Home
ಸುದ್ದಿಜಾಲ

ಟೆಕ್‌ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಹುವಾವೇ ಮೇಟ್‌ 60 ಪ್ರೊ ಪ್ಲಸ್‌!

ಮೊಬೈಲ್‌ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಹುವಾವೇ ಕಂಪೆನಿ ಘರ್ಜಿಸುತ್ತಿದೆ. ಹೊಸ ಹುವಾವೇ ಮೇಟ್‌ 60 ಪ್ರೊ ಪ್ಲಸ್‌ ಮೂಲಕ ಭಾರಿ ಸಂಚಲನ ಸೃಷ್ಟಿಸಿದೆ. ಜಾಗತಿಕ ಮೊಬೈಲ್‌ ಜಗತ್ತಿನಲ್ಲಿ ಹೊಸ ಸುಂಟರಗಾಳಿಯನ್ನೇ ಸೃಷ್ಟಿಸುವ ಸೂಚನೆ ನೀಡಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ನೊಂದಿಗೆ ಬರಲಿದೆ

ಹೌದು, ಹುವಾವೇ ಮೇಟ್‌ 60 ಪ್ರೊ ಪ್ಲಸ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್‌ ಕಿರಿನ್ 9000s SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 88W ಫಾಸ್ಟ್ ಚಾರ್ಜಿಂಗ್ ನೊಂದಿಗೆ ಬರಲಿದ್ದು, 5000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟೆಕ್‌ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಹುವಾವೇ ಮೇಟ್‌ 60 ಪ್ರೊ ಪ್ಲಸ್‌!

ಹುವಾವೇ ಮೇಟ್‌ 60 ಪ್ರೊ ಪ್ಲಸ್‌ ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಹುವಾವೇ ಮೇಟ್‌ 60 ಪ್ರೊ ಪ್ಲಸ್‌ ಸ್ಮಾರ್ಟ್‌ಫೋನ್‌ 6.82 ಇಂಚಿನ OLED LTPO ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2720 x 1260 ಸ್ಕ್ರೀನ್‌ ಪಿಕ್ಸೆಲ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು 1Hz- 120Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದ್ದು, 10-ಬಿಟ್ ಬಣ್ಣಗಳು, P3 ಬಣ್ಣದ ಹರವು ಹೊಂದಿದೆ.

ಹುವಾವೇ ಮೇಟ್‌ 60 ಪ್ರೊ ಪ್ಲಸ್‌ ಪ್ರೊಸೆಸರ್‌ ಸಾಮರ್ಥ್ಯ
ಹುವಾವೇ ಮೇಟ್‌ 60 ಪ್ರೊ ಪ್ಲಸ್‌ ಸ್ಮಾರ್ಟ್‌ಫೋನ್‌ ಕಿರಿನ್ 9000s SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಹಾರ್ಮನಿ ಓಎಸ್ 4.0ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 16GB RAM ಮತ್ತು 1TB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ಹುವಾವೇ ಮೇಟ್‌ 60 ಪ್ರೊ ಪ್ಲಸ್‌ ಕ್ಯಾಮೆರಾ ಸೆಟ್‌ಅಪ್‌
ಹುವಾವೇ ಮೇಟ್‌ 60 ಪ್ರೊ ಪ್ಲಸ್‌ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 48 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಮೂರನೇ ಕ್ಯಾಮೆರಾ 40 ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್‌ ಆಂಗಲ್‌ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.

ಹುವಾವೇ ಮೇಟ್‌ 60 ಪ್ರೊ ಪ್ಲಸ್‌ ಬ್ಯಾಟರಿ ಮತ್ತು ಇತರೆ ಫೀಚರ್ಸ್‌
ಹುವಾವೇ ಮೇಟ್‌ 60 ಪ್ರೊ ಪ್ಲಸ್‌ ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 88W ವೈರ್ಡ್ ಚಾರ್ಜಿಂಗ್ ಮತ್ತು 50W ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಜೊತೆಗೆ 20W ವಾಯರ್‌ಲೆಸ್ ರಿವರ್ಸ್ ಚಾರ್ಜಿಂಗ್‌ನ ಅನುಕೂಲತೆಯನ್ನು ನೀಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ NM ಕಾರ್ಡ್ ಸ್ಲಾಟ್, ಡ್ಯುಯಲ್ ಸಿಮ್, Wi-Fi 802.11ax, ಬ್ಲೂಟೂತ್ 5.2, ಡ್ಯುಯಲ್-ಫ್ರೀಕ್ವೆನ್ಸಿ GPS, NFC, ಒಂದು IR ಬ್ಲಾಸ್ಟರ್ ಅನ್ನು ಹೊಂದಿದೆ.

ಹುವಾವೇ ಮೇಟ್‌ 60 ಪ್ರೊ ಪ್ಲಸ್‌ ಬೆಲೆ ಮತ್ತು ಲಭ್ಯತೆ
ಹುವಾವೇ ಮೇಟ್‌ 60 ಪ್ರೊ ಪ್ಲಸ್‌ ಸ್ಮಾರ್ಟ್‌ಫೋನ್‌ ಇಂಕ್‌ಸ್ಟೋನ್ ಬ್ಲ್ಯಾಕ್‌ ಮತ್ತು ಕ್ಸುವಾನ್ ಬಾಯಿ (ಬೀಜ್) ನಂತಹ ಛಾಯೆಗಳಲ್ಲಿ ಬರುತ್ತದೆ. ಈ ಸ್ಮಾರ್ಟ್‌ಫೋನ್‌ 1,000 ಯುವಾನ್ (ಅಂದಾಜು 11,476ರೂ)ಬೆಲೆಯಲ್ಲಿ ದೊರೆಯಲಿದೆ ಎನ್ನಲಾಗಿದೆ.

ಇನ್ನು ಕಳೆದ ವಾರವಷ್ಟೇ ಹುವಾವೇ ಕಂಪೆನಿ ತನ್ನ ಹುವಾವೇ ಮೇಟ್‌ 60 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್‌ 6.69 ಇಂಚಿನ OLED ಡಿಸ್‌ಪ್ಲೇಯನ್ನು ಹೊಂದಿದೆ. ಇದು ಹಾರ್ಮನಿ ಓಎಸ್ 4.0 ನೊಂದಿಗೆ ಪ್ರಿ ಲೋಡ್ ಆಗಿದೆ. ಹಾಗೆಯೇ 12 GB RAM ಮತ್ತು 1TB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದು ಮೆಮೊರಿ ಕಾರ್ಡ್‌ ಅನ್ನು ಬೆಂಬಲಿಸಲಿದೆಯಾ ಅನ್ನೊದರ ಬಗ್ಗೆ ಯಾವುದೇ ಮಾಹಿತಿಯಿಲ್ಲ.

Best Mobiles in India

English summary
Huawei Mate 60 Pro+ with satellite connectivity launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+