Home
ಸುದ್ದಿಜಾಲ

ಹುವಾವೇ ಫ್ರೀಬಡ್ಸ್‌ ಪ್ರೊ 3 ಇಯರ್‌ಬಡ್ಸ್‌ ಬಿಡುಗಡೆ: ಫೀಚರ್ಸ್‌ ಹೇಗಿದೆ?

ಟೆಕ್‌ ವಲಯದ ದಿಗ್ಗಜ ಬ್ರ್ಯಾಂಡ್‌ಗಳಲ್ಲಿ ಒಂದಾದ ಹುವಾವೇ ತನ್ನ ವೇರಬಲ್‌ ಸ್ಟ್ರಾಟಜಿ ಈವೆಂಟ್‌ನಲ್ಲಿ ಹೊಸ ಇಯರ್‌ಫೋನ್‌ ಪರಿಚಯಿಸಿದೆ. ಈ ಇಯರ್‌ಫೋನ್‌ ಅನ್ನು ಹುವಾವೇ ಫ್ರೀಬಡ್ಸ್‌ ಪ್ರೊ 3 ಎಂದು ಹೆಸರಿಸಲಾಗಿದೆ. ಇನ್ನು ಈ ಇಯರ್‌ಫೋನ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ 3.0 ಅನ್ನು ಬೆಂಬಲಿಸಲಿದೆ.

ಹೌದು, ಹುವಾವೇ ಫ್ರೀಬಡ್ಸ್‌ ಪ್ರೊ 3 ಇಯರ್‌ಬಡ್ಸ್‌ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇದು ಸಿಂಗಲ್‌ ಚಾರ್ಜ್‌ನಲ್ಲಿ 31 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಹೇಳಲಾಗಿದೆ. ಜೊತೆಗೆ ಈ ಹೊಸ ಇಯರ್‌ಫೋನ್‌ಗಳು ಡ್ಯುಯಲ್ ಡಿವೈಸ್‌ ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಇದಲ್ಲದೆ ಇಯರ್‌ಫೋನ್‌ಗಳು ಡ್ಯುಯಲ್ ಡ್ರೈವರ್ ವ್ಯವಸ್ಥೆಯನ್ನು ಸಹ ಹೊಂದಿವೆ. ಇನ್ನುಳಿದಂತೆ ಈ ಹೊಸ ಇಯರ್‌ಬಡ್ಸ್‌ ಫೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹುವಾವೇ ಫ್ರೀಬಡ್ಸ್‌ ಪ್ರೊ 3 ಇಯರ್‌ಬಡ್ಸ್‌ ಬಿಡುಗಡೆ: ಫೀಚರ್ಸ್‌ ಹೇಗಿದೆ?

ಹುವಾವೇ ಫ್ರೀಬಡ್ಸ್‌ ಪ್ರೊ 3

ಹುವಾವೇ ಫ್ರೀಬಡ್ಸ್‌ ಪ್ರೊ 3 ಇಯರ್‌ಫೋನ್‌ ಸ್ಮೂತ್‌ ಕಂಟ್ರೋಲ್‌ನೊಂದಿಗೆ ಇನ್‌ ಇಯರ್ ಡಿಸೈನ್‌ ಹೊಂದಿದೆ. ಇವುಗಳು ಗ್ರೂವ್ ವಿನ್ಯಾಸ ಮತ್ತು ಡ್ಯುಯಲ್ ಡ್ರೈವರ್ ಸಿಸ್ಟಮ್ ಅನ್ನು ಹೊಂದಿವೆ. ಜೊತೆಗೆ ಇಯರ್‌ಫೋನ್‌ಗಳು ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ 3.0 ನೊಂದಿಗೆ ಬರುತ್ತವೆ. ಇದಲ್ಲದೆ ಇಯರ್‌ಫೋನ್‌ ಹೈ-ರೆಸ್ ಡ್ಯುಯಲ್ ಸೌಂಡ್ ಸಿಸ್ಟಮ್ ಅನ್ನು ಹೊಂದಿದ್ದು, 14Hz ಮತ್ತು 48kHz ನಡುವಿನ ಬಿಗ್ ಫ್ರಿಕ್ವೆನ್ಸಿ ರೇಂಜ್‌ ಅನ್ನು ಬೆಂಬಲಿಸಲಿದೆ ಎಂದು ಹೇಳಲಾಗಿದೆ. ಅಲ್ಲದೆ 5dB ವರೆಗಿನ ನಾಯ್ಸ್‌ ಕ್ಯಾನ್ಸಲೇಶನ್‌ ನೀಡುವುದಾಗಿ ಕಂಪೆನಿ ಹೇಳಿದೆ.

