ಹುವಾವೇ ಬ್ಯಾಂಡ್ 4 ಪ್ರೊ ಲಾಂಚ್‌ ಮಾಡಿದ ಹುವಾವೇ!

|

ಸ್ಮಾರ್ಟ್‌ ಜಗತ್ತಿನಲ್ಲಿ ಎಲ್ಲವೂ ಸ್ಮಾರ್ಟ್‌ಪ್ರಾಡಕ್ಟ್‌ಗಳಾಗಿ ಬರುತ್ತಿವೆ. ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲ ಸ್ಮಾರ್ಟ್‌ ಫಿಟ್ನೆಸ್‌ ಬ್ಯಾಂಡ್‌ಗಳು ಕೂಡ ಮಾರುಕಟ್ಟೆಗೆ ಲಗ್ಗೆ ಹಾಕಿರೋದು ಗೊತ್ತಿರೋದದೆ. ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆಯಂತೆ ಫಿಟ್ನೆಸ್‌ಬ್ಯಾಂಡ್‌ ಗಳ ಮಾರುಕಟ್ಟೆಯಲ್ಲೂ ಪೈಪೋಟಿ ಹೊಸದೇನಲ್ಲ. ಈಗಾಗ್ಲೆ ಫಿಟ್ನೆಸ್‌ ಬ್ಯಾಂಡ್‌ ತಯಾರಿಕೆಯಲ್ಲಿ ಜನಪ್ರಿಯತೆ ಗಳಿಸಿರೋ ಹುವಾವೇ ಕಂಪೆನಿ ಹುವಾವೇ ಬ್ಯಾಂಡ್‌ 4 ಪ್ರೊ ಫಿಟ್ನೆಸ್‌ ಬ್ಯಾಂಡ್‌ ಅನ್ನ ಚೀನಾ ಮಾರುಕಟ್ಟೆಯಲ್ಲಿ ಲಾಂಚ್‌ ಮಾಡಿದೆ.

ಹುವಾವೇ

ಹೌದು ಹುವಾವೇ ಕಂಪೆನಿ ಹುವಾವೇ ಬ್ಯಾಂಡ್ 4 ಪ್ರೊ. ಫಿಟ್ನೆಸ್‌ ಬ್ಯಾಂಡ್‌ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಇದು ಮನುಷ್ಯನ ಹೃದಯ ಬಡಿತ ಸಂವೇದಕ ಮತ್ತು ರಕ್ತದಲ್ಲಿನ ಆಮ್ಲಜನಕದ ಶುದ್ಧತ್ವ ಮಟ್ಟವನ್ನು ಅಳೆಯಲು ಎಸ್‌ಪಿಒ 2 ಸಂವೇದಕವನ್ನು ಹೊಂದಿದೆ. ಈ ಫಿಟ್ನೆಸ್‌ ಬ್ಯಾಂಡ್‌ 11 ಕ್ಕೂ ಹೆಚ್ಚಿನ ರೀತಿಯ ವ್ಯಾಯಾಮಗಳನ್ನ ಟ್ರ್ಯಾಕ್‌ ಮಾಡಲಿದ್ದು ಬಳಕೆದಾರ ನಡೆಸುವ ಚಟುವಟಿಕೆಗಳ ಮೇಲೂ ಎಚ್ಚರಿಕೆ ವಹಿಸುವ ವೈಶಿಷ್ಟ್ಯವನ್ನ ಹೊಂದಿದೆ. ಹಾಗಾದ್ರೆ ಹುವಾವೇ ಬ್ಯಾಂಡ್‌ 4 ಪ್ರೊ ಹೊಂದಿರುವ ವಿಶೇಷತೆಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿ

ಡಿಸ್‌ಪ್ಲೇ

ಡಿಸ್‌ಪ್ಲೇ

ಹುವಾವೇ ಬ್ಯಾಂಡ್ 4 ಪ್ರೊ 0.65-ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದ್ದು, 240x120 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ, ಅಲ್ಲದೆ ಏಕಕಾಲದಲ್ಲಿ 40 ಚೀನೀ ಅಕ್ಷರಗಳನ್ನು ಪ್ರದರ್ಶಿಸುವ ಸಾಮರ್ಥ್ಯ ಹೊಂದಿದೆ. ಇದು ಮೂಲತಃ ಹುವಾವೇ ಬ್ಯಾಂಡ್ 4 ರ ಸೂಪ್-ಅಪ್ ಆವೃತ್ತಿಯಾಗಿದ್ದು, ನ್ಯಾವಿಗೇಷನ್‌ಗಾಗಿ ಅಂತರ್ನಿರ್ಮಿತ ಜಿಪಿಎಸ್ ಅನ್ನು ಹೊಂದಿದೆ. ಅಲ್ಲದೆ NFC ಬೆಂಬಲವನ್ನು ಸಹ ಹೊಂದಿದೆ.

