ಹುವಾವೇ ಎಂಜಾಯ್ 70 ಫೋನ್ ಲಾಂಚ್! 6,000mAh ಬ್ಯಾಟರಿ ಸಾಮರ್ಥ್ಯ!
ಸ್ಮಾರ್ಟ್‌ಫೋನ್ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಹುವಾವೇ ಕೂಡ ಒಂದಾಗಿದೆ. ಹುವಾವೇ ಕಂಪೆನಿಯ ಫೋನ್‌ಗಳಿಗೆ ಮೊಬೈಲ್ ಮಾರುಕಟ್ಟೆಯಲ್ಲಿ ಉತ್ತಮ ಮಾರುಕಟ್ಟೆಯಿದೆ. ಇದೀಗ ಹುವಾವೇ ಹೊಸದಾಗಿ ಹುವಾವೇ ಎಂಜಾಯ್ 70 ಅನ್ನು ಬಿಡುಗಡೆ ಮಾಡಿದೆ. ಇದು ಕೂಡ ಟೆಕ್ ವಲಯದಲ್ಲಿ ಧೂಳೆಬ್ಬಿಸುವ ಸೂಚನೆಯನ್ನು ನೀಡಿದೆ.
ಹೌದು, ಹುವಾವೇ ಎಂಜಾಯ್ 70 ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಸ್ಮಾರ್ಟ್‌ಫೋನ್ ಟಿಯರ್ ಡ್ರಾಪ್ ನಾಚ್ ಎಲ್‌ಸಿಡಿ ಪ್ಯಾನಲ್ ಮೂಲಕ ಗಮನಸೆಳೆಯುತ್ತಿದೆ. ಇದರ ಲುಕ್ ಹಾಗೂ ಡಿಸೈನ್ ಮೋಡಿ ಮಾಡುವಂತಿದ್ದು, ಯುವಜನರ ದಿಲ್‌ಗೆಲ್ಲುವ ಸಾಧ್ಯತೆಯಿದೆ. ಇದು 6,000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹುವಾವೇ ಎಂಜಾಯ್ 70 ಡಿಸ್‌ಪ್ಲೇ ರಚನೆ
ಹುವಾವೇ ಎಂಜಾಯ್ 70 ಸ್ಮಾರ್ಟ್‌ಫೋನ್ 6.75 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಡಿಸ್‌ಪ್ಲೇ ಟಿಯರ್‌ಡ್ರಾಪ್-ನೋಚ್ LCD ಪ್ಯಾನೆಲ್ ಅನ್ನು ಒಳಗೊಂಡಿದೆ. ಜೊತೆಗೆ 60Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿದ್ದು, 20:9 ರಚನೆಯ ಅನುಪಾತವನ್ನು ಹೊಂದಿದೆ.
ಹುವಾವೇ ಎಂಜಾಯ್ 70 ಪ್ರೊಸೆಸರ್ ಯಾವುದು?
ಹುವಾವೇ ಎಂಜಾಯ್ 70 ಸ್ಮಾರ್ಟ್‌ಫೋನ್ Kirin 710A ಚಿಪ್‌ಸೆಟ್ ಹೊಂದಿದ್ದು, ಹಾರ್ಮನಿ OS 4 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128 GB ಹಾಗೂ 8GB RAM ಮತ್ತು 256 GB ಸ್ಟೋರೇಜ್ ವೇರಿಯೆಂಟ್ ಆಯ್ಕೆಗಳಲ್ಲಿ ಬರುತ್ತದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಕೂಡ ಅವಕಾಶವನ್ನು ನೀಡಲಾಗಿದೆ.

ಹುವಾವೇ ಎಂಜಾಯ್ 70 ಕ್ಯಾಮೆರಾ ರಚನೆ
ಹುವಾವೇ ಎಂಜಾಯ್ 70 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.
ಹುವಾವೇ ಎಂಜಾಯ್ 70 ಬ್ಯಾಟರಿ ಮತ್ತು ಇತರೆ ಸೌಲಭ್ಯ
ಹುವಾವೇ ಎಂಜಾಯ್ 70 ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 22.5W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್ 5.1, ಜಿಪಿಎಸ್, ಎನ್‌ಎಫ್‌ಸಿ, ಯುಎಸ್‌ಬಿ-ಸಿ ಪೋರ್ಟ್ ಅನ್ನು ಹೊಂದಿದೆ. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಒಳಗೊಂಡಿದೆ. ಜೊತೆಗೆ ಹೆಚ್ಚುವರಿಯಾಗಿ, ಫಿಸಿಕಲ್ "ಎಂಜಾಯ್ ಎಕ್ಸ್" ಬಟನ್ ಆನ್‌ಬೋರ್ಡ್‌ನಲ್ಲಿದೆ.

ಹುವಾವೇ ಎಂಜಾಯ್ 70 ಬೆಲೆ ಮತ್ತು ಲಭ್ಯತೆ
ಹುವಾವೇ ಎಂಜಾಯ್ 70 ಸ್ಮಾರ್ಟ್‌ಫೋನ್ ಪ್ರಸ್ತುತ ಚೀನಾದಲ್ಲಿ ಬಿಡುಗಡೆ ಆಗಿದೆ. ಆದರಿಂದ ಇದರ 8GB RAM + 128 GB ಸ್ಟೋರೇಜ್ ಆಯ್ಕೆಯು 1,199 ಯುವಾನ್ (ಅಂದಾಜು 14,098ರೂ)ಬೆಲೆಯನ್ನು ಹೊಂದಿದೆ. ಇನ್ನು 8 GB RAM + 256 GB ಸ್ಟೋರೇಜ್ ಆಯ್ಕೆಗೆ 1,399 ಯುವಾನ್ (ಅಂದಾಜು 16,449ರೂ)ಬೆಲೆ ನಿಗಧಿಪಡಿಸಲಾಗಿದೆ. ಇದು ಬ್ರಿಲಿಯಂಟ್ ಬ್ಲ್ಯಾಕ್, ಸ್ನೋಯಿ ವೈಟ್ ಮತ್ತು ಎಮರಾಲ್ಡ್ ಗ್ರೀನ್ ನಂತಹ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications








