ಹುವಾವೇಯಿಂದ ಫ್ರೀಬಡ್ಸ್ 3I ವಾಯರ್‌ ಲೆಸ್‌ ಇಯರ್‌ಬಡ್ ಬಿಡುಗಡೆ!

|

ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿ ಹುವಾವೇ ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಂದ ಗುರುತಿಸಿಕೊಂಡಿದೆ. ತನ್ನ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳಿಂದ ಜಾಗತಿಕವಾಗಿ ಪ್ರಸಿದ್ಧಿಯನ್ನ ಪಡೆದುಕೊಂಡಿದೆ. ಇನ್ನು ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಇಯರ್‌ ಬಡ್ಸ್‌ಗಳನ್ನ ಸಹ ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಇಯರ್‌ ಬಡ್ಸ್‌ಗಳನ್ನ ಪರಿಚಯಿಸಿ ಇಯರ್‌ಬಡ್ಸ್‌ ಮಾಡುಕಟ್ಟೆಯಲ್ಲೂ ತನ್ನ ಛಾಪನ್ನು ಮೂಡಿಸಿರುವ ಹುವಾವೇ ಇದೀಗ ತನ್ನ ಹೊಸ ಇಯರ್‌ಬಡ್ಸ್‌ಗಳನ್ನ ಬಿಡುಗಡೆ ಮಾಡಿದೆ.

ಜನಪ್ರಿಯ

ಹೌದು, ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಹುವಾವೇ ಕಂಪೆನಿ ಯುರೋಪಿಯನ್ ಮಾರುಕಟ್ಟೆಗಳಲ್ಲಿ ತನ್ನ ಹೊಸ ಜೋಡಿ ಫ್ರೀಬಡ್ಸ್ 3I ವಾಯರ್‌ಲೆಸ್‌ ಇಯರ್‌ಬಡ್‌ಗಳನ್ನು ಬಿಡುಗಡೆ ಮಾಡಿದೆ. ಸದ್ಯ ಈ ಇಯರ್‌ಬಡ್ಸ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸ್‌ಲೇಶನ್‌ ಇಂಟರ್‌ ಬಿಲ್ಟ್‌ 3-ಮೈಕ್ ಸಿಸ್ಟಮ್‌ ಅನ್ನು ಹೊಂದಿದೆ. ಇನ್ನು ಹುವಾವೇಯ ಈ ಹೊಸ ವಾಯರ್‌ಲೆಸ್ ಇಯರ್‌ಬಡ್ಸ್‌ £89.99 ಬೆಲೆಯನ್ನ ಹೊಂದಿರಲಿದ್ದು, ಇದು ಭಾರತದಲ್ಲಿ ಸುಮಾರು 8,470 ರೂ.ಗಳಿಗೆ ಲಬ್ಯವಾಗಲಿದೆ ಎನ್ನಲಾಗ್ತಿದೆ. ಹಾಗಾದ್ರೆ ಈ ಇಯರ್‌ ಬಡ್ಸ್‌ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಹುವಾವೇಯ

ಇನ್ನು ಹುವಾವೇಯ ಫ್ರೀಬಡ್ಸ್‌ 3I ವಾಯರ್‌ಲೆಸ್‌ ಬಡ್ಸ್‌ 32DB ವರೆಗೆ ಆಕ್ಟಿವ್‌ ನಾಯಿಸ್‌ ಕ್ಯಾನ್ಸ್‌ಲೇಶನ್‌ ಅನ್ನು ಹೊಂದಿವೆ. ಅಲ್ಲದೆ ಈ ಇಯರ್‌ಬಡ್‌ಗಳಲ್ಲಿ ಒಂದನ್ನು ದೀರ್ಘ ಟ್ಯಾಪ್ ಮಾಡುವುದರಿಂದ ANC ಆನ್ ಅಥವಾ ಆಫ್ ಆಗುತ್ತದೆ ಮತ್ತು ಡಬಲ್-ಟ್ಯಾಪ್ ಪ್ಲೇ ಆಗುತ್ತದೆ. ಅಲ್ಲದೆ ಪ್ಲೇ ಆಗುತ್ತಿರುವ ಪ್ಲೇ ಬ್ಯಾಕ್‌ ಮ್ಯೂಸಿನ್‌ ಅನ್ನು ಸ್ಟಾಪ್‌ ಮಾಡುತ್ತದೆ. ಇದಲ್ಲದೆ ಕರೆಗಳಿಗೆ ಉತ್ತರಿಸಲು ಅಥವಾ ಕೊನೆಗೊಳಿಸಲು ಸಹ ನಿಮಗೆ ಅನುಮತಿಸುತ್ತದೆ.