ಹುವಾವೇ ಕಂಪೆನಿ ಈ ಇಯರ್‌ಬಡ್ಸ್‌ನಲ್ಲಿ ಹೆಚ್ಚುವರಿಯಾಗಿ ಟ್ರಿಪಲ್ ಅಡಾಪ್ಟಿವ್ ಈಕ್ವಲೈಜರ್ ಅನ್ನು ನೀಡಿದೆ. ಇದು ವಾಲ್ಯೂಮ್‌, ವೇರ್‌ ಮತ್ತು ಸೌಂಡ್‌ ಸಿಸ್ಟಂ ಅನ್ನು ಅನಲೈಸ್‌ ಮಾಡುವ ಮೂಲಕ ಉತ್ತಮವಾದ ಸೌಂಡ್‌ ಕ್ವಾಲಿಟಿಯನ್ನು ನೀಡಲಿದೆ. ಇವುಗಳು ಹುವಾವೇ L2HC 2.0 ಮತ್ತು LDAC ಡ್ಯುಯಲ್ ಹೈ-ಡೆಫಿನಿಷನ್ ಆಡಿಯೊ ಡಿಕೋಡಿಂಗ್ ಜೊತೆಗೆ 990kbps ವರೆಗಿನ ಆಡಿಯೊ ಟ್ರಾನ್ಸ್‌ಮಿಷನ್ ಅನ್ನು ಒದಗಿಸುತ್ತವೆ. ಇನ್ನು ಈ ಇಯರ್‌ಬಡ್ಸ್‌ ಆಂಡ್ರಾಯ್ಡ್‌ ಮತ್ತು ಐಒಎಸ್‌ ಡಿವೈಸ್‌ಗಳೆರಡಕ್ಕೂ ಹೊಂದಿಕೊಳ್ಳಲಿದೆ.

ಇನ್ನು ಈ ಇಯರ್‌ಬಡ್ಸ್‌ ಸಿಂಗಲ್‌ ಚಾರ್ಜ್‌ನಲ್ಲಿ 6.5 ಗಂಟೆಗಳವರೆಗೆ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಚಾರ್ಜಿಂಗ್‌ ಕೇಸ್‌ನೊಂದಿಗೆ 31 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಈ ಡಿವೈಸ್‌ ಆಡಿಯೊ ಶೇರ್‌ ಮತ್ತು ಆಟೋಮ್ಯಾಟಿಕ್‌ ಪಾಪ್-ಅಪ್‌ಗಳನ್ನು ಒಳಗೊಂಡಿವೆ.

ಹುವಾವೇ ಫ್ರೀಬಡ್ಸ್‌ ಪ್ರೊ 3 ಬೆಲೆ ಮತ್ತು ಲಭ್ಯತೆ
ಹುವಾವೇ ಫ್ರೀಬಡ್ಸ್‌ ಪ್ರೊ 3 ಇಯರ್‌ಫೋನ್‌ ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆ ಆಗಿದೆ. ಇದರ ಬೆಲೆ ಯುರೋಪ್‌ನಲ್ಲಿ EUR 199 (ಸುಮಾರು 17,600)ಆಗಿದೆ. ಇದನ್ನು ಗ್ರೀನ್, ಸಿಲ್ವರ್ ಫ್ರಾಸ್ಟ್ ಮತ್ತು ವೈಟ್ ಕಲರ್‌ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಇದು ಅಕ್ಟೋಬರ್ 18 ರಂದು ಮಾರಾಟಕ್ಕೆ ಬರಲಿದೆ.

ಇದಲ್ಲದೆ ಹುವಾವೇ ಕಂಪೆನಿ ಇತ್ತೀಚಿಗೆ ಹುವಾವೇ ಮೇಟ್‌ 60 ಪ್ರೊ ಪ್ಲಸ್‌ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ 6.82 ಇಂಚಿನ OLED LTPO ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕಿರಿನ್ 9000s SoC ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಹಾರ್ಮನಿ ಓಎಸ್ 4.0ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 16GB RAM ಮತ್ತು 1TB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 48 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಮೂರನೇ ಕ್ಯಾಮೆರಾ 40 ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್‌ ಆಂಗಲ್‌ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.

Best Mobiles in India

English summary
Huawei FreeBuds Pro 3 Wireless Earbuds Launched: Features Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+