ಭಾರತದ ಮಾರುಕಟ್ಟೆಗೆ ಹುವಾವೇ ಫ್ರೀಬಡ್ಸ್ 3 ಇಯರ್‌ಫೋನ್‌ ಎಂಟ್ರಿ!

|

ಚೀನಾದ ಟೆಕ್‌ ಧೈತ್ಯ ಎನಿಸಿಕೊಂಡಿರುವ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಹುವಾವೇ ವಿಶಿಷ್ಟ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ತನ್ನ ವಿಶೇಷ ಫೀಚರ್ಸ್‌ ಸ್ಮಾರ್ಟ್‌ಫೋನ್‌ಗಳ ಮೂಲಕ ಪ್ರಬಲ ಕಂಪೆನಿಗಳಿಗೆ ಸ್ಪರ್ಧೆ ಹೊಡ್ಡುವ ಹುವಾವೇ ಮಾರುಕಟ್ಟೆಯಲ್ಲಿ ಸೈ ಎನಿಸಿಕೊಂಡಿದೆ. ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಸ್ಮಾರ್ಟ್‌ಫೋನ್‌ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಸದ್ಯ ಹುವಾವೇ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಇತರೆ ಸ್ಮಾರ್ಟ್‌ ಪ್ರಾಡಕ್ಟ್‌ಗಳನ್ನು ಸಹ ಮಾರುಕಟ್ಟೆಗೆ ಪರಿಚಯಿಸಿದ್ದು, ಇದೀಗ ಹೊಸ ಮಾದರಿಯ ಇಯರ್‌ಫೋನ್‌ಗಳನ್ನ ಬಿಡುಗಡೆ ಮಾಡಿದೆ.

ಹೌದು

ಹೌದು, ಜನಪ್ರಿಯ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ಆಗಿರುವ ಹುವಾವೇ ಇದೀಗ ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಮಾರುಕಟ್ಟೆಯಲ್ಲಿಯೂ ಸಖತ್‌ ಸೌಂಡ್‌ ಮಾಡ್ತಿದೆ. ತನ್ನ ಹೊಸ ಮಾದರಿಯ ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ಗಳನ್ನ ಪರಿಚಯಿಸಿರುವ ಹುವಾವೇ ಇದೀಗ ಭಾರತದ ಮಾರುಕಟ್ಟೆಯಲ್ಲಿ ಫ್ರೀಬಡ್ಸ್ 3 ಇಯರ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇನ್ನು ಈ ಹೊಸ ಟ್ರೂಲಿ ವಾಯರ್‌ಲೆಸ್ ಇಯರ್‌ಫೋನ್‌ಗಳು ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಹೊಂದಿದ್ದು, ಓಪನ್-ಫಿಟ್ ಹೊಂದಿರುವ ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಇದಾಗಿದೆ ಎಂದು ಹೇಳಲಾಗಿದೆ.

ಹುವಾವೇ

ಇನ್ನು ಹುವಾವೇ ಫ್ರೀ ಬಡ್ಸ್‌ 3 ಇಯರ್‌ಫೋನ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಓಪನ್-ಫಿಟ್ ಒಳಗೊಂಡಿದೆ. ಅಲ್ಲದೆ ಇಂದಿನ ಯುವ ಜನತೆಯ ಆಶಯಕ್ಕೆ ತಕ್ಕಂತೆ ಈ ವಾಯರ್‌ಲೆಸ್‌ ಇಯರ್‌ಫೊನ್‌ಗಳನ್ನ ವಿನ್ಯಾಸಗೊಳಿಸಲಾಗಿದ್ದು, ಆಪಲ್‌ನ ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ಗಳಿಗೆ ಸ್ಪರ್ಧೆ ನಿಡಲಿದೆ ಎಂದು ಹೇಳಲಾಗ್ತಿದೆ. ಇದಲ್ಲದೆ ಈ ಇಯರ್‌ಫೋನ್‌ಗಳು ಕಿರಿನ್ ಎ 1 ಚಿಪ್ ಮತ್ತು ಬ್ಲೂಟೂತ್ 5.1 ನಿಂದ ಕಂಟ್ರೋಲ್‌ ಮಾಡಬಹುದಾಗಿದ್ದು, 14mm ಆಡಿಯೋ ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿವೆ.

ಇದಲ್ಲದೆ

ಇದಲ್ಲದೆ ಆಕ್ಟಿವ್ ನಾಯ್ಸ್‌ ಕ್ಯಾನ್ಸಲೇಶನ್‌ ಹೊಂದಿರುವ ಫ್ರೀಬಡ್ಸ್ 3 ಮಾತ್ರ ಓಪನ್-ಫಿಟ್ ಟ್ರೂಲಿ ವಾಯರ್‌ಲೆಸ್‌ ಇಯರ್‌ಫೋನ್‌ ಆಗಿದೆ ಎಂದು ಹುವಾವೇ ಹೇಳಿಕೊಂಡಿದೆ. ಏಕೆಂದರೆ ಪರಿಣಾಮಕಾರಿ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಅನ್ನು ಖಚಿತಪಡಿಸಿಕೊಳ್ಳಲು ಒಂದು ನಿರ್ಣಾಯಕ ಅವಶ್ಯಕತೆ. ಇನ್ನು ಈ ವೈಶಿಷ್ಟ್ಯದ ಸೆಟ್ ಎಂದರೆ ಹುವಾವೇ ಫ್ರೀಬಡ್ಸ್ 3 ಅನ್ನು ಆಪಲ್ ಏರ್‌ಪಾಡ್ಸ್ ಪ್ರೊ ಗೆ ಸಮನಾಗಿ ವಿನ್ಯಾಸಗೊಳಿಸಲಾಗಿದೆ. ಇನ್ನು ಫ್ರೀ ಬಡ್ಸ್ 3 ಅನ್ನು ಖರೀದಿಸುವ ಗ್ರಾಹಕರು ಇಯರ್‌ಫೋನ್‌ಗಳೊಂದಿಗೆ ಹುವಾವೇ ಸಿಪಿ 61 ವೈರ್‌ಲೆಸ್ ಚಾರ್ಜರ್ ಅನ್ನು ಸಹ ಪಡೆದುಕೊಳ್ಳಬಹುದಾಗಿದೆ.

ಭಾರತದಲ್ಲಿ

ಇನ್ನು ಭಾರತದಲ್ಲಿ ಹುವಾವೇ ಫ್ರೀಬಡ್ಸ್ 3 ಇಯರ್‌ಫೋನ್‌ 12,990 ರೂ. ಬೆಲೆಗೆ ಲಬ್ಯವಾಗಲಿದ್ದು, ಇದೇ ಮೇ 20 ರಂದು ಅಮೆಜಾನ್‌ನಲ್ಲಿ ಮಾರಾಟವಾಗಲಿದೆ ಎನ್ನಲಾಗಿದೆ. ಇನ್ನು ಈ ಇಯರ್‌ಫೋನ್‌ಗಳು ಯಾವ ಕಲರ್‌ ಮಾದರಿಯಲ್ಲಿ ಲಭ್ಯವಾಗಲಿದೆ ಅನ್ನೊದು ಮಾತ್ರ ಇನ್ನು ತಿಳಿದು ಬಂದಿಲ್ಲ.

Most Read Articles
Best Mobiles in India

English summary
Huawei has launched the Freebuds 3 earphones in India. The new true wireless earphones are claimed to be the only open-fit true wireless earphones with active noise cancellation.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X