Huawei Band 4: ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಹುವಾವೇ ಬ್ಯಾಂಡ್‌ 4!

|

ಈಗಾಗ್ಲೆ ಟೆಕ್‌ಮಾರುಕಟ್ಟೆಯಲ್ಲಿ ಫಿಟ್ನೆಸ್‌ ಆಧಾರಿತ ಬ್ಯಾಂಡ್‌ಗಳು ಬಾರಿ ಸೌಂಡ್‌ ಮಾಡ್ತಿವೆ. ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಂತೆ ಫಿಟ್ನೆಸ್‌ ಬ್ಯಾಂಡ್‌ ಆಧಾರಿತ ಸ್ಮಾರ್ಟ್‌ ಡಿವೈಸ್‌ಗಳ ಮಾರುಕಟ್ಟೆಕೂಡ ವಿಸ್ತಾರವಾಗುತ್ತಲೇ ಇದೆ. ಫಿಟ್ನೆಸ್‌ಬ್ಯಾಂಡ್‌ಗಳು ಹೊಸ ಮಾದರಿಯಲ್ಲಿ ಸ್ಮಾರ್ಟ್‌ ಆಗಿ ಮಾರುಕಟ್ಟೆಗೆ ಎಂಟ್ರಿ ನೀಡುತ್ತಿವೆ. ಇದೀಗ ಈಗಾಗ್ಲೆ ಪಿಟ್ನೆಸ್‌ ಬ್ಯಾಂಡ್‌ ಸೇರಿದಂತೆ ಹಲವಾರು ಸ್ಮಾರ್ಟ್‌ ಡಿವೈಸ್‌ಗಳ ಪರಿಚಯಿಸಿರೋ ಹುವಾವೇ ಕಂಪೆನಿ ಹೊಸ ಫಿಟ್ನೆಸ್‌ ಬ್ಯಾಂಡ್‌ ಅನ್ನ ಭಾರತೀಯ ಮಾರುಕಟ್ಟೆಗೆ ಲಾಂಚ್‌ ಮಾಡಿದೆ.

ಹೌದು

ಹೌದು ಸ್ಮಾರ್ಟ್‌ಫೋನ್‌ ಗಳ ಜೊತೆಗೆ ಸ್ಮಾರ್ಟ್‌ ಡಿವೈಸ್‌ಗಳ ಮಾರುಕಟ್ಟೆಯಲ್ಲೂ ಸೈ ಎನಿಸಿಕೊಂಡಿರುವ ಚೀನಾ ಮೂಲದ ಹುವಾವೇ ಕಂಪೆನಿ ಭಾರತದಲ್ಲಿ ತನ್ನ ಹೊಸ ಫಿಟ್ನೆಸ್‌ ಬ್ಯಾಂಡ್‌ ಹುವಾವೇ ಬ್ಯಾಂಡ್‌ 4 ಅನ್ನ ಮಾರುಕಟ್ಟೆಗೆ ಪರಿಚಯಿಸಿದೆ. 2019 ರ ವರ್ಷಾಂತ್ಯದಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಿದ್ದ ಈ ಫಿಟ್ನೆಸ್‌ ಬ್ಯಾಂಡ್‌ ಇದೀಗ ಭಾರತದಕ್ಕೆ ಕಾಲಿಟ್ಟಿದ್ದು, ತನ್ನ ಹೊಸ ಮಾದರಿಯ ಫೀಚರ್ಸ್‌ಗಳ ಮೂಲಕ ಸೌಂಡ್‌ ಮಾಡೋ ಸೂಚನೆ ನೀಡಿದೆ.

ಹುವಾವೇ

ಹುವಾವೇ ಕಂಪೆನಿಯ ಹುವಾವೇ ಬ್ಯಾಂಡ್ 4, 80 x 160 ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿರುವ 0.96-ಇಂಚಿನ ಟಿಎಫ್‌ಟಿ ಕಲರ್‌ ಡಿಸ್‌ಪ್ಲೇಯನ್ನ ಹೊಂದಿದ್ದು, 5ATM ವಾಟರ್ ಪ್ರೂಫ್ ವ್ಯವಸ್ಥೆಯನ್ನ ಒಳಗೊಂಡಿದೆ. ಇದಲ್ಲದೆ ಹುವಾವೇ ಬ್ಯಾಂಡ್ 4 ರಲ್ಲಿ ಅಪೊಲೊ 3 ಮೈಕ್ರೊಪ್ರೊಸೆಸರ್ ಅಳವಡಿಸಲಾಗಿದ್ದು, ಇದು ಹೃದಯ ಸಂಬಂಧಿ ಮಾಹಿತಿಯನ್ನ ನೀಡುತ್ತದೆ. ಇನ್ನು ಆಲರ್ಟ್‌ ನೊಟೀಫಿಕೇಷನ್‌ಗಳ ಜೊತೆಗೆ ಸೈಕ್ಲಿಂಗ್, ವಾಕಿಂಗ್, ರೋಯಿಂಗ್ ಮತ್ತು ಯೋಗಕ್ಕೆ ಸಂಬಂಧಿಸಿದ ಮಾಹಿತಿಯನ್ನ ನೀಡುತ್ತದೆ.

