನಿರ್ವಹಿಸುತ್ತದೆ. Huawei Band 10 ಆಂಡ್ರಾಯ್ಡ್ ಮತ್ತು iOS ಸಾಧನಗಳೆರಡರೊಂದಿಗೂ ಹೊಂದಿಕೊಳ್ಳುತ್ತದೆ.

ಆರೋಗ್ಯ ಟ್ರ್ಯಾಕಿಂಗ್ ವೈಶಿಷ್ಟ್ಯಗಳಿಗೆ ಬಂದಾಗ, Huawei Band 10 ಆಪ್ಟಿಕಲ್ ಹೃದಯ ಬಡಿತ ಮಾನಿಟರ್ ಮತ್ತು ರಕ್ತ-ಆಮ್ಲಜನಕ ಮಟ್ಟ (SpO2) ಮಾನಿಟರ್ ಅನ್ನು ಹೊಂದಿದೆ. ಇದು ನಿದ್ರೆ-ಹೃದಯ ಬಡಿತದ ವ್ಯತ್ಯಾಸ (HRV), ನಿದ್ರೆಯ ಗುಣಮಟ್ಟ ಮತ್ತು ಒತ್ತಡದ ಮಟ್ಟವನ್ನು ಸಹ ಟ್ರ್ಯಾಕ್ ಮಾಡುತ್ತದೆ. ಇದಲ್ಲದೆ, ಇದು ಅಂತರ್ನಿರ್ಮಿತ ಉಸಿರಾಟದ ವ್ಯಾಯಾಮಗಳನ್ನು ಹೊಂದಿದೆ. ಭಾವನಾತ್ಮಕ ಯೋಗಕ್ಷೇಮ ಸಹಾಯಕದೊಂದಿಗೆ, ಸ್ಮಾರ್ಟ್ ಬ್ಯಾಂಡ್ ಕ್ಷೇಮ ಸಲಹೆಗಳನ್ನು ನೀಡುತ್ತದೆ ಮತ್ತು ಸಕಾರಾತ್ಮಕ ಅಥವಾ ಶಾಂತಗೊಳಿಸುವ ಗಡಿಯಾರ ಮುಖಗಳನ್ನು ಸೂಚಿಸುತ್ತದೆ.
ಬ್ಯಾಟರಿ ಬಾಳಿಕೆಯ ವಿಷಯದಲ್ಲಿ, Huawei Band 10 ಸ್ಮಾರ್ಟ್ ಬ್ಯಾಂಡ್ ಒಂದೇ ಚಾರ್ಜ್‌ನಲ್ಲಿ 14 ದಿನಗಳವರೆಗೆ ಬಾಳಿಕೆ ಬರುತ್ತದೆ ಎಂದು Huawei ಹೇಳಿಕೊಂಡಿದೆ. ಸಂಪೂರ್ಣ ಚಾರ್ಜ್‌ಗೆ ಕೇವಲ 45 ನಿಮಿಷಗಳು ಬೇಕಾಗುತ್ತವೆ. ಐದು ನಿಮಿಷಗಳ ತ್ವರಿತ ಚಾರ್ಜ್ ಎರಡು ದಿನಗಳವರೆಗೆ ಬಳಕೆಯನ್ನು ನೀಡುತ್ತದೆ. ಸ್ಮಾರ್ಟ್ ಬ್ಯಾಂಡ್‌ನ ದೇಹವು 8.99mm ವಿದೆ ಮತ್ತು ಕೇವಲ 14 ಗ್ರಾಂ ತೂಗುತ್ತದೆ, ಇದು ಬಳಕೆದಾರರಿಗೆ ಹಗುರವಾದ ಮತ್ತು ಆರಾಮದಾಯಕ ಅನುಭವವನ್ನು ನೀಡುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ.


Click it and Unblock the Notifications








