Home
ಸುದ್ದಿಜಾಲ

ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ಕೊಡಲಿದೆ ಹುವಾವೇಯ ಹೊಸ ಟ್ಯಾಬ್‌!

ಚೀನಾದ ಸ್ಮಾರ್ಟ್‌ಫೋನ್‌ ದೈತ್ಯ ಹುವಾವೇ ಕಂಪೆನಿ ಭಾರತೀಯ ಮಾರುಕಟ್ಟೆಗೆ ಹೊಸ ಮಾದರಿಯ ಪ್ರೀಮಿಯಂ ಟ್ಯಾಬ್ಲೆಟ್‌ ಅನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಎರಡನೇ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಸಹಜವಾಗಿಯೇ ಎಲ್ಲಾ ಕಂಪೆನಿಗಳು ಮಾರುಕಟ್ಟೆ ವಿಸ್ತರಿಸಲು ಪ್ರಯತ್ನಿಸುತ್ತವೆ. ಇದೀಗ ಹುವಾವೇ ಕೂಡ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನ ಇನ್ನಷ್ಟು ವಿಸ್ತರಿಸಲು ಪ್ಲ್ಯಾನ್‌ ಮಾಡಿಕೊಂಡಿದ್ದು, ಅದರಂತೆ ಇದೀಗ ಎಂಟ್ರಿ ಲೆವೆಲ್‌ ಪ್ರೈಸ್‌ ಟ್ಯಾಗ್‌ ಹೊಂದಿರುವ ಟ್ಯಾಬ್‌ ಬಿಡುಗಡೆಗೆ ಸಜ್ಜಾಗಿದೆ.

ಹೌದು

ಹೌದು, ಹುವಾವೇ ಕಂಪೆನಿ ಈಗಾಗ್ಲೆ ವೈವಿಧ್ಯ ಬಗೆಯ ಸ್ಮಾರ್ಟ್‌ಫೋನ್‌ಗಳ ಮೂಲಕ ಜಾಗತಿಕವಾಗಿ ಸೈ ಎನಿಸಿಕೊಂಡಿದೆ. ಗೂಗಲ್‌ ನಿಷೇದದ ಹೊರತಾಗಿಯೂ ತನ್ನ ಬ್ರ್ಯಾಂಡ್‌ವ್ಯಾಲ್ಯೂ ಕಾಪಾಡಿಕೊಂಡಿರುವ ಹುವಾವೇ ಸದಾ ಹೊಸತನದ ಪ್ರಾಡಕ್ಟಗಳಿಗೆ ಹೆಸರಾಗಿದೆ. ಇದೀಗ ತನ್ನ M ಆವೃತ್ತಿಯ M6 ಟ್ಯಾಬ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ ಎಂದು ಹೇಳಲಾಗ್ತಿದೆ. ಈ ಟ್ಯಾಬ್‌ ಆಪಲ್‌ನ ಎಂಟ್ರಿ ಲೆವೆಲ್‌ ಟ್ಯಾಬ್‌ಗಳಿಗೆ ಪೈಪೋಟಿ ನೀಡಲಿದೆ ಎಂದು ನೀರಿಕ್ಷಿಸಲಾಗಿದೆ.

ಹುವಾವೇ ಟ್ಯಾಬ್‌

ಹುವಾವೇ ಟ್ಯಾಬ್‌

ಹುವಾವೇ ಕಂಪೆನಿಯ ಟ್ಯಾಬ್‌ ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ಮೀಡಿಯಾಪ್ಯಾಡ್‌ T5 ಮತ್ತು ಮೀಡಿಯಾಪ್ಯಾಡ್‌ M5 ಲೈಟ್‌ ಅನ್ನು ಬಿಡುಗಡೆ ಮಾಡಿದೆ. ಸದ್ಯ ಇದೀಗ ಬಿಡುಗಡೆಯಾಗಲಿರುವ ಟ್ಯಾಬ್‌ ಫೀಚರ್ಸ್‌ಗಳ ವಿಚಾರದಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿರಲಿದೆ ಎಂದು ನೀರಿಕ್ಷಿಸಲಾಗಿದೆ. ಆದರೆ ಯಾವ ಮಾದರಿಯ ಟ್ಯಾಭ್‌ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ಅನ್ನೋ ವಿಚಾರವನ್ನ ಕಂಪೆನಿ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ.