ವಿಶೇಷತೆ

ವಿಶೇಷತೆ

ಈ ಬ್ಯಾಂಡ್‌ ಬಳಕೆದಾರರ ಹೃದಯ ಬಡಿತವನ್ನ ಟ್ರ್ಯಾಕ್‌ ಮಾಡಲಿದೆ. ಅಲ್ಲದೆ ರಕ್ತದಲ್ಲಿನ ಆಮ್ಲಜನಕದ ಶುದ್ದತೆ ಸಾಂದ್ರತೆಯನ್ನು ಅಳೆಯಬಲ್ಲ ಎಸ್‌ಪಿಒ 2 ಮಾನಿಟರ್ ಅನ್ನು ಹೊಂದಿದೆ, ಇದನ್ನು ಸಾಮಾನ್ಯವಾಗಿ ರಕ್ತ ಆಮ್ಲಜನಕ ಶುದ್ಧತ್ವ ಮಟ್ಟ ಎಂದು ಕರೆಯಲಾಗುತ್ತದೆ. ಸ್ಲೀಪ್ ಟ್ರ್ಯಾಕ್‌ ಮನಾಡುವುದಕ್ಕಾಗಿ ಹುವಾವೇ ಟ್ರೂಸ್ಲೀಪ್ 2.0 ತಂತ್ರಜ್ಞಾನವನ್ನ ಅಳವಡಿಸಲಾಗಿದೆ. ಅಲ್ಲದೆ ರನ್ನಿಂಗ್‌, ಸ್ವಿಮ್ಮಿಂಗ್‌, ಸೈಕ್ಲಿಂಗ್‌ನಂತಹ 11 ರೀತಿಯ ವ್ಯಾಯಾಮಗಳನ್ನು ಸಹ ಇದು ಟ್ರ್ಯಾಕ್ ಮಾಡಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹುವಾವೇ ಬ್ಯಾಂಡ್ 4 ಪ್ರೊ ಬೆಲೆ 4,000 ರೂ. ಆಗಿದ್ದು, ಇದು ಕಪ್ಪು, ಗುಲಾಬಿ ಮತ್ತು ಕೆಂಪು ಮೂರು ಬಣ್ಣಗಳಲ್ಲಿ ಲಭ್ಯವಿದೆ. ಸದ್ಯ ಚೀನಾ ಮಾರುಕಟ್ಟೆಯಲ್ಲಿ ಇದೇ ಡಿಸೆಂಬರ್ 12 ರಿಂದ ಮಾರಾಟಕ್ಕೆ ಲಭ್ಯವಿರಲಿದೆ. ಭಾರತ ಸೇರಿದಂತೆ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಹುವಾವೇ ಬ್ಯಾಂಡ್ 4 ಪ್ರೊ ಯಾವಾಗ ಬರಲಿದೆ ಅನ್ನೊ ಖಚಿತ ಮಾಹಿತಿಯನ್ನ ಹುವಾವೇ ಕಂಪೆನಿ ಇನ್ನೂ ಕೂಡ ಖಚಿತ ಪಡಿಸಿಲ್ಲ.

ಬ್ಯಾಂಡ್‌

ಇನ್ನು ಹುವಾವೇ ಬ್ಯಾಂಡ್‌ 4 ಪ್ರೊ ಜೊತೆಗೆ ಹೆಚ್ಚುವರಿಯಾಗಿ, ಹುವಾವೇ ಎಂಜಾಯ್ 10 ಎಸ್ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ, ಈ ಸ್ಮಾರ್ಟ್‌ಫೋನ್‌ 8GB RAM ಮತ್ತು 128GB ಶೇಖರಣ ಸಾಮರ್ಥ್ಯವನ್ನು ಹೊಂದಿದೆ. ಇದರ ಬೆಲೆ 20,258 ರೂಗಳಾಗಿದ್ದು ಈಗಾಗಲೇ ಚೀನಾದ ವಿಮಾಲ್ ನಲ್ಲಿ ಮಾರಾಟವಾಗ್ತಿದೆ.

Most Read Articles
Best Mobiles in India

English summary
Huawei has added a new fitness band to its wearables portfolio – Huawei Band 4 Pro. Huawei's latest wearable comes equipped with a heart rate sensor as well as SpO2 sensor for gauging blood oxygen saturation levels.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more