ಫಿಟ್ನೆಸ್‌

ಇನ್ನು ಈ ಫಿಟ್ನೆಸ್‌ ಬ್ಯಾಂಡ್‌ 24x7 ಹಾರ್ಟ್‌ಬೀಟ್‌ ಮಾನಿಟರಿಂಗ್‌ ಮಾಡಲಿದ್ದು, ಆಪ್ಟಿಕಲ್ ಹಾರ್ಟ್‌ಬೀಟ್‌ ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ ನಿದ್ರೆ ಸಂಬಂದಿಸಿದ ಮಾಹಿತಿಯನ್ನು ಸಹ ನೀಡಲಿದ್ದು, ಇದಕ್ಕಾಗಿ ಟ್ರೂಸ್ಲೀಪ್ 2.0 ತಂತ್ರಜ್ಞಾನವನ್ನು ಬೆಂಬಲಿಸಲಿದೆ. ಇದಲ್ಲದೆ ಈ ಫಿಟ್ನೆಸ್‌ ಬ್ಯಾಂಡ್‌ ಮೂಲಕ ನಿಮ್ಮ ದೇಹದ ರಕ್ತ ಶುದ್ದತೆಯ ಮಟ್ಟವನ್ನು ಸಹ ಅಳೆಯಬಹುದಾಗಿದ್ದು, ಆಮ್ಲಜನಕದ ಗುಣಮಟ್ಟದ ಬಗ್ಗೆಯೂ ಎಚ್ಚರಿಕೆಯನ್ನ ರವಾನಿಸಲಿದೆ.

ಹೊಸ

ಹುವಾವೇ ಈ ಹೊಸ ಬ್ಯಾಂಡ್ 4 ಅನ್ನು ವಿದ್ಯುತ್‌ ಮೂಲಕ ಡೈರೆಕ್ಟ್‌ ಚಾರ್ಜ್ ಮಾಡಬಹುದಾಗಿದ್ದು. ಇದು ಪ್ಲಗ್-ಅಂಡ್-ಚಾರ್ಜ್ ವ್ಯವಸ್ಥೆ ಹೊಂದಿರುವುದರಿಂದ ಕೇಬಲ್‌ ಅಥವಾ ಚಾರ್ಜಿಂಗ್ ಹಬ್ ಅನ್ನು ಹುಡುಕುವ ತೊಂದರೆಯನ್ನು ನಿವಾರಿಸುತ್ತದೆ. ಇನ್ನು ಈ ಬ್ಯಾಂಡ್‌ ಫೈಂಡ್ ಮೈ ಫೋನ್ ಮತ್ತು ರಿಮೋಟ್ ಶಟರ್ ಫೀಚರ್ಸ್‌ಗಳನ್ನ ಹೊಂದಿರುವುದು ಕೂಡ ಗ್ರಾಹಕರನ್ನ ಸೆಳೆಯಲು ಅನುಕೂಲವಾಗಲಿದೆ.

ಹುವಾವೇ

ಇನ್ನು ಹುವಾವೇ ಬ್ಯಾಂಡ್ ಆಂಡ್ರಾಯ್ಡ್ 4.4 ಮತ್ತು ಐಒಎಸ್ 9.0 ಪ್ರೊಸೆಸರ್‌ಗಳ ಜೊತೆಗೆ ಹೊಂದಿಕೊಳ್ಳಲಿದ್ದು, 4, 91mAhಸಾಮರ್ಥ್ಯದ ಬ್ಯಾಟರಿ ಪ್ಯಾಕ್ಆಪ್‌ ಹೊಂದಿದೆ. ಅಲ್ಲದೆ ಇದು ಒಂದೇ ಚಾರ್ಜ್‌ನಲ್ಲಿ ಒಂಬತ್ತು ದಿನಗಳ ಬ್ಯಾಟರಿ ಅವಧಿಯನ್ನ ನೀಡಲಿದೆ. ಇನ್ನು ಈ ಹೊಸ ಬ್ಯಾಂಡ್‌ 4, 24 ಗ್ರಾಂ ನಷ್ಟು ತೂಕವಿದ್ದು, ಧರಿಸಲು ಆರಾಮದಾಯಕ ಎನಿಸಲಿದೆ. ಸದ್ಯ

ಹುವಾವೇ ಬ್ಯಾಂಡ್ 4, ಬೆಲೆ 1,999 ರೂ, ಆಗಿದ್ದು, ಗ್ರ್ಯಾಫೈಟ್ ಕಪ್ಪು ಬಣ್ಣದಲ್ಲಿ ಲಭ್ಯವಿದೆ.

Most Read Articles
Best Mobiles in India

English summary
Huawei Band 4 is priced at Rs. 1,999 and comes in a single Graphite Black colour.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X