Home
ಸುದ್ದಿಜಾಲ

ವಿಶ್ವದ ಮೊದಲ ಸ್ಯಾಟ್‌ಲೈಟ್‌ ಕನೆಕ್ಟಿವಿಟಿ ಟ್ಯಾಬ್ಲೆಟ್‌ ಪರಿಚಯಿಸಿದ ಹುವಾವೇ!

ಟೆಕ್‌ ವಲಯದಲ್ಲಿ ಹಲವು ಪ್ರಥಮಗಳಿಗೆ ಕಾರಣವಾಗಿರುವ ಹುವಾವೇ ಕಂಪೆನಿ ಇದೀಗ ಮತ್ತೊಂದು ದಾಖಲೆ ಬರೆದಿದೆ. ವಿಶ್ವದ ಮೊದಲ ಸ್ಯಾಟ್‌ಲೈಟ್‌ ಕಮ್ಯೂನಿಕೇಷನ್‌ ಟ್ಯಾಬ್ಲೆಟ್‌ ಅನ್ನು ಬಿಡುಗಡೆ ಮಾಡಿದೆ. ಇದನ್ನು ಹುವಾವೇ ಮೇಟ್‌ಪ್ಯಾಡ್‌ ಪ್ರೊ 11 2024 ಎಂದು ಹೆಸರಿಸಲಾಗಿದೆ. ಈ ಮೂಲಕ ಗ್ಯಾಜೆಟ್‌ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಹೌದು, ಹುವಾವೇ ಮೇಟ್‌ಪ್ಯಾಡ್‌ ಪ್ರೊ 11 2024 ಟ್ಯಾಬ್ಲೆಟ್‌ ಬಿಡುಗಡೆ ಆಗಿದೆ. ಇನ್ನು ಈ ಸ್ಮಾರ್ಟ್‌ ಟ್ಯಾಬ್ಲೆಟ್‌ ಕಿರಿನ್ 9000S ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೆ ಬೀಡೌ ದ್ವಿಮುಖ ಸ್ಯಾಟ್‌ಲೈಟ್‌ ಕಮ್ಯೂನಿಕೇಷನ್‌ ಒಳಗೊಂಡಿದೆ. ಜೊತೆಗೆ ಈ ಟ್ಯಾಬ್‌ 13 ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇನ್ನುಳಿದಂತೆ ಇದರ ಬೆಲೆ ಹಾಗೂ ಡಿಸೈನ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿಶ್ವದ ಮೊದಲ ಸ್ಯಾಟ್‌ಲೈಟ್‌ ಕನೆಕ್ಟಿವಿಟಿ ಟ್ಯಾಬ್ಲೆಟ್‌ ಪರಿಚಯಿಸಿದ ಹುವಾವೇ!

ಹುವಾವೇ ಮೇಟ್‌ಪ್ಯಾಡ್‌ ಪ್ರೊ 11 2024 ಟ್ಯಾಬ್ಲೆಟ್‌ ಫೀಚರ್ಸ್‌ ಹೇಗಿದೆ?
ಹುವಾವೇ ಮೇಟ್‌ಪ್ಯಾಡ್‌ ಪ್ರೊ 11 2024 ಟ್ಯಾಬ್ಲೆಟ್‌ 11 ಇಂಚಿನ ಡಿಸ್‌ಪ್ಲೇಯನ್ನು ಹೊ೦ದಿದೆ. ಈ ಡಿಸ್‌ಪ್ಲೇ 2,560 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 92% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದ್ದು, 600 ನೀಟ್ಸ್‌ ಬ್ರೈಟ್‌ನೆಸ್‌ ಅನ್ನು ಬೆಂಬಲಿಸಲಿದೆ. ಜೊತೆಗೆ ಡಿಸ್‌ಪ್ಲೇ 1.07 ಶತಕೋಟಿ ಬಣ್ಣಗಳ ಬೆಂಬಲ ಮತ್ತು DCI-P3 ಬಣ್ಣದ ಗ್ಯಾಮಟ್‌ ಅನ್ನು ಹೊಂದಿದೆ.

ಹುವಾವೇ ಮೇಟ್‌ಪ್ಯಾಡ್‌ ಪ್ರೊ 11 2024 ಟ್ಯಾಬ್ಲೆಟ್‌ ಸಾಕಷ್ಟು ತೆಳುವಾಗಿದ್ದು, 449 ಗ್ರಾಂ ತೂಕವನ್ನು ಹೊಂದಿದೆ. ಇದು ಕೇವಲ 5.9 ಮಿಮೀ ತೆಳ್ಳಗಿದ್ದು, ಟ್ಯಾಬ್ಲೆಟ್ ಅನ್ನು ತುಲನಾತ್ಮಕವಾಗಿ ಅತ್ಯಂತ ನಯವಾದ ವಿನ್ಯಾಸವನ್ನು ಪಡೆದಿದೆ. ಇನ್ನು ಟ್ಯಾಬ್ಲೆಟ್‌ USP ಚೀನಾದಲ್ಲಿ Beidou ಉಪಗ್ರಹ ಸಂವಹನ ವ್ಯವಸ್ಥೆಯಿಂದ ಸಕ್ರಿಯಗೊಳಿಸಲಾದ ಮೊದಲ ಟ್ಯಾಬ್ಲೆಟ್‌ ಇದಾಗಿದೆ. ಇದಕ್ಕೆ ಯಾವುದೇ ಹೆಚ್ಚುವರಿ ಆಂಟೆನಾಗಳನ್ನು ಬಳಸದೆಯೇ 36,000 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಉನ್ನತ-ಕಕ್ಷೆಯ ಸ್ಯಾಟ್‌ಲೈಟ್‌ಗಳನ್ನು ಬಳಸಿಕೊಳ್ಳುವುದಕ್ಕೆ ಟ್ಯಾಬ್ಲೆಟ್‌ ಅನ್ನು ವಿನ್ಯಾಸಗೊಳಿಸಲಾಗಿದೆ.