ಟ್ಯಾಬ್‌ನ ವಿನ್ಯಾಸ

ಟ್ಯಾಬ್‌ನ ವಿನ್ಯಾಸ

ಇನ್ನು ಈ ಟ್ಯಾಬ್‌ ಪವರ್‌ಫುಲ್‌ ಪ್ರೊಸೆಸರ್‌ ಹೊಂದಿರಲಿದ್ದು, ಸ್ಟೈಲಸ್‌ ಪೆನ್‌ ಸಹ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಇದರ ಬಾಡಿ ವಿನ್ಯಾಸ ಉತ್ತಮವಾಗಿದ್ದು ಲೋಹದ ಕವಚವನ್ನು ಹೊಂದಿರಲಿದೆ. ಅಲ್ಲದ ಇದರಲ್ಲಿ 10th gen ಇಂಟೆಲ್‌ ಪ್ರೊಸೆಸರ್‌ ಇರುವ ಸಾಧ್ಯತೆ ಕೂಡ ಇದೆ. ಸದ್ಯ ಅಪಲ್‌ ಕಂಪೆನಿಯ ಟ್ಯಾಬ್‌ಗಳಿಗೆ ಪ್ರತಿಸ್ಪರ್ಧಿಯಾಗಿರುವ ಈ ಟ್ಯಾಬ್‌ ಭಾರತದ ಮಾರುಕಟ್ಟೆಗೆ ಮಾರ್ಚ್‌ ಮೊದಲ ವಾರದಲ್ಲಿ ಲಾಂಚ್‌ ಆಗುವ ಸಾಧ್ಯತೆ ಇದೆ.

ಹುವಾವೇ M ಸಿರೀಸ್‌ ಟ್ಯಾಬ್‌

ಹುವಾವೇ M ಸಿರೀಸ್‌ ಟ್ಯಾಬ್‌

ಸದ್ಯ ಭಾರತದಲ್ಲಿ ಬರಲಿದೆ ಎನ್ನಲಾಗುತ್ತಿರುವ M ಆವೃತ್ತಿಯ ಟ್ಯಾಬ್‌ಗಳು ಈಗಾಗ್ಲೆ ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಟ್ಯಾಭ್‌ಗಳು ಆಪಲ್‌ ಕಂಪೆನಿಯ 9.7 ಇಂಚಿನ ಐಪ್ಯಾಡ್‌ಗೆ ಪ್ರತಿಸ್ಫರ್ಧಿಯಾಗಿ ಮಾರುಕಟ್ಟೆಯಲ್ಲಿ ಸೌಂಡ್‌ ಮಾಡುತ್ತಿದೆ. ಇನ್ನು M6 ಟ್ಯಾಬ್‌ ಬೇಸ್ ಮಾಡೆಲ್ 8.4-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು ಕಿರಿನ್ 980 SoC ಪ್ರೊಸೆಸರ್‌ ಅನ್ನು ಹೊಂದಿದೆ. ಅಷ್ಟೇ ಅಲ್ಲ 10.8-ಇಂಚಿನ ಡಿಸ್‌ಪ್ಲೇ ಹೊಂದಿರುವ ಹಾಗೂ ಕಿರಿನ್ 980 SoC ಪ್ರೊಸೆಸರ್‌ ಒಳಗೊಂಡಿರುವ M6 ಟ್ಯಾಬ್ಲೆಟ್ ಸಹ ಲಭ್ಯವಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ನು ಈ ಟ್ಯಾಬ್‌ ಚೀನಾದಲ್ಲಿ RMB 2,199 (ಅಂದಾಜು 22,500 ರೂ ) ಮತ್ತು RMB 2,699 (ಅಂದಾಜು 27,600 ರೂ ) ಬೆಲೆಯನ್ನ ಹೊಂದಿದೆ. ಆದರೆ ಭಾರತದಲ್ಲಿ ಯಾವ ಬೆಲೆಯನ್ನ ಹೊಂದಿರಲಿದೆ ಅನ್ನೊದು ಅಧಿಕೃತವಾಗಿಲ್ಲ. ಸದ್ಯ ಈ ಟ್ಯಾಬ್‌ ಪ್ರೀಮಿಯಂ ಪ್ರೈಸ್‌ ಟ್ಯಾಗ್‌ನಲ್ಲಿ ಎಂಟ್ರಿ ನೀಡುವ ಸಾಧ್ಯತೆ ಇದೆ. ಇನ್ನು ಭಾರತದ ಮಾರುಕಟ್ಟೆಯಲ್ಲಿ ಹುವಾವೆ ಟ್ಯಾಬ್‌ಗೆ ಕೇವಲ ಅಪಲ್‌ ಮಾತ್ರವಲ್ಲ ಲೆನೊವೊ, ಸ್ಯಾಮ್‌ಸಂಗ್‌ ಕೂಡ ಪ್ರತಿಸ್ಪರ್ಧಿಗಳಾಗಿವೆ. ಯಾಕಂದ್ರೆ ಭಾರತದ ಟ್ಯಾಬ್‌ ಮಾರುಕಟ್ಟೆಯಲ್ಲಿ ಸದ್ಯ ಲೆನೊವೊ ಉತ್ತನ್ನಗಳಿಗೆ ಭಾರಿ ಬೇಡಿಕೆ ಇದ್ದು ಮೊದಲ ಸ್ಥಾನದಲ್ಲಿದೆ. ಇದೆಲ್ಲವನ್ನು ಹುವಾವೇ ಹೇಗೆ ಸಮರ್ಥವಾಗಿ ಎದುರಿಸಲಿದೆ ಅನ್ನೊದನ್ನ ಕಾದು ನೋಡಬೇಕಿದೆ.

Best Mobiles in India

English summary
With its M series tablet, Huawei is expected to compete with the likes of Apple, Lenovo and Samsung in the premium segment. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+