ಆಡಿಯೊ

ಇದಲ್ಲದೆ ಈ ಆಡಿಯೊ ಪ್ರಾಡಕ್ಟ್‌ 4 ಸಿಲಿಕೋನ್ ತುದಿ ಗಾತ್ರಗಳೊಂದಿಗೆ ಬರಲಿದ್ದು, ಈ ಇಯರ್‌ಬಡ್‌ಗಳು 10mm ಡೈನಾಮಿಕ್ ಆಡಿಯೋ ಡ್ರೈವರ್‌ಗಳೊಂದಿಗೆ ಬರುತ್ತವೆ. ಇನ್ನು ಈ ಇಯರ್‌ಬಡ್ಸ್‌ ಐಪಿಎಕ್ಸ್ 4 ವಾಟರ್‌ ಪ್ರೂಪ್‌ ಅನ್ನು ಸಹ ಒಳಗೊಂಡಿದೆ. ಇದಲ್ಲದೆ ಹುವಾವೇಯ ಈ ಹೊಸ ಇಯರ್‌ಬಡ್‌ ನಿರ್ದಿಷ್ಟಪಡಿಸಿದ ಬ್ಯಾಟರಿ ಅವಧಿಯ ಮೇಲೆ 14.5 ಗಂಟೆಗಳ ಮ್ಯೂಸಿಕ್‌ ಆಲಿಸುವಿಕೆ ಅಥವಾ 10.5 ಗಂಟೆಗಳ ಟಾಕ್‌ಟೈಮ್ ಅನ್ನು ನೀಡುತ್ತದೆ.

ಇಯರ್‌ಬಡ್ಸ್‌

ಅಲ್ಲದೆ ಈ ಹೊಸ ಇಯರ್‌ಬಡ್ಸ್‌ ಸುಮಾರು ಒಂದು ಗಂಟೆಯಲ್ಲಿ ಇಯರ್‌ಬಡ್‌ಗಳನ್ನು ಚಾರ್ಜ್ ಮಾಡಲು ಸಾಧ್ಯವಾಗುತ್ತದೆ. ಚಾರ್ಜರ್ ಚಾರ್ಜ್ ಮಾಡಲು 115 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದಲ್ಲದೆ, ಪ್ರತಿ ಹುವಾವೇ ಇಯರ್‌ಬಡ್‌ಗಳು 3-ಮೈಕ್ ಸಿಸ್ಟಮ್‌ನೊಂದಿಗೆ ಬರುತ್ತವೆ, ಅದರಲ್ಲಿ ಎರಡು ಮೈಕ್‌ಗಳು ಹೊರಮುಖವಾಗಿರುತ್ತವೆ ಮತ್ತು ಒಂದು ಒಳಮುಖವಾಗಿದೆ. ಇನ್ನು ಹುವಾವೇಯ ಫ್ರೀಬಡ್ಸ್ 3i ವಾಯರ್‌ಲೆಸ್ ಇಯರ್‌ಬಡ್‌ಗಳನ್ನು ಸೆರಾಮಿಕ್ ವೈಟ್ ಬಣ್ಣದಲ್ಲಿ ಮಾತ್ರ ಲಭ್ಯವಾಗಲಿದೆ. ಇದಲ್ಲದೆ ಕಂಪನಿಯು ಯುಕೆ ನಲ್ಲಿ ಮೇ 20 ರಿಂದ ಇಯರ್‌ಬಡ್‌ಗಳನ್ನು ಮಾರಾಟ ಮಾಡಲಿದೆ ಎಂದು ಹೇಳಲಾಗ್ತಿದೆ.

Most Read Articles
Best Mobiles in India

English summary
The latest wireless earbuds from Huawei will cost you £89.99, which is around Rs 8,470 in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X