ವಿಶ್ವದ ಮೊದಲ ಸ್ಯಾಟ್‌ಲೈಟ್‌ ಕನೆಕ್ಟಿವಿಟಿ ಟ್ಯಾಬ್ಲೆಟ್‌ ಪರಿಚಯಿಸಿದ ಹುವಾವೇ!

ಇನ್ನು ಹುವಾವೇ ಮೇಟ್‌ಪ್ಯಾಡ್‌ ಪ್ರೊ 11 2024 ಟ್ಯಾಬ್‌ನಲ್ಲಿ ಸ್ಯಾಟ್‌ಲೈಟ್‌ ಕಮ್ಯೂನಿಕೇಷನ್‌ ಅನ್ನು ಆಕ್ಟಿವ್‌ ಮಾಡುವುದಕ್ಕಾಗಿ ಅಲ್ಗಾರಿದಮ್‌ಗಳು ಮತ್ತು ನ್ಯೂ ಕಮ್ಯೂನಿಕೇಷನ್‌ ಪ್ರೋಟೋಕಾಲ್‌ಗಳನ್ನು ಬಳಸಲಾಗಿದೆ. ಬಳಕೆದಾರರು ಈ ವಿಧಾನವನ್ನು ಬಳಸಿಕೊಂಡು ಯಾವುದೇ ನೆಟ್‌ವರ್ಕ್ ವಲಯದಲ್ಲಿ ಪಠ್ಯ ಸಂದೇಶಗಳನ್ನು ಕಳುಹಿಸುವುದಕ್ಕೆ ಸಾಧ್ಯವಾಗಲಿದೆ. ಈ ಟ್ಯಾಬ್‌ ಕಿರಿನ್‌ 9000S SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, HarmonyOS 4 ಅನ್ನು ಬೆಂಬಲಿಸಲಿದೆ.

ಹುವಾವೇ ಮೇಟ್‌ಪ್ಯಾಡ್‌ ಪ್ರೊ 11 2024 ಟ್ಯಾಬ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ಹೊಂದಿದೆ. ಇದರ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹಾಗೂ ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ವೈಡ್-ಆಂಗಲ್ ಲೆನ್ಸ್‌ ಹೊಂದಿದೆ. ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಪ್ರಮುಖವಾಗಿ ಸೂಪರ್ ನೈಟ್ ವಿಶ್ಯುಯಲ್‌, ಪ್ರೊ ಮೋಡ್, ಸ್ಮಾರ್ಟ್ ಫಿಲ್ಟರ್, ಡೈನಾಮಿಕ್ ಮೋಡ್, ಸ್ಮೈಲಿ ಸ್ನ್ಯಾಪ್‌ಶಾಟ್, ಧ್ವನಿ-ಸಕ್ರಿಯ ಫೋಟೋ ವನ್ನು ಬೆಂಬಲಿಸಲಿದೆ. ಇದರೊಂದಿಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ವಿಶ್ವದ ಮೊದಲ ಸ್ಯಾಟ್‌ಲೈಟ್‌ ಕನೆಕ್ಟಿವಿಟಿ ಟ್ಯಾಬ್ಲೆಟ್‌ ಪರಿಚಯಿಸಿದ ಹುವಾವೇ!

ಇದು 8,300mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, 66W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್ 5.2, ಯುಎಸ್‌ಬಿ 3.1 ಟೈಪ್-ಸಿ, ಮತ್ತು ಜಿಪಿಎಸ್/ಗ್ಲೋನಾಸ್/ಬೀಡೌ/ಗೆಲಿಲಿಯೊ/ಕ್ಯೂಝಡ್‌ಎಸ್‌ಎಸ್ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಆಡಿಯೊಗಾಗಿ ಆರು-ಸ್ಪೀಕರ್ ಸೆಟಪ್‌ನೊಂದಿಗೆ ಬರುತ್ತದೆ.

ಹುವಾವೇ ಮೇಟ್‌ಪ್ಯಾಡ್‌ ಪ್ರೊ 11 2024 ಬೆಲೆ ಮತ್ತು ಲಭ್ಯತೆ
ಈ ಸ್ಮಾರ್ಟ್‌ಟ್ಯಾಬ್‌ನ ಬೇಸ್‌ ಮಾಡೆಲ್‌ ಬೆಲೆ 4,299 ಯುವಾನ್ (ಅಂದಾಜು 50,200ರೂ) ನಿಂದ ಪ್ರಾರಂಭವಾಗುತ್ತದೆ.

Best Mobiles in India

English summary
Huawei has Launched World’s First Satellite Connectivity Tablet